ಇತಿಹಾಸ
ಯಾವ ದಿನ ಗಣೇಶ ಲಹರಿಗಳು ಪ್ರಥಮ ಬಾರಿ ಪೃಥ್ವಿಯ ಮೇಲೆ ಬಂದವೋ, ಅಂದರೆ ಯಾವ ದಿನ ಗಣೇಶನ ಜನ್ಮವಾಯಿತೋ, ಆ ದಿನವು ಮಾಘ ಶುಕ್ಲ ಚತುರ್ಥಿಯಾಗಿತ್ತು. ಅಂದಿನಿಂದ ಗಣಪತಿ ಮತ್ತು ಚತುರ್ಥಿಯ ಸಂಬಂಧವನ್ನು ಜೋಡಿಸಲಾಯಿತು.
ಗಣೇಶ ಜಯಂತಿ
ಮಾಘ ಶುಕ್ಲ ಚತುರ್ಥಿಯನ್ನು ‘ಗಣೇಶ ಜಯಂತಿ ಎಂದು ಆಚರಿಸುತ್ತಾರೆ. ಈ ತಿಥಿಯ ವೈಶಿಷ್ಟ್ಯವೆಂದರೆ, ಈ ತಿಥಿಯಂದು ಶ್ರೀ ಗಣೇಶನ ತತ್ತ್ವವು ಇತರ ದಿನಗಳ ತುಲನೆಯಲ್ಲಿ ೧ ಸಾವಿರ ಪಟ್ಟು ಹೆಚ್ಚು ಕಾರ್ಯನಿರತವಾಗಿರುತ್ತದೆ.
ಮಹತ್ವ
ಗಣಪತಿಯ ಸ್ಪಂದನಗಳು ಮತ್ತು ಪೃಥ್ವಿಯ ಚತುರ್ಥಿ ತಿಥಿಯ ಸ್ಪಂದನಗಳು ಒಂದೇ ರೀತಿಯದ್ದಾಗಿರುತ್ತವೆ, ಆದುದರಿಂದ ಅವುಗಳು ಒಂದಕ್ಕೊಂದು ಅನುಕೂಲವಾಗಿರುತ್ತವೆ; ಅಂದರೆ ಆ ದಿನ ಗಣಪತಿಯ ಸ್ಪಂದನಗಳು ಹೆಚ್ಚಿನ ಪ್ರಮಾಣದಲ್ಲಿ ಪೃಥ್ವಿಯ ಮೇಲೆ ಬರಬಹುದು. ಪ್ರತಿ ತಿಂಗಳ ಚತುರ್ಥಿಯ ದಿನ ಗಣಪತಿಯ ತತ್ತ್ವವು ಇತರ ದಿನಗಳ ತುಲನೆಯಲ್ಲಿ ಪೃಥ್ವಿಯ ಮೇಲೆ ೧೦೦ ಪಟ್ಟು ಹೆಚ್ಚಿಗೆ ಕಾರ್ಯನಿರತವಾಗಿರುತ್ತದೆ. ಈ ತಿಥಿಯಂದು ಶ್ರೀ ಗಣೇಶನ ಉಪಾಸನೆಯನ್ನು ಮಾಡಿದರೆ ಗಣೇಶತತ್ತ್ವದಿಂದ ಹೆಚ್ಚು ಲಾಭವಾಗುತ್ತದೆ.
ಶ್ರೀ ಗಣೇಶ ಚತುರ್ಥಿ ಮಹತ್ವ
ಆಷಾಢ ಹುಣ್ಣಿಮೆಯಿಂದ ಕಾರ್ತಿಕ ಹುರ್ಣಿಮೆಯವರೆಗಿನ ೧೨೦ ದಿನಗಳ ಕಾಲದಲ್ಲಿ ವಿನಾಶಕಾರಿ, ತಮಪ್ರಧಾನ ಯಮಲಹರಿಗಳು ಹೆಚ್ಚು ಪ್ರಮಾಣದಲ್ಲಿ ಪೃಥ್ವಿಯ ಮೇಲೆ ಬರುತ್ತವೆ. ಈ ಕಾಲದಲ್ಲಿ ಅವುಗಳ ತೀವ್ರತೆಯೂ ಹೆಚ್ಚಿಗೆ ಇರುತ್ತದೆ. ಈ ತೀವ್ರತೆಯ ಕಾಲದಲ್ಲಿ, ಅಂದರೆ ಭಾದ್ರಪದ ಶುಕ್ಲ ಚತುರ್ಥಿಯಿಂದ ಅನಂತ ಚತುರ್ದಶಿಯವರೆಗೆ ಗಣೇಶ ಲಹರಿಗಳು ಪೃಥ್ವಿಯ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ಬರುವುದರಿಂದ ಯಮ ಲಹರಿಗಳ ತೀವ್ರತೆ ಕಡಿಮೆಯಾಗಲು ಸಹಾಯವಾಗುತ್ತದೆ.
(ಆಧಾರ : ಸನಾತನ ಸಂಸ್ಥೆ ನಿರ್ಮಿಸಿದ ಗ್ರಂಥ ‘ಶ್ರೀ ಗಣಪತಿ)