ಪರಾತ್ಪರ ಗುರು ಡಾ. ಆಠವಲೆಯವರು ಸಾಧಕರಿಗೆ ಮಾಡಿದ ಮಾರ್ಗದರ್ಶನ !

ಪರಾತ್ಪರ ಗುರು ಡಾ. ಆಠವಲೆ

೫ ಜುಲೈ ೨೦೨೦ ರಂದು ಗುರುಪೂರ್ಣಿಮೆ ಇತ್ತು. ಈ ನಿಮಿತ್ತದಿಂದ ಸಾಧಕರಿಗೆ ‘ಪರಾತ್ಪರ ಗುರು ಡಾ. ಆಠವಲೆಯವರು ಸಾಧನೆಯ ಬಗ್ಗೆ ಮಾಡಿದ ಅಮೂಲ್ಯ ಮಾರ್ಗದರ್ಶನ’, ಎಂಬ ವಿಷಯದಲ್ಲಿ ಈ ಹಿಂದೆ ಪರಾತ್ಪರ ಗುರು ಡಾಕ್ಟರರು ಸಾಧಕರೊಂದಿಗೆ ನಡೆಸಿದ ಮಾರ್ಗದರ್ಶನಾತ್ಮಕ ಸಂವಾದದ ಧ್ವನಿಚಿತ್ರಮುದ್ರಿಕೆಯನ್ನು ತೋರಿಸಲಾಯಿತು. ಆಗ ಸಾಧಕರು ಕೇಳಿದ ಪ್ರಶ್ನೆಗಳು ಮತ್ತು ಅವುಗಳಿಗೆ ಪರಾತ್ಪರ ಗುರುದೇವರು ಮಾಡಿದ ಮಾರ್ಗದರ್ಶನವನ್ನು ಇಲ್ಲಿ ಕೊಡುತ್ತಿದ್ದೇವೆ.  (ಮುಂದುವರಿದ ಭಾಗ)

ಸ್ವಭಾವದೋಷ ಮತ್ತು ಅಹಂ ಕಡಿಮೆಯಾದ ನಂತರ ಆನಂದದ ಅನುಭೂತಿ ಬಂದು ನಾಮಜಪ ತಾನಾಗಿಯೇ ಆಗುತ್ತಿರುತ್ತದೆ !

ಪರಾತ್ಪರ ಗುರು ಡಾ. ಆಠವಲೆ : ತ್ಯಾಗವನ್ನು ಮಾಡಲು ಧೈರ್ಯ ಬೇಕಾಗುತ್ತದೆ. ಹಂತಹಂತವಾಗಿ ಪ್ರಯತ್ನಿಸಿದರೆ, ಸ್ವಭಾವದೋಷಗಳು ದೂರವಾಗುತ್ತವೆ ಮತ್ತು ಅಹಂ ಕಡಿಮೆಯಾಗುತ್ತದೆ. ಆಗ ಮನಸ್ಸಿನಲ್ಲಿ ಒಳಗಿನಿಂದ ಆನಂದದ ಅನುಭೂತಿ ಬರತೊಡಗುತ್ತದೆ. ಐಸ್‌ಕ್ರೀಮ್ ಅಥವಾ ಶ್ರೀಖಂಡವನ್ನು ತಿಂದರೆ, ಒಳ್ಳೆಯದೆನಿಸುತ್ತದೆ. ಆಗ ‘ಅದನ್ನು ಇನ್ನೂ ತಿನ್ನಬೇಕು ಎಂದು ಅನಿಸುತ್ತದೆ. ಅದೇ ರೀತಿ ನಾಮಜಪದಿಂದ ಯಾವಾಗ ಆನಂದದ ಅನುಭೂತಿಯು ಬರತೊಡಗುತ್ತದೆಯೋ, ಆಗ ನಾಮಜಪವು ನಡೆಯುತ್ತಿರುತ್ತದೆ. ಅನಂತರ ಯಾರಿಗೂ ಏನು ಮಾಡಬೇಕಾಗುವುದಿಲ್ಲ. ನಾವು ತಾತ್ತ್ವಿಕ ವಿಷಯಗಳಲ್ಲಿ ಹೋಗಬಾರದು. ಅದು ಜೀವನವನ್ನು ವ್ಯರ್ಥಗೊಳಿಸುವಂತಹದ್ದಾಗಿದೆ.

ಭೂತಕಾಲ ಮತ್ತು ಭವಿಷ್ಯಕಾಲದ ವಿಚಾರಗಳನ್ನು ಮಾಡುವುದರಲ್ಲಿಸಾಧನೆಯ ಅಮೂಲ್ಯ ಸಮಯ ವ್ಯರ್ಥವಾಗುತ್ತದೆ, ಆದುದರಿಂದ ವರ್ತಮಾನಕಾಲದಲ್ಲಿರುವುದು ಮಹತ್ವದ್ದಾಗಿದೆ !

ಪರಾತ್ಪರ ಗುರು ಡಾ. ಆಠವಲೆ : ಬೆಳಗಾವಿಯ ಒಬ್ಬ ಸಾಧಕನು ಬಂದಿದ್ದನು. ಅವನ ಕಾಲನ್ನು ಕತ್ತರಿಸಲಾಗಿತ್ತು. (ಆಮ್ಪೂಟೇಷನ್ನ ಮಾಡಲಾಗಿತ್ತು) ಒಮ್ಮೆ ಅವನು ರಾಷ್ಟ್ರೀಯ ಹೆದ್ದಾರಿಯಲ್ಲಿ ದ್ವಿಚಕ್ರ ವಾಹನದಿಂದ ಹೋಗುತ್ತಿದ್ದನು. ಅವನ ಮುಂದೆ ಒಂದು ಟ್ರಕ್ ಇತ್ತು. ಇಬ್ಬರೂ ಶೀಘ್ರ ಗತಿಯಲ್ಲಿ ಹೋಗುತ್ತಿದ್ದರು. ಆಕಸ್ಮಾತಾಗಿ ಟ್ರಕ್ ಚಾಲಕನು ಟ್ರಕ್‌ನ್ನು ನಿಲ್ಲಿಸಿದ್ದರಿಂದ ಅವನು ಟ್ರಕ್ಕಿಗೆ ಹೋಗಿ ಅಪ್ಪಳಿಸಿದನು. ದ್ವಿಚಕ್ರವು ಅವನ ಕಾಲಿನ ಮೇಲೆ ಬಿದ್ದಿತು ಮತ್ತು ಅವನ ಕಾಲಿನ ಮೂಳೆ ಮುರಿಯಿತು (ಫ್ರ್ಯಾಕ್ಚರ ಆಯಿತು). ಆಗ ವೈದ್ಯರು ನಿನ್ನ “ಕಾಲನ್ನು ಕತ್ತರಿಸಬೇಕಾಗುವುದು (ಆಮ್ಪ್ಯುಟೇಷನ್ನ ಮಾಡಬೇಕಾಗುವುದು), ಎಂದು ಹೇಳಿದರು ಮತ್ತು ಅವರು ಅವನ ಕಾಲನ್ನು ಕತ್ತರಿಸಿದರು.

ನಂತರ ಅವನು “ನಾನು ಓರ್ವ ಜ್ಯೋತಿಷ್ಯರ ಬಳಿ ಹೋಗಿದ್ದೆನು. ನಾನು ಜ್ಯೋತಿಷಿಗಳಿಗೆ “ನನ್ನ ಜೀವನದಲ್ಲಿ ಹೀಗೆಕಾಯಿತು ? ಎಂದು ಕೇಳಿದೆನು, ಆಗ ಜ್ಯೋತಿಷಿಯು ಅಧ್ಯಯನ ಮಾಡಿ, “ಹಿಂದಿನ ಜನ್ಮದಲ್ಲಿ ನೀನು ಹಸುವಿನ ಕಾಲಿಗೆ ಕಲ್ಲನ್ನು ಎಸೆದಿದ್ದೆ. ಅದ್ದರಿಂದ ಅದು ಗಾಯಗೊಂಡಿತ್ತು. ಅದಕ್ಕೆ ನಿನಗೆ ಈ ಜನ್ಮದಲ್ಲಿ ಇದನ್ನು ಅನುಭವಿಸಬೇಕಾಯಿತು, ಎಂದು ಹೇಳಿದನು. ಆಗ ಪ.ಪೂ. ಡಾಕ್ಟರರು ‘ನಮ್ಮ ಜ್ಯೋತಿಷಾಸ್ತ್ರವು ಎಷ್ಟೊಂದು ಪ್ರಗತಿಹೊಂದಿದೆ ಎಂಬುದು ಇದರಿಂದ ಗೊತ್ತಾಗುತ್ತದೆ ಎಂದು ಹೇಳಿದರು ! ಆಗ ಅವನಿಗೆ, ‘ಅಪಘಾತವಾದಾಗ ಎಲ್ಲರೂ ಆ ಟ್ರಕ್‌ಚಾಲಕನಿಗೆ “ಟ್ರಕ್‌ನ್ನು ಒಮ್ಮೆಲೆ ಏಕೆ ನಿಲ್ಲಿಸಿದೆ ? ಎಂದು ಬಯ್ಯುತ್ತಿದ್ದರು. ಆಗ ಅವನು, “ಒಂದು ಹಸು ರಸ್ತೆಯ ಮೇಲೆ ಬಂದಿತ್ತು. ಅದನ್ನು ಉಳಿಸಲು ನಾನು ಟ್ರಕ್‌ನ್ನು ನಿಲ್ಲಿಸಿದೆನು, ಎಂದು ಹೇಳಿದ್ದು ನೆನಪಿಗೆ ಬಂದಿತು. ಸಾಧಕನಿಗೆ ತುಂಬಾ ಒಳ್ಳೆಯದೆನಿಸಿತು. ಆಗ ನಾನು (ಪ.ಪೂ. ಡಾಕ್ಟರ) ಅವನಿಗೆ, “ಈಗ ಆ ಜ್ಯೋತಿಷ್ಯರ ಬಳಿ ಹೋಗಿ ಕೇಳಿರಿ, ‘ಅದರ ಹಿಂದಿನ ಜನ್ಮದಲ್ಲಿ ಹಸುವು ನಿಮಗೆ ಏನು ಮಾಡಿತ್ತು ?, ಯಾವ ಕಾರಣಕ್ಕಾಗಿ ನೀವು ಅದಕ್ಕೆ ಕಲ್ಲಿನಿಂದ ಹೊಡೆದಿದ್ದಿರಿ ? ನಂತರ ಇನ್ನು ಹಿಂದಿನ ಜನ್ಮಗಳಲ್ಲಿ ಹೋಗಿ ನೀವು ಹಸುವಿಗೆ ಏನು ಮಾಡಿದ್ದಿರಿ ಮತ್ತು ಹಸು ನಿಮಗೆ ಏನು ಮಾಡಿತ್ತು ? ಎಂದು ಕೇಳುತ್ತಿರಿ, ಎಂದು ಹೇಳಿದೆ. ಬುದ್ಧಿವಾದಿ ವ್ಯಕ್ತಿಗಳು ಹೀಗೆಯೇ ಇರುತ್ತಾರೆ. ಅವರ ಜೀವನ ವ್ಯರ್ಥವಾಗುತ್ತದೆ. ಅದರಲ್ಲಿ ಏನು ಅರ್ಥ ಇರುವುದಿಲ್ಲ. ಈಗ ಇಂತಹ ಸ್ಥಿತಿಯಲ್ಲಿ ಏನು ಮಾಡಬೇಕು ? ವರ್ತಮಾನ ಕಾಲದಲ್ಲಿರಬೇಕು. ಭೂತಕಾಲ ಮತ್ತು ಭವಿಷ್ಯ ಕಾಲಕ್ಕೆ ಏನು ಬೆಲೆಯಿಲ್ಲ. ಯಾರು ಭೂತಕಾಲ ಮತ್ತು ಭವಿಷ್ಯಕಾಲದ ವಿಚಾರವನ್ನು ಮಾಡುತ್ತಾರೆ, ಅಧ್ಯಯನ ಮಾಡುತ್ತಾರೆಯೋ, ಅವರು ಸಾಧನೆಯ ಅಮೂಲ್ಯ ಸಮಯವನ್ನು ವ್ಯರ್ಥಗೊಳಿಸುತ್ತಾರೆ. ಜೀವನ ನಾಶವಾಗಿ ಹೋಗುತ್ತದೆ. ಸಾಧನೆಗಾಗಿ ಒಂದೊಂದು ನಿಮಿಷ ಮಹತ್ವದ್ದಾಗಿರುತ್ತದೆ. ಇದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.