ಕಷ್ಟಜೀವಿ, ಸಹನೆ, ಸದಾ ಸಕಾರಾತ್ಮಕರಿದ್ದು ತೀವ್ರ ಪ್ರಾರಬ್ಧವನ್ನು ಧೈರ್ಯದಿಂದ ಎದುರಿಸುವ ಬೆಳಗಾವಿಯ ಶ್ರೀಮತಿ ಸುಮಂಗಲಾ ಮಟ್ಟಿಕಲ್ಲಿ ಇವರು ಶೇ. ೬೧ ರಷ್ಟು ಆಧ್ಯಾತ್ಮಿಕ ಮಟ್ಟ ತಲುಪಿದರು

ಶ್ರೀಮತಿ ಸುಮಂಗಲಾ ಮಟ್ಟಿಕಲ್ಲಿ
ಸೌ. ವಿಜಯಲಕ್ಷಿ ಆಮಾತಿ

ಅತ್ಯಂತ ಕಠಿಣ ಜೀವನ ನಡೆಸುವಾಗ ಅದನ್ನು ಧೈರ್ಯದಿಂದ ಹಾಗೂ ಸತತ ನಗಮುಖದಿಂದ ಎದುರಿಸಲು ಜೀವನ ನಡೆಸುವ ಶ್ರೀಮತಿ ಮಟ್ಟಿಕಲ್ಲಿ ಇವರು ಶೇ. ೬೧ ರಷ್ಟು ಆಧ್ಯಾತ್ಮಿಕ ಮಟ್ಟ ತಲುಪಿದರೆಂದು ಜನವರಿ ೧೭ ರಂದು ಘೋಷಿಸಲಾಯಿತು ಆನ್‌ಲೈನ್ ಸತ್ಸಂಗದ ಮಾಧ್ಯಮದಿಂದ ನಡೆದ ಕಾರ್ಯಕ್ರಮದಲ್ಲಿ ಧರ್ಮಪ್ರಚಾರಕ ಶ್ರೀ. ಕಾಶಿನಾಥ ಪ್ರಭು ಇವರು ಈ ಘೋಷಣೆ ಮಾಡಿದರು. ಶ್ರೀಮತಿ ಸುಮಂಗಲಾ ಮಟ್ಟಿಕಲ್ಲಿ ಇವರು ಗೋವಾದ ರಾಮನಾಥಿಯ ಸನಾತನ ಆಶ್ರಮದಲ್ಲಿ ಪೂರ್ಣವೇಳೆ ಸೇವೆ ಮಾಡುವ ಸೌ. ವಿಜಯಲಕ್ಷ್ಮಿ ಆಮಾತಿಯವರ ನಾದಿನಿಯಾಗಿದ್ದಾರೆ. ಬೆಳಗಾವಿಯ ಸನಾತನದ ಸಾಧಕಿ ಸೌ. ಶುಭಾಂಗಿ ಕಾಂಗ್ರೇಲಕರ ಇವರು ಶ್ರೀಮತಿ ಸುಮಂಗಲಾ ಮಟ್ಟಿಕಲ್ಲಿಯವರಿಗೆ ತಿನಿಸನ್ನು ನೀಡಿದರು. ಈ ನಿಮಿತ್ತ ಸೌ. ವಿಜಯಲಕ್ಷ್ಮಿ ಆಮಾತಿಯವರಿಗೆ ಶ್ರೀಮತಿ ಸುಮಂಗಲಾ ಮಟ್ಟಿಕಲ್ಲಿ ಇವರ ಬಗ್ಗೆ ಗಮನಕ್ಕೆ ಬಂದ ಗುಣವೈಶಿಷ್ಟ್ಯಗಳನ್ನು ಇಲ್ಲಿ ನೀಡುತ್ತಿದ್ದೇವೆ.

೧. ಬುದ್ಧಿವಂತರು

ಕಮಲಕ್ಕನವರು ೭ ನೇ ತರಗತಿಯವರೆಗೆ ಶಾಲೆಯಲ್ಲಿ ‘ಜಾಣ ಹುಡುಗಿಯೆಂದೇ ಗುರುತಿಸಲ್ಪಡುತ್ತಿದ್ದರು. ಏಪ್ರಿಲ್ ತಿಂಗಳಿನಲ್ಲಿ ೭ ನೆಯ ತರಗತಿಯ ವಾರ್ಷಿಕ ಪರೀಕ್ಷೆಯಿತ್ತು ಮತ್ತು ಮಾರ್ಚ್ ತಿಂಗಳಲ್ಲಿ ಅವರ ಮದುವೆಯಾಯಿತು. ಮದುವೆಯ ನಂತರ ಅವರು ೭ ನೇ ತರಗತಿಯ ಪರೀಕ್ಷೆಯನ್ನು ಬರೆದು ಅದರಲ್ಲಿಯೂ ಅವರು ನಾಲ್ಕೂ ವಿಷಯಗಳಲ್ಲಿಯೂ ಪ್ರಥಮ ಸ್ಥಾನದಲ್ಲಿ ಉತ್ತೀರ್ಣರಾದರು. ನಂತರ ಅವರು ಅತ್ತೆಮನೆಗೆ ಹೋದ ಕಾರಣ ಅವರ ವಿದ್ಯಾಭ್ಯಾಸ ಅಲ್ಲಿಯೇ ನಿಂತಿತು.

೨. ಕಠಿಣ ಜೀವನ

೨ ಅ. ಅವಿಭಕ್ತಕುಟುಂಬ ಆಗಿದ್ದ ಕಾರಣ ಮುಂಜಾನೆ ೫ ರಿಂದ ರಾತ್ರಿ ೧೧ ಗಂಟೆಯವರೆಗೆ ನಿರಂತರ ಮನೆಯ ಕೆಲಸಗಳನ್ನು ಮಾಡುವುದು : ಕಮಲಕ್ಕ ಅತ್ತೆಯ ಮನೆಗೆ ಬರುವಾಗ ಅವರ ಮನೆಯಲ್ಲಿ ಅತ್ತೆ, ಮಾವ, ಇಬ್ಬರು ನಾದಿನಿಯರು ೫ ಜನ ಮೈದುನರು ಮತ್ತು ಅಜ್ಜಿ ಇದ್ದರು. ಆದ್ದರಿಂದ ಅವರಿಗೆ ೧೦-೧೨ ಜನರಿಗೆ ಅಡುಗೆ ಮಾಡಬೇಕಾಗುತ್ತಿತ್ತು. ಅವರು ಕೇವಲ ೧೩ ವರ್ಷದವರಾಗಿದ್ದರು. ಅವರಿಗೆ ಸರಿಯಾಗಿ ಅಡುಗೆ ಮಾಡಲು ಕೂಡ ಬರುತ್ತಿರಲಿಲ್ಲ; ಆದರೆ ಅವರು ಅದನ್ನು ಬೇಗನೆ ಕಲಿತುಕೊಂಡರು. ಕ್ರಮೇಣ ಎಲ್ಲ ಮೈದುನರ ಮದುವೆಯಾಗಿ ಅವರಿಗೂ ಮಕ್ಕಳಾದವು. ಆದ್ದರಿಂದ ಮನೆಯಲ್ಲಿ ಮಕ್ಕಳು-ದೊಡ್ಡವರೆಲ್ಲ ಸೇರಿ ಒಟ್ಟು ೩೨ ಜನರಿದ್ದರು. ರಜೆಯ ದಿನಗಳಲ್ಲಿ ಅನೇಕ ನೆಂಟರು ಬರುತ್ತಿದ್ದರು. ಅವರ ಮನೆ ತುಂಬಾ ದೊಡ್ಡದಿತ್ತು. ಕಮಲಕ್ಕ ಮುಂಜಾನೆ ೫ ಗಂಟೆಗೆ ಎದ್ದು ಕಸಗುಡಿಸಿ, ಸೆಗಣಿ ಸಾರಿಸುವುದು, ರಂಗೋಲಿ ಹಾಕಿ ಅಲ್ಪಾಹಾರ ತಯಾರಿಸುತ್ತಿದ್ದರು ಮತ್ತು ನಂತರ ಅಡುಗೆ ಮಾಡಲು ಆರಂಭಿಸುತ್ತಿದ್ದರು. ಎಲ್ಲ ಕೆಲಸ ಮುಗಿಯುವ ವರೆಗೆ ರಾತ್ರಿ ೧೧ ಗಂಟೆಯಾಗುತ್ತಿತ್ತು. ಹಬ್ಬ-ಹರಿದಿನಗಳಲ್ಲಿ ಹೆಚ್ಚುಕಡಿಮೆ ೧೦೦ ಜನರು ಊಟಕ್ಕೆ ಇರುತ್ತಿದ್ದರು.

೨ ಆ. ಅತ್ತೆಯವರನ್ನು ಸ್ಥಿರವಾಗಿದ್ದು ಸಂಭಾಳಿಸುವುದು : ಕಮಲಕ್ಕ ಇವರ ಅತ್ತೆ ಮಾನಸಿಕರೋಗಿ ಆಗಿದ್ದ ಕಾರಣ ಅವರನ್ನು ಸಂಭಾಳಿಸುವುದು ಒಂದು ಸವಾಲಾಗಿತ್ತು. ಕೆಲವೊಮ್ಮೆ ಅವರ ಅತ್ತೆ ಅವರ ಎಲ್ಲ ಬಟ್ಟೆಗಳನ್ನು ನೀರಿನಲ್ಲಿ ನೆನೆಸಿಡುತ್ತಿದ್ದರು. ಆದ್ದರಿಂದ ಕಮಲಕ್ಕ ಅವುಗಳನ್ನೆಲ್ಲ ತೊಳೆಯಬೇಕಾಗುತ್ತಿತ್ತು. ಬುಟ್ಟಿ ತುಂಬಾ ರೊಟ್ಟಿ ತಟ್ಟಿದ ನಂತರ ಕಮಲಕ್ಕ ಬಟ್ಟೆ ಒಗೆಯಲು ಹೋದಾಗ ಅತ್ತೆ ಎಲ್ಲ ರೊಟ್ಟಿಗಳನ್ನು ಬಾಗಿಲಿಗೆ ಬರುವ ಭಿಕ್ಷುಕರಿಗೆ ಹಂಚಿ ಬಿಡುತ್ತಿದ್ದರು. ಆದ್ದರಿಂದ ಕಮಲಕ್ಕ ಇವರಿಗೆ ಪುನಃ ರೊಟ್ಟಿ ಮಾಡಬೇಕಾಗುತ್ತಿತ್ತು. ಕಮಲಕ್ಕ ಇದನ್ನೆಲ್ಲ ನಗುತ್ತಾ ಹೇಳುತ್ತಾರೆ. ಈ ವಿಷಯದಲ್ಲಿ ಅವರು ಯಾವತ್ತೂ ಬೇಸರ ಪಡುತ್ತಿರಲಿಲ್ಲ.

೨ ಇ. ನಿರಂತರ ಚಟುವಟಿಕೆಯಿಂದ ಕೂಡಿರುವುದು : ಕಮಲಕ್ಕ ಇವರಿಗೆ ಸೊಸೆಯಂದಿರು ಬಂದರು. ಮೊಮ್ಮಕ್ಕಳು ಕೂಡ ಇದ್ದಾರೆ; ಆದರೆ ಇಂದೂ ಅವರ ದಿನಚರಿ ಹಿಂದಿನಂತೆಯೇ ಇದೆ. ಈಗಲೂ ಯಾವುದೇ ಸಂಬಂಧಿಕರಲ್ಲಿಗೆ ಹೋಗುವಾಗ ರೊಟ್ಟಿ, ಕೆಂಪುಚಟ್ನಿ, ನೆಲಗಡಲೆ ಅಥವಾ ಕೊಬ್ಬರಿಯ ಸಿಹಿ ದೋಸೆ, ಚಿವಡಾ ಇತ್ಯಾದಿ ಏನಾದರೂ ಮಾಡಿಕೊಂಡು ಹೋಗುತ್ತಾರೆ. ಅಲ್ಲಿ ಹೋದಲ್ಲಿಯೂ ಅವರು ಸುಮ್ಮನೆ ಕುಳಿತುಕೊಳ್ಳದೆ ಏನಾದರೂ ಕೆಲಸ ಮಾಡುತ್ತಾ ಇರುತ್ತಾರೆ.

೨ ಈ. ಹಿರಿಯ ಅಜ್ಜಿಯ ಸೇವೆ ಮಾಡುವುದು : ಅವರ ಮನೆಯಲ್ಲಿ ಒಬ್ಬರು ಅಜ್ಜಿ ಇದ್ದರು. ಅವರು ತುಂಬಾ ಹಳೆಯ ಕಾಲದವರಾಗಿರುವುದರಿಂದ ಅವರಿಗೆ ವಾರದಲ್ಲಿ ಒಮ್ಮೆ ಅಭ್ಯಂಗಸ್ನಾನ ಮಾಡಿಸಬೇಕಾಗುತ್ತಿತ್ತು. ಸುಮಾರು ಒಂದು ಗಂಟೆ ಸಂಪೂರ್ಣ ಶರೀರಕ್ಕೆ ಎಣ್ಣೆ ಹಚ್ಚಿ ಹಂಡೆಯಲ್ಲಿನ ಬಿಸಿ ನೀರಿನಿಂದ ಅವರಿಗೆ ಸ್ನಾನ ಮಾಡಿಸಬೇಕಾಗುತ್ತಿತ್ತು. ಇವೆಲ್ಲವನ್ನೂ ಕಮಲಕ್ಕ ಬೇಸರಪಡದೆ ಅಥವಾ ಆಯಾಸಗೊಳ್ಳದೆ ಮಾಡುತ್ತಿದ್ದರು.

೩. ತ್ಯಾಗಿ ವೃತ್ತಿ

ಕಮಲಕ್ಕ ಇವರ ಸೇವಾಭಾವವನ್ನು ನೋಡಿ ಹಿಂದೆ ಅವರ ಮನೆಯಲ್ಲಿದ್ದ ಅಜ್ಜಿಯವರು ನಿಧನದ ಮೊದಲು ಅವರಿಗೆ ೧ ಸರವನ್ನು ಮತ್ತು ೪ ಚಿನ್ನದ ಬಳೆಗಳನ್ನು ಕೊಟ್ಟಿದ್ದರು. ಮುಂದೆ ಮೈದುನರ ವಿವಾಹದ ಸಮಯದಲ್ಲಿ ಅವರ ಮಾವ ಆ ಚಿನ್ನವನ್ನು ಕೇಳಿದಾಗ ಹಿಂದೆ-ಮುಂದೆ ವಿಚಾರ ಮಾಡದೆ ಕಮಲಕ್ಕ ಅದನ್ನು ತೆಗೆದುಕೊಟ್ಟರು.

೪. ಸಮಾಧಾನಿ

ನಾನು ಕಮಲಕ್ಕ ಇವರನ್ನು ೪೨ ವರ್ಷಗಳಿಂದ ನೋಡುತ್ತಿದ್ದೇನೆ. ಅವರ ಜೀವನದ ಎಲ್ಲ ಏರಿಳಿತಗಳನ್ನು ನಾನು ಸಮೀಪದಿಂದ ನೋಡಿದ್ದೇನೆ. ಇತರರಿಂದ ಯಾವುದೇ ಅಪೇಕ್ಷೆಯನ್ನಿಡದೇ ಇರುವ ಪರಿಸ್ಥಿತಿಯಲ್ಲಿ ಅವರು ಅತ್ಯಂತ ಸಮಾಧಾನಿಯಾಗಿರುತ್ತಾರೆ.

೫. ತೀವ್ರ ಪ್ರಾರಬ್ಧವನ್ನು ಧೈರ್ಯದಿಂದ ಎದುರಿಸುವುದು

೫ ಅ. ಯಜಮಾನರಿಗೆ ವ್ಯವಹಾರದಲ್ಲಿ ಯಶಸ್ಸು ಸಿಗದಿರುವಾಗ ಅವರು ನೌಕರಿ ಮಾಡಲು ಪ್ರಾರಂಭಿಸುವುದು : ಕಮಲಕ್ಕ ಇವರ ಯಜಮಾನ ದಿ. ಮಹಾಲಿಂಗಪ್ಪಾ ಇವರು ಸಹ ದೇವರಂತಹ ವ್ಯಕ್ತಿಯಾಗಿದ್ದರು. ಅವರು ಎಲ್ಲರಿಗಿಂತ ಹಿರಿಯರಾಗಿದ್ದರೂ ಅವರು ಯಾವತ್ತೂ ಹಕ್ಕು ಅಥವಾ ಅಧಿಕಾರವನ್ನು ತೋರಿಸಲಿಲ್ಲ. ತಂದೆ ಮತ್ತು ಇತರ ಸಹೋದರರು ಏನು ಹೇಳುತ್ತಾರೋ, ಅದನ್ನೆಲ್ಲ ಅವರು ಕೇಳುತ್ತಿದ್ದರು. ಮಹಾಲಿಂಗಪ್ಪಾ ಇವರ ಅಂಗಡಿಯಿತ್ತು. ಮನೆಗೆ ಬೇಕಾಗುವ ಎಲ್ಲ ಸಾಮಾಗ್ರಿಗಳನ್ನು ಆ ಅಂಗಡಿಯಿಂದಲೇ ತರುತ್ತಿದ್ದರು. ಸ್ವಲ್ಪ ದಿನಗಳಲ್ಲಿಯೇ ಅವರ ವ್ಯಾಪಾರ ನೆಲಕಚ್ಚಿತು. ಅನಂತರ ಅವರು ಚಹಾಪುಡಿ ಮತ್ತು ಬೆಲ್ಲದ ವ್ಯಾಪಾರವನ್ನು ಆರಂಭಿಸಿದರು. ಅದರಲ್ಲಿಯೂ ಅವರು ಯಶಸ್ವಿಯಾಗಲಿಲ್ಲ.

ಒಂದು ಕಠಿಣ ಪ್ರಸಂಗದಿಂದ ಅವರು ಮನೆ ಬಿಟ್ಟು ಹೋಗಿದ್ದರು. ಅವರು ೩ ತಿಂಗಳ ನಂತರ ಮನೆಗೆ ಹಿಂದಿರುಗಿ ಬಂದರು. ಆಗ ಅವರಿಗೆ ಸಂಪಾದನೆ ಇಲ್ಲದ ಕಾರಣ ಅವರಿಗೆ ಮನೆಯ ಹೊಣೆಯನ್ನು ಹೊರಲು ಸಾಧ್ಯವಾಗುತ್ತಿರಲಿಲ್ಲ. ಆದ್ದರಿಂದ ಅವರು ಕುಟುಂಬದಿಂದ ಬೇರ್ಪಟ್ಟು ಒಂದೆಡೆ ನೌಕರಿ ಮಾಡಲು ಪ್ರಾರಂಭಿಸಿದರು.

೫ ಆ. ಕುಟುಂಬದ ವ್ಯಕ್ತಿಗಳು ನಿಧನರಾಗುವುದು ಮತ್ತು ಅವರ ಸ್ಮರಣೆಯಿಂದ ದುಃಖವಾಗದಿರುವುದು : ಕಮಲಕ್ಕ ಇವರ ಹಿರಿಯ ಮಗಳ ಮದುವೆಯಾದ ನಂತರ ಒಂದು ವರ್ಷದಲ್ಲಿಯೇ ಅವಳ ನಿಧನವಾಯಿತು. ದೊಡ್ಡ ಮಗ ಸಹ ಯುವಕನಾಗಿರುವಾಗಲೇ ನಿಧನ ಹೊಂದಿದನು. ೫ ವರ್ಷಗಳ ಹಿಂದೆ ಅವರ ಯಜಮಾನರು ಪಕ್ಷಪಾತಕ್ಕೆ ತುತ್ತಾದರು. ಇದರಲ್ಲಿಯೇ ಅವರು ನಿಧನರಾದರು. ‘ಭೂತಕಾಲದ ಕಠಿಣ ಪ್ರಸಂಗ ಅಥವಾ ಕುಟುಂಬದವರ ಮರಣವನ್ನು ನೆನೆದು ಕಮಲಕ್ಕಗೆ ದುಃಖವಾಗಿರುವುದನ್ನು ನಾನು ಎಂದೂ ನೋಡಿರಲಿಲ್ಲ.

೬. ಅಧ್ಯಾತ್ಮದಲ್ಲಿ ಆಸಕ್ತಿ ಇರುವುದು

ಕಮಲಕ್ಕ ಇವರಿಗೆ ಸಮಯ ಸಿಕ್ಕಿದಾಗ ಅವರು ಎಲ್ಲಿಯಾದರೂ ಸತ್ಸಂಗ, ಪ್ರವಚನ ಅಥವಾ ಕೀರ್ತನೆ ನಡೆಯುತ್ತಿದ್ದರೆ ಅಲ್ಲಿಗೆ ಒಬ್ಬರೇ ಹೋಗುತ್ತಿದ್ದರು. ಅಲ್ಲಿ ಹೇಳಿದ್ದನ್ನೆಲ್ಲ ಶ್ರದ್ಧೆಯಿಂದ ಮಾಡುತ್ತಾರೆ.

೭. ಅನೇಕ ಪ್ರಸಂಗಗಳಲ್ಲಿ ದೇವರ ಸಹಾಯ ಲಭಿಸುವುದು

೭ ಅ. ಒಂದು ವಿವಾಹ-ಸಮಾರಂಭಕ್ಕೆ ಹೋಗಲು ತಡವಾಗುತ್ತಿರುವಾಗ ದೇವರಲ್ಲಿ ಮೊರೆಯಿಟ್ಟಾಗ ಓರ್ವ ಅಪರಿಚಿತ ವ್ಯಕ್ತಿ ದ್ವಿಚಕ್ರ ವಾಹನದಿಂದ ಕಲ್ಯಾಣ ಮಂಟಪಕ್ಕೆ ತಲುಪಿಸುವುದು : ಒಮ್ಮೆ ಕಮಲಕ್ಕ ಇವರಿಗೆ ದೂರದಲ್ಲಿದ್ದ ಒಂದು ಕಲ್ಯಾಣಮಂಟಪಕ್ಕೆ ವಿವಾಹಕ್ಕಾಗಿ ಹೋಗಲಿಕ್ಕಿತ್ತು. ಮನೆಯಲ್ಲಿ ಎಲ್ಲ ಕೆಲಸ ಮುಗಿಸುವಾಗ ಮನೆಯ ಇತರರೆಲ್ಲರೂ ಹೊರಟು ಹೋಗಿದ್ದರು. ವಿವಾಹಕ್ಕೆ ಹೋಗಲು ವಿಳಂಬವಾದ ಕಾರಣ ‘ಮುಹೂರ್ತದ ಸಮಯ ತಪ್ಪಿ ಹೋಗ ಬಹುದು, ಎನ್ನುವ ಭಯದಿಂದ ದೇವರಿಗೆ ಮೊರೆಯಿಟ್ಟರು. ಆಗ ದಾರಿಯಲ್ಲಿ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ಓರ್ವ ವ್ಯಕ್ತಿಗೆ ಕಲ್ಯಾಣ ಮಂಟಪದ ವರೆಗೆ ಬಿಡಲು ವಿನಂತಿಸಿದರು. ಆಗ ಆ ವ್ಯಕ್ತಿ ಅವರನ್ನು ನೇರವಾಗಿ ಕಲ್ಯಾಣ ಮಂಟಪದ ವರೆಗೆ ಬಿಟ್ಟರು.

೭ ಆ. ನಿಲ್ದಾಣದ ಕಡೆಗೆ ನಡೆದುಕೊಂಡು ಹೋಗುವಾಗ ದಾರಿ ತಪ್ಪಿದಾಗ ಓರ್ವ ದ್ವಿಚಕ್ರವಾಹನ ಸವಾರನು ನಿಲ್ದಾಣದ ವರೆಗೆ ತಲುಪಿಸುವುದು : ಒಮ್ಮೆ ಅವರಿಗೆ ಪರವೂರಿಗೆ ಹೋಗಲಿಕ್ಕಿದ್ದರು. ಸ್ವಲ್ಪ ಮುಂದೆ ಹೋದಾಗ ತಾನು ದಾರಿ ತಪ್ಪಿರುವುದು ಅರಿವಾಯಿತು. ಅದೇ ಸಮಯದಲ್ಲಿ ಅಲ್ಲಿಂದ ಹೋಗುತ್ತಿದ್ದ ಓರ್ವ ದ್ವಿಚಕ್ರವಾಹನ ಸವಾರನನ್ನು ನಿಲ್ಲಿಸಿ ನಿಲ್ದಾಣಕ್ಕೆ ಹೋಗುವ ಮಾರ್ಗವನ್ನು ವಿಚಾರಿಸಿದರು. ಆಗ ಆ ವ್ಯಕ್ತಿಯು ಅವರನ್ನು ನಿಲ್ದಾಣದ ವರೆಗೆ ಬಿಟ್ಟುಹೋದರು.

೮. ಪ್ರೇಮಭಾವ

ಅ. ಎಲ್ಲರನ್ನೂ ಸಮಾನವಾಗಿ ಪ್ರೀತಿಸುವುದು : ಕಮಲಕ್ಕ ತುಂಬಾ ಪ್ರೇಮಮಯೀ ಆಗಿದ್ದಾರೆ. ಅವರು ತಮ್ಮವರು ಮತ್ತು ಪರರು ಎನ್ನುವ ಭೇದಭಾವ ಮಾಡುವುದಿಲ್ಲ. ಅವರು ಎಲ್ಲರನ್ನೂ ಸಮಾನವಾಗಿ ಪ್ರೇಮಿಸುತ್ತಾರೆ. ಅವರ ಈ ಗುಣದಿಂದಾಗಿಯೇ ಅವರು ಎಲ್ಲರಿಗೂ ಬೇಕಾದವರಾಗಿದ್ದಾರೆ ಹಾಗೂ ಅವರ ಬಗ್ಗೆ ಆಧಾರವೆನಿಸುತ್ತದೆ. ನನಗೆ ಕಮಲಕ್ಕ ‘ನಾದಿನಿ ಅಲ್ಲ, ‘ತಾಯಿಯೇ ಆಗಿದ್ದಾರೆ. ಇಸವಿ ೨೦೦೦ ದಲ್ಲಿ ನನ್ನ ತಾಯಿ ನಿಧನರಾದರು. ಅಂದಿನಿಂದ ಕಮಲಕ್ಕ ನನಗೆ ತವರುಮನೆಯ ಕೊರತೆಯ ಅರಿವಾಗಲು ಬಿಡಲಿಲ್ಲ. – ಸೌ. ವಿಜಯಾಲಕ್ಷ್ಮಿ ಆಮಾತಿ (ಶ್ರೀಮತಿ ಕಮಲಕ್ಕ ಇವರ ಅತ್ತಿಗೆ,) ಸನಾತನ ಆಶ್ರಮ, ರಾಮನಾಥಿ ಗೋವಾ. (೨.೨.೨೦೨೦)