ಗೂಂಡಾ ವಿಕಾಸ ದುಬೆಗೆ ೨೦೦ ಕ್ಕೂ ಹೆಚ್ಚು ಪೊಲೀಸರಿಂದ ಸಹಾಯ ಸಿಗುತ್ತಿರುವುದರ ಸಂದೇಹ

ಕಾನಪುರ ಪೊಲೀಸರ ಹತ್ಯಾಕಾಂಡ

  • ರಾಜಕೀಯ ನಾಯಕರೂ ಇದನ್ನು ಮುಚ್ಚಿಡಲು ಪ್ರಯತ್ನಿಸಿದ್ದರು !

  • ಒಬ್ಬ ಗೂಂಡಾಗೆ ೨೦೦ ಕ್ಕೂ ಹೆಚ್ಚು ಪೊಲೀಸರೊಂದಿಗೆ ಸಂಪರ್ಕವಿತ್ತು, ಇದು ಹಿರಿಯ ಅಧಿಕಾರಿಗಳಿಗೆ ಹಾಗೂ ಗೃಹಸಚಿವರಿಗೆ ತಿಳಿದಿರಲಿಲ್ಲವೇ ಅಥವಾ ಅವರೂ ಇವರೊಂದಿಗೆ ಸೇರಿದ್ದರೇ ? ಮುಖ್ಯಮಂತ್ರಿ ಯೋಗಿ ಆದಿತ್ಯನಾಥರು ಇದರ ಬಗ್ಗೆ ತನಿಖೆ ನಡೆಸಿ ಸಂಬಂಧಪಟ್ಟವರಿಗೆ ಶಿಕ್ಷೆಯಾಗಲು ಪ್ರಯತ್ನಿಸಬೇಕು, ಎಂದು ಜನರಿಗೆ ಅನಿಸುತ್ತದೆ.

  • ಗೂಂಡಾಗಳ ಗುಂಪಂತೆ ವರ್ತಿಸುವ ಪೊಲೀಸರು ! ಇಂತಹ ಪೊಲೀಸರು ಜನರ ರಕ್ಷಕ ಅಲ್ಲ ಭಕ್ಷಕರಾಗಿದ್ದಾರೆ ! ಇಂತಹವರಿಂದಲೇ ಪೊಲೀಸ್ ಪಡೆಯ ೮ ಪೊಲೀಸರು ಪ್ರಾಣವನ್ನು ಕಳೆದುಕೊಂಡರು, ಇದು ಪೊಲೀಸರಿಗೆ ನಾಚಿಕೆಯ ವಿಷಯವಾಗಿದೆ.

ಕಾನಪುರ (ಉತ್ತರಪ್ರದೇಶ) – ಕೆಲವು ದಿನಗಳ ಹಿಂದೆ ಕುಖ್ಯಾತ ಗೂಂಡಾ ವಿಕಾಸ ದುಬೆ ಹಾಗೂ ಆತನ ಸಹಚರರು ಮಾಡಿದ ದಾಳಿಯಿಂದಾಗಿ ೮ ಪೊಲೀಸರ ಹತ್ಯೆಯಾಗಿತ್ತು. ತದನಂತರ ಪರಾರಿಯಾದ ವಿಕಾಸ ದುಬೆಯನ್ನು ಹಿಡಿಯಲು ಪೊಲೀಸರಿಗೆ ಇನ್ನೂ ಸಾಧ್ಯವಾಗಲಿಲ್ಲ. ಈ ಪ್ರಕರಣದಲ್ಲಿ ಚೌಬೆಪುರ ಪೊಲೀಸ ಠಾಣೆಯ ಅಧಿಕಾರಿ ವಿನಯ ತಿವಾರಿಯು ದುಬೆಗೆ ಸಹಾಯ ಮಾಡಿದ್ದಾರೆಂಬ ಪ್ರಕರಣದಲ್ಲಿ ಅಮಾನತ್ತು ಮಾಡಲಾಗಿದ್ದು ಆತನ ವಿರುದ್ಧ ಅಪರಾಧವನ್ನು ನೊಂದಾಯಿಸಲಾಗಿದೆ. ದುಬೆಗೆ ಇನ್ನು ಕೆಲವು ಪೊಲೀಸರ ಸಹಾಯ ಸಿಗುತ್ತಿತ್ತೇ ಇದರ ಬಗ್ಗೆ ತನಿಖೆ ನಡೆಯುತ್ತಿದೆ. ಪ್ರಾರ್ಥಮಿಕ ತನಿಖೆಯಲ್ಲಿ ಚೌಬೆಪುರ ಪೊಲೀಸ್ ಠಾಣೆಯ ಪೊಲೀಸರೊಂದಿಗೆ ಸುಮಾರು ೨೦೦ ಪೊಲೀಸರು ದುಬೆಗೆ ಸಹಾಯ ಮಾಡುತ್ತಿದ್ದರು, ಎಂದು ಆತನ ಸಂಚಾರವಾಣಿಯಲ್ಲಿನ ಸಂಪರ್ಕದ ಮೂಲಕ ಮಾಹಿತಿ ಬೆಳಕಿಗೆ ಬರುತ್ತಿದೆ. ಈ ಪೊಲೀಸರು ಒಂದಲ್ಲಾ ಒಂದು ರೀತಿಯಲ್ಲಿ ಆತನಿಗೆ ಸಹಾಯ ಮಾಡಿದ್ದಾರೆ. ಅದೇರೀತಿ ಸಮಾಜವಾದಿ ಪಕ್ಷ, ಭಾಜಪ ಇತ್ಯಾದಿ ರಾಜಕೀಯ ಪಕ್ಷದ ನಾಯಕರೊಂದಿಗೆ ಹತ್ತಿರದ ನಂಟಿದೆ ಹಾಗೂ ಅವರೇ ದುಬೆಗೆ ರಕ್ಷಿಸಲು ಸತತವಾಗಿ ಪ್ರಯತ್ನ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.