೨೦೧೦ ರಲ್ಲಿ ನನ್ನ ನಾಡಿಪಟ್ಟಿಯ ವಾಚನವನ್ನೂ ಶ್ರೀ. ಮುದಲಿಯಾರ ಗುರುಜಿಯವರು ಮಾಡಿದ್ದರು. ಅದರಲ್ಲಿಯೂ ‘೨೦೧೬ ರ ನಂತರ ನಿಮ್ಮ ತಂದೆ-ತಾಯಿಯವರ ಪೈಕಿ ಒಬ್ಬರೇ ಬದುಕುವರು ಎಂದಿತ್ತು. ಅದರಂತೆ ಸಪ್ಟೆಂಬರ್ ೨೦೧೬ ರಲ್ಲಿ ದೇವದ, ಪನವೇಲನಲ್ಲಿನ ಸನಾತನದ ಆಶ್ರಮದಲ್ಲಿರುವ ನನ್ನ ತಾಯಿಯವರ (ಸೌ. ಮಾಧುರಿ ಮಾಧವ ಗಾಡಗೀಳರವರ) ಆರೋಗ್ಯವು ತುಂಬಾ ಹದಗೆಟ್ಟಿತ್ತು ‘ಈಗ ಅವರು ಬದುಕುವುದಿಲ್ಲ, ಎಂದೇ ಕುಟುಂಬದವರಿಗೆಲ್ಲ ಅನಿಸುತ್ತಿತ್ತು. ಆಗ ಪ.ಪೂ. ಪಾಂಡೆ ಮಹಾರಾಜರು ಅವರಿಗಾಗಿ ಪ್ರತಿದಿನ ೧-೨ ಗಂಟೆ ನಾಮಜಪ ಮುಂತಾದ ಉಪಾಯಗಳನ್ನು ಮಾಡಿ ಅವರನ್ನು ಮೃತ್ಯುವಿನ ದವಡೆಯಿಂದ ಹೊರಗೆ ತೆಗೆದರು. ಹಾಗೆಯೇ ಪರಾತ್ಪರ ಗುರು ಡಾ. ಆಠವಲೆಯವರ ಕೃಪೆಯಿಂದಾಗಿಯೂ ಅವರಿಗೆ ಪುನರ್ಜನ್ಮ ಸಿಕ್ಕಿತು. ಅವರ ಭವಿಷ್ಯದಲ್ಲಿಯೂ (ನಾಡಿಪಟ್ಟಿಯಲ್ಲಿಯೂ) ಅವರ ಮೃತ್ಯುವಿಗೆ ‘ಗುರುಚಾಂಡಾಳ ಯೋಗವು ಕಾರಣವಾಗಿದೆ, ಎಂದು ಇತ್ತು ಮತ್ತು ‘ಇದರಿಂದ ಬದುಕಿಸಲು ಕೇವಲ ಗುರುಗಳಿಗೆ ಮಾತ್ರ ಸಾಧ್ಯವಿದೆ. ಗುರುಕೃಪೆಯಿದ್ದರೆ, ಇದರಿಂದ ಬದುಕಬಹುದು, ಎಂದು ಹೇಳಿದ್ದರು. ಈಗ ಅದರ ಅನುಭೂತಿಯೂ ಬಂದಿತು.
ಸೆಪ್ಟೆಂಬರ್ ೨೦೧೬ ರಲ್ಲಿನ ಪಿತೃಪಕ್ಷ ಮುಗಿದ ನಂತರ ಪ್ರಾರಂಭವಾದ ನವರಾತ್ರಿಯಲ್ಲಿ ತಾಯಿಯ ಆರೋಗ್ಯದಲ್ಲಿ ತುಂಬಾ ಸುಧಾರಣೆಯಾಯಿತು. ಅವಳ ಮೇಲಿನ ಮೃತ್ಯು ಸಂಕಟವು ದೂರವಾಯಿತು. ಈಗ (ಅಕ್ಟೋಬರ್ ೨೦೨೦ ಕಳೆದ ಒಂದೂವರೆ ವರ್ಷಗಳಿಂದ ನನ್ನ ತಂದೆ-ತಾಯಿಯವರು ಗೋವಾದ ಸನಾತನ ಆಶ್ರಮದಲ್ಲಿ ಇರುತ್ತಿದ್ದಾರೆ. ಆದೆಷ್ಟು ಈ ಗುರುಕೃಪೆ ಮತ್ತು ಅದೆಷ್ಟು ಗುರುಗಳ ಸಾಮರ್ಥ್ಯ ! – (ಸದ್ಗುರು) ಡಾ. ಮುಕುಲ ಗಾಡಗೀಳ, ೧೬.೧೦.೨೦೨೦
‘ಅಕ್ಟೋಬರ್ ೨೦೧೩ ರಲ್ಲಿ ಪುಣೆಯಲ್ಲಿನ ಅಗಸ್ತಿ ನಾಡಿಪಟ್ಟಿ ವಾಚಕರಾದ ಶ್ರೀ. ಮುದಲಿಯಾರ ಗುರುಜಿಯವರ ಬಳಿ ನಾನು ನನ್ನ ನಾಡಿಪಟ್ಟಿಯನ್ನು ನೋಡಲು ಮೊದಲನೇ ಸಲ ಹೋಗಿದ್ದೆನು.ಆಗ ನನ್ನೊಂದಿಗೆ ಸಾಧಕರಾದ ಶ್ರೀ. ಧನಂಜಯ ಕರ್ವೆಯವರೂ ಇದ್ದರು. ಶ್ರೀ. ಕರ್ವೆಯವರು ಮೊದಲೇ ಮಾಹಿತಿಯನ್ನು ನೀಡಿದ್ದರಿಂದ ಶ್ರೀ. ಮಂದಾರ ಗಾಡಗೀಳ (ಸದ್ಗುರು ಡಾ. ಮುಕುಲ ಗಾಡಗೀಳ ಇವರ ತಮ್ಮ) ಇವರ ನಾಡಿಪಟ್ಟಿಯನ್ನು ಶ್ರೀ. ಮುದಲಿಯಾರ ಗುರುಜಿಯವರು ಹುಡುಕಿಟ್ಟಿದ್ದರು ಮತ್ತು ಅದರ ವಾಚನವನ್ನೂ ನಮ್ಮ ಎದುರಿಗೆ ಮಾಡಿದರು.
‘ಈ ನಾಡಿಪಟ್ಟಿಯು ಶ್ರೀ. ಮಂದಾರದವರದ್ದೇ ಆಗಿದೆ ?’, ಎಂಬುದನ್ನು ಖಚಿತಪಡಿಸಿಕೊಳ್ಳಲು ಅವರು ಶ್ರೀ. ಮಂದಾರರವರ ಜೀವನದ ಕೆಲವು ಮಹತ್ವದ ಪ್ರಸಂಗಗಳನ್ನು ಹೇಳಿ ‘ಇವು ನಿಜವಾಗಿಯೂ ಘಟಿಸಿವೆಯೇ ?’, ಎಂದು ನಮಗೆ ಕೇಳಿದರು. ನಮಗೆ ಅವುಗಳ ಬಗ್ಗೆ ಗೊತ್ತಿರಲಿಲ್ಲ, ಆದುದರಿಂದ ನಾನು ಸದ್ಗುರು ಡಾ. ಮುಕುಲ ಗಾಡಗೀಳ ಇವರಿಗೆ ಸಂಚಾರವಾಣಿಯನ್ನು ಮಾಡಿ ಅವುಗಳ ಬಗ್ಗೆ ಕೇಳಿಕೊಂಡೆನು ಮತ್ತು ಆ ಮಾಹಿತಿಯನ್ನು ಶ್ರೀ. ಮುದಲಿಯಾರ ಗುರುಜಿಯವರಿಗೆ ಕೊಟ್ಟೆನು.
ಅನಂತರ ನಾಡಿವಾಚನದಲ್ಲಿ ಗುರುಜಿಯವರು, “ಶ್ರೀ. ಮಂದಾರವರ ತಂದೆ-ತಾಯಿ ಇವರಿಬ್ಬರಲ್ಲಿ ಒಬ್ಬರಿಗೆ ೨ ವರ್ಷಗಳ ನಂತರ ಮೃತ್ಯುಯೋಗವಿದೆ. ೨ ವರ್ಷಗಳ ನಂತರ, ಅಂದರೆ ೨೦೧೫ ರಲ್ಲಿ ಇವರಿಬ್ಬರಲ್ಲಿ ಒಬ್ಬರೇ ಉಳಿಯುವರು,” ಎಂದು ಹೇಳಿದರು. ಈ ಭವಿಷ್ಯವನ್ನು ಅಗಸ್ತಿ ನಾಡಿಪಟ್ಟಿಯಲ್ಲಿ ಕೊಡಲಾಗಿತ್ತು.
ಈಗ (ಲೇಖನ ಬರೆಯುವಾಗ) ೨೦೨೦ ನೇ ವರ್ಷ ನಡೆಯುತ್ತಿದೆ ಮತ್ತು ಶ್ರೀ. ಮಂದಾರ ಹಾಗೂ ಸದ್ಗುರು ಡಾ. ಮುಕುಲ ಗಾಡಗೀಳರವರ ತಂದೆ-ತಾಯಿ ಇಬ್ಬರೂ ಜೀವಂತವಾಗಿದ್ದು ಅವರು ಸನಾತನದ ಆಶ್ರಮದಲ್ಲಿ ಸಾಧನೆಯನ್ನು ಮಾಡುತ್ತಿದ್ದಾರೆ.
ಮೇಲಿನ ಪ್ರಸಂಗದಿಂದ ‘ಪರಾತ್ಪರ ಗುರು ಡಾ. ಆಠವಲೆಯವರ ಕೃಪೆಯಿಂದ ನಾಡಿಪಟ್ಟಿಯಲ್ಲಿದ್ದ ಮೃತ್ಯುವಿನಂತಹ ಭವಿಷ್ಯವೂ ಬದಲಾಗಬಹುದು’, ಎಂಬುದು ನನ್ನ ಗಮನಕ್ಕೆ ಬಂದಿತು ಮತ್ತು ನನ್ನ ಭಾವಜಾಗೃತವಾಯಿತು. ‘ಪರಾತ್ಪರ ಗುರು ಡಾಕ್ಟರರ ಕೃಪೆಯಿಂದ ಅದೆಷ್ಟು ಸಾಧಕರ ಸಂದರ್ಭದಲ್ಲಿಯೂ ಹೀಗಾಗಿರಬಹುದು’, ಎಂಬುದರ ಕಲ್ಪನೆಯನ್ನೂ ಮಾಡಲು ಸಾಧ್ಯವಿಲ್ಲ. ಅನೇಕ ಸಾಧಕರಿಗೆ ಅವರು ಮೃತ್ಯುವಿನ ದವಡೆಯಿಂದ ಬದುಕಿಸಿರುವ ಅನುಭೂತಿಗಳೂ ಬಂದಿವೆ.
ಪರಾತ್ಪರ ಗುರು ಡಾಕ್ಟರರ ಶ್ರೇಷ್ಠತೆ ಮತ್ತು ಅವರ ಅಲೌಕಿಕತೆಯನ್ನು ಶಬ್ದಗಳಲ್ಲಿ ಮಂಡಿಸುವುದು ಸಾಧ್ಯವಿಲ್ಲ. ನಮ್ಮೆಲ್ಲ ಸಾಧಕರಿಗೆ ಸಾಕ್ಷಾತ್ ಶ್ರೀ ಮಹಾವಿಷ್ಣು ಸ್ವರೂಪರಾಗಿರುವ ಪರಾತ್ಪರ ಗುರು ಡಾಕ್ಟರರು ಗುರುಗಳೇ ಲಭಿಸಿದ್ದಾರೆ. ನಾನು ಅವರ ದಿವ್ಯ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞತೆಗಳನ್ನು ವ್ಯಕ್ತಪಡಿಸುತ್ತೇನೆ.’ – ಸೌ. ರಾಜಶ್ರೀ ಖೊಲ್ಲಮ, ಪುಣೆ (೧೪.೯.೨೦೨೦)