ನೇಪಾಳದ ಉದ್ದಟತನ !

ನೇಪಾಳ ಸರ್ಕಾರ ಜೂನ್ ೧೦ ರಂದು ಸಂಸತ್ತಿನಲ್ಲಿ ತಿದ್ದುಪಡಿ ಪ್ರಸ್ತಾವನೆಯನ್ನು ಅಂಗೀಕರಿಸಿ ನೇಪಾಳದ ಹೊಸ ನಕ್ಷೆಯನ್ನು ಅನುಮೋದಿಸಿತ. ನೇಪಾಳವು ತನ್ನ ನಕ್ಷೆಯಲ್ಲಿ ಭಾರತದ ಭೂಭಾಗವಾಗಿರುವ ಲಿಪುಲೆಖ್, ಕಲಾಪಾನಿ ಮತ್ತು ಲಿಂಪಿಯಾಧುರ ಇವುಗಳನ್ನು ತೋರಿಸಿದೆ. ಇದನ್ನು ಜನತಾ ಸಮಾಜವಾದಿ ಪಕ್ಷದ ಮಹಿಳಾ ಸಂಸದೆ ಸರಿತಾ ಗಿರಿ ತೀವ್ರವಾಗಿ ವಿರೋಧಿಸಿದರು. ಪರಿಣಾಮವಾಗಿ, ಜೂನ್ ೧೧ ರಂದು ಅವರ ಮನೆಯ ಮೇಲೆ ಅಜ್ಞಾತರು ದಾಳಿ ನಡೆಸಿ ಧ್ವಂಸ ಮಾಡಿದರು. ಅಷ್ಟೇ ಅಲ್ಲ, ತಮ್ಮ ಮನೆಗಳ ಮೇಲೆ ಕಪ್ಪು ಧ್ವಜಗಳನ್ನು ಇಟ್ಟು ದೇಶವನ್ನು ತೊರೆಯಲು ಬೆದರಿಕೆಯೊಡ್ಡಿದರು. ಅದರ ಬಗ್ಗೆ ಪೊಲೀಸರಿಗೆ ತಿಳಿಸಲಾಯಿತು; ಆದರೆ ಅವರು ಗಿರಿ ಸಹಾಯಕ್ಕೆ ಹೋಗಲಿಲ್ಲ. ಗಿರಿ ಇವರಿಗೆ ಅವರ ಪಕ್ಷ ಮತ್ತು ಇತರ ಪಕ್ಷಗಳು ಸಹಾಯ ಮಾಡಲಿಲ್ಲ ಅಥವಾ ಬೆಂಬಲಿಸಲಿಲ್ಲ. ಮಾನವಹಕ್ಕುಗಳ ಕಾರ್ಯಕರ್ತ ರಣಧೀರ್ ಚೌಧರಿ ಮಾತ್ರ ಟ್ವೀಟ್ ಮಾಡಿದ್ದು, “ಸಂಸದರು ಸಹ ಇಂದು ತಮ್ಮ ಮನೆಗಳಲ್ಲಿ ಸುರಕ್ಷಿತವಾಗಿಲ್ಲ. ಸರಿತಾ ಗಿರಿ ಮನೆಯ ಮೇಲೆ ನಡೆದ ದಾಳಿಯನ್ನು ನಾವು ಖಂಡಿಸಬೇಕು. ಇದು ಸರಕಾರ ಪ್ರಾಯೋಜಿಸಿದ ದಾಳಿಯಲ್ಲವೇ ?’, ಎಂದಿದ್ದಾರೆ. ಸತ್ಯದ ಪರ ವಹಿಸಿದರೂ ಅದು ಆಕ್ರಮಣದ ರೂಪದಲ್ಲಿ ಪ್ರತಿಕ್ರಿಯೆ ಬರುವುದು ಒಂದು ರೀತಿ ಸತ್ಯದ ಅವಮಾನವಾಗಿದೆ. ಹೀಗಿದ್ದರೂ ಸತ್ಯವನ್ನೆಂದಿಗೂ ಮುಚ್ಚಡಲಾಗದು ಎಂಬುದು ಅಷ್ಟೇ ಸತ್ಯ. ಗಿರಿ ಮೇಲಿನ ದಾಳಿಕೋರರನ್ನು ತಕ್ಷಣ ಪತ್ತೆ ಹಚ್ಚಬೇಕು ಮತ್ತು ಅವರ ಮೇಲೆ ಕಠಿಣ ಕ್ರಮಕೈಗೊಳ್ಳಬೇಕು. ನವೆಂಬರ್ ೨೦೧೯ ರಲ್ಲಿ ಭಾರತದ ಗೃಹಸಚಿವಾಲಯವು ಪ್ರಕಟಿಸಿದ ಹೊಸ ನಕ್ಷೆಯಲ್ಲಿ ಕಲಾಪಾನಿ ಪ್ರದೇಶ ಸೇರಿದೆ; ಆದರೆ ಭಾರತದ ನಿರ್ಧಾರಕ್ಕೆ ನೇಪಾಳ ಆಕ್ಷೇಪ ವ್ಯಕ್ತಪಡಿಸಿತು. ಕೈಲಾಸ ಮಾನಸರೋವರದಲ್ಲಿ ೮೦ ಕಿ.ಮೀ. ಉದ್ದದ ರಸ್ತೆಯನ್ನು ರಕ್ಷಣಾ ಸಚಿವ ರಾಜನಾಥ ಸಿಂಗ್ ಉದ್ಘಾಟಿಸಿದರು. ಆ ರಸ್ತೆ ಲಿಪುಲೆಕ್ ಗಾರ್ಜ್‌ನಲ್ಲಿ ಕೊನೆಗೊಳ್ಳುತ್ತದೆ. ಆಗಲೂ ನೇಪಾಳ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿತು. ವಾಸ್ತವದಲ್ಲಿ ಹೊಸ ನಕ್ಷೆಯನ್ನು ಸಂಸತ್ತಿನಲ್ಲಿ ಅನುಮೋದಿಸುವ ಪ್ರಸ್ತಾಪವನ್ನು ನೇಪಾಳದ ಸಂಸತ್ತಿನಲ್ಲಿ ಮಂಡಿಸಿದ ನಂತರ, ಇತರ ಪಕ್ಷಗಳ ಮುಖಂಡರು ಭಾರತದೊಂದಿಗಿನ ಚರ್ಚೆಗಳ ಮೂಲಕ ವಿವಾದವನ್ನು ಬಗೆಹರಿಸುವಂತೆ ನೇಪಾಳ ಸರಕಾರಕ್ಕೆ ಸಲಹೆ ನೀಡಿದರು; ಆದರೆ ಅವರು ಹಾಗೆ ಮಾಡಲಿಲ್ಲ. ಹೊಸ ನಕ್ಷೆಗಾಗಿ ಕಾನೂನನ್ನು ತಿದ್ದುಪಡಿ ಮಾಡುವ ಪ್ರಸ್ತಾಪವನ್ನು ರದ್ದುಗೊಳಿಸಬೇಕು ಎಂದು ಸರಿತಾ ಗಿರಿ ಹೇಳುತ್ತಾರೆ; ಏಕೆಂದರೆ ಕಲಾಪಾನಿ, ಲಿಪುಲೆಖ್ ಮತ್ತು ಲಿಂಪಿಯಾಧುರಾ ಇದಕ್ಕೆ ಸೇರಿದವರು ಎಂಬುದಕ್ಕೆ ನೇಪಾಳ ಸರಕಾರಕ್ಕೆ ಯಾವುದೇ ದೃಢವಾದ ಪುರಾವೆಗಳಿಲ್ಲ. ಒಂದು ದೇಶದ ೩ ಪ್ರದೇಶಗಳನ್ನು ಸ್ವಂತ ದೇಶದಲ್ಲಿ ಪುರಾವೆ ಇಲ್ಲದೆ ತೋರಿಸುವುದು ಹಾಸ್ಯಾಸ್ಪದವಲ್ಲವೇ ? ಚೀನಾ ನೇಪಾಳ ಸರಕಾರವನ್ನು ಹಾಗೆ ಮಾಡಲು ಪ್ರಚೋದಿಸಿರಬಹುದು ಎಂಬುದರಲ್ಲಿ ಎಳ್ಳಷ್ಟೂ ಸಂದೇಹವಿಲ್ಲ. ಆದ್ದರಿಂದ, ನೇಪಾಳದೊಂದಿಗೆ ಚೀನಾಕ್ಕೆ ಪಾಠಕಲಿಸಬೇಕು.

ಕಮ್ಯುನಿಸ್ಟರು ಸತ್ಯವನ್ನು ಬಯಸುವುದಿಲ್ಲ !

ನಕಾಶೆ ತಿದ್ದುಪಡಿಯನ್ನು ವಿರೋಧಿಸಿದ ಮೊದಲ ಸಂಸದೆ ಸರಿತಾ ಗಿರಿಯವರನ್ನು ಅಭಿನಂದಿಸಬೇಕಾಗಿದೆ. ಮಾಧೇಸಿ ಸಮುದಾಯದ ಹಿತಕ್ಕಾಗಿ ೨೦೦೭ ರಲ್ಲಿ ಅವರು ರಾಜಕೀಯ ಪ್ರವೇಶಿಸಿದರು. ಅವರು ಭಾರತೀಯ ಪ್ರಜೆಯಾಗಿದ್ದು ಮತ್ತು ನೇಪಾಳಿ ಪ್ರಜೆಯನ್ನು ಮದುವೆಯಾಗಿದ್ದಾರೆ. ಆದ್ದರಿಂದ, ‘ನೇಪಾಳದ ಹಿತಾಸಕ್ತಿಗಳಿಗಿಂತ ಅವರು ಭಾರತೀಯ ಹಿತಾಸಕ್ತಿಗಳನ್ನು ಹೆಚ್ಚು ಯೋಚಿಸುತ್ತಾರೆ’ ಎಂದು ಅವರ ವಿರುದ್ಧ ಸುಳ್ಳು ಆರೋಪಗಳನ್ನು ಹೆಚ್ಚಾಗಿ ಮಾಡಲಾಗುತ್ತದೆ. ಈ ಆರೋಪದ ಹಿಂದಿನ ಪಿತೂರಿ ಕಮ್ಯುನಿಸ್ಟ್ ಸಿದ್ಧಾಂತವನ್ನು ಗಮನಿಸಬೇಕು. ದೇಶಪ್ರೇಮದಿಂದ ಕೂಡಿರುವ ಯಾವುದೇ ಭಾರತೀಯನಿಗೆ ನೇಪಾಳದ ಹಿತಾಸಕ್ತಿಗಳು ಭಾರತದ ಹಿತಾಸಕ್ತಿಗಳಷ್ಟೇ ಮುಖ್ಯ. ತದ್ವಿರುದ್ಧ ಭಾರತದ ಹಿತಾಸಕ್ತಿಯನ್ನು ಪರಿಗಣಿಸುವಾಗ, ನೇಪಾಳದ ಹಿತಾಸಕ್ತಿಯನ್ನು ಸಹ ಪರಿಗಣಿಸಲಾಗುತ್ತದೆ; ಭಾರತ ಮತ್ತು ನೇಪಾಳ ಎರಡು ವಿಭಿನ್ನ ದೇಶಗಳಾಗಿರುವುದರಿಂದ, ಹಿಂದುತ್ವವು ಎರಡೂ ದೇಶಗಳ ಆತ್ಮವಾಗಿದೆ. ಆದ್ದರಿಂದ ‘ಗಿರಿ’ ಭಾರತದಿಂದ ಬಂದಿದ್ದರಿಂದ ಅವರು ನೇಪಾಳದ ಬದಲು ಭಾರತದ ಹಿತದೃಷ್ಟಿಯಿಂದ ವಿಚಾರ ಮಾಡುತ್ತಾರೆ’ ಎಂದರೆ ತಪ್ಪೇನಿದೆ. ಅದರಲ್ಲೂ ಗಿರಿ ಏನು ತಪ್ಪಾಗಿ ಹೇಳಿದ್ದಾರೆ ? ಅವರು ರೂಪಿಸಿದ ಸೂತ್ರಗಳು ವಸ್ತುನಿಷ್ಠವಾಗಿವೆ; ಆದರೆ ಪ್ರತಿಪಕ್ಷಗಳ ಮೇಲೆ ಮತ್ತು ಅದನ್ನು ಮೀರಿ ಸತ್ಯವನ್ನು ಹೇಳುವವರ ಮೇಲೆ ಒತ್ತಡ ಹೇರುವುದು ಕಮ್ಯುನಿಸ್ಟ್ ತಂತ್ರವಾಗಿದೆ. ಹಿಂದೆ ಇದನ್ನು ಚೀನಾ ಮತ್ತು ಇತರ ಕಮ್ಯುನಿಸ್ಟ್ ದೇಶಗಳಲ್ಲಿ ಜಾರಿಗೆ ತರಲಾಗಿತ್ತು. ಇಂದು ಇದನ್ನು ಕಮ್ಯುನಿಸ್ಟ್ ನೇಪಾಳದಲ್ಲಿ ಜಾರಿಗೆ ತರಲಾಗುತ್ತಿದೆ. ಇದು ಎಚ್ಚರಿಕೆಯ ಗಂಟೆಯಾಗಿದೆ. ಹಿಂದುತ್ವದ ಎಳೆಯಿಂದ ಬಂಧಿಸಲ್ಪಟ್ಟಿರುವ ನೇಪಾಳ ಮತ್ತು ಭಾರತದ ನಡುವಿನ ಬಾಂಧವ್ಯವನ್ನು ಮುರಿಯಲು ಕಮ್ಯುನಿಸ್ಟರು ಸಂಚು ರೂಪಿಸುತ್ತಿದ್ದಾರೆ. ಗಿರಿ ಮೇಲಿನ ದಾಳಿ ಅದರ ಮೊದಲ ಹೆಜ್ಜೆ. ‘ನಾವು ಭಾರತ ವಿರೋಧಿ ಪಾತ್ರವನ್ನು ಮುಂದುವರಿಸುತ್ತೇವೆ. ಅದನ್ನು ವಿರೋಧಿಸುವವರನ್ನು ನಾವು ಗಿರಿಯವರಿಗೆ ಮಾಡಿದಂತೆ ಮಾಡುತ್ತೇವೆ’, ಈ ಗುಪ್ತ ಸಂದೇಶವನ್ನು ದಾಳಿಯ ಮೂಲಕ ನೀಡಲಾಗಿದೆ. ಇದನ್ನು ಈಗ ಬಲವಾಗಿ ವಿರೋಧಿಸದಿದ್ದರೆ, ನೇಪಾಳವನ್ನು ಚೀನಾ ಸಂಪೂರ್ಣವಾಗಿ ನುಂಗಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ.

ಭಾರತದ ನಿಲುವು ಮುಖ್ಯ !

ನೇಪಾಳವು ವಿಶ್ವದ ಏಕೈಕ ಹಿಂದೂ ರಾಷ್ಟ್ರವಾಗಿತ್ತು; ಆದರೆ ಕಮ್ಯುನಿಸ್ಟರ ಕೃತ್ಯದಿಂದಾಗಿ ನೇಪಾಳ ಜಾತ್ಯತೀತವಾಗಬೇಕಾಯಿತು. ಸಂವಿಧಾನದ ಮೂಲಕ ನೇಪಾಳಕ್ಕೆ ಹಿಂದೂ ರಾಷ್ಟ್ರದ ಸ್ಥಾನಮಾನ ನೀಡುವ ಪ್ರಸ್ತಾಪವನ್ನು ಸಂಸತ್ತು ತಿರಸ್ಕರಿಸಿತು ಮತ್ತು ನೇಪಾಳ ಜಾತ್ಯತೀತ ರಾಷ್ಟ್ರವಾಗಿ ಹೊರಹೊಮ್ಮಿತು. ಅನಂತರ ಸಾಕಷ್ಟು ಹಿಂಸಾಚಾರ ನಡೆಯಿತು. ಪ್ರತಿ ಬಾರಿಯೂ ನೇಪಾಳವನ್ನು ಕೈಯಲ್ಲಿ ಹಿಡಿದಿಟ್ಟುಕೊಂಡು ಚೀನಾ ಮತ್ತು ಪಾಕಿಸ್ತಾನಗಳಿಂದ ಭಾರತವನ್ನೇ ಗುರಿಪಡಿಸಲಾಗುತ್ತಿದೆ. ಭಾರತದ ಆರ್ಥಿಕತೆಯ ಕುಸಿತ, ನಕಲಿ ನೋಟುಗಳ ಮುದ್ರಣ, ಭಯೋತ್ಪಾದಕರ ಆಶ್ರಯ, ನೇಪಾಳ-ಭಾರತ ಗಡಿಯಲ್ಲಿ ಬೃಹತ್ ಮದರಸಾ ಮತ್ತು ಮಸೀದಿಗಳ ನಿರ್ಮಾಣ ಮತ್ತು ಅಲ್ಲಿ ಹೆಚ್ಚುತ್ತಿರುವ ಬಾಂಗ್ಲಾದೇಶ ಮುಸ್ಲಿಮರ ಸಂಖ್ಯೆ ಇದಕ್ಕೆಲ್ಲ ಚೀನಾ ಮತ್ತು ಪಾಕಿಸ್ತಾನಗಳೇ ಕಾರಣ. ನೇಪಾಳ ಚೀನಾದ ಕೈಯಲ್ಲಿ ಒಂದು ಪ್ಯಾದೆಯಾಗಿ ಮಾರ್ಪಟ್ಟಿದೆ ಎಂದು ಬೇರೆ ಹೇಳಬೇಕಾಗಿಲ್ಲ. ಇಂತಹ ಪರಿಸ್ಥಿತಿಯಲ್ಲಿ ನೇಪಾಳದಲ್ಲಿ ಶಾಂತಿ, ಸ್ಥಿರತೆ, ಸ್ವಾತಂತ್ರ್ಯ, ಸಮಗ್ರತೆ ಮತ್ತು ಸಮೃದ್ಧಿ ಮೇಲುಗೈ ಸಾಧಿಸಬೇಕು, ಭಾರತೀಯ ಆಡಳಿತಗಾರರು ಸಹ ಪ್ರಯತ್ನಗಳನ್ನು ಮಾಡಬೇಕು. ಅಂತರರಾಷ್ಟ್ರೀಯ ಸಂಬಂಧಗಳಲ್ಲಿ ವಿಶ್ವಾಸಾರ್ಹತೆಯನ್ನು ಕಾಪಾಡಿಕೊಳ್ಳಬೇಕು. ವಿದೇಶಾಂಗ ನೀತಿಯೂ ಬಲವಾಗಿರಬೇಕು. ಚೀನಾ ಮತ್ತು ಪಾಕಿಸ್ತಾನದ ಹಿಡಿತದಿಂದ ಅದನ್ನು ಮುಕ್ತಗೊಳಿಸುವುದು ನಮ್ಮ ಜವಾಬ್ದಾರಿಯಾಗಿದೆ. ಸಂಸದೆ ಗಿರಿ ಅವರಂತೆ ಅಲ್ಲಿನ ನಾಗರಿಕರಿಗೆ ಅನ್ಯಾಯ, ದಬ್ಬಾಳಿಕೆ ಅಥವಾ ಆಕ್ರಮಣಶೀಲತೆಗೆ ಒಳಗಾಗದಂತೆ ಭಾರತವು ನೋಡಿಕೊಳ್ಳಬೇಕು. ‘ಹಿಂದೂ ರಾಷ್ಟ್ರ’ದ ಚಿತ್ರಣವನ್ನು ನೇಪಾಳಕ್ಕೆ ಪುನಃಸ್ಥಾಪಿಸಿದರೆ, ಅಂತಹ ಘಟನೆಗಳು ಎಂದಿಗೂ ಸಂಭವಿಸುವುದಿಲ್ಲ.