ಕೊರೋನಾದ ಕಾಲದಲ್ಲಿ ಶ್ರೀಮದ್ಭಗವದ್ಗೀತೆಯಿಂದ ಸಾಮರ್ಥ್ಯ ಹಾಗೂ ಶಾಂತಿ ಸಿಗುವುದು !- ಅಮೇರಿಕಾದ ಭಾರತ ಮೂಲದ ಸಂಸದೆ ತುಲಸೀ ಗಬಾರ್ಡ್

ಕೊರೋನಾದಂತಹ ಸಂಕಟದ ಸಮಯದಲ್ಲಿ ನಾಳೆ ಏನಾಗುವುದು ಎಂಬುದನ್ನು ಹೇಳಲು ಸಾಧ್ಯವಿಲ್ಲ. ಇಂತಹ ಸಮಯದಲ್ಲಿ ಕೇವಲ ಶ್ರೀಮದ್ಭಗವದ್ಗೀತೆಯಿಂದ ಖಂಡಿತವಾಗಿಯೂ ಸಾಮರ್ಥ್ಯ ಹಾಗೂ ಶಾಂತಿ ಸಿಗುವುದು. ನಮಗೆ ಭಗವದ್ಗೀತೆಯಲ್ಲಿ ಭಗವಾನ್ ಶ್ರೀಕೃಷ್ಣನು ಕಲಿಸಿಕೊಟ್ಟಿರುವ ಭಕ್ತಿಯೋಗ ಹಾಗೂ ಕರ್ಮಯೋಗದ ಪಾಲನೆಯಿಂದಲೇ ಸಾಮರ್ಥ್ಯ ಹಾಗೂ ಶಾಂತಿ ಸಿಗಲು ಸಾಧ್ಯವಾಯಿತು,

‘ತಿಬೇಟ್ ಚೀನಾದ ಆಂತರಿಕ ಪ್ರಶ್ನೆಯಾಗಿರುವುದರಿಂದ ಭಾರತವು ಅದರತ್ತ ಗಮನ ಹರಿಸುವುದು ಬೇಡ(ವಂತೆ) ! – ಭಾರತಕ್ಕೆ ಚೀನಾದ ಬೆದರಿಕೆ

ಭಾರತದಲ್ಲಿ ಕೆಲವರು, ಅದೇ ರೀತಿ ಪ್ರಸಾರ ಮಾಧ್ಯಮಗಳು, ಭಾರತವು ಚೀನಾದೊಂದಿಗೆ ಉದ್ವಿಗ್ನತೆಯ ಸಮಯದಲ್ಲಿ ತಿಬೇಟಿನ ವಿಷಯವನ್ನು ಕೈಗೆತ್ತಿಕೊಳ್ಳಬೇಕು ಇದರಿಂದ ಲಾಭವಾಗುವುದು, ಎಂದು ಕೆಲವರು ವಿಚಾರ ಮಾಡುತ್ತಿದ್ದಾರೆ ಆದರೆ ಈ ವಿಚಾರ ಒಂದು ಭ್ರಮೆಯಾಗಿದೆ. ತಿಬೇಟ್ ಇದು ಚೀನಾದ ಒಂದು ಆಂತರಿಕ ಪ್ರಶ್ನೆಯಾಗಿದೆ ಹಾಗೂ ಅದರಲ್ಲಿ ಭಾರತವು ಗಮನ ಹರಿಸುವುದು ಬೇಡ,

ಲಾತೆಹರ್ (ಝಾರಖಂಡ್)ನಲ್ಲಿ ಭಾಜಪದ ಮುಖಂಡನ ಕೊಲೆಯ ವಿರುದ್ಧ ನೂರಾರು ಜನರ ಆಂದೋಲನ

ಜುಲೈ ೫ ರಂದು ಭಾಜಪದ ಜಿಲ್ಲಾ ಪ್ರಧಾನಕಾರ್ಯದರ್ಶಿ ಜಯವರ್ಧನ ಸಿಂಹ (ವಯಸ್ಸು ೫೦ ವರ್ಷ)ಯವರನ್ನು ಅಜ್ಞಾತರು ಗುಂಡಿಕ್ಕಿ ಹತ್ಯೆ ಮಾಡಿದ್ದನ್ನು ವಿರೋಧಿಸಿ ಜುಲೈ ೭ ರಂದು ಬರವಾಡೀಹ ಬಾಝಾರಿನಲ್ಲಿ ನೂರಾರು ಸಂಖ್ಯೆಯಲ್ಲಿ ಜನರು ಪ್ರತಿಭಟನೆ ನಡೆಸಿದರು.

ಗೂಂಡಾ ವಿಕಾಸ ದುಬೆಗೆ ೨೦೦ ಕ್ಕೂ ಹೆಚ್ಚು ಪೊಲೀಸರಿಂದ ಸಹಾಯ ಸಿಗುತ್ತಿರುವುದರ ಸಂದೇಹ

ಕೆಲವು ದಿನಗಳ ಹಿಂದೆ ಕುಖ್ಯಾತ ಗೂಂಡಾ ವಿಕಾಸ ದುಬೆ ಹಾಗೂ ಆತನ ಸಹಚರರು ಮಾಡಿದ ದಾಳಿಯಿಂದಾಗಿ ೮ ಪೊಲೀಸರ ಹತ್ಯೆಯಾಗಿತ್ತು. ತದನಂತರ ಪರಾರಿಯಾದ ವಿಕಾಸ ದುಬೆಯನ್ನು ಹಿಡಿಯಲು ಪೊಲೀಸರಿಗೆ ಇನ್ನೂ ಸಾಧ್ಯವಾಗಲಿಲ್ಲ. ಈ ಪ್ರಕರಣದಲ್ಲಿ ಚೌಬೆಪುರ ಪೊಲೀಸ ಠಾಣೆಯ ಅಧಿಕಾರಿ ವಿನಯ ತಿವಾರಿಯು ದುಬೆಗೆ ಸಹಾಯ ಮಾಡಿದ್ದಾರೆಂಬ ಪ್ರಕರಣದಲ್ಲಿ ಅಮಾನತ್ತು ಮಾಡಲಾಗಿದ್ದು ಆತನ ವಿರುದ್ಧ ಅಪರಾಧವನ್ನು ನೊಂದಾಯಿಸಲಾಗಿದೆ.

ಚೀನಾದ ವಿರುದ್ಧ ನಮ್ಮ ಸೈನ್ಯವು ಭಾರತಕ್ಕೆ ಸಹಾಯ ಮಾಡಲಿದೆ ! – ಅಮೇರಿಕಾ

ನಮ್ಮ ಸೈನಿಕರು ಚೀನಾದ ವಿರುದ್ಧ ದೃಢವಾಗಿ ನಿಂತಿದ್ದು ಭವಿಷ್ಯದಲ್ಲಿಯೂ ಇರಲಿದೆ. ಅದು ಭಾರತ ಹಾಗೂ ಚೀನಾದ ಘರ್ಷಣೆಯಿರಲಿ ಅಥವಾ ಇತರ ದೇಶ ಇರಲಿ, ಎಂದು ಹೇಳುವ ಮೂಲಕ ಅಮೇರಿಕಾದ ವೈಟ್ ಹೌಸ್‌ನ ‘ಚೀಫ್ ಆಫ್ ಸ್ಟಾಫ್’ ಮಾರ್ಕ್ ಮೆಡೊಜ ಇವರು ಚೀನಾದೊಂದಿಗಿನ ಘರ್ಷಣೆಯಲ್ಲಿ ಭಾರತಕ್ಕೆ ಸಹಾಯ ಮಾಡಲಿದೆ ಎಂದು ಹೇಳಿದ್ದಾರೆ.

ಕುವೈತ್‌ನಲ್ಲಿನ ೮ ಲಕ್ಷ ಭಾರತೀಯರಿಗೆ ದೇಶ ಬಿಡಬೇಕಾಗಿ ಬರುವ ಸಾಧ್ಯತೆ

ಕುವೈತ್‌ನ ಸಂಸತ್ತಿನಲ್ಲಿ ವಿದೇಶಿ ಕೆಲಸಗಾರರಿಗೆ ಸಂಬಂಧಪಟ್ಟ ಅಪ್ರವಾಸಿ ಕೋಟಾ ವಿಧೇಯಕ ಮಸೂದೆಗೆ ಸಮ್ಮತಿ ನೀಡಲಾಗಿದೆ. ಒಂದು ವೇಳೆ ಈ ಸಮೂದೆ ಏನಾದರೂ ಕಾಯಿದೆಯಾಗಿ ರೂಪಾಂತರಗೊಂಡರೆ ಕುವೈತ್‌ನಲ್ಲಿರುವ ೮ ಲಕ್ಷ ಭಾರತೀಯ ಕೆಲಸಗಾರರು ಕುವೈತ್ ಅನ್ನು ಬಿಡಬೇಕಾಗಿ ಬರುತ್ತದೆ.

ದೆಹಲಿಯಲ್ಲಿ ನಡೆದ ಗಲಭೆಗೆ ಸಂಯುಕ್ತ ಅರಬ್ ಅಮಿರಾತ್ ಹಾಗೂ ಓಮಾನ್‌ನಿಂದ ಹಣ ಪೂರೈಕೆ ! – ಪೋಲಿಸರ ಸಂದೇಹ

ಫೆಬ್ರುವರಿ ತಿಂಗಳಿನಲ್ಲಿ ದೆಹಲಿಯಲ್ಲಿ ಪೌರತ್ವ ತಿದ್ದುಪಡಿ ಕಾಯಿದೆಯ ವಿರುದ್ಧ ಹಾಗೂ ಅನಂತರ ನಡೆದ ಗಲಭೆಗೆ ಸಂಯುಕ್ತ ಅರಬ ಅಮಿರಾತ್ ಹಾಗೂ ಓಮಾನ್ ಅಂದರೆ ಮಧ್ಯಪೂರ್ವ ಇಸ್ಲಾಮೀ ದೇಶಗಳಿಂದ ಹಣ ಪೂರೈಸಲಾಗಿದೆ, ಎಂಬ ಮಾಹಿತಿಯನ್ನು ದೆಹಲಿ ಪೋಲೀಸರ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ

ಗಲವಾನ್ ಕಣಿವೆಯಲ್ಲಿ ಚೀನಾದ ೧೦೦ ಸೈನಿಕರ ಮರಣ ಹೊಂದಿದ್ದರು ! ಚೀನಾದ ಮಾಜಿ ಸೈನ್ಯಾಧಿಕಾರಿಗಳ ಹೇಳಿಕೆ

ಗಲವಾನ್ ಕಣಿವೆಯಲ್ಲಿ ಭಾರತ ಹಾಗೂ ಚೀನಾದ ಸೈನ್ಯದ ನಡುವೆ ನಡೆದ ಘರ್ಷಣೆಯಲ್ಲಿ ಚೀನಾದ ೧೦೦ ಸೈನಿಕರು ಮರಣ ಹೊಂದಿದ್ದಾರೆ; ಆದರೆ ಚೀನಾ ಸರಕಾರವು ಈ ಸಂಖ್ಯಾವಾರನ್ನು ಮುಚ್ಚಿಡುತ್ತಿದೆ. ಸತ್ಯ ಎದುರಿಗೆ ಬಂದರೆ ಚೀನಾದ ರಾಷ್ಟ್ರಾಧ್ಯಕ್ಷರಾದ ಶೀ ಜಿನಪಿಂಗ್‌ರವರ ವೈಫಲ್ಯ ತಿಳಿದುಬರುವುದು

ಕೊರೋನಾ ರೋಗಿಗಳ ಸಂಖ್ಯೆಯಲ್ಲಿ ಭಾರತ ಜಗತ್ತಿನ ೩ ನೇ ಸ್ಥಾನದಲ್ಲಿ !

ದೇಶದಲ್ಲಿ ಸಂಚಾರ ನಿಷೇಧವನ್ನು ಸಡಿಲಗೊಳಿಸಿದಾಗ ರೋಗಿಗಳ ಸಂಖ್ಯೆಯಲ್ಲಿ ದೊಡ್ಡಪ್ರಮಾಣದಲ್ಲಿ ಹೆಚ್ಚಳವಾಗುತ್ತಿದೆ. ಇಂದು ಭಾರತವು ಕೊರೋನಾ ರೋಗಿಗಳ ಸಂಖ್ಯೆಯಲ್ಲಿ ರಶಿಯಾಗೆ ಹಿಂದಿಕ್ಕಿ ಜಗತ್ತಿನ ೩ ನೇ ಸ್ಥಾನಕ್ಕೆ ತಲುಪಿದೆ. ಜುಲೈ ೫ ರಂದು ಭಾರತದಲ್ಲಿ ರೋಗಿಗಳ ಸಂಖ್ಯೆ ೬ ಲಕ್ಷ ೯೦ ಸಾವಿರದ ೩೯೬ ರಷ್ಟಾಗಿದ್ದರೆ

ಚೀನಾನಾದಲ್ಲಿ ಕೊರೋನಾದ ಬಳಿಕ ಈಗ ‘ಬ್ಯೂಬ್ಯಾನಿಕ್ ಪ್ಲೇಗ್ ಹಾಗೂ ‘ಪಿಗ್ ಇನ್ಫ್ಲೂಎನ್ಝಾ ರೋಗಗಳ ಅಪಾಯವಿದೆ

ಜಗತ್ತಿನಲ್ಲಿ ಕೊರೋನಾದ ಸಾಂಕ್ರಾಮಿಕ ಹೆಚ್ಚಾಗುತ್ತಿರುವಾಗ ಈಗ ಉತ್ತರ ಚೀನಾದಲ್ಲಿನ ಒಂದು ನಗರದಲ್ಲಿ ‘ಬ್ಲೂಬಾನಿಕ್ ಪ್ಲೇಗ್ ೨ರ ಹೊಸ ಸಂಶಯಿತ ರೋಗಿಗಳು ಸಿಕ್ಕಿದ್ದಾರೆ. ಈ ರೋಗವು ಸಹಜವಾಗಿ ಪ್ರಾಣಿಗಳಿಂದ ಮನುಷ್ಯರಿಗೆ ಹರಡಬಹುದು. ಆದ್ದರಿಂದ ಭವಿಷ್ಯದಲ್ಲಿ ಈ ರೀತಿಯಲ್ಲಿ ಕೆಲವು ರೋಗಿಗಳು ಸಿಗುವ ಸಾಧ್ಯತೆಗಳಿರುವುದರಿಂದ ಆರೋಗ್ಯ ಇಲಾಖೆಯು ಎಚ್ಚರಿಕೆಯ ಮುನ್ಸೂಚನೆ ನೀಡಿದೆ.