ಚೀನಾದ ವಿರುದ್ಧ ನಮ್ಮ ಸೈನ್ಯವು ಭಾರತಕ್ಕೆ ಸಹಾಯ ಮಾಡಲಿದೆ ! – ಅಮೇರಿಕಾ

ಅಮೇರಿಕಾದ ವೈಟ್ ಹೌಸ್‌ನ ‘ಚೀಫ್ ಆಫ್ ಸ್ಟಾಫ್’ ಮಾರ್ಕ್ ಮೆಡೊಜ

ವಾಶಿಂಗ್ಟನ್ (ಅಮೇರಿಕಾ) – ನಮ್ಮ ಸೈನಿಕರು ಚೀನಾದ ವಿರುದ್ಧ ದೃಢವಾಗಿ ನಿಂತಿದ್ದು ಭವಿಷ್ಯದಲ್ಲಿಯೂ ಇರಲಿದೆ. ಅದು ಭಾರತ ಹಾಗೂ ಚೀನಾದ ಘರ್ಷಣೆಯಿರಲಿ ಅಥವಾ ಇತರ ದೇಶ ಇರಲಿ, ಎಂದು ಹೇಳುವ ಮೂಲಕ ಅಮೇರಿಕಾದ ವೈಟ್ ಹೌಸ್‌ನ ‘ಚೀಫ್ ಆಫ್ ಸ್ಟಾಫ್’ ಮಾರ್ಕ್ ಮೆಡೊಜ ಇವರು ಚೀನಾದೊಂದಿಗಿನ ಘರ್ಷಣೆಯಲ್ಲಿ ಭಾರತಕ್ಕೆ ಸಹಾಯ ಮಾಡಲಿದೆ ಎಂದು ಹೇಳಿದ್ದಾರೆ. ಇತ್ತಿಚೆಗೆ ಅಮೇರಿಕಾದ ನೌಕಾದಳ ತನ್ನ ಅಸ್ತಿತ್ವವನ್ನು ತೋರಿಸಲಿಕ್ಕಾಗಿ ದಕ್ಷಿಣ ಚೀನಾ ಸಮುದ್ರದಲ್ಲಿ ಎರಡು ವಿಮಾನವಾಹಕ ಯುದ್ಧನೌಕೆಗಳನ್ನು ನೇಮಿಸಿದೆ. ಈ ಹಿನ್ನೆಲೆಯಲ್ಲಿ ಈ ಹೇಳಿಕೆಯನ್ನು ನೀಡಿದ್ದಾರೆ.

ಮಾರ್ಕ್ ಮೆಡೊಜ ತಮ್ಮ ಮಾತನ್ನು ಮುಂದುವರೆಸುತ್ತ, ನಾವು ಕೇವಲ ವೀಕ್ಷಕರಾಗಿ ನಿಂತು ಚೀನಾ ಅಥವಾ ಇತರ ಯಾರಿಗೂ ಎಲ್ಲಕ್ಕಿಂತ ಬಲಿಷ್ಠವಾಗಲು ಅಥವಾ ಪ್ರಭಾವಶಾಲಿಯಾಗಲು ಬಿಡುವುದಿಲ್ಲ, ಅದು ಯಾವುದೇ ಭೂಭಾಗ ಇರಲಿ ಅಥವಾ ಪ್ರದೇಶವಿರಲಿ, ಇದು ನಮ್ಮ ಸ್ಪಷ್ಟ ಸಂದೇಶವಾಗಿದೆ’ ಎಂದು ಹೇಳಿದ್ದಾರೆ.