ಹಿಂದೂದ್ವೇಷಿ ಟ್ವಿಟರ್ ನಿಂದ ‘#KashmiriHinduLivesMatter’ ಈ ಹ್ಯಾಶ್‌ಟ್ಯಾಗ್ ಹತ್ತಿಕ್ಕಲು ಪ್ರಯತ್ನ
ಟ್ವಿಟರ್ ಗೆ #BlackLivesMatter ನಡೆಯುತ್ತದೆ; ಆದರೆ #KashmiriHinduLivesMatter ನಡೆಯುವುದಿಲ್ಲ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !
ಮುಂಬಯಿ – ಜೂನ್ ೨೦ ಈ ಅಂತರರಾಷ್ಟ್ರೀಯ ನಿರಾಶ್ರಿತದಿನ ನಿಮಿತ್ತ ಜೂನ್ ೨೧ ರಂದು ನಿರಾಶ್ರಿತ ಕಾಶ್ಮೀರಿ ಹಿಂದೂಗಳಿಗೆ ನ್ಯಾಯಸಿಗಲೆಂದು ಧರ್ಮಪ್ರೇಮಿಗಳಿಂದ #KashmiriHinduLivesMatter ಈ ಹ್ಯಾಶ್‌ಟ್ಯಾಗ್(ಒಂದೇ ವಿಷಯದ ಮೇಲೆ ಟ್ವಿಟರನಲ್ಲಿ ಚರ್ಚೆ ಮಾಡುವುದು) ಟ್ರೆಂಡ್ ಮಾಡಲಾಗಿತ್ತು. ಅದು ೧೦ ಸಾವಿರಕ್ಕಿಂತಲೂ ಹೆಚ್ಚು ಟ್ವೀಟ್‌ನೊಂದಿಗೆ ಮೊದಲನೇ ೨೦ ಟ್ವಿಟ್‌ನಲ್ಲಿತ್ತು; ಆದರೆ ನಂತರ ಕ್ಲಿಕ್ ಮಾಡಿದ ಮೇಲೆ No Results for #KashmiriHinduLivesMatter ಎಂಬ ಸಂದೇಶ ಕಾಣಿಸತೊಡಗಿತು. ಇದರಿಂದ ಈ ಹ್ಯಾಶ್‌ಟ್ಯಾಗ್ ಮಾಡುವವರಿಗೆ ‘ಟ್ವಿಟರ್ ಹಿಂದೂಗಳ ಧ್ವನಿಯನ್ನು ಹತ್ತಿಕ್ಕಲು ಪ್ರಯತ್ನಿಸಿತೇ ? ಎಂಬ ಪ್ರಶ್ನೆ ನಿರ್ಮಾಣವಾಯಿತು. ಉದ್ದೇಶಪೂರ್ವಕವಾಗಿ ಈ ಹ್ಯಾಶ್‌ಟ್ಯಾಗ್ ಹತ್ತಿಕ್ಕಲಾಯಿತು ಎಂದು ಹಿಂದುತ್ವನಿಷ್ಠರ ಅನಿಸಿಕೆಯಾಗಿದೆ.
ಇನ್ನೊಂದು ಕಡೆ ಟ್ವಿಟರ್‌ನಲ್ಲಿ ‘#BlackLivesMatter’ (ಕಪ್ಪುವರ್ಣಿಯರ ಮೇಲಿನ ಅತ್ಯಾಚಾರದ ಬಗ್ಗೆ ಧ್ವನಿ ಎತ್ತಲು ಮಾಡಿದ ಚರ್ಚೆ) ಈ ಹ್ಯಾಶ್‌ಟ್ಯಾಗ್ ಹಾಗೂ ಅದರ ಮೇಲಿನ ಎಲ್ಲ ಟ್ವೀಟ್‌ಗಳು ಕಾಣಿಸುತ್ತಿದ್ದವು; ಆದರೆ ಹಿಂದೂಗಳಿಗೆ ನ್ಯಾಯವನ್ನು ನೀಡುವ ಹ್ಯಾಶ್‌ಟ್ಯಾಗ್ ಹತ್ತಿಕ್ಕಲು ಪ್ರಯತ್ನಿಸಲಾಗುತ್ತಿದೆ. (ಟ್ವಿಟರ್‌ನ ನಿರ್ಮಾಪಕ ಜಾಕ್ ಡೊರಸಿ ಹಾಗೂ ಅವರ ಟ್ವಿಟರ್ ತಂಡ ವರ್ಣದ್ವೇಷದಿಂದ ತೊಂದರೆಗೊಳಗಾದ ಸಮಾಜಕ್ಕೆ ಬೆಂಬಲವಾಗಿ ನಿಲ್ಲಲು ಸಕ್ರಿಯರಾಗಿರುತ್ತಾರೆ; ಆದರೆ ಅವರಿಗೆ ಪೀಡಿತ ಕಾಶ್ಮೀರಿ ಹಿಂದೂಗಳ ದುಃಖ ಕಾಣಿಸುವುದಿಲ್ಲ ಹಾಗೂ ಅದಕ್ಕೆ ಬೆಂಬಲಿಸುವುದು ಸೂಕ್ತವಿಲ್ಲ ಎಂದೆನಿಸುತ್ತದೆ. ತಮ್ಮ ವೇದಿಕೆಯ ಮೇಲೆ ಹಿಂದೂಗಳ ವಿಷಯ ಹತ್ತಿಕ್ಕುವ ಟ್ವಿಟರ್ ಸ್ವತಃ ಕಮ್ಯುನಿಸ್ಟ್ ವಿಚಾರದ ಬೆಂಬಲಿಗರಿದ್ದಾರೆ. ಹಿಂದೂಗಳು ಇಂತಹ ಹಿಂದೂದ್ವೇಷಿ ಟ್ವಿಟರನ್ನು ನಿಷೇಧಿಸುವುದು ಯೋಗ್ಯವಾಗಿದೆ ! – ಸಂಪಾದಕರು)