ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು
ಗಣಿತ ಮತ್ತು ಭೂಗೋಳ ಇವು ಬೇರೆ ಬೇರೆ ವಿಷಯವಾಗಿವೆ. ಒಂದು ವಿಷಯವನ್ನು ಹೇಳುವ ಭಾಷೆಯಲ್ಲಿ ಇನ್ನೊಂದನ್ನು ಹೇಳಲು ಆಗುವುದಿಲ್ಲ. ಅದರಂತೆ ವಿಜ್ಞಾನ ಮತ್ತು ಅಧ್ಯಾತ್ಮವು ಬೇರೆಯೇ ವಿಷಯವಾಗಿದೆ, ಎಂಬುದನ್ನು ವಿಜ್ಞಾನವು ತಿಳಿದುಕೊಳ್ಳುವುದು ಆವಶ್ಯಕವಾಗಿದೆ. ಮನುಷ್ಯನಿಗೆ ಮಾನವೀಯತೆಯನ್ನು ಕಲಿಸದಿರುವ ಹಾಗೂ ವಿದ್ವಂಸಕ ಅಸ್ತ್ರ, ಶಸ್ತ್ರವನ್ನು ನೀಡುವ ವಿಜ್ಞಾನದ ಮೂಲ್ಯವು ಶೂನ್ಯವಾಗಿದೆ. ಎಲ್ಲ ರೋಗಗಳಿಗೂ ಒಂದೇ ಔಷಧಿ ಅಥವಾ ಎಲ್ಲ ಖಟ್ಲೆಗಳಿಗೆ
ಒಂದೇ ಕಾನೂನು ಇರುವುದಿಲ್ಲ; ಆದರೆ ರಾಷ್ಟ್ರ ಮತ್ತು ಧರ್ಮ ಇವುಗಳ ಎಲ್ಲ ಸಮಸ್ಯೆಗಳಿಗೂ ಒಂದೇ ಉತ್ತರವಿದೆ ಮತ್ತು ಅದೆಂದರೆ ಹಿಂದೂ ರಾಷ್ಟ್ರದ ಸ್ಥಾಪನೆ ! ಭಾರತದಲ್ಲಿಯ ಹಿಂದೂಗಳಲ್ಲಿ ಹಿಂದೂ ಧರ್ಮವನ್ನು ಬಿಟ್ಟರೆ ಭಾಷೆ, ಹಬ್ಬ, ಉತ್ಸವ, ಬಟ್ಟೆ ಮುಂತಾದವುಗಳಲ್ಲಿ ವಿವಿಧ ರಾಜ್ಯಗಳಲ್ಲಿ ಬೇರೆಬೇರೆಯಾಗಿವೆ. ಅದುದರಿಂದ ಹಿಂದೂಗಳಿಗೆ ಕೇವಲ ಧರ್ಮವೇ ಒಟ್ಟಾಗಿಸಬಹುದು. ಹಿಂದೂಗಳು ಧರ್ಮದ ಮಹತ್ವವನ್ನು ಈಗಲಾದರೂ ಗಮನದಲ್ಲಿಟ್ಟು ಎಲ್ಲರನ್ನು ಒಟ್ಟಾಗಿಸುವ ಪ್ರಯತ್ನವನ್ನು ಮಾಡುವುದು ಅತ್ಯಾವಶ್ಯಕವಾಗಿದೆ. – (ಪರಾತ್ಪರ ಗುರು) ಡಾ. ಆಠವಲೆ