ಜಗನ್ನಾಥ ರಥಯಾತ್ರೆಗೆ ಸರ್ವೋಚ್ಚ ನ್ಯಾಯಾಲಯದಿಂದ ದೊರೆತ ಅನುಮತಿ, ಇದು ಹಿಂದೂಗಳ ಗೆಲುವು!

ಹಿಂದೂ ಜನಜಾಗೃತಿ ಸಮಿತಿ ಸಲ್ಲಿಸಿದ ಮರುಪರಿಶೀಲನಾ ಅರ್ಜಿಗೆ ಸಂದ ಜಯ!

ಪುರಿಯಲ್ಲಿ ಜಗನ್ನಾಥ ರಥಯಾತ್ರೆಯು ವಿಶ್ವಪ್ರಸಿದ್ಧ ಯಾತ್ರೆಯಾಗಿದೆ. ಈ ರಥಯಾತ್ರೆ ಶತಮಾನಗಳಿಂದ ನಡೆಯುತ್ತಿದ್ದು ಅದಕ್ಕೆ ಸುದೀರ್ಘ ಇತಿಹಾಸವಿದೆ. ಅರ್ಜಿಯೊಂದರ ವಿಚಾರಣೆಯ ಸಂದರ್ಭದಲ್ಲಿ, ಸರ್ವೋಚ್ಚ ನ್ಯಾಯಾಲಯವು ಕರೋನಾ ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಯಾತ್ರೆಯ ಆಯೋಜನೆಯನ್ನು ೧೮.೬.೨೦೨೦ ರಂದು ತಡೆ ನೀಡಿತ್ತು. ಇದರ ನಂತರ ಹಿಂದೂ ಜನಜಾಗೃತಿ ಸಮಿತಿಯು ಈ ತೀರ್ಪನ್ನು ಬದಲಾಯಿಸುವಂತೆ ಕೋರಿ ಸರ್ವೋಚ್ಛ ನ್ಯಾಯಾಲಯದಲ್ಲಿ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಿತ್ತು. ‘ಸಾಮಾಜಿಕ ಅಂತರವಿಟ್ಟುಕೊಂಡೂ (ಸೋಶಿಯಲ್ ಡಿಸ್ಟೆಂಸಿಂಗ್) ರಥಯಾತ್ರೆ ಆಯೋಜಿಸಬಹುದು ಹಾಗೂ ಈ ಯಾತ್ರೆಯನ್ನು ಸಂಪೂರ್ಣ ತಡೆಯುವುದು ಅನ್ಯಾಯವಾಗಿದೆ ಎಂದು ಸಮಿತಿ ಅರ್ಜಿಯಲ್ಲಿ ತಿಳಿಸಿತ್ತು. ಇತರ ಅರ್ಜಿದಾರರು ಸಹ ಸವೋಚ್ಛನ್ಯಾಯಾಲಯದ ತೀರ್ಪನ್ನು ಬದಲಾಯಿಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು. ಪ್ರಸ್ತುತ ಮರುಪರಿಶೀಲನಾ ಅರ್ಜಿ ಮತ್ತು ಕೇಂದ್ರ ಮತ್ತು ಒಡಿಶಾ ಸರ್ಕಾರಗಳು ನೀಡಿದ ಹೇಳಿಕೆಗಳನ್ನು ಪರಿಗಣಿಸಿ ನ್ಯಾಯಾಲಯವು ೨೨.೬.೨೦೨೦ ರಂದು ಶ್ರೀ ಜಗನ್ನಾಥ ದೇವಸ್ಥಾನದ ರಥ ಯಾತ್ರೆಗೆ ಅನುಮತಿ ನೀಡಿತು. ಹಿಂದೂ ವಿಧಿಜ್ಞ ಪರಿಷತ್ತು, ಹಾಗೆಯೇ ಸವೋಚ್ಚ ನ್ಯಾಯಾಲಯದ ಹಿರಿಯ ವಕೀಲರಾದ ಶ್ರೀ. ಸುಭಾಷ ಝಾ ಇವರು ಲಕ್ಷಾಂತರ ಭಕ್ತರ ಪರವಾಗಿ ಈ ವಿಷಯದ ವಿರುದ್ಧ ಹೋರಾಡಿದ್ದಕ್ಕಾಗಿ ಹಿಂದೂ ಜನಜಾಗೃತಿ ಸಮಿತಿಯು ಅವರಿಗೆ ಧನ್ಯವಾದ ಅರ್ಪಿಸಿದೆ.