ಭಾರತದ ಮೇಲೆ ಆರೋಪವನ್ನು ಹೊರಿಸುವ ನೇಪಾಳವು ಚೀನಾದ ಬಗ್ಗೆ ಮಾತ್ರ ಏಕೆ ಮೌನ ವಹಿಸುತ್ತದೆ, ಇದನ್ನು ಜಗತ್ತಿಗೆ ಅಲ್ಲ, ಸ್ವತಃ ನೇಪಾಳದ ಜನರಿಗೆ ಹೇಳುವ ಆವಶ್ಯಕತೆ ಇದೆ. ಈ ವಿಷಯವನ್ನು ನೇಪಾಳ ಜನರಿಂದ ಮುಚ್ಚಿಟ್ಟಿದ್ದರಿಂದ ನೇಪಾಳದ ರಾಷ್ಟ್ರಪ್ರೇಮಿ ಜನರೂ ಕಮ್ಯುನಿಸ್ಟ್ ಸರಕಾರಕ್ಕೆ ಪ್ರಶ್ನಿಸಬೇಕು ! ಇದೆಲ್ಲ ನೋಡುವಾಗ ನೇಪಾಳ ಸರಕಾರ ಚೀನಾದ ತೊದಲುಗೊಂಬೆಯಾಗಿದೆ ಎಂಬುದೇ ಸತ್ಯವಾಗಿದೆ !
ನವ ದೆಹಲಿ – ನೇಪಾಳವು ಭಾರತದ ೩ ಪ್ರದೇಶಗಳನ್ನು ತನ್ನದೆಂದು ಹೇಳಿಕೊಳ್ಳುತ್ತ ಸ್ವಂತದ ನಕ್ಷೆಯಲ್ಲಿ ಬದಲಾವಣೆ ಮಾಡಿದೆ; ಆದರೆ ಇನ್ನೊಂದೆಡೆ ಚೀನಾವು ನೇಪಾಳಕ್ಕೂ ವಿಶ್ವಾಸಘಾತ ಮಾಡುತ್ತ ಅದರ ಉತ್ತರ ಗೊರಖಾದಲ್ಲಿಯ ರುಯಿ ಗ್ರಾಮದ ಮೇಲೆ ನಿಯಂತ್ರಣ ಸಾಧಿಸಿದೆ. ನೇಪಾಳದ ಕಮ್ಯುನಿಸ್ಟ್ ಪಕ್ಷದ ಸರಕಾರವು ಚೀನಾದ ಈ ಕುಕೃತ್ಯವನ್ನು ಮುಚ್ಚಿಡಲು ಭಾರತದ ೩ ಪ್ರದೇಶಗಳನ್ನು ತನ್ನದೆಂದು ಹೇಳಿಕೊಂಡಿದೆ, ಎಂದು ‘ನ್ಯೂಸ್೨೪” ಈ ಹಿಂದಿ ವಾರ್ತಾವಾಹಿನಿಯು ವಾರ್ತೆಯನ್ನು ನೀಡಿದೆ.
೧. ರುಯಿ ಗ್ರಾಮದಲ್ಲಿ ಸದ್ಯ ೭೨ ಮನೆಗಳಿವೆ. ಚೀನಾವು ಇದು ಚೀನಾದ ಭಾಗವೆಂದು ತೋರಿಸಲು ಗಡಿಯಲ್ಲಿನ ನೇಪಾಳದ ಗಡಿಸ್ತಂಭ ತೆಗೆದಿದೆ. ಸದ್ಯಕ್ಕಂತು ನೇಪಾಳದ ನಕ್ಷೆಯಲ್ಲಿ ಇದು ನೇಪಾಳಕ್ಕೆ ಸೇರಿದ್ದರೂ, ಪ್ರತ್ಯಕ್ಷದಲ್ಲಿ ಅದರ ಮೇಲೆ ಚೀನಾವು ನಿಯಂತ್ರಣ ಸಾಧಿಸಿದೆ.
೨. ಇತಿಹಾಸಕಾರ ರಮೇಶ ಧುಂಗಲ ಇವರು, ರುಯಿ ಹಾಗೂ ತೆಯಿಗಾ ಈ ಎರಡೂ ಗ್ರಾಮಗಳೂ ಗೊರಖಾ ಜಿಲ್ಲೆಯ ಉತ್ತರ ಭಾಗದಲ್ಲಿದೆ; ಆದರೆ ನೇಪಾಳದ ನಿರ್ಲಕ್ಷದಿಂದಾಗಿ ಅದು ಚೀನಾದ ವಶದಲ್ಲಿರುವ ಟಿಬೆಟ್‌ನಲ್ಲಿ ಸೇರಿದೆ. ಇಲ್ಲಿಯವೆರೆಗೆ ನೇಪಾಳವೇ ಆದಾಯವನ್ನು ಸಂಗ್ರಹಿಸುತ್ತಿತ್ತು. ಅದರ ನೋಂದಣಿಯೂ ಇದೆ, ಎಂದಿದ್ದಾರೆ.