ಲಾತೆಹರ್ (ಝಾರಖಂಡ್)ನಲ್ಲಿ ಭಾಜಪದ ಮುಖಂಡನ ಕೊಲೆಯ ವಿರುದ್ಧ ನೂರಾರು ಜನರ ಆಂದೋಲನ

ಝಾರಖಂಡ್‌ನಲ್ಲಿನ ಝಾರಖಂಡ್ ಮುಕ್ತಿ ಮೋರ್ಚಾ ಸರಕಾರದ ರಾಜ್ಯದಲ್ಲಿನ ಕಾನೂನು ಹಾಗೂ ಸುವ್ಯವಸ್ಥೆಯ ಹದಗೆಟ್ಟಿದೆ ! ಭಾಜಪದ ಮುಖಂಡರ ಕೊಲೆಯಾದ ಕಾರಣ ವಿರೋಧ ಪಕ್ಷವು ಮೌನವಾಗಿದೆ. ಒಂದು ವೇಳೆ ಯಾರಾದರೂ ಪ್ರಗತಿ(ಅಧೋಗತಿ)ಪರರ ಅಥವಾ ಅಲ್ಪಸಂಖ್ಯಾತ ವ್ಯಕ್ತಿಯ ಕೊಲೆಯಾಗುತ್ತಿದ್ದರೆ ಆಗ ಸಂಪೂರ್ಣ ದೇಶದಲ್ಲಿ ಅದರ ವಿರೋಧವಾಗುತ್ತಿತ್ತು !


ಲಾತೆಹಾರ್ (ಝಾರಖಂಡ್)- ಜುಲೈ ೫ ರಂದು ಭಾಜಪದ ಜಿಲ್ಲಾ ಪ್ರಧಾನಕಾರ್ಯದರ್ಶಿ ಜಯವರ್ಧನ ಸಿಂಹ (ವಯಸ್ಸು ೫೦ ವರ್ಷ)ಯವರನ್ನು ಅಜ್ಞಾತರು ಗುಂಡಿಕ್ಕಿ ಹತ್ಯೆ ಮಾಡಿದ್ದನ್ನು ವಿರೋಧಿಸಿ ಜುಲೈ ೭ ರಂದು ಬರವಾಡೀಹ ಬಾಝಾರಿನಲ್ಲಿ ನೂರಾರು ಸಂಖ್ಯೆಯಲ್ಲಿ ಜನರು ಪ್ರತಿಭಟನೆ ನಡೆಸಿದರು.

ಅನಂತರ ಅವರು ಪೊಲೀಸ್ ಠಾಣೆಯ ಎದುರು ಪ್ರತಿಭಟನೆ ಮಾಡಿದರು. ‘ಸಿಂಹ’ರವರ ಕೊಲೆಗಾರರನ್ನು ತಕ್ಷಣ ಬಂಧಿಸಿ, ಈ ಕೊಲೆಯನ್ನು ಕೇಂದ್ರೀಯ ತನಿಖಾ ವಿಭಾಗದಿಂದ ತನಿಖೆ ನಡೆಸಿರಿ, ‘ಸಿಂಹ’ರ ಕುಟುಂಬಕ್ಕೆ ರಕ್ಷಣೆ ನೀಡಿ, ಇತ್ಯಾದಿ ಬೇಡಿಕೆಗಳನ್ನು ಈ ಸಮಯದಲ್ಲಿ ಮಾಡಲಾಯಿತು. ಆ ಬಗ್ಗೆ ಪೊಲೀಸ್ ಆಡಳಿತವು ಆಶ್ವಾಸನೆ ನೀಡಿದ ಬಳಿಕ ಆಂದೋಲನವನ್ನು ಹಿಂದಡೆಯಲಾಯಿತು.