ನೇಪಾಳವು ಚಂಪಾರಣ (ಬಿಹಾರ)ದ ಪ್ರದೇಶವನ್ನು ತನ್ನದೆಂದು ಹೇಳುತ್ತ ಅಲ್ಲಿ ನಡೆಯುತ್ತಿದ್ದ ತಡೆಗೋಡೆಯ ಕೆಲಸವನ್ನು ನಿಲ್ಲಿಸಿದೆ ನೇಪಾಳವು ‘ವಿನಾಶಕಾಲೆ ವಿಪರೀತ ಬುದ್ಧಿ’ ಆಗುತ್ತಿರುವುದರಿಂದ ಈ ರೀತಿಯಲ್ಲಿ ವರ್ತಿಸುತ್ತಿದೆ. ಅದರ ಮೇಲೆ ಮರ್ಮಾಘಾತ ಮಾಡುವ ತನಕ ಅದು ಸುಮ್ಮನಿರುವುದಿಲ್ಲ, ಎಂಬುದನ್ನು ಗಮನದಲ್ಲಿಡಬೇಕು !
ಚಂಪಾರಣ (ಬಿಹಾರ) – ಇಲ್ಲಿಯ ಮೋತಿಹಾರಿಯಲ್ಲಿನ ಕೆಲವು ಪ್ರದೇಶಗಳನ್ನು ತನ್ನದೆಂದು ನೇಪಾಳವು ಹೇಳಿಕೊಂಡಿದೆ. ನೇಪಾಳವು ಇಲ್ಲಿಯ ಢಾಕಾ ಬ್ಲಾಕ್‌ನಲ್ಲಿನ ಲಾಲ್ ಬಕೈಯಾ ನದಿಯ ಮೇಲಿನ ತಡೆಗೋಡೆಯ ಕೆಲಸವನ್ನು ನಿಲ್ಲಿಸಿದೆ. ಅವರ ಪ್ರಕಾರ, ‘ಈ ತಡೆಗೋಡೆಯ ಕೆಲವು ಪ್ರದೇಶಗಳನ್ನು ತನ್ನ ಗಡಿಯಲ್ಲಿ ಬರುತ್ತದೆ ಎಂದು ಹೇಳಿದೆ. ನೇಪಾಳವು ಇದೇ ಮೊದಲಬಾರಿ ಈ ರೀತಿ ಹೇಳಿಕೊಂಡಿದೆ. ತದನಂತರ ಚಂಪಾರಣಾದ ಜಿಲ್ಲಾಧಿಕಾರಿಯು ಈ ಪ್ರದೇಶದ ಭೂವೈಜ್ಞಾನಿಕ ಸಮೀಕ್ಷೆಯನ್ನು ಮಾಡುವಂತೆ ಬೇಡಿಕೆ ಮಾಡಿದೆ. ಚೀನಾದ ಈ ಸಂಚಿನಿಂದಾಗಿ ಎರಡುವರೆ ಕಿ.ಮೀ. ಉದ್ದದ ಈ ತಡೆಗೋಡೆಯ ನಿರ್ಮಾಣ ಕಾರ್ಯದ ೪೦೦ ಮೀಟರನಷ್ಟು ಕೆಲಸ ನಿಂತಿದೆ.