‘ಗುರುಕೃಪಾಯೋಗಾನುಸಾರ ಸಾಧನೆ’ ಮಾಡುವ ಸನಾತನದ ಅನೇಕ ಸಾಧಕರ ಆಧ್ಯಾತ್ಮಿಕ ಮಟ್ಟವು ಶೇ. ೬೦ ಕ್ಕಿಂತ ಹೆಚ್ಚಾಗಿ ಅವರು ಜೀವನ್ಮುಕ್ತರಾಗಿದ್ದಾರೆ. ಅವರಿಗೆ ಪುನರ್ಜನ್ಮವಿಲ್ಲ; ಏಕೆಂದರೆ ಮೃತ್ಯುವಿನ ನಂತರ ಅವರ ಪ್ರವಾಸವು ಮುಂದುಮುಂದಿನ ಲೋಕಗಳಲ್ಲಿ ಸಾಗಿ ಕೊನೆಗೆ ಈಶ್ವರಪ್ರಾಪ್ತಿಯಾಗುವುದು. ತೀವ್ರ ಪ್ರಾರಬ್ಧ ಮತ್ತು ಅನಿಷ್ಟ (ಕೆಟ್ಟ) ಶಕ್ತಿಗಳ ತೀವ್ರ ತೊಂದರೆಯಿರುವ ಕೆಲವು ಸಾಧಕರಿಗೆ, ‘ಈ ಜನ್ಮದಲ್ಲಿ ನಮಗೆ ಶೇ. ೬೦ ಕ್ಕಿಂತ ಹೆಚ್ಚು ಆಧ್ಯಾತ್ಮಿಕ ಮಟ್ಟವನ್ನು ಪ್ರಾಪ್ತಮಾಡಿಕೊಳ್ಳಲು ಆಗುವುದಿಲ್ಲ. ಆದ್ದರಿಂದ ನಮಗೆ ಮುಂದಿನ ಜನ್ಮವೂ ಇರಲಿದೆ. ಮುಂದಿನ ಜನ್ಮದಲ್ಲಿ ನಮಗೆ ಸಾಧನೆಗೆ ಅನುಕೂಲ ವಾತಾವರಣ ಸಿಗುವುದೇ ? ನಮಗೆ ಗುರುಪ್ರಾಪ್ತಿಯಾಗುವುದೇ ? ನಮ್ಮ ಆಧ್ಯಾತ್ಮಿಕ ಪ್ರಗತಿಯಾಗುವುದೇ ?’ ಎಂದು ಭಯವಾಗುತ್ತದೆ. ಇಂತಹ ಸಾಧಕರು ಮುಂದಿನ ದೃಷ್ಟಿಕೋನವನ್ನು ಗಮನದಲ್ಲಿಟ್ಟುಕೊಳ್ಳಬೇಕು.
೧. ಹುಲಿಯ ದವಡೆಯಲ್ಲಿ ಯಾವುದಾದರೊಂದು ಬೇಟೆಯು (ಪ್ರಾಣಿಯು) ಸಿಕ್ಕಿಬಿದ್ದರೆ, ಅದು ಅದನ್ನು ಬಿಡುವುದಿಲ್ಲ. ಅದೇ ರೀತಿ ಗುರುಗಳು ಒಂದು ಬಾರಿ ಸಾಧಕನ ಕೈ ಹಿಡಿದರೆ, ಅವರು ಜನ್ಮಜನ್ಮಾಂತರಗಳವರೆಗೆ ಆ ಸಾಧಕನ ಕೈಯನ್ನು ಬಿಡುವುದಿಲ್ಲ ! ಇದಕ್ಕನುಸಾರ ಯಾವುದಾದರೊಬ್ಬ ಸಾಧಕನಿಗೆ ಪ್ರಾರಬ್ಧದಿಂದ ಮುಂದಿನ ಜನ್ಮದಲ್ಲಿ ಸಾಧನೆಗೆ ಅನುಕೂಲವಾದಂತಹ ಪರಿಸ್ಥಿತಿಯು ಲಭ್ಯವಾಗದಿದ್ದರೂ, ಗುರುಗಳು ಆ ಪರಿಸ್ಥಿತಿಯಲ್ಲಿಯೂ ಅವನಿಗಾಗಿ ಮಾರ್ಗವನ್ನು ತೋರಿ ಅವನಿಂದ ಸಾಧನೆಯನ್ನು ಮಾಡಿಸಿಕೊಳ್ಳುವರು. ಇದಕ್ಕೇ ‘ಗುರುಕೃಪೆ’ ಎಂದು ಹೇಳುತ್ತಾರೆ. ‘ಪರಾತ್ಪರ ಗುರು ಡಾ. ಜಯಂತ ಆಠವಲೆಯವರು ಸನಾತನದ ಪ್ರತಿಯೊಬ್ಬ ಸಾಧಕನ ಕೈಯನ್ನು ಗಟ್ಟಿಯಾಗಿ ಹಿಡಿದಿದ್ದಾರೆ’, ಇದನ್ನು ಸಾಧಕರು ನೆನಪಿನಲ್ಲಿಟ್ಟುಕೊಳ್ಳಬೇಕು.
೨. ವಿವಿಧ ನಾಡಿಪಟ್ಟಿಗಳ (ನಾಡಿಭವಿಷ್ಯದ) ಮಾಧ್ಯಮಗಳಿಂದ ಮಹರ್ಷಿಗಳು ಹೇಳಿದಂತೆ ಪರಾತ್ಪರ ಗುರು ಡಾ. ಜಯಂತ ಆಠವಲೆಯವರು ಶ್ರೀವಿಷ್ಣುವಿನ ಅಂಶಾವತಾರವಾಗಿದ್ದಾರೆ. ಇಂತಹ ಮಹಾನ ಗುರುಗಳು ಸನಾತನದ ಸಾಧಕರಿಗೆ ಲಭಿಸಿರುವಾಗ ‘ನಮ್ಮ ಉದ್ಧಾರವಾಗುವುದೋ ಇಲ್ಲವೋ’, ಎಂಬ ಕಾಳಜಿಯನ್ನು ಸಾಧಕರು ಏಕೆ ಮಾಡಬೇಕು ?
೩. ಪರಾತ್ಪರ ಗುರು ಡಾಕ್ಟರರು ಹೇಳಿದ ‘ಗುರುಕೃಪಾಯೋಗಾನುಸಾರ ಸಾಧನೆ’ಯನ್ನು ಮಾಡಿದ್ದರಿಂದ ಕಳೆದ ಕೆಲವು ವರ್ಷಗಳಲ್ಲಿಯೇ ಅನೇಕ ಸಾಧಕರ ಆಧ್ಯಾತ್ಮಿಕ ಮಟ್ಟವು ಶೇ. ೬೦ ಕ್ಕಿಂತ ಹೆಚ್ಚಾಗಿದೆ. ಅಧ್ಯಾತ್ಮದಲ್ಲಿ ಶೇ. ೫೫ ರಷ್ಟು ಮಟ್ಟಕ್ಕೆ ಶಿಷ್ಯತ್ವವು ಪ್ರಾಪ್ತವಾಗುತ್ತದೆ. ನಿಜವಾಗಿ ನೋಡಿದರೆ ಶೇ. ೬೦ ಕ್ಕಿಂತ ಹೆಚ್ಚು ಮಟ್ಟವಿರುವ ಸನಾತನದ ಅನೇಕ ಸಾಧಕರಲ್ಲಿ ಶಿಷ್ಯತ್ವದ ಗುಣಗಳೂ ಸಂಪೂರ್ಣವಾಗಿ ಬೆಳೆದಿಲ್ಲ. ಹೀಗಿರುವಾಗಲೂ ಅವರ ಪ್ರಗತಿಯಾಯಿತು, ಇದಕ್ಕೆ ಮಹತ್ವದ ಕಾರಣವೆಂದರೆ, ಪರಾತ್ಪರ ಗುರು ಡಾಕ್ಟರರ ಕೃಪೆ ! ಇದಕ್ಕಾಗಿಯೇ ನಾಡಿಪಟ್ಟಿಗಳ ಮಾಧ್ಯಮದಿಂದ ಮಹರ್ಷಿಗಳು ಪರಾತ್ಪರ ಗುರು ಡಾಕ್ಟರರನ್ನು ‘ಮೋಕ್ಷಗುರು’ ಎಂದು ಉಲ್ಲೇಖಿಸುತ್ತಾರೆ. ಸಾಧಕರು ಪರಾತ್ಪರ ಗುರು ಡಾಕ್ಟರರ ಮೇಲೆ ಶ್ರದ್ಧೆಯನ್ನು ಇಡಬೇಕು. ‘ನಮ್ಮ ಕಲ್ಯಾಣವಾಗಬೇಕು’, ಎಂಬ ಸಕಾಮ ಉದ್ದೇಶವನ್ನಿಟ್ಟುಕೊಂಡ ಸಾಧಕರು ಪರಾತ್ಪರ ಗುರು ಡಾಕ್ಟರರ ಮೇಲೆ ಶ್ರದ್ಧೆಯನ್ನಿಟ್ಟು ಕೊಳ್ಳಬಾರದು, ಪರಾತ್ಪರ ಗುರುಗಳ ಮೇಲೆ ನಿಷ್ಕಾಮ ಶ್ರದ್ಧೆಯನ್ನಿಡಬೇಕು, ಅಂದರೆ ಸಾಧಕರ ಕಲ್ಯಾಣವು ತನ್ನಿಂದ ತಾನೇ ಆಗುವುದು !
೪. ಭಕ್ತ ಪ್ರಹ್ಲಾದನಂತಹ ಶ್ರದ್ಧೆ, ಭಕ್ತ ಸುದಾಮನಂತಹ ಭಕ್ತಿ, ಪ.ಪೂ. ಭಕ್ತರಾಜ ಮಹಾರಾಜರಂತಹ ಗುರುಸೇವೆಯ ತಳಮಳ ಮುಂತಾದ ಗುಣಗಳನ್ನು ಸಾಧಕರು ತಮ್ಮಲ್ಲಿಯೂ ಅಳವಡಿಸಿಕೊಳ್ಳಲು ಪ್ರಯತ್ನಿಸಿದರೆ, ಅವರ ಪ್ರಗತಿಯೂ ನಿಶ್ಚಿತವಾಗಿ ಆಗುತ್ತದೆ.
ಅದಕ್ಕಾಗಿ ಈ ಭಜನೆಯ ಸಾಲನ್ನು ಪುನಃ ಪುನಃ ನೆನಪು ಮಾಡಿಕೊಳ್ಳಬೇಕು – ‘ದೆ ಹರಿ ಗುರುಚರಣಾಂಚಾ ಧ್ಯಾಸ | ಕರಿ ಮಜ ತವ ಚರಣಾಂಚಾ ದಾಸ ||’
ಅರ್ಥ : ‘ಹೇ ಹರಿ ನೀಡಿ ನನಗೆ ಗುರುಚರಣಗಳ ಧ್ಯಾಸ | ಮಾಡಿರಿ ನನ್ನನ್ನು ಅವರ ಚರಣಗಳ ದಾಸ ||’
– (ಪೂ.) ಶ್ರೀ. ಸಂದೀಪ ಆಳಶಿ (೪.೧೨.೨೦೨೦)