ಎಲ್ಲಿ ಅಧಿಕೃತವಾಗಿ ದೇಶದಲ್ಲಿ ಕೆಲಸಕ್ಕಾಗಿ ಬರುವ ವಿದೇಶಿಯರನ್ನು ಹೊರದಬ್ಬುವ ಕುವೇತ್ ಹಾಗೂ ಎಲ್ಲಿ ಕೋಟಿಗಟ್ಟಲೆ ಬಾಂಗ್ಲಾದೇಶಿಯರು, ರೊಹಿಂಗ್ಯಾಗಳು ಇತ್ಯಾದಿ ನುಸುಳುಖೋರರನ್ನು ಹೊರದಬ್ಬಲು ಅನೇಕ ದಶಕಗಳಿಂದ ಕಠಿಣ ಕ್ರಮಕೈಗೊಳ್ಳದಿರುವ ಭಾರತ !
ಕುವೈತ್ ಸಿಟಿ (ಕುವೇತ್) – ಕುವೈತ್‌ನ ಸಂಸತ್ತಿನಲ್ಲಿ ವಿದೇಶಿ ಕೆಲಸಗಾರರಿಗೆ ಸಂಬಂಧಪಟ್ಟ ಅಪ್ರವಾಸಿ ಕೋಟಾ ವಿಧೇಯಕ ಮಸೂದೆಗೆ ಸಮ್ಮತಿ ನೀಡಲಾಗಿದೆ. ಒಂದು ವೇಳೆ ಈ ಸಮೂದೆ ಏನಾದರೂ ಕಾಯಿದೆಯಾಗಿ ರೂಪಾಂತರಗೊಂಡರೆ ಕುವೈತ್‌ನಲ್ಲಿರುವ ೮ ಲಕ್ಷ ಭಾರತೀಯ ಕೆಲಸಗಾರರು ಕುವೈತ್ ಅನ್ನು ಬಿಡಬೇಕಾಗಿ ಬರುತ್ತದೆ. ಭಾರತೀಯರ ಬಳಿಕ ಈಜಿಪ್ಟಿನ ನಾಗರಿಕರ ಸಂಖ್ಯೆ ಅತ್ಯಧಿಕವಾಗಿದೆ. ಈ ವಿಧೇಯಕದಂತೆ, ‘ಕುವೈತ್‌ನಲ್ಲಿ ಭಾರತೀಯರ ಜನಸಂಖ್ಯೆ ಶೇಕಡ ೧೫ಕ್ಕಿಂತ ಹೆಚ್ಚಾಗಿರಬಾರದು.
ಕುವೈತ್‌ನ ಜನಸಂಖ್ಯೆ ೪೩ ಲಕ್ಷವಿದ್ದು ಅದರಲ್ಲಿ ದೊಡ್ಡ ಪ್ರಮಾಣದಲ್ಲಿ ವಿದೇಶಿ ಕೆಲಸಗಾರರ ಸಂಖ್ಯೆಯಿದೆ. ಕುವೈತ್‌ನ ನಾಗರಿಕರು ಅಲ್ಪಸಂಖ್ಯಾತರಾಗುತ್ತಿರುವುದರಿಂದ ಹಾಗೂ ವಿದೇಶಿ ಕೆಲಸಗಾರರ ಮೇಲೆ ಅವಲಂಬಿಸಿರುವ ಅಭ್ಯಾಸವನ್ನು ಕಡಿಮೆ ಮಾಡಲು ಈ ವಿಧೇಯಕವಾಗಿದೆ, ಎಂದು ಹೇಳಲಾಗುತ್ತಿದೆ.
#Kuwait's PM proposed reduction in the number of expats from 70% to 30% of the total population. https://t.co/ETbWivf04N
— Economic Times (@EconomicTimes) July 6, 2020