ಜಪಾನಿ ನಾಗರಿಕರ ಉದ್ಯಮಶೀಲತೆ !

೧. ಸತತ ಉದ್ಯೋಗನಿರತರಾಗಿರುವ ಹಾಗೂ ಉದ್ಯೋಗಿಗಳಿಗೆ ಹಾನಿ ಮಾಡದ ಜಪಾನಿ ನಾಗರಿಕರು !

೧೯೪೭ ರಿಂದ ೧೯೫೫ ರ ಕಾಲಾವಧಿಯಲ್ಲಿ ಜಪಾನಿನ ಪ್ರತಿಯೊಂದು ಮನೆಯಲ್ಲಿನ ಒಬ್ಬರು ವ್ಯವಸಾಯ ಮಾಡುತ್ತಿದ್ದರು. ಆ ವ್ಯವಸಾಯದ ಸ್ವರೂಪವು ಚಿಲ್ಲರೆಯಾಗಿದ್ದರೂ; ಅವನು ಕಾರ್ಯನಿರತನಾಗಿರುತ್ತಿದ್ದನು. ಪ್ರತಿಯೊಬ್ಬ ಜಪಾನಿ ಮನುಷ್ಯನು ಆ ಸಮಯದಲ್ಲಿ ಕಡಿಮೆಪಕ್ಷ ೩ ರಿಂದ ೪ ವ್ಯವಸಾಯವನ್ನು ಒಂದೇ ಸಮಯದಲ್ಲಿ ಮಾಡುತ್ತಿದ್ದನು. ಒಂದು ವೇಳೆ ಒಬ್ಬ ಮನುಷ್ಯನು ಹೊಲಿಗೆಕೆಲಸದ ವ್ಯವಸಾಯದಲ್ಲಿದ್ದರೆ, ಅದೇ ಸಮಯದಲ್ಲಿ ಅವನು ರಸ್ತೆಯ ಮೇಲೆ ಪಾದರಕ್ಷೆಗಳನ್ನು ಮಾರಾಟ ಮಾಡುವ ವ್ಯವಸಾಯವನ್ನೂ ಮಾಡುತ್ತಿದ್ದನು. ರಸ್ತೆಯ ಮೇಲೆ ಚಪ್ಪಲಿಗಳು-ಬೂಟುಗಳನ್ನು ಜೋಡಿಸಿಡಲಾಗುತ್ತಿತ್ತು ಹಾಗೂ ಅದರ ಬೆಲೆಯ ಚೀಟಿಗಳನ್ನು ಹಾಕಿಡಲಾಗುತ್ತಿತ್ತು. ಖರೀದಿಗೆ ಬರುವ ಜನರೂ ಅತ್ಯಂತ ಪ್ರಾಮಾಣಿಕತೆಯಿಂದ ತಮ್ಮ ಆಕಾರದ ಪಾದರಕ್ಷೆಗಳನ್ನು ಖರೀದಿಸಿ ಅದರ ಹಣವನ್ನು ಪಕ್ಕದ ಡಬ್ಬದಲ್ಲಿಡುತ್ತಿದ್ದರು. ಇದರಿಂದ ಒಂದೇ ಸಮಯದಲ್ಲಿ ಒಂದು ವ್ಯವಸಾಯವು ಮನುಷ್ಯನ ಸಮಯ ತಗಲದೇ ಹಣದ ಚಲನ-ವಲನದಿಂದ ಆಗುತ್ತಿತ್ತು.

೨. ಮುಷ್ಕರದ ದಿನ ೪ ಗಂಟೆ ಹೆಚ್ಚು ಕೆಲಸ ಮಾಡುವವರಿಂದ ಭಾರತದಲ್ಲಿನ ಕಾರ್ಮಿಕರು ಹಾಗೂ ಅವರ ಸಂಘಟನೆಗಳು ಬೋಧ ಪಡೆಯವರೇ ?

‘ತಮ್ಮ ನ್ಯಾಯ ಅಧಿಕಾರದ ಬಗ್ಗೆ ಜಪಾನಿ ನಾಗರಿಕರು ಯಾವಾಗಲೂ ಜಾಗರೂಕರಿರುತ್ತಾರೆ. ಒಂದು ಬೂಟುಗಳ ಕಂಪನಿಯು ಮುಷ್ಕರ ಹೂಡಿತ್ತು. ವೇತನದ ಹೆಚ್ಚಳದ ಬಗ್ಗೆ ಈ ಮುಷ್ಕರವಿತ್ತು; ಆದರೆ ಆ ಮುಷ್ಕರದ ಸ್ವರೂಪ ಹೇಗಿತ್ತೆಂದರೆ, ಅಲ್ಲಿನ ನೌಕರರು ಪ್ರತಿದಿನದ ೮ ಗಂಟೆಗಳ ತುಲನೆಯಲ್ಲಿ ೧೨ ಗಂಟೆಗಳ ಕಾಲ ಕೆಲಸ ಮಾಡಿದರು ಹಾಗೂ ಒಂದೇ ಕಾಲಿನ ಬೂಟುಗಳನ್ನು ತಯಾರಿಸಿ ತಮ್ಮ ಪ್ರತಿಭಟನೆಯನ್ನು ನೋಂದಾಯಿಸಿದ್ದರು. ರಸ್ತೆಯ ಮೇಲೆ ಘೋಷಣೆ ನೀಡುತ್ತಾ, ಚಹಾ ಹಾಗೂ ಬೀಡಿ-ಸಿಗರೇಟುಗಳನ್ನು ಅದಲುಬದಲು ಮಾಡುತ್ತಾ ಸಮಯ ಕಳೆಯುವ ದೃಶ್ಯವು ನೋಡಲು ಸಿಗಲಿಲ್ಲ. ಕಷ್ಟ, ಪರಿಶ್ರಮ ಹಾಗೂ ತಮ್ಮೊಂದಿಗೆ ದೇಶದ ಉನ್ನತಿಯೆಂಬ ಗುಣವು ಜಪಾನಿ ಮನುಷ್ಯನ ಸ್ವಭಾವದಲ್ಲಿಯೇ ಇದೆ. – ಮನೋಜ ಗಡನೀಸ. (ದೈನಿಕ ಲೋಕಮತ, ೨೦.೩.೨೦೧೧)