ಸಾಧಕರೇ, ಹಿಂದೂ ರಾಷ್ಟ್ರದ ಮುಂಬರುವ ಪೀಳಿಗೆಯನ್ನು ತಯಾರಿಸಲು ನಿಮ್ಮ ಮಕ್ಕಳ ಸಾಧಕತ್ವದ ಕಡೆಗೆ ಗಮನಕೊಟ್ಟು ಅವರ ಸಾಧನೆಗೆ ಸಹಾಯ ಮಾಡಿರಿ !

ನನಗೆ ದೇವರ ಕೃಪೆಯಿಂದ ‘ಯುವ ಸಂಘಟನೆಯ ಪ್ರವಾಸದ ನಿಮಿತ್ತ ಮಹಾರಾಷ್ಟ್ರ, ಗೋವಾ ಮತ್ತು ಕರ್ನಾಟಕ ರಾಜ್ಯಗಳಿಗೆ ಹೋಗುವ ಅವಕಾಶ ಸಿಕ್ಕಿತು. ಆಗ ನನ್ನಿಂದ ಸಹಜವಾಗಿಯೇ ನಮ್ಮ ಸಾಧಕರ ಮಕ್ಕಳು, ಬಾಲಸಾಧಕರು ಮತ್ತು ಯುವ ಸಾಧಕರ ನಿರೀಕ್ಷಣೆಯಾಯಿತು. ‘ಎಲ್ಲ ಮಕ್ಕಳ ಭವಿಷ್ಯಕ್ಕಾಗಿ ಮತ್ತು ಸಾಧನೆಗಾಗಿ ಅವರ ಮೇಲೆ ಸಾಧಕತ್ವದ ಸಂಸ್ಕಾರವಾಗುವುದು, ಕಾಲದ ಆವಶ್ಯಕತೆಯಾಗಿದೆ. ಅದಕ್ಕಾಗಿ ಈ ಲೇಖನವನ್ನು ಶ್ರೀ ಗುರುಚರಣಗಳಲ್ಲಿ ಅರ್ಪಿಸುತ್ತಿದ್ದೇನೆ. ‘ಸಾಧಕ ತಂದೆ-ತಾಯಿಯರು ಜಾಗರೂಕರಾಗ ಬೇಕು ಮತ್ತು ಮಕ್ಕಳು, ಹಾಗೆಯೇ ಯುವ ಸಾಧಕರು ‘ಗುರುಗಳ ಬೋಧನೆಯಂತೆ ನಡೆದುಕೊಳ್ಳುತ್ತಿದ್ದಾರಲ್ಲ ?, ಎಂದು ವಿಚಾರ ಮಾಡಬೇಕು. ಈ ಲೇಖನವನ್ನು ತಮ್ಮ ಮಕ್ಕಳನ್ನು ಮತ್ತು ಯುವಕ-ಯುವತಿಯರನ್ನು ಸೇರಿಸಿಕೊಂಡು ಓದಬೇಕು ಎಂದು ಎಲ್ಲ ಮಕ್ಕಳು ಮತ್ತು ಸಾಧಕ ಪಾಲಕರಿಗೆ ಸವಿನಯ ವಿನಂತಿ !

೧. ‘ಆನ್‌ಲೈನ್ ಶಾಲೆ-ಮಹಾವಿದ್ಯಾಲಯಗಳ ನಿಮಿತ್ತ ಮಕ್ಕಳು ಸಂಚಾರವಾಣಿಯಲ್ಲಿ ಅನಾವಶ್ಯಕ ವಿಷಯಗಳನ್ನು ನೋಡುತ್ತಾರೆಯೇ ?’, ಎಂಬುದರ ಕಡೆಗೆ ಪಾಲಕರು ಜಾಗರೂಕರಿರುವುದು ಆವಶ್ಯಕವಾಗಿದೆ !

ಕೊರೋನಾ ಮಹಾಮಾರಿಯಿಂದಾಗಿ ಶಾಲೆ, ಮಹಾವಿದ್ಯಾಲಯಗಳ ಶಿಕ್ಷಣವು ‘ಆನ್‌ಲೈನ್’ನಲ್ಲಿ ನಡೆಯುತ್ತದೆ. ಇದಕ್ಕೆ ಸಾಮಾಜಿಕ ಮಾಧ್ಯಮಗಳನ್ನು ಉಪಯೋಗಿಸಬೇಕಾಗುತ್ತದೆ. ಸಂಚಾರವಾಣಿಯನ್ನು ಉಪಯೋಗಿಸುವಾಗ ‘ಮಕ್ಕಳು ಪಾಲಕರ ‘ವಾಟ್ಸ್‌ಆಪ್’ ಖಾತೆಯನ್ನು ನೋಡುತ್ತಾರೆ, ಅವರ ಸಂದೇಶಗಳನ್ನು ಓದುತ್ತಾರೆ ಮತ್ತು ಪಾಲಕರನ್ನು ಕೇಳದೇ ದೊಡ್ಡವರಿಗೆ ಉತ್ತರಗಳನ್ನು ಕೊಡುತ್ತಾರೆ’, ಎಂಬುದು ಕಂಡು ಬಂದಿದೆ. ಚಿಕ್ಕ ಮಕ್ಕಳು ನೋಡಬಾರದಂತಹ ಆನ್‌ಲೈನ್ ಜಾಹೀರಾತುಗಳು ಸಂಚಾರ ವಾಣಿಯಲ್ಲಿ ಬರುತ್ತವೆ. ಅವುಗಳನ್ನು ಮಕ್ಕಳು ನೋಡಿದರೆ, ಮಕ್ಕಳ ಮೇಲೆ ಕುಸಂಸ್ಕಾರವಾಗಬಹುದು. ಇಂತಹ ಜಾಹೀರಾತುಗಳು ಶಾಲೆಯ ಸಮಯದಲ್ಲಿ ಬಂದರೆ, ಪಾಲಕರಿಗೆ ಅದರ ಬಗ್ಗೆ ತಿಳಿಯುವುದೂ ಇಲ್ಲ. ‘ಯೂ ಟ್ಯೂಬ್’, ‘ಗೂಗಲ್’ ಇವುಗಳನ್ನು ನೋಡುವಾಗ ಮಕ್ಕಳು ಇಂತಹ ವಿಡಿಯೋ ಅಥವಾ ಛಾಯಾಚಿತ್ರಗಳನ್ನು ನೋಡಿದರೆ ಅವರ ಮನಸ್ಸಿನ ಮೇಲಾಗುವ ಕುಸಂಸ್ಕಾರಗಳನ್ನು ದೂರಗೊಳಿಸಲು ಮುಂದೆ ಬಹಳ ಪರಿಶ್ರಮ ಪಡಬೇಕಾಗುತ್ತದೆ. ಶಾಲೆ ಮತ್ತು ಮಹಾವಿದ್ಯಾಲಯದ ಸಮಯದಲ್ಲಿ ಮಕ್ಕಳು ಇತರ ಸ್ನೇಹಿತ-ಸ್ನೇಹಿತೆಯರ ಸಂಪರ್ಕಕ್ಕೆ ಬರುತ್ತಾರೆ, ಹಾಗೆಯೇ ಸಾಮಾಜಿಕ ಮಾಧ್ಯಮಗಳಿಂದ ಅವರೊಂದಿಗೆ ಸಂಪರ್ಕವನ್ನು ಇಟ್ಟು ಕೊಳ್ಳುತ್ತಾರೆ. ಇಂತಹ ಸಮಯದಲ್ಲಿ ಅವರು ತಪ್ಪಿಯಾವುದು ಬೇಡವಾಗಿದೆಯೋ ಅಂತಹದ್ದನ್ನು ಕಲಿತರೆ ಅದರಿಂದ ಅವರ ಮೇಲೆ ಅದರ ಪರಿಣಾಮವಾಗುತ್ತದೆ. ಈ ವಿಷಯವು ಪಾಲಕರಿಗೆ ಕೊನೆಯವರೆಗೆ ಗಮನಕ್ಕೆ ಬರುವುದಿಲ್ಲ. ಆದ್ದರಿಂದ ಪಾಲಕರು ಜಾಗರೂಕರಾಗಿದ್ದು ಇದರ ಕಡೆಗೆ ಗಮನ ಕೊಡಬೇಕು.

೨. ಮಕ್ಕಳಿಗೆ ರಾಮಾಯಣ, ಮಹಾಭಾರತಗಳಂತಹ ಮಾಲಿಕೆಗಳನ್ನು ಸಂಚಾರವಾಣಿಯ ಬದಲು ದೂರಚಿತ್ರವಾಹಿನಿಯಲ್ಲಿ ತೋರಿಸಿರಿ !

‘ಮಕ್ಕಳಿಗೆ ರಾಮಾಯಣ, ಮಹಾಭಾರತ, ಶ್ರೀಕೃಷ್ಣ ಇಂತಹ ಮಾಲಿಕೆಗಳನ್ನು ನೋಡಲು ಕೊಟ್ಟರೆ ಅವರ ಮೇಲೆ ಒಳ್ಳೆಯ ಸಂಸ್ಕಾರಗಳಾಗುತ್ತವೆ’, ಎಂದು ಪಾಲಕರಿಗೆ ಅನಿಸುತ್ತದೆ; ಆದರೆ ಯೂ ಟ್ಯೂಬ್‌ನಲ್ಲಿ ಯಾವುದಾದರೊಂದು ವಿಡಿಯೋ ಹಾಕಿದರೆ ಕೆಳಗೆ ಇತರ ವಿಡಿಯೋಗಳು ಕಾಣಿಸುತ್ತಿರುತ್ತವೆ. ಅವುಗಳಲ್ಲಿ ಹಿಂಸಕ, ಅಶ್ಲೀಲ ಮತ್ತು ಅನಾವಶ್ಯಕ ವಿಡಿಯೋಗಳೂ ಇರುತ್ತವೆ. ಅವುಗಳನ್ನು ನೋಡಿದಾಗ ಮಕ್ಕಳ ಮನಸ್ಸಿನಲ್ಲಿ ಅವುಗಳಿಂದ  ಆಳವಾದ ಪರಿಣಾಮವಾಗುತ್ತದೆ. ಇದರ ಕಡೆಗೆ ಪಾಲಕರು ದುರ್ಲಕ್ಷ ಮಾಡುತ್ತಾರೆ. ಆದ್ದರಿಂದ ಮಕ್ಕಳಿಗೆ ರಾಮಾಯಣ, ಮಹಾಭಾರತ ಇತ್ಯಾದಿ ಮಾಲಿಕೆಗಳನ್ನು ತೋರಿಸುವುದಿದ್ದರೆ, ದೂರಚಿತ್ರವಾಹಿನಿಯಲ್ಲಿ ತೋರಿಸಿರಿ. ನಿಮ್ಮ ಸಂಚಾರವಾಣಿಯ ಜೋಡಣೆಯನ್ನು ದೂರಚಿತ್ರವಾಹಿನಿಗೆ ಜೋಡಿಸಿ ನೀವೇ ಆರಂಭ ಮಾಡಿಕೊಡಿ. ಅವರಿಗೆ ಒಳ್ಳೆಯ ಗ್ರಂಥಗಳನ್ನು ಓದುವ ಹವ್ಯಾಸ ಮಾಡಿಸಿರಿ. ಚಿಕ್ಕ ಮಕ್ಕಳಿದ್ದರೆ ಅವರಿಗೆ ಕಥೆಗಳನ್ನು ಹೇಳಿರಿ; ಆದರೆ ಸಂಚಾರವಾಣಿ ಹೆಸರಿನ ರಾಕ್ಷಸನಿಂದ ಮಕ್ಕಳನ್ನು ದೂರವಿಡಿ.

೩. ಮಕ್ಕಳೇ, ‘ಭವಿಷ್ಯದಲ್ಲಿ ‘ಕಾರ್ಟೂನ್’ ಆಗಬೇಕೋ, ಅಥವಾ ಛತ್ರಪತಿ ಶಿವಾಜಿ ಮಹಾರಾಜ, ಮಹಾರಾಣಾ ಪ್ರತಾಪ ಆಗಬೇಕೋ ?’ ಎಂಬುದರ ಬಗ್ಗೆ ವಿಚಾರ ಮಾಡಿರಿ !

ಇತ್ತೀಚೆಗೆ ಬಹುತೇಕ ಮಕ್ಕಳು ‘ಕಾರ್ಟುನ್’ಗಳನ್ನು ನೋಡುತ್ತಾರೆ. ಕಾರ್ಟುನ್‌ಗಳು ಕಾಲ್ಪನಿಕವಾಗಿರುತ್ತವೆ. ಅವುಗಳಿಂದ ಜ್ಞಾನ ಹೆಚ್ಚಾಗುವುದಿಲ್ಲ ಅಥವಾ ಧರ್ಮಶಿಕ್ಷಣ ಸಿಗುವುದಿಲ್ಲ ಅಥವಾ ಶೌರ್ಯಜಾಗೃತಿಯೂ ಆಗುವುದಿಲ್ಲ. ಅವುಗಳಿಂದ ಕೇವಲ ಮನೋರಂಜನೆಯಾಗುತ್ತದೆ. ಇದರಿಂದ ಮಕ್ಕಳ ವ್ಯಕ್ತಿತ್ವ ಕುಗ್ಗುತ್ತದೆ. ಆದ್ದರಿಂದ ಪಾಲಕರು ಗಾಂಭೀರ್ಯದಿಂದ ವಿಚಾರ ಮಾಡಬೇಕು; ಅವರೊಂದಿಗೆ ಮಕ್ಕಳೂ ವಿಚಾರ ಮಾಡಬೇಕು. ‘ನಮಗೆ ಛತ್ರಪತಿ ಶಿವಾಜಿ ಮಹಾರಾಜ, ಮಹಾರಾಣಾ ಪ್ರತಾಪ, ಝಾನ್ಸಿ ರಾಣಿ ಲಕ್ಷ್ಮೀಬಾಯಿ, ಸ್ವಾ. ಸಾವರಕರ, ಸ್ವಾಮಿ ವಿವೇಕಾನಂದ ಆಗಲು ಇಷ್ಟವಾಗುತ್ತದೆಯೋ, ಅಥವಾ ‘ಕಾರ್ಟೂನ್’ ಆಗಲು ಇಷ್ಟವಾಗುತ್ತದೆ ?’, ಎಂಬುದನ್ನು ಇಂದೇ ನಿರ್ಧರಿಸಿರಿ ಮತ್ತು ನಿಮ್ಮ ಜೀವನದ ಧ್ಯೇಯವನ್ನು ನಿಶ್ಚಯಿಸಿಕೊಳ್ಳಿರಿ.

೪. ‘ಸಂಚಾರವಾಣಿಯ ಬಳಕೆಯಿಂದ ಮಕ್ಕಳ ಸ್ವಭಾವದಲ್ಲಾಗುವ ಬದಲಾವಣೆಗಳ ಕಡೆಗೆ ತೀವ್ರತೆಯಿಂದ ಗಮನ ಕೊಡುವುದು’, ಪಾಲಕರ ಸಾಧನೆಯೇ ಆಗಿದೆ !

ಕೆಲವೊಮ್ಮೆ ಸಂಚಾರವಾಣಿಯ ಯೋಗ್ಯ ಬಳಕೆಯಿಂದ ಮಕ್ಕಳಲ್ಲಿ ‘ಸಾಮಾಜಿಕ ಮಾಧ್ಯಮಗಳನ್ನು ರಾಷ್ಟ್ರ ಮತ್ತು ಧರ್ಮಕಾರ್ಯಕ್ಕಾಗಿ ಉಪಯೋಗಿಸುವುದು, ಪಾಲಕರಿಗೆ ಸಂಚಾರವಾಣಿಯನ್ನು ಬಳಸಲು ಸಹಾಯ ಮಾಡುವುದು’, ಇತ್ಯಾದಿ ಒಳ್ಳೆಯ ಬದಲಾವಣೆಗಳೂ ಆಗಿರಬಹುದು. ತದ್ವಿರುದ್ಧ ‘ಸಂಚಾರವಾಣಿಯನ್ನು ಬಳಸುವಾಗ ಯಾರಾದರೂ ಏನಾದರೂ ಕೇಳಿದರೆ, ಅವರ ಮೇಲೆ ಸಿಟ್ಟಾಗಿ ಸಿಡಿಮಿಡಿಗೊಂಡು ಮಾತನಾಡುವುದು, ಎದುರಿನ ವ್ಯಕ್ತಿಗೆ ಗೌರವ ಕೊಡದಿರುವುದು, ಸಂಚಾರವಾಣಿಯನ್ನಿಡಲು ಹೇಳಿದರೆ ಪ್ರತಿಕ್ರಿಯಾತ್ಮಕವಾಗಿ ಮಾತನಾಡುವುದು’, ಇಂತಹ ಕೆಲವು ನಕಾರಾತ್ಮಕ ಬದಲಾವಣೆಗಳು ಮಕ್ಕಳಲ್ಲಿ ಆಗಿರುವುದು ಕಂಡು ಬರುತ್ತದೆ. ಕೆಲವು ಯುವಕರಿಗಂತೂ ಸಂಚಾರವಾಣಿಯ ವ್ಯಸನವಾಗಿದೆ. ‘ಈ ರೀತಿ ತಮ್ಮ ಮಕ್ಕಳ ವಿಷಯದಲ್ಲಿ ಆಗುತ್ತಿಲ್ಲವಲ್ಲ ?’, ಎಂಬುದರ ಕಡೆಗೆ ಎಲ್ಲ ಪಾಲಕರು ಕಟ್ಟುನಿಟ್ಟಾಗಿ ಗಮನ ಕೊಡುವುದು’, ನಮ್ಮ ಸಾಧನೆಯೇ ಆಗಿದೆ.

೫. ಮಕ್ಕಳಿಂದ ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಯ ಪ್ರಕ್ರಿಯೆಯನ್ನು ಮತ್ತು ನಾಮಜಪ ಮುಂತಾದ ಸಾಧನೆಯನ್ನು ಮಾಡಿಸಿಕೊಳ್ಳಲು ಪಾಲಕರು ಪ್ರಯತ್ನಿಸಬೇಕು !

‘ಮುಂಬರುವ ಆಪತ್ಕಾಲ ಮತ್ತು ಯುದ್ಧದ ಕಾಲದಲ್ಲಿ ಸಂಚಾರವಾಣಿ ಸೇವೆ ನಿಂತರೆ, ಇಂತಹ ಮಕ್ಕಳ ಗತಿ ಏನಾಗಬಹುದು ?’, ಎಂಬುದರ ವಿಚಾರವನ್ನು ಈಗಲೇ ಮಾಡದಿದ್ದರೆ, ‘ಇಂತಹ ಮಕ್ಕಳು ಮುಂದೆ ದೊಡ್ಡ ಮಾನಸಿಕ ಆಘಾತಕ್ಕೆ ಬಲಿಯಾಗಬಹುದು’, ಎಂಬುದನ್ನು ಗಂಭೀರವಾಗಿ ಗಮನದಲ್ಲಿಟ್ಟುಕೊಳ್ಳಬೇಕು. ನಮ್ಮ ಮಕ್ಕಳಿಂದ ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಗಾಗಿ ಪ್ರಕ್ರಿಯೆಯನ್ನು ಮತ್ತು ನಾಮಜಪ ಮುಂತಾದ ಸಾಧನೆಯನ್ನು ಮಾಡಿಸಿಕೊಳ್ಳಲು ನಾವು ಇಂದಿನಿಂದಲೇ ಪ್ರಯತ್ನಿಸಬೇಕು. ಕೆಲವು ಸಾಧಕರ ಮಕ್ಕಳ ಕೈಯಲ್ಲಿ ಸಂಚಾರವಾಣಿ ಕೊಡದ ಹೊರತು ಊಟ ಮಾಡುವುದಿಲ್ಲ. ‘ಇದು ಶರೀರಕ್ಕೆ ಲಾಭದಾಯಕವಾಗಿದೆಯೇ ?’, ಎಂಬುದರ ವಿಚಾರ ಮಾಡುವುದು ಆವಶ್ಯಕವಾಗಿದೆ. ಕೆಲವು ಚಿಕ್ಕ ಮಕ್ಕಳು ಊಟ ಮತ್ತು ಇತರ ಸಮಯದಲ್ಲಿ ಸಂಚಾರವಾಣಿಯನ್ನು ಕೈಯಲ್ಲಿ ಕೊಡದಿದ್ದರೆ ಅಥವಾ ಅವರ ಮನಸ್ಸಿಗನುಸಾರ ದೂರಚಿತ್ರವಾಣಿಯಲ್ಲಿ ಕಾರ್ಯಕ್ರಮವನ್ನು ಹಾಕದಿದ್ದರೆ, ‘ನೆಲದ ಮೇಲೆ ಕಾಲುಗಳನ್ನು ಅಪ್ಪಳಿಸುವುದು, ದೊಡ್ಡದಾಗಿ ಅಳುವುದು, ಹೊದಿಕೆಯನ್ನು ಹೊದ್ದುಕೊಂಡು ಮಲಗುವುದು, ಎದುರುತ್ತರ ಕೊಡುವುದು’, ಮುಂತಾದವುಗಳನ್ನು ಮಾಡುತ್ತಾರೆ. ‘ಮಕ್ಕಳಿಗೆ ಸಾಧನೆ ಮತ್ತು ಸ್ವಭಾವದೋಷ ನಿರ್ಮೂಲನೆ ಹಾಗೂ ಅಹಂ ನಿರ್ಮೂಲನೆಯ ಪ್ರಕ್ರಿಯೆಯನ್ನು ಕಲಿಸದಿದ್ದರೆ ನಾವು ಅವರ ಹಾನಿಯನ್ನು ಮಾಡುತ್ತಿದ್ದೇವೆ’, ಎಂಬ ಅರಿವನ್ನಿಟ್ಟುಕೊಂಡು ಗುರುದೇವ ರಿಗೆ ಅಪೇಕ್ಷಿತವಿರುವ ಸಾಧನೆಯನ್ನು ಕಲಿಸಲು ಪ್ರಯತ್ನಿಸೋಣ.

ಕೆಲವು ಪಾಲಕರು ‘ತಮ್ಮ ದೈವೀ ಮಕ್ಕಳು ತಪ್ಪು ವರ್ತನೆಯನ್ನು ಮಾಡುವುದಿಲ್ಲ ಎಂದು ತಿಳಿದುಕೊಳ್ಳುತ್ತಾರೆ. ಕೆಲವು ದೈವೀ ಬಾಲಕರು ತಮ್ಮ ಪಾಲಕರಿಗೆ ಎದುರುತ್ತರ ನೀಡುವುದು ಕಂಡು ಬಂದಿತು. ಕೆಲವು ದೈವೀ ಬಾಲಕರ ಪ್ರಗಲ್ಭತೆ ಹೆಚ್ಚಿರುವುದರಿಂದ ಅವರು ಚಿಕ್ಕ ವಯಸ್ಸಿನಲ್ಲಿಯೇ ದೊಡ್ಡವರಂತೆ ವರ್ತಿಸ ತೊಡಗುತ್ತಾರೆ. ಇದರಿಂದ ಅವರ ಕಲಿಯುವ ಸ್ಥಿತಿ ಕಡಿಮೆಯಾಗಿ ಕಲಿಸುವ ಸ್ಥಿತಿ ಹೆಚ್ಚಾಗುತ್ತದೆ. ದೈವೀ ಬಾಲಕರಲ್ಲಿ ಸಾಧಕತ್ವ ಇದ್ದೇ ಇರುತ್ತದೆ; ಆದರೆ ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಯ ಪ್ರಕ್ರಿಯೆಯನ್ನು ನಡೆಸದಿದ್ದರೆ, ಅವರಲ್ಲಿನ ಸ್ವಭಾವದೋಷಗಳು ಉಕ್ಕಿ ಬರುತ್ತವೆ. ‘ಸನಾತನ ಪ್ರಭಾತದಲ್ಲಿ ಹಿಂದೆ ಪರಾತ್ಪರ ಗುರು ಡಾ. ಆಠವಲೆಯವರ ಒಂದು ಚೌಕಟ್ಟು ಮುದ್ರಣವಾಗಿತ್ತು. ಅದರಲ್ಲಿ ದೈವೀ ಬಾಲಕರೊಂದಿಗೆ ವ್ಯವಹರಿಸುವಾಗ ‘ಅವರ ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಯ ಪ್ರಕ್ರಿಯೆಯನ್ನು ಮಾಡಿಸಿಕೊಳ್ಳುವುದು ಮತ್ತು ಅವರನ್ನು ಸಂಭಾಳಿಸುವುದು’ ಈ ಬಗ್ಗೆ ಒಂದು ಸೂಚನೆಯಿತ್ತು. ಅದಕ್ಕನುಸಾರ ನಾವು ನಮ್ಮ ದೈವೀ ಬಾಲಕರನ್ನು ಜೋಪಾನ ಮಾಡಬೇಕು ಮತ್ತು ಮಕ್ಕಳಿಗೆ ಸಾಧನೆಯ ಮುಂದಿನ ಹಂತಕ್ಕೆ ಹೋಗಲು ಸಹಾಯ ಮಾಡಬೇಕು.

೬. ಮಕ್ಕಳಿಗೆ ಶಿಕ್ಷೆಯನ್ನು ಕೊಡುವ ಬಗ್ಗೆ ಪಾಲಕರ ಅಯೋಗ್ಯ ವಿಚಾರಪ್ರಕ್ರಿಯೆ ಮತ್ತು ಅವರಿಗೆ ಶಿಕ್ಷಿಸದಿರುವುದರಿಂದ ಮಕ್ಕಳಲ್ಲಿ ಪಾಲಕರ ಬಗ್ಗೆ ಅಂಜಿಕೆ ಉಳಿಯದಿರುವುದು

ಹಿಂದಿನ ಕಾಲದಲ್ಲಿ ಅಥವಾ ನನ್ನ ಚಿಕ್ಕಂದಿನಲ್ಲಿ ‘ಆಟದ ಸಮಯ, ಅಭ್ಯಾಸ, ದೊಡ್ಡವರೊಂದಿಗೆ ಮಾತನಾಡುವುದು, ನಡೆದುಕೊಳ್ಳುವುದು, ಸಮಾಜದಲ್ಲಿ ಹೇಗೆ ನಡೆದುಕೊಳ್ಳಬೇಕು ? ಹೇಗೆ ನಡೆದುಕೊಳ್ಳಬಾರದು ?, ಈ ಕುರಿತು ಶಿಸ್ತನ್ನು ಕಲಿಸುವಾಗ ಯಾವಾಗ ನಾನು ಅದನ್ನು ಕೇಳುತ್ತಿರಲಿಲ್ಲವೋ, ಆಗ ಪಾಲಕರು ನನಗೆ ಬಗ್ಗಿ ನಿಂತುಕೊಳ್ಳುವುದು, ಮನೆಯ ಹೊರಗೆ ನಿಂತುಕೊಳ್ಳುವುದು ಈ ರೀತಿಯ ಶಿಕ್ಷೆಗಳನ್ನು ನೀಡಿದ್ದರಿಂದ ನನ್ನ ಮೇಲೆ ಒಳ್ಳೆಯ ಸಂಸ್ಕಾರಗಳಾದವು ಮತ್ತು ನನ್ನಲ್ಲಿ ಶಿಸ್ತು ಬಂದಿತು.

ಸದ್ಯ ಕೆಲವು ಪಾಲಕರಿಗೆ ತಮ್ಮ ಮಕ್ಕಳ ತಪ್ಪುಗಳನ್ನು ಹೇಳಿದರೆ ಸಿಟ್ಟು ಬರುತ್ತದೆ ಮತ್ತು ಅವರಿಗೆ ಶಿಕ್ಷೆಯನ್ನು ನೀಡುವ ಉದ್ದೇಶವನ್ನು ಪಾಲಕರು ಗಮನದಲ್ಲಿ ತೆಗೆದುಕೊಳ್ಳುವುದಿಲ್ಲ. ಕೆಲವು ಪಾಲಕರಿಗೆ ‘ತಮ್ಮ ಮಗ ಸಂಚಾರವಾಣಿಯನ್ನು ಎಷ್ಟು ಸುಲಭವಾಗಿ (ಸಲೀಸಾಗಿ) ಉಪಯೋಗಿಸುತ್ತಾನೆ, ಎಂದರೆ ಅವನಿಗೆ ಅದರಲ್ಲಿನ ಎಲ್ಲವೂ ತಿಳಿಯುತ್ತದೆ, ಎಂಬ ಬಗ್ಗೆ ಹೆಮ್ಮೆ ಅನ್ನಿಸುತ್ತದೆ. ಈ ರೀತಿ ಅವರು ಎಲ್ಲರೆದುರು ವ್ಯಕ್ತಪಡಿಸುತ್ತಾರೆ. ಸದ್ಯದ ಶೇ. ೮೦ ರಷ್ಟು ಮಕ್ಕಳನ್ನು ಪಾಲಕರು ಅತಿಮುದ್ದು ಮಾಡಿ ಬೆಳೆಸಿರುವುದು ಗಮನಕ್ಕೆ ಬರುತ್ತದೆ. ಈ ಸಂದರ್ಭದಲ್ಲಿ ಮಕ್ಕಳು ಕೇಳದಿದ್ದರೆ, ಹೆಚ್ಚೆಂದರೆ ಮಕ್ಕಳಿಗೆ ಪಾಲಕರು ಕೇವಲ ತಿಳಿಸಿ ಹೇಳುತ್ತಾರೆ. ಶಿಕ್ಷೆಯನ್ನು ವಿಧಿಸದಿರುವುದರಿಂದ ಮಕ್ಕಳಿಗೆ ಪಾಲಕರ ಬಗ್ಗೆ ಅಂಜಿಕೆ ಇರುವುದಿಲ್ಲ.

೭. ಕುಸಂಸ್ಕಾರವಿರುವ ಸ್ನೇಹಿತ-ಸ್ನೇಹಿತೆಯರ ಸಹವಾಸದಿಂದ ಮಕ್ಕಳು ಅಯೋಗ್ಯ ಕೃತಿಗಳನ್ನು ಮಾಡುವುದು

ಸಮಾಜದಲ್ಲಿ ಕುಸಂಸ್ಕಾರವಿರುವ ಕೆಲವು ಮಕ್ಕಳಿದ್ದಾರೆ ಮತ್ತು ಅವರು ಅದರಂತೆ ನಡೆದುಕೊಳ್ಳುತ್ತಾರೆ. ಇಂತಹ ಮಕ್ಕಳ ಸಹವಾಸವಿದ್ದರೂ ನಮ್ಮ ಮಕ್ಕಳಿಗೆ ಬಹಳ ದೊಡ್ಡ ಹಾನಿಯಾಗಬಹುದು. ‘ಸೋಶಿಯಲ್ ಮೀಡಿಯಾಗಳಲ್ಲಿ ಸ್ನೇಹಿತರನ್ನು ಹೇಗೆ ಮಾಡಿಕೊಳ್ಳಬೇಕು ? ‘ಚ್ಯಾಟ್ ಹೇಗೆ ಮಾಡಬೇಕು ? ‘ಫ್ರೆಂಡ್‌ಶಿಪ್ (ಮೈತ್ರಿ) ಮಾಡುವುದು, ‘ಲವ್ ಎಂದರೇನು ? ‘ಬಾಯ್‌ಫ್ರೆಂಡ್ ‘ಗರ್ಲಫ್ರೆಂಡ್ ಎಂದರೇನು ? ಈ ಉದಾಹರಣೆಗಳು ಸಾಮಾನ್ಯವಾಗಿವೆ; ಆದರೆ ಇದಕ್ಕಿಂತಲೂ ಹೆಚ್ಚು ಗಂಭೀರ ಸ್ಥಿತಿಯನ್ನು ನಾನು ಪ್ರಾಥಮಿಕ ಶಾಲೆಯ ಮಕ್ಕಳಲ್ಲಿ ಪ್ರತ್ಯಕ್ಷ ನೋಡಿದ್ದೇನೆ. ಶಾಲೆಯಿಂದ ಮನೆಗೆ ಹಿಂದಿರುಗುವಾಗ ಈ ಶಾಲೆಯ ಮಕ್ಕಳು ಗುಟಖಾ-ತಂಬಾಕು ತಿನ್ನುವುದು, ಸಿಗರೇಟ್ ಸೇದುವುದು ಮಾಡುತ್ತಾರೆ. ಮಹಾವಿದ್ಯಾಲಯಗಳಲ್ಲಿ ಈ ಮಕ್ಕಳು ಶರಾಬಿನ ಅಮಲಿನಲ್ಲಿ (ನಶೆಯಲ್ಲಿ) ಮುಳುಗಿರುತ್ತಾರೆ. ಈಗ ಯುವಕರ ಸಂದರ್ಭದಲ್ಲಿ ‘ಫ್ಲರ್ಟ್ ಮಾಡುವುದೆಂದರೆ ಪರಸ್ಪರರ ಉಪಭೋಗವನ್ನು ತೆಗೆದುಕೊಳ್ಳುವುದಾಗಿದೆ ಎಂಬಂರ್ಥದ ವಿಚಾರಗಳಿವೆ. ಇದು ಸದ್ಯದ ಮಹಾವಿದ್ಯಾಲಯಗಳ ಜೀವನದಲ್ಲಿ ಶೇ. ೪೦ ರಿಂದ ೫೦ ರಷ್ಟು ಮಕ್ಕಳ ಸಂದರ್ಭದಲ್ಲಿ ಕಂಡು ಬರುತ್ತದೆ. ‘ಅಶ್ಲೀಲ ವಿಡಿಯೋಗಳನ್ನು ನೋಡುವುದು, ಹಿಂಸಕ ವೀಡಿಯೋ ಆಟಗಳನ್ನು ಆಡುವುದು, ಇಂತಹ ಎಲ್ಲ ಲಕ್ಷಣಗಳು ಈ ಆಧುನಿಕ ಎನಿಸಿಕೊಳ್ಳುವ ಕೆಲವು ಮಕ್ಕಳಲ್ಲಿ ಕಂಡು ಬರುತ್ತದೆ. ಇಂತಹ ಯಾವುದಾದರೊಬ್ಬ ಸ್ನೇಹಿತ ಅಥವಾ ಸ್ನೇಹಿತೆ ಜೊತೆ ನಮ್ಮ ಮಕ್ಕಳಿಗೆ ಸಿಕ್ಕಿದರೆ, ನಮಗೆ ‘ನಮ್ಮ ಮಕ್ಕಳು ಯಾವಾಗ ಹಾಳಾಗುವರು ?, ಎಂಬುದು ಹೇಳಲು ಸಾಧ್ಯವಿಲ್ಲ. ‘ಯಾವುದಾದರೊಂದು ಚಿಕ್ಕ ಲಕ್ಷಣವೂ ನಮ್ಮ ಮಕ್ಕಳಲ್ಲಿ ಯಾವಾಗ ಉಗ್ರ ರೂಪವನ್ನು ಧರಿಸುವುದು ?, ಎಂದು ಹೇಳಲು ಸಾಧ್ಯವಿಲ್ಲ.

ಸಾಧಕರು ತಮ್ಮ ಮಕ್ಕಳಿಗೆ ಸಾತ್ತ್ವಿಕ ಮತ್ತು ಸರಳತೆಯ (ಸಿಂಪಲ್) ಅಭ್ಯಾಸವನ್ನು ಮಾಡಿಸಿರುತ್ತಾರೆ. ಹೊರಗಿನ ಗಂಡು ಮಕ್ಕಳ ಅಥವಾ ಹೆಣ್ಣುಮಕ್ಕಳನ್ನು ನೋಡಿ ಮಕ್ಕಳಿಗೆ ‘ಜೀನ್ಸ್, ಟಿ-ಶರ್ಟ್; ‘ಲೋ ವೆಸ್ಟ್ (ಸೊಂಟದ ಕೆಳಗೆ ಬರುವ), ತೊಡೆಯ ಮೇಲೆ ಹರಿದ, ಬಣ್ಣಹೋದ ಪ್ಯಾಂಟ್ ಇತ್ಯಾದಿ ಬಟ್ಟೆಗಳನ್ನು ಧರಿಸಬೇಕೆಂದು ಅನಿಸುತ್ತದೆ. ಹೆಣ್ಣುಮಕ್ಕಳಲ್ಲಿ ‘ಲಿಪಸ್ಟಿಕ್ ಹಚ್ಚಿಕೊಳ್ಳುವುದು, ಸಿಂಗರಿಸಿಕೊಳ್ಳಲು ಇಷ್ಟವಾಗುವುದು, ಉಗುರುಗಳನ್ನು ಬೆಳೆಸುವುದು, ಸ್ಕರ್ಟ್ ಧರಿಸುವುದು, ದೊಡ್ಡ ಕೊರಳಿನ ಬಟ್ಟೆಗಳನ್ನು ಹೊಲಿಸುವುದು, ಫ್ಯಾಶನ್‌ನ ಹೆಸರಿನಲ್ಲಿ ಅಂಗಪ್ರದರ್ಶನವನ್ನು ಮಾಡುವುದು, ಇಂತಹ ಲಕ್ಷಣಗಳು ಕಂಡು ಬರುತ್ತವೆ. ಕುಸಂಸ್ಕಾರಯುತ ಮಕ್ಕಳ ಸಹವಾಸದಲ್ಲಿದ್ದರೆ, ನಮ್ಮ ಮಕ್ಕಳ ಮನಸ್ಸಿನಲ್ಲಿಯೂ ಇಂತಹ ವಿಚಾರಗಳೇ ಆರಂಭವಾಗುತ್ತವೆ ಮತ್ತು ಅವರು ಅದೇ ರೀತಿ ಇರಲು ಪ್ರಯತ್ನಿಸುತ್ತಾರೆ.

೮. ಮಕ್ಕಳು ರಾಷ್ಟ್ರ ಮತ್ತು ಧರ್ಮಕಾರ್ಯಕ್ಕಾಗಿ ಸಮರ್ಪಿತರಾಗಲು ಮತ್ತು ಆಪತ್ಕಾಲದಲ್ಲಿ ಜೀವಂತವಿರಲು ಸಾಧನೆಯನ್ನು ಮಾಡುವುದು ಆವಶ್ಯಕವಾಗಿದೆ

ನಿಮ್ಮ ಮಗ ರಾಷ್ಟ್ರ ಮತ್ತು ಧರ್ಮಕ್ಕಾಗಿ ಸಮರ್ಪಿತನಾದರೆ, ಏನಾಗುತ್ತದೆ ? ಎಲ್ಲ ಪಾಲಕರು ಈ ಪ್ರಶ್ನೆಯನ್ನು ತಮ್ಮ ಮನಸ್ಸಿಗೆ ಕೇಳಬೇಕು. ಈ ಪ್ರಶ್ನೆಯನ್ನು ಕೇಳಿದ ನಂತರ ನಮ್ಮ ಮನಸ್ಸಿನಲ್ಲಿ ಯಾವುದಾದರು ಸಂದೇಹ, ಅನುಮಾನ, ಹೆದರಿಕೆ, ಸಂಕೋಚ ಬಂದರೆ ‘ನಾವು ಇನ್ನೂ ಕಡಿಮೆ ಬೀಳುತ್ತಿದ್ದೇವೆ, ಎಂದು ತಿಳಿಯಬೇಕು. ‘ನಮ್ಮ ಮಗನು ಮನೆಯಲ್ಲಿಯೇ ಶೌರ್ಯವನ್ನು ತೋರಿಸಬೇಕು, ಎಂದು ಅನಿಸುತ್ತಿದ್ದರೆ, ನಾವು ನಮ್ಮ ಮಗನಿಗೆ ದೊಡ್ಡ ಹಾನಿಯನ್ನು ಮಾಡುತ್ತಿದ್ದೇವೆ. ‘ಮನೆಯಲ್ಲಿದ್ದೇ ಮಗನು ಸೇವೆಯನ್ನು ಮಾಡಬೇಕು, ಎಂದು ಅನಿಸುವುದೆಂದರೆ ‘ಸಮಯ ಸಿಕ್ಕಿದಾಗ ಸಾಧನೆಯನ್ನು ಮಾಡು, ಎಂದು ಹೇಳಿದಂತಾಗುತ್ತದೆ; ಆದರೆ ‘ಸಾಧನೆಯು ‘ಪಾರ್ಟ್ ಟೈಮ್ ಜಾಬ್ ಅಲ್ಲ !, ಎಂಬ ಚೌಕಟ್ಟು ‘ಸನಾತನ ಪ್ರಭಾತದಲ್ಲಿ ಪ್ರಕಟವಾಗಿತ್ತು. ಅದರ ಬಗ್ಗೆ ವಿಚಾರ ಮಾಡಬೇಕು. ‘ತ್ಯಾಗ ಮತ್ತು ‘ಸಮರ್ಪಣೆ ಇವು ಉತ್ತಮ ಶಿಷ್ಯನ ಲಕ್ಷಣಗಳಾಗಿವೆ. ಇದು ಸ್ವಲ್ಪ ಕಠಿಣವಾಗಿದೆ; ಆದರೆ ಈ ವಿಚಾರವನ್ನು ಯಾವಾತ್ತಾದರೂ ಒಂದು ದಿನ ನಮಗೆ ಮಾಡಲೇ ಬೇಕಾಗುತ್ತದೆ, ಹಾಗಾದರೆ ಈಗೇಕೆ ಬೇಡ ? ಎಂಬ ವಿಚಾರವನ್ನು ಮಾಡಿಯಾದರೂ ನೋಡೋಣ.

ಕೇವಲ ನಮ್ಮ ಮಕ್ಕಳ ಸಂದರ್ಭದಲ್ಲಿ ಮಾತ್ರವಲ್ಲ, ‘ನಮ್ಮ ಸೊಸೆ, ಪತಿ, ಪತ್ನಿ ಇವರ ಸಂದರ್ಭದಲ್ಲಿ ನಮ್ಮ ವಿಚಾರಗಳೇನಿವೆ ?, ಎಂಬುದರ ವಿಚಾರವನ್ನೂ ನಾವು ಮಾಡೋಣ. ‘ಪ್ರಕೃತಿಗನುಸಾರ ಮತ್ತು ಆಪತ್ಕಾಲದಲ್ಲಿ ಜೀವಂತವಾಗಿರಲು ಸಾಧನೆಯನ್ನು ಮಾಡಿರಿ, ಎಂದು ತ್ರಿಕಾಲದರ್ಶಿ ಶ್ರೀ ಗುರುಗಳು ನಮಗೆ ಹೇಳುತ್ತಿ ದ್ದಾರೆ. ಅಧ್ಯಾತ್ಮ, ರಾಷ್ಟ್ರ, ಧರ್ಮ ಮತ್ತು ವ್ಯಷ್ಟಿ ಸಾಧನೆ ಇವೆಲ್ಲವೂ ಶ್ರೀಗುರುಗಳ ರೂಪಗಳೇ ಆಗಿವೆ. ಈ ಮಾರ್ಗದಿಂದ ನಮ್ಮನ್ನು ನಾವು ಸಂಪೂರ್ಣ ಸಮರ್ಪಿಸಿಕೊಂಡು ಪ್ರಯತ್ನಗಳನ್ನು ಮಾಡಬೇಕು. ಭಾವನೆಯ ಸ್ತರದಲ್ಲಿ ವಿಚಾರ ಮಾಡಿ ನಾವು ನಮ್ಮ, ಕುಟುಂಬದವರ ಮತ್ತು ಮಕ್ಕಳ ಸಾಧನೆಯಲ್ಲಿ ಮತ್ತು ಗುರುಸೇವೆಯಲ್ಲಿ ಅಡಚಣೆಗಳನ್ನು ಉಂಟು ಮಾಡುವುದು ಬೇಡ.

೯. ಪರಾತ್ಪರ ಗುರು ಡಾ. ಆಠವಲೆಯವರ ಜ್ಞಾನಶಕ್ತಿ, ಧರ್ಮಶಕ್ತಿ, ರಾಷ್ಟ್ರಶಕ್ತಿ ಮತ್ತು ಅಧ್ಯಾತ್ಮಶಕ್ತಿಯ ಉತ್ತರಾಧಿಕಾರವನ್ನು ನಾವು ಮುಂದುವರೆಸಲು ಕಟಿಬದ್ಧರಾಗೋಣ !

ಸಂಪೂರ್ಣ ವಿಶ್ವಕ್ಕೆ ಮೋಕ್ಷದ ಮಾರ್ಗವನ್ನು ತೋರಿಸುವ ಪರಾತ್ಪರ ಗುರು ಡಾ. ಆಠವಲೆಯವರ ಜ್ಞಾನಶಕ್ತಿ, ಧರ್ಮಶಕ್ತಿ, ರಾಷ್ಟ್ರಶಕ್ತಿ ಮತ್ತು ಅಧ್ಯಾತ್ಮಶಕ್ತಿ ಇವುಗಳ ಉತ್ತರಾಧಿಕಾರವನ್ನು ನಾವೆಲ್ಲ ಮುಂದುವರಿಸಿಕೊಂಡು ಹೋಗಲಿಕ್ಕಿದೆ. ಆದ್ದರಿಂದ ಗುರುಚರಣಗಳಲ್ಲಿ ನತಮಸ್ತಕರಾಗಿ ಇಂದು ವಚನಬದ್ಧರಾಗಲು ಇದೇ ಯೋಗ್ಯಸಮಯವಾಗಿದೆ. ಶ್ರೀ ಗುರುಗಳು ಸಮರ್ಥರಾಗಿದ್ದಾರೆ. ಅವರ ಮೇಲೆ ಶ್ರದ್ಧೆಯನ್ನಿಟ್ಟು ಇಂದು ಅವರ ಚರಣಗಳಲ್ಲಿ ವಚನಬದ್ಧರಾಗಿ ಅವರಿಗೆ, ‘ನಾವು ನಿಮ್ಮ ಈ ಅಧಿಕಾರವನ್ನು ಮುಂದೆ ನಡೆಸುವೆವು  ! ಎಂದು ಹೇಳೋಣ ನಾನು ಓರ್ವ ಹುಡುಗಿಯು ತನ್ನ ತಂದೆಯ ಜೊತೆಗೆ ಉದ್ಧಟತನದಿಂದ ಮಾತನಾಡುವುದನ್ನು ನೋಡಿದೆನು. ಆಗ ನನಗೆ ಕೆಟ್ಟದೆನಿಸಿತು ಮತ್ತು ನಾನು ‘ಇದು ಹೀಗೇಕೆ ಗುರುದೇವಾ ? ಎಂದು ಗುರುದೇವರಿಗೆ ಆರ್ತತೆಯಿಂದ ಮೊರೆಯಿಟ್ಟೆನು, ಅನಂತರ ಗುರುದೇವರು ನನಗೆ ಈ ಲೇಖನವನ್ನು ಬರೆಯಲು ಸೂಚಿಸಿದರು. ‘ಗುರುದೇವರೇ, ನೀವೇ ಇದನ್ನು ನಿಮ್ಮ ಚರಣಗಳಲ್ಲಿ ಸಮರ್ಪಿಸಿಕೊಳ್ಳಿರಿ, ಇದೇ ನಿಮ್ಮ ಪಾವನ ಚರಣಗಳಲ್ಲಿ ಕೃತಜ್ಞತಾಪೂರ್ವಕ ಪ್ರಾರ್ಥನೆ !

– ಶ್ರೀ. ಸುಮಿತ ಸಾಗವೇಕರ, ಯುವ ಸಂಘಟಕ, ಹಿಂದೂ ಜನಜಾಗೃತಿ ಸಮಿತಿ. (೩.೧೧.೨೦೨೦)