ಗುರುಗಳ ಕಾರ್ಯವು ನಿಶ್ಚಿತವಾಗಿರುತ್ತದೆ, ಸಾಧಕರ ಆಧ್ಯಾತ್ಮಿಕ ಮಟ್ಟಕ್ಕನುಸಾರ ಅವರಿಗೆ ಮಾರ್ಗದರ್ಶನವನ್ನು ಮಾಡುವ ಗುರುಗಳು ಭೇಟಿಯಾಗುತ್ತಾರೆ !

‘ಪ್ರಾಥಮಿಕ, ಮಾಧ್ಯಮಿಕ, ಪದವಿ, ಪದವ್ಯುತ್ತರ, ಡಾಕ್ಟರೇಟ್ ಹೀಗೆ ಶೈಕ್ಷಣಿಕ ಸ್ತರಗಳಿರುತ್ತವೆ, ಹಾಗೆಯೇ ಗುರುಗಳ ಸ್ತರಗಳೂ ಇರುತ್ತವೆ. ಆದ್ದರಿಂದ ಅವರ ಬೋಧನೆಯಲ್ಲಿ ಭೇದವಿರುತ್ತದೆ. ನಮ್ಮ ಸ್ತರಕ್ಕನುಸಾರ ನಮಗೆ ಗುರುಗಳು ಭೇಟಿಯಾಗುತ್ತಾರೆ.’ – (ಪರಾತ್ಪರ ಗುರು) ಡಾ. ಆಠವಲೆ

ಕು. ಭಾವಿನಿ ಕಾಪಡಿಯಾ

‘೧೪ ವರ್ಷಗಳ ಹಿಂದೆ ಒಂದು ಪ್ರಸಂಗದಲ್ಲಿ ಪರಾತ್ಪರ ಗುರು ಡಾ. ಆಠವಲೆಯವರು ಮೇಲಿನ ಹೇಳಿಕೆಯ ವಿಶ್ಲೇಷಣೆಯನ್ನು ಮಾಡಿದ್ದರು. ಮಾರ್ಚ್ ೨೦೦೬ ರಲ್ಲಿ ಸತ್ಸಂಗಕ್ಕೆ ನಿಯಮಿತವಾಗಿ ಬರುತ್ತಿದ್ದ ಓರ್ವ ಸಾಧಕಿಯು ನಮ್ಮ ಸತ್ಸಂಗವನ್ನು ಬಿಟ್ಟು ಇತರ ಓರ್ವ ವ್ಯಕ್ತಿಯ ಬಳಿಗೆ ಸಾಧನೆಯ ಮಾರ್ಗದರ್ಶನಕ್ಕಾಗಿ ಹೋಗತೊಡಗಿದಳು. ಅದರ ಬಗ್ಗೆ ನಾನು ಪರಾತ್ಪರ ಗುರು ಡಾ. ಆಠವಲೆಯವರಿಗೆ ಹೇಳಿದೆನು. ಅದಕ್ಕೆ ಪರಾತ್ಪರ ಗುರು ಡಾಕ್ಟರರು ನನಗೆ ಮುಂದಿನ ದೃಷ್ಟಿಕೋನವನ್ನು ನೀಡಿ ‘ಗುರುಗಳ ಕಾರ್ಯವು ಹೇಗೆ ನಿಶ್ಚಿತ ವಾಗಿರುತ್ತದೆ’, ಎಂಬುದನ್ನು ಕಲಿಸಿದರು. ‘ಸನಾತನದ ಸತ್ಸಂಗದಲ್ಲಿ ಸಾಧಕರು ಬರಬಹುದು ಅಥವಾ ಹೋಗಬಹುದು, ನಾವು ಅದರ ಬಗ್ಗೆ ವಿಚಾರ ಮಾಡಬಾರದು. ನಾವು ನಮ್ಮ ಸಾಧನೆಯನ್ನು ಮಾಡುತ್ತ ಮುಂದೆ-ಮುಂದೆ ಹೋಗಬೇಕು. ಪ್ರತಿಯೊಬ್ಬ ವ್ಯಕ್ತಿಯು ಈ ಜನ್ಮದಲ್ಲಿ ಎಷ್ಟು ಆಧ್ಯಾತ್ಮಿಕ ಪ್ರಗತಿಯನ್ನು ಮಾಡಿಕೊಳ್ಳುವವನಿದ್ದಾನೆ ಎಂಬುದು ಮೊದಲೇ ನಿಶ್ಚಿತವಾಗಿರುತ್ತದೆ.

ಈ ಜನ್ಮದಲ್ಲಿ ಶೇ. ೪೦ ರಷ್ಟು ಆಧ್ಯಾತ್ಮಿಕ ಮಟ್ಟದವರೆಗೆ ಪ್ರಗತಿಯನ್ನು ಮಾಡಿಕೊಳ್ಳುವವರಿಗೆ ಶೇ. ೬೦ ರಷ್ಟು ಮಟ್ಟದ ಗುರುಗಳು ಭೇಟಿಯಾಗುತ್ತಾರೆ, ಈ ಜನ್ಮದಲ್ಲಿ ಶೇ. ೬೦ ರಷ್ಟು ಆಧ್ಯಾತ್ಮಿಕ ಮಟ್ಟದವರೆಗೆ ಪ್ರಗತಿ ಮಾಡಿಕೊಳ್ಳುವವರಿಗೆ ಶೇ. ೮೦ ರಷ್ಟು ಮಟ್ಟದ ಗುರುಗಳು ಭೇಟಿಯಾಗುತ್ತಾರೆ ಮತ್ತು ಯಾರು ಈ ಜನ್ಮದಲ್ಲಿ ಪ್ರಗತಿಯನ್ನು ಮಾಡಿಕೊಂಡು ಸಂತರಾಗುವವರಿರುತ್ತಾರೆಯೋ, (ಶೇ. ೭೦ ಕ್ಕಿಂತಲೂ ಹೆಚ್ಚು ಆಧ್ಯಾತ್ಮಿಕ ಮಟ್ಟವನ್ನು ತಲುಪುವವರು), ಅವರು ಇಲ್ಲಿ (ಸನಾತನ ಸಂಸ್ಥೆಯಲ್ಲಿ) ಬರುತ್ತಾರೆ.’

ಪರಾತ್ಪರ ಗುರುಗಳು ಶೇ. ೯೫ ಮಟ್ಟಕ್ಕಿಂತಲೂ ಹೆಚ್ಚು ಆಧ್ಯಾತ್ಮಿಕ ಮಟ್ಟದಲ್ಲಿದ್ದು, ಅವರ ಅನಂತ ಕಾರ್ಯಗಲ್ಲಿ ‘ಸಂತರನ್ನು ನಿರ್ಮಾಣ’ ಮಾಡುವುದೂ ಒಂದಾಗಿದೆ; ಆದುದರಿಂದ ಸನಾತನದಲ್ಲಿ ೩ ಡಿಸೆಂಬರ್ ೨೦೨೦ರ ವರೆಗೆ ೧೧೦ ಸಾಧಕರು ಸಂತರಾಗಿದ್ದಾರೆ ಮತ್ತು ೧ ಸಾವಿರ ೩೫೩ ಸಾಧಕರು ಸಂತರಾಗುವ ಮಾರ್ಗದಲ್ಲಿದ್ದಾರೆ.’

– ಕು. ಭಾವಿನಿ ಕಪಾಡಿಯಾ, ಸನಾತನ ಆಶ್ರಮ, ರಾಮನಾಥಿ, ಗೋವಾ.