ಮಹರ್ಲೋಕದಿಂದ ಪೃಥ್ವಿಯಲ್ಲಿ ಜನಿಸಿರುವ ಜೀವಗಳ ವ್ಯಾಪಕ ಸ್ತರದಲ್ಲಿ ಸಮಷ್ಟಿ ಸಾಧನೆಯಾಗಬೇಕೆಂದು, ಅವರಿಗೆ ಕಲೆಯ ವಿಷಯಗಳ ಶಿಕ್ಷಣವನ್ನು ನೀಡದೇ ‘ಸಂತರಾಗಲು ಪ್ರಾಧಾನ್ಯತೆಯನ್ನು ನೀಡಬೇಕು ಎಂದು ಪರಾತ್ಪರ ಗುರು ಡಾಕ್ಟರರು ಹೇಳುವುದು

‘ಆಧ್ಯಾತ್ಮಿಕ ಮಟ್ಟವು ಉತ್ತಮವಾಗಿರುವ, ಅಂದರೆ ಮಹರ್ಲೋಕದಿಂದ ಪೃಥ್ವಿಯ ಮೇಲೆ ಜನಿಸಿರುವ ಮಕ್ಕಳಲ್ಲಿ ಮೂಲದಲ್ಲಿಯೇ ವಿವಿಧ ಗುಣಗಳಿರುತ್ತವೆ. ಅದೇ ರೀತಿ ಅವರಲ್ಲಿ ವಿವಿಧ ಕಲೆಗಳನ್ನು ಕಲಿಯುವ ಸಾಮರ್ಥ್ಯವೂ ಇರುವುದರಿಂದ ಅವರು ಸಹಜವಾಗಿಯೇ ಅನೇಕ ಕಲೆಗಳಲ್ಲಿ ಪಾರಾಂಗತರಾಗಿರುತ್ತಾರೆ.

ಪರಾತ್ಪರ ಗುರು ಡಾ. ಆಠವಲೆಯವರು ಸಾಧಕರಿಗೆ ಮಾಡಿದ ಮಾರ್ಗದರ್ಶನ !

ಯಾವಾಗ ಸಾಧನೆಯನ್ನು ಮಾಡುತ್ತಿರೋ, ಆಗ ಒಂದರ ನಂತರ ಒಂದರಂತೆ ಸ್ವಭಾವದೋಷಗಳು ಕಡಿಮೆಯಾಗುತ್ತವೆ.  ಆಗ ಒಂದು ಚಕ್ರದ, ನಂತರ ಇನ್ನೊಂದು ಚಕ್ರ ಜಾಗೃತವಾಗುವ ಅನುಭೂತಿಯು ಬರುತ್ತದೆ. ಅಧ್ಯಾತ್ಮವು ತಾತ್ತ್ವಿಕ ಶಾಸ್ತ್ರವಾಗಿಲ್ಲ, ಅದು ಕೃತಿಯಲ್ಲಿ ತರುವ ಶಾಸ್ತ್ರವಾಗಿದೆ ಮತ್ತು ಅಧ್ಯಾತ್ಮವು ಅನಂತದ ಶಾಸ್ತ್ರವಾಗಿದೆ.

ನಮ್ಮ ಸಾಧನೆಯ ಪ್ರಗತಿಯು ನಮ್ಮ ಪ್ರಯತ್ನಗಳ ಮೇಲೆಯೇ ಅವಲಂಬಿಸಿರುತ್ತದೆ !

ಅಧ್ಯಾತ್ಮದಲ್ಲಿ ನಮ್ಮ ನಿಜವಾದ ಸಂಬಂಧವು ಗುರು ಅಥವಾ ಈಶ್ವರನೊಂದಿಗಿರುತ್ತದೆ. ಆದ್ದರಿಂದ ಸಾಧಕರು ಜವಾಬ್ದಾರ ಸಾಧಕರ ಮನಸ್ಸನ್ನು ಒಲಿಸಿಕೊಳ್ಳುವುದಕ್ಕಿಂತ ಗುರು ಅಥವಾ ಈಶ್ವರನಿಗೆ ಅಪೇಕ್ಷಿತವಿರುವ ಸಾಧನೆಯನ್ನು ಮಾಡಿ ಅವರ ಮನಸ್ಸನ್ನು ಗೆಲ್ಲಲು ಪ್ರಯತ್ನಿಸಬೇಕು.

ನಾಮಜಪ ಮತ್ತು ಯಜ್ಞ

ಏನನ್ನಾದರೂ ಸಾಧಿಸಲು ಒಬ್ಬನು ನಾಮಜಪವನ್ನು ಅನೇಕ ದಶಕಗಳ ಕಾಲ ಮಾಡಬೇಕಾಗುತ್ತದೆ. ತದ್ವಿರುದ್ಧ ಯಜ್ಞವನ್ನು ಕೆಲವು ಸಾತ್ತ್ವಿಕ ಪುರೋಹಿತರು ಕೆಲವು ಗಂಟೆ ಅಥವಾ ದಿನಗಳ ಕಾಲ ಮಾಡಿದರೆ ೨೦-೨೫ ಕಿಲೋಮೀಟರ್ ದೂರದಲ್ಲಿರುವ ಸಾವಿರಾರು ಜನರಿಗೂ ಅದರ ಲಾಭವಾಗುತ್ತದೆ.’

ಮಕರಸಂಕ್ರಾಂತಿಯ ಶುಭಮುಹೂರ್ತದಲ್ಲಿ ಸನಾತನದ ಧರ್ಮಪ್ರಸಾರದ ಕಾರ್ಯವು ಪುನಃ ಶುಭಾರಂಭ !

ಕೊರೋನಾದಿಂದಾಗಿ ಕಳೆದ ೧೦ ತಿಂಗಳು ಸನಾತನ ಸಂಸ್ಥೆಯ ಧರ್ಮಪ್ರಸಾರವು ‘ಆನ್‌ಲೈನ್ ಮೂಲಕ ನಡೆಯುತ್ತಿತ್ತು. ಈಗ ಅನೇಕ ಜಿಲ್ಲೆಗಳ ಸ್ಥಿತಿಯು ಮೊದಲಿನಂತೆ ಆಗುತ್ತಿರುವುದರಿಂದ ಸನಾತನದ ಸಾಧಕರು ಕೊರೋನಾದ ನಿಯಮಗಳನ್ನು ಪಾಲಿಸಿ ಮೊದಲಿನಂತೆ ಸಮಾಜಕ್ಕೆ ಹೋಗಿ ಧರ್ಮಪ್ರಸಾರ ಮಾಡುವವರಿದ್ದಾರೆ.

ಪರಾತ್ಪರ ಗುರು ಡಾ. ಆಠವಲೆಯವರು ಸಾಧಕರಿಗೆ ಸಾಧನೆಯ ಬಗ್ಗೆ ಮಾಡಿದ ಮಾರ್ಗದರ್ಶನ !

ಸ್ವಭಾವದೋಷ ಮತ್ತು ಅಹಂನ ನಿರ್ಮೂಲನೆಗೆ ಮೊದಲ ಆದ್ಯತೆಯಿದೆ. ಇದು ಮೊದಲನೇ ಹಂತವಾಗಿದೆ. ಶಾಲೆಗೆ ಹೋದಾಗ ಹೇಗೆ ನಾವು ಮೊದಲು ‘ಅ, ಆ, ಇ, ಈ ….’ ಮತ್ತು ‘ಎ. ಬಿ. ಸಿ. ಡಿ…..’ ಬರೆಯಲು ಕಲಿಯುತ್ತೇವೆ ಮತ್ತು ನಂತರ ದೊಡ್ಡ ದೊಡ್ಡ ಪುಸ್ತಕಗಳನ್ನು ಓದಲು ಕಲಿಯುತ್ತೇವೆ; ಅದೇ ರೀತಿ ಮೊದಲು ಸ್ವಭಾವದೋಷ ಮತ್ತು ಅಹಂ ಇವುಗಳ ನಿರ್ಮೂಲನೆಯನ್ನು ಮಾಡಬೇಕು.

ಶೇ. ೫೬ ರಷ್ಟು ಆಧ್ಯಾತ್ಮಿಕ ಮಟ್ಟದ ಉಚ್ಚ ಸ್ವರ್ಗಲೋಕದಿಂದ ಪೃಥ್ವಿಯಲ್ಲಿ ಜನಿಸಿರುವ ಮಂಗಳೂರಿನ ಕು. ಚರಣದಾಸ ರಮಾನಂದ ಗೌಡ (ವಯಸ್ಸು ೭ ವರ್ಷಗಳು) !

ಚರಣದಾಸನು ಎಲ್ಲ ಸಾಧಕರೊಂದಿಗೆ ಅತ್ಯಂತ ಪ್ರೀತಿಯಿಂದ ಮಾತನಾಡುತ್ತಾನೆ. ಅವನು ತನ್ನ ಕುಟುಂಬದವರೊಂದಿಗೆ ಹೇಗೆ ವರ್ತಿಸುತ್ತಾನೋ, ಹಾಗೆಯೇ ಎಲ್ಲ ಸಾಧಕರೊಂದಿಗೆ ವರ್ತಿಸುತ್ತಾನೆ. ಅವನು ಎಲ್ಲರ ಬಳಿಗೆ ಹೋಗುತ್ತಾನೆ ಮತ್ತು ಎಲ್ಲರಿಗೂ ಅಷ್ಟೇ ಪ್ರೀತಿ ಮಾಡುತ್ತಾನೆ.

ಸನಾತನ-ನಿರ್ಮಿತ ಸರ್ವಾಂಗಸ್ಪರ್ಶಿ ಅಮೂಲ್ಯ ಆಧ್ಯಾತ್ಮಿಕ ಗ್ರಂಥಸಂಪತ್ತು ಎಲ್ಲ ಭಾರತೀಯ ಭಾಷೆಗಳಲ್ಲಿ ಪ್ರಕಾಶನವಾಗಬೇಕೆಂದು ಗ್ರಂಥರಚನೆಯ ಸೇವೆಯಲ್ಲಿ ವ್ಯಾಪಕವಾಗಿ ಪಾಲ್ಗೊಳ್ಳಿ !

ಈ ಸೇವೆಯನ್ನು ಮಾಡಲು ‘ತಾವು ಯಾವ ಭಾಷೆಯಲ್ಲಿ ಭಾಷಾಂತರ ಮಾಡಲು ಇಚ್ಛಿಸುವಿರೋ, ಆ ಭಾಷೆಯಲ್ಲಿ ವ್ಯಾಕರಣದ ದೃಷ್ಟಿಯಿಂದ ಉತ್ತಮ ಜ್ಞಾನವಿರಬೇಕು. ಭಾಷೆಯ ಜ್ಞಾನವಿರಬಹುದು; ಆದರೆ ವ್ಯಾಕರಣದ ದೃಷ್ಟಿಯಲ್ಲಿ ವಿಶೇಷ ಜ್ಞಾನವಿಲ್ಲದಿದ್ದರೆ, ಅದರಲ್ಲಿ ತರಬೇತಿ ಪಡೆಯಬೇಕು.

ಪಂಚತಾರಾ ಉಪಾಹಾರಗೃಹ ಮತ್ತು ರಾಮನಾಥಿ ಆಶ್ರಮದ ಅಡುಗೆ ವಿಭಾಗದಲ್ಲಿ ಸೇವೆ ಮಾಡುವಾಗ ಅರಿವಾದ ವ್ಯತ್ಯಾಸ ಮತ್ತು ಬಂದಿರುವ ಅನುಭೂತಿ

ಮಾಂಸಾಹಾರವನ್ನು ಬೇಯಿಸಿದ ಪಾತ್ರೆಯ ತಳದಲ್ಲಿ ಕಪ್ಪುಶಕ್ತಿಯು ಸಂಗ್ರಹವಾಗಿ ‘ಅದು ಪಾತ್ರೆಯ ಅಂಚಿನಿಂದ ವಾತಾವರಣದಲ್ಲಿ ಪ್ರಕ್ಷೇಪಣೆಯಾಗುತ್ತಿದೆ, ಎಂದು ಅರಿವಾಯಿತು. ‘ದೇವರೇ ಇದನ್ನು ಬರೆಯಲು ನೀವೇ ಬುದ್ಧಿಯನ್ನು ಕೊಟ್ಟು ಬರೆಯಿಸಿಕೊಂಡಿರಿ, ಅದನ್ನು ನಿಮ್ಮ ಚರಣಗಳಿಗೆ ಅರ್ಪಿಸುತ್ತಿದ್ದೇನೆ.

ಪರಾತ್ಪರ ಗುರು ಡಾ. ಆಠವಲೆಯವರು ಆಶ್ರಮದ ಸ್ವಚ್ಛತೆ ಮತ್ತು ಸಾಧನೆ ಇವುಗಳ ಕುರಿತು ಮಾಡಿದ ಮಾರ್ಗದರ್ಶನ

ಅಯೋಗ್ಯ ಕೃತಿಗಳನ್ನು ತಡೆಯುವ ಸಂದರ್ಭದಲ್ಲಿ ಪರಾತ್ಪರ ಗುರು ಡಾ. ಆಠವಲೆಯವರು ಮುಂದಿನಂತೆ ಹೇಳಿದರು, ‘ಮುಂದೆ ಮುಂದೆ ಹೇಗೆ ಹೇಳುವುದು ?’, ಎಂಬ ಸಂದೇಹ ನಮ್ಮ ಮನಸ್ಸಿನಲ್ಲಿ ಬರಬಾರದು, ವ್ಯವಸ್ಥೆಯಲ್ಲಿ ಬದಲಾವಣೆ ಆಗದಿದ್ದರೆ, ಏನಾದರೂ ಮಾಡಬೇಕೋ ಅಥವಾ ಬೇಡವೋ ? ದೇಶದಾದ್ಯಂತ ಅನೇಕ ಅಯೋಗ್ಯ ಘಟನೆಗಳು ಘಟಿಸುತ್ತಿರುತ್ತವೆ. ಅವುಗಳ ಬಗ್ಗೆ ಸಾಧಕರು, ಹಿಂದುತ್ವನಿಷ್ಠರು ಇತ್ಯಾದಿ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸುತ್ತಾರೆ.