ಚೀನಾನಾದಲ್ಲಿ ಕೊರೋನಾದ ಬಳಿಕ ಈಗ ‘ಬ್ಯೂಬ್ಯಾನಿಕ್ ಪ್ಲೇಗ್ ಹಾಗೂ ‘ಪಿಗ್ ಇನ್ಫ್ಲೂಎನ್ಝಾ ರೋಗಗಳ ಅಪಾಯವಿದೆ

ಜಗತ್ತಿನೆಲ್ಲೆಡೆ ಸಂಕ್ರಾಮಿಕವಾಗುವ ಸಾಧ್ಯತೆ

ಬೀಜಿಂಗ್ (ಚೀನಾ) –  ಜಗತ್ತಿನಲ್ಲಿ ಕೊರೋನಾದ ಸಾಂಕ್ರಾಮಿಕ ಹೆಚ್ಚಾಗುತ್ತಿರುವಾಗ ಈಗ ಉತ್ತರ ಚೀನಾದಲ್ಲಿನ ಒಂದು ನಗರದಲ್ಲಿ ‘ಬ್ಲೂಬಾನಿಕ್ ಪ್ಲೇಗ್ ೨ರ ಹೊಸ ಸಂಶಯಿತ ರೋಗಿಗಳು ಸಿಕ್ಕಿದ್ದಾರೆ. ಈ ರೋಗವು ಸಹಜವಾಗಿ ಪ್ರಾಣಿಗಳಿಂದ ಮನುಷ್ಯರಿಗೆ ಹರಡಬಹುದು. ಆದ್ದರಿಂದ ಭವಿಷ್ಯದಲ್ಲಿ ಈ ರೀತಿಯಲ್ಲಿ ಕೆಲವು ರೋಗಿಗಳು ಸಿಗುವ ಸಾಧ್ಯತೆಗಳಿರುವುದರಿಂದ ಆರೋಗ್ಯ ಇಲಾಖೆಯು ಎಚ್ಚರಿಕೆಯ ಮುನ್ಸೂಚನೆ ನೀಡಿದೆ.
ಚೀನಾದಲ್ಲಿ ‘ಬ್ಲೂಬೋನಿಕ್ ಪ್ಲೇಗ್ನ ಜೊತೆಗೆ ‘ಪಿಗ್ ಇನ್ಫ್ಲೂಯೆನ್ಝಾ ಎಂಬ ರೋಗದ ಬಗ್ಗೆ ಸಂಶೋಧಕರು ಭಯ ವ್ಯಕ್ತಪಡಿಸಿದ್ದಾರೆ. ಚೀನಾದಲ್ಲಿ ಕೃಷಿಯ ಸಂದರ್ಭದಲ್ಲಿ ಸಂಶೋಧನೆ ನಡೆಸುವ ವಿಜ್ಞಾನಿಗಳು ಅದೇ ರೀತಿ ಇಲ್ಲಿನ ‘ಸೆಂಟರ್ ಫಾರ್ ಡಿಸೀಜ್ ಕಂಟ್ರೋಲ್ ಅಂಡ್ ಪ್ರಿವೆಂಶನೆಂಬ ಸಂಸ್ಥೆಗನುಸಾರ ಬೇರೆ ಸಂಸ್ಥೆಗಳು ‘ಪಿಗ್ ಇನ್ಫ್ಲೂಯೆನ್ಝಾ ಎಂಬ ರೋಗವು ಹಂದಿಗಳ ಮೂಲಕ ಹರಡಬಹುದು, ಎಂದು ಹೇಳಿದ್ದಾರೆ. ಹಂದಿಗಳ ಮೂಲಕ ಮನುಷ್ಯನಿಗೂ ಸಂಕ್ರಮಣವಾಗುವ ಸಾಧ್ಯತೆ ಹೆಚ್ಚಿದೆ. ಈ ವಿಷಾಣು ಒಬ್ಬ ವ್ಯಕ್ತಿಯಿಂದ ಮತ್ತೊಬ್ಬ ವ್ಯಕ್ತಿಗೆ ಸಹಜವಾಗಿ ಹರಡುವ ಸಾಧ್ಯತೆ ಹೆಚ್ಚಿದೆ. ಆದ್ದರಿಂದ ಕೊರೋನಾದಂತೆ ಇದು ಜಗತ್ತಿನಾದ್ಯಂತ ಸಂಕ್ರಮಣಗೊಳ್ಳುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.