ಕಾಶ್ಮೀರದಲ್ಲಿ ಭಯೋತ್ಪಾದಕರಿಗೆ ಸಹಾಯ ಮಾಡುವ ೬ ಕಳ್ಳಸಾಗಾಣಿಕೆದಾರರ ಬಂಧನ

ಭದ್ರತಾ ಪಡೆಗಳು ಜೈಶ್-ಎ-ಮೊಹಮ್ಮದ್ ಭಯೋತ್ಪಾದಕ ಸಂಘಟನೆಗೆ ಸಹಾಯ ಮಾಡುವವ ಆರು ಜನರನ್ನು ಬಂಧಿಸಿವೆ. ಅವರಿಂದ ದೊಡ್ಡ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಹೆರಾಯಿನ್ ಸಹ ವಶಪಡಿಸಿಕೊಳ್ಳಲಾಗಿದೆ. ಮುದಾಸ್ಸಿರ್ ಫಯಾಜ್, ಶಬೀರ್, ಸಾಗೀರ್ ಅಹ್ಮದ್ ಪೊಸವಾಲ್, ಇಸಾಕ್ ಭಟ್ಟ ಮತ್ತು ಅರ್ಷಿದ್ ಬಂಧಿತರು.

ಬೇಹುಗಾರಿಕೆ ಮಾಡುತ್ತಿದ್ದ ಪಾಕ್ ರಾಯಬಾರಿ ಕಛೇರಿಯ ನೌಕರರ ಬಂಧಿಸಲಾಗಿದೆ

ಪಾಕಿಸ್ತಾನಿ ರಾಯಬಾರಿ ಕಛೇರಿಯ ಇಬ್ಬರು ಪಾಕಿಸ್ತಾನಿ ನೌಕರರನ್ನು ಬೇಹುಗಾರಿಕೆಯ ಪ್ರಕರಣದಲ್ಲಿ ದೆಹಲಿಯ ಪೊಲೀಸರ ವಿಶೇಷ ತಂಡವು ಬಂಧಿಸಿದೆ. ಅಬಿದ್ ಹುಸೇನ್ (ವಯಸ್ಸು ೪೨ ವರ್ಷ) ಮತ್ತು ತಾಹಿರ್ ಖಾನ್ (ವಯಸ್ಸು ೪೪) ಮತ್ತು ಅವರ ಚಾಲಕ ಜಾವೇದ್ ಹುಸೇನ್‌ನನ್ನೂ ಬಂಧಿಸಲಾಗಿದೆ. ಅಬಿದ್ ಮತ್ತು ತಾಹಿರ್ ಇಬ್ಬರೂ ಪಾಕನ ಗೂಢಾಚಾರ ಸಂಸ್ಥೆ ಐ.ಎಸ್.ಐಯ ಅಧಿಕಾರಿಗಳಾಗಿದ್ದಾರೆ.

ಬರುವ ಮಹಾಭೀಕರ ಆಪತ್ಕಾಲದ ದೃಷ್ಟಿಯಿಂದ ಆಯುರ್ವೇದ ಮತ್ತು ‘ಹೋಮಿಯೋಪತಿಕ್ ಔಷಧಿಗಳ, ಯೋಗಾಸನ ಮತ್ತು ಪ್ರಾಣಾಯಾಮಗಳ ಮಹತ್ವ ಗಮನದಲ್ಲಿಡಿ !

ಯುದ್ಧದ ಕಾಲದಲ್ಲಿ ಔಷಧಗಳ ಸಂಗ್ರಹವನ್ನು ಹೆಚ್ಚಾಗಿ ಸೈನಿಕರಿಗಾಗಿ ಉಪಯೋಗಿಸಲಾಗುತ್ತದೆ. ಇದರಿಂದಾಗಿ ಔಷಧಗಳ ಕೊರತೆಯಾಗುವುದು. ಈ ದೃಷ್ಟಿಯಿಂದ ಕುಟುಂಬಕ್ಕಾಗಿ ಬೇಕಾಗುವ ಔಷಧಗಳನ್ನು ಆಪತ್ಕಾಲದ ಮೊದಲೇ ಖರೀದಿಸಿಡಬೇಕಾಗಿದೆ.

ಜಾತ್ಯತೀತವಾದಿಗಳು ಈಗ ಏಕೆ ಮೌನವಾಗಿದ್ದಾರೆ ?

ದಾವಣಗೆರೆಯಲ್ಲಿ ಈದ್‌ಗಾಗಿ ಹಿಂದೂ ಅಂಗಡಿಗಳಿಂದ ಸಾಹಿತ್ಯ ಖರೀದಿಸುತ್ತಿದ್ದ ಮುಸ್ಲಿಂ ಮಹಿಳೆಯರನ್ನು ಮತಾಂಧರು ನಿಂದಿಸುತ್ತಿರುವ ಕೆಲವು ವಿಡಿಯೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರ ಮಾಡಲಾಗಿದೆ. ಒಬ್ಬ ಮತಾಂಧನು ಮಹಿಳೆಯ ಕೈಯಿಂದ ಚೀಲವನ್ನು ಕಸಿದುಕೊಂಡು ಅದನ್ನು ಎಸೆಯುವುದನ್ನು ಈ ವಿಡಿಯೋದಲ್ಲಿ ಕಾಣಿಸುತ್ತಿದೆ.

ಬಾಬರಿ ಮಸೀದಿ ಕೆಡವಿದವರ ವಿರುದ್ಧದ ಮೊಕದ್ದಮೆಯನ್ನು ವಜಾಗೊಳಿಸಿ ! – ಬಾಬರಿ ಮಸೀದಿಯ ಪಕ್ಷಕಾರ ಇಕ್ಬಾಲ್ ಅನ್ಸಾರಿ ಅವರ ಬೇಡಿಕೆ

ರಾಮಜನ್ಮಭೂಮಿ ಖಟ್ಲೆಯ ತೀರ್ಪು ಬಂದು ರಾಮ ಮಂದಿರದ ಮಾರ್ಗವು ಸುಗಮವಾಗಿದೆ. ದೇವಸ್ಥಾನದ ನಿರ್ಮಾಣ ಕಾರ್ಯವೂ ಪ್ರಾರಂಭವಾಗಿದೆ. ಆದ್ದರಿಂದ ಇಂತಹ ಸಮಯದಲ್ಲಿ ಬಾಬರಿ ಮಸೀದಿಯನ್ನು ಕೆಡವಿದ ಬಗ್ಗೆ ಕೇಂದ್ರ ತನಿಖಾ ದಳದ (ಸಿಬಿಐ) ವಿಶೇಷ ನ್ಯಾಯಾಲಯದಲ್ಲಿ ನಡೆಯುತ್ತಿರುವ ಖಟ್ಲೆಯನ್ನು ತಕ್ಷಣ ಕೈಬಿಡಬೇಕೆಂದು ಬಾಬರಿ ಮಸೀದಿಯ ಪಕ್ಷಕಾರ ಇಕ್ಬಾಲ್ ಅನ್ಸಾರಿ ಒತ್ತಾಯಿಸಿದ್ದಾರೆ.

ದೆಹಲಿಯ ಮರಕಝನ ಕಾರ್ಯಕ್ರಮವನ್ನು ಆ ಸಮಯದಲ್ಲೇ ನಿಲ್ಲಿಸುತ್ತಿದ್ದರೆ, ದೇಶದಲ್ಲಿ ಕರೋನದ ಪ್ರಮಾಣ ಹೆಚ್ಚಾಗುತ್ತಿರಲಿಲ್ಲ! – ಅಮಿತ್ ಷಾ ಸ್ವೀಕೃತಿ

ದೆಹಲಿಯ ನಿಜಾಮುದ್ದೀನ್‌ನಲ್ಲಿರುವ ತಬ್ಲಿಘಿ ಜಮಾತ್ ಮರಕಝನಲ್ಲಿ ವರ್ಷಪೂರ್ತಿ ಕಾರ್ಯಕ್ರಮಗಳು ನಡೆಯುತ್ತವೆ. ಅವು ಸಾರ್ವಜನಿಕ ಕಾರ್ಯಕ್ರಮವಾಗಿರದೇ, ಅವು ಮರಕಝದೊಳಗೆ ನಡೆಯುತ್ತವೆ. ಆದ್ದರಿಂದ ನಾವು ಈ ಕಾರ್ಯಕ್ರಮಗಳನ್ನು ಆ ಸಮಯದಲ್ಲೇ ನಿಲ್ಲಿಸುತ್ತಿದ್ದರೆ ಹಾಗೂ ಅಲ್ಲಿನ ಜನರಿಗೆ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಿದ್ದರೆ, ದೇಶದಲ್ಲಿ ಕರೋನಾದ ಹಾವಳಿ ಹೆಚ್ಚಾಗಿ ಕೊರೋನಾ ಪೀಡಿತರ ಸಂಖ್ಯೆ ಹೆಚ್ಚಾಗುತ್ತಿರಲಿಲ್ಲ

ಕರೋನಾ ವಿರುದ್ಧದ ಹೋರಾಟವನ್ನು ಇನ್ನಷ್ಟು ತೀವ್ರವಾಗಿ ಹೋರಾಡಬೇಕು ! – ಪ್ರಧಾನಮಂತ್ರಿ ನರೇಂದ್ರ ಮೋದಿ

ಕರೋನಾದಿಂದ ಉಂಟಾಗುವ ಸಾವಿನ ಪ್ರಮಾಣ ನಮ್ಮ ದೇಶದಲ್ಲಿ ಕಡಿಮೆ ಇದೆ. ಇದರಿಂದಾದ ಹಾನಿಗಾಗಿ ಎಲ್ಲರಿಗೂ ದುಃಖ ಇದೆ; ಇದರ ಹೊರತಾಗಿಯೂ ನಮಗೆ ಏನೆಲ್ಲಾ ಉಳಿಸಲು ಸಾಧ್ಯವಾಯಿತೋ ಅದು ಖಂಡಿತವಾಗಿಯೂ ದೇಶದ ಸಾಮೂಹಿಕ ಸಂಕಲ್ಪಶಕ್ತಿಯ ಪರಿಣಾಮವಾಗಿದೆ, ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಪ್ರತಿಪಾದಿಸಿದರು.

‘ರಾಷ್ಟ್ರೀಯ ಮಂದಿರ-ಸಂಸ್ಕೃತಿ ರಕ್ಷಾ ಅಭಿಯಾನ’ದ ಅಂಗವಾಗಿ ಮಹಾರಾಷ್ಟ್ರದಲ್ಲಿ ‘ಆನ್‌ಲೈನ್’ ಚರ್ಚಾಕೂಟದಲ್ಲಿ ೨೨೫ ಗಣ್ಯರ ಸಹಭಾಗ !

ಸಂಚಾರ ನಿಷೇಧದಲ್ಲಿ ಮದ್ಯದಂಗಡಿಗಳನ್ನು ತೆರೆಯುವುದಕ್ಕಿಂತ ಜನರ ನಂಬಿಕೆಯಾಗಿದ್ದ ಚರ್ಚುಗಳನ್ನು ತೆರೆಯುವುದು ಮುಖ್ಯ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇತ್ತೀಚೆಗೆ ಹೇಳಿಕೆ ನೀಡಿದ್ದಾರೆ. ಹಾಗೆ ಮಾಡುವಂತೆ ಆಡಳಿತಕ್ಕೂ ಸೂಚನೆ ನೀಡಿದ್ದರು. ಸಂಕಟಕಾಲದಲ್ಲಿ ‘ಶ್ರದ್ಧೆಯೇ’ ಸಮಾಜದ ಆಧಾರಸ್ತಂಭವಾಗಿರುತ್ತದೆ.

ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಬಗ್ಗೆ ಯಾವುದೇ ಸಮಯದಲ್ಲಿ ಏನು ಬೇಕಾದರೂ ಆಗಬಹುದು ! – ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಸುಳಿವು

ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಯಾವಾಗಬೇಕಾದರೂ ಏನಾದರೂ ಸಂಭವಿಸುವ ಸಾಧ್ಯತೆಯನ್ನು ಅಲ್ಲಗಳೆಯಲು ಸಾಧ್ಯವಿಲ್ಲ, ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ‘ಪಾಕ್ ಆಕ್ರಮಿತ ಕಾಶ್ಮೀರವನ್ನು ವಶಪಡಿಸಿಕೊಳ್ಳಲು ಭಾರತದಿಂದ ಯಾವುದೇ ಕ್ರಮವು ಯಾವಾಗಬೇಕಾದರೂ ಕಾರ್ಯಾಚರಣೆ ಮಾಡಬಹುದು’, ಎಂಬ ಸಂಕೇತವನ್ನು ನೀಡಿದ್ದಾರೆ

ದೇಶದಲ್ಲಿ ೨೪ ಗಂಟೆಗಳಲ್ಲಿ ೭,೯೬೪ ಹೊಸ ಕರೋನಾ ರೋಗಿಗಳು ೨೬೫ ಸಾವು

ಕಳೆದ ವಾರದಲ್ಲಿ ೬ ಸಾವಿರದಂತೆ ಹೆಚ್ಚಾಗುತ್ತಿದ್ದ ಕೊರೊನಾ ಪೀಡಿತ ರೋಗಿಗಳ ಸಂಖ್ಯೆ ಕಳೆದ ಎರಡು ದಿನಗಳಲ್ಲಿ ೧,೦೦೦ ಹೆಚ್ಚಾಗಿದೆ. ಕಳೆದ ೨೪ ಗಂಟೆಗಳಲ್ಲಿ ದೇಶದಲ್ಲಿ ೭,೯೬೪ ಹೊಸ ರೋಗಿಗಳು ಪತ್ತೆಯಾಗಿವೆ. ಅದರಿಂದ ದೇಶದ ಒಟ್ಟು ಕರೋನಾ ರೋಗಿಗಳ ಸಂಖ್ಯೆ ೧ ಲಕ್ಷದ ೭೩ ಸಾವಿರ ೭೬೩ ಕ್ಕೆ ತಲುಪಿದೆ. ಕಳೆದ ೨೪ ಗಂಟೆಗಳಲ್ಲಿ ೨೬೫ ಜನರು ಸಾವನ್ನಪ್ಪಿದ್ದಾರೆ.