ದೆಹಲಿಯಲ್ಲಿ ನಡೆದ ಗಲಭೆಗೆ ಸಂಯುಕ್ತ ಅರಬ್ ಅಮಿರಾತ್ ಹಾಗೂ ಓಮಾನ್‌ನಿಂದ ಹಣ ಪೂರೈಕೆ ! – ಪೋಲಿಸರ ಸಂದೇಹ

ಇದರಿಂದ ದೆಹಲಿಯಲ್ಲಿ ಗಲಭೆ ನಡೆಸಿದವರು ಯಾರು?, ಎಂಬುದು ಗಮನಕ್ಕೆ ಬರುತ್ತದೆ ! ಅದೇ ಇಸ್ಲಾಮೀ ದೇಶಗಳಿಂದ ಈ ಗಲಭೆ ಪ್ರಕರಣದಲ್ಲಿ ಹಿಂದೂಗಳನ್ನು ಹೊಣೆ ಮಾಡಲು ಪ್ರಯತ್ನಿಸಲಾಗುತ್ತಿದೆ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ!

ನವ ದೆಹಲಿ – ಫೆಬ್ರುವರಿ ತಿಂಗಳಿನಲ್ಲಿ ದೆಹಲಿಯಲ್ಲಿ ಪೌರತ್ವ ತಿದ್ದುಪಡಿ ಕಾಯಿದೆಯ ವಿರುದ್ಧ ಹಾಗೂ ಅನಂತರ ನಡೆದ ಗಲಭೆಗೆ ಸಂಯುಕ್ತ ಅರಬ ಅಮಿರಾತ್ ಹಾಗೂ ಓಮಾನ್ ಅಂದರೆ ಮಧ್ಯಪೂರ್ವ ಇಸ್ಲಾಮೀ ದೇಶಗಳಿಂದ ಹಣ ಪೂರೈಸಲಾಗಿದೆ, ಎಂಬ ಮಾಹಿತಿಯನ್ನು ದೆಹಲಿ ಪೋಲೀಸರ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ; ಆದರೆ ಈ ಹಣವನ್ನು ಕಾಯಿದೆ ವಿರುದ್ಧ ಪೂರೈಸಲಾಯಿತೇ ಅಥವಾ ಗಲಭೆಗೋಸ್ಕರವೇ, ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಈ ವಿಷಯದ ಮೇಲೆ ಇನ್ನೂ ತನಿಖೆ ನಡೆಯುತ್ತಿದೆ.

೧. ಪೋಲೀಸರ ತನಿಖೆಯ ಸಮಯದಲ್ಲಿ ಈ ಗಲಭೆಯ ಆರೋಪಿಯಾದ ಮೀರನ್ ಹೈದರ್‌ನ ಮನೆಯಲ್ಲಿ ಎರಡುವರೆ ಲಕ್ಷ ರೂಪಾಯಿಗಳು ಸಿಕ್ಕಿತ್ತು. ಮೀರನ್ ಹೈದರ್ (ವಯಸ್ಸು ೩೫) ಎಂಬ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದಲ್ಲಿನ ಪಿ.ಎಚ್.ಡಿ.ಯ ವಿದ್ಯಾರ್ಥಿ. ಪೊಲೀಸರ ಹೇಳಿಕೆಯಂತೆ, ಫೆಬ್ರುವರಿ ತಿಂಗಳಿನಲ್ಲಿ ದೆಹಲಿಯಲ್ಲಿ ನಡೆದ ಗಲಭೆಯ ಮುನ್ನ ಅವನ ಬ್ಯಾಂಕ್ ಖಾತೆಗೆ ೫ ಲಕ್ಷ ರೂಪಾಯಿಗಳನ್ನು ತುಂಬಿಸಲಾಯಿತು.
೨. ಈ ಗಲಭೆ ಪ್ರಕರಣದಲ್ಲಿ ಪೋಲೀಸರು ಖಾಲಿದ್ ಸೈಫೀ ಎಂಬ ಯುವಕನನ್ನು ವಶಕ್ಕೆ ಪಡೆದುಕೊಂಡಿದ್ದು ಅವನು ಜಿಹಾದಿ ಉಗ್ರಗಾಮಿಗಳ ಆದರ್ಶವಾಗಿರುವ ಡಾ. ಝಾಕೀರ್ ನಾಯಿಕ್‌ನನ್ನು ಮಲೇಶಿಯಾದಲ್ಲಿ ಭೇಟಿಯಾಗಿದ್ದನು.