ಕೊರೋನಾದ ಕಾಲದಲ್ಲಿ ಶ್ರೀಮದ್ಭಗವದ್ಗೀತೆಯಿಂದ ಸಾಮರ್ಥ್ಯ ಹಾಗೂ ಶಾಂತಿ ಸಿಗುವುದು !- ಅಮೇರಿಕಾದ ಭಾರತ ಮೂಲದ ಸಂಸದೆ ತುಲಸೀ ಗಬಾರ್ಡ್

ಅಮೇರಿಕಾದ ಭಾರತ ಮೂಲದ ಓರ್ವ ಮಹಿಳಾ ಸಂಸದೆಗೆ ಅನಿಸುತ್ತಿದೆ ಅದು, ಭಾರತದಲ್ಲಿನ ಎಷ್ಟು ಜನ್ಮ ಹಿಂದೂ ಜನಪ್ರತಿನಿಧಿಗಳಿಗೆ ಅನಿಸುತ್ತಿದೆ?

ವಾಶಿಂಗ್‌ಟನ್ (ಅಮೇರಿಕಾ) – ಕೊರೋನಾದಂತಹ ಸಂಕಟದ ಸಮಯದಲ್ಲಿ ನಾಳೆ ಏನಾಗುವುದು ಎಂಬುದನ್ನು ಹೇಳಲು ಸಾಧ್ಯವಿಲ್ಲ. ಇಂತಹ ಸಮಯದಲ್ಲಿ ಕೇವಲ ಶ್ರೀಮದ್ಭಗವದ್ಗೀತೆಯಿಂದ ಖಂಡಿತವಾಗಿಯೂ ಸಾಮರ್ಥ್ಯ ಹಾಗೂ ಶಾಂತಿ ಸಿಗುವುದು. ನಮಗೆ ಭಗವದ್ಗೀತೆಯಲ್ಲಿ ಭಗವಾನ್ ಶ್ರೀಕೃಷ್ಣನು ಕಲಿಸಿಕೊಟ್ಟಿರುವ ಭಕ್ತಿಯೋಗ ಹಾಗೂ ಕರ್ಮಯೋಗದ ಪಾಲನೆಯಿಂದಲೇ ಸಾಮರ್ಥ್ಯ ಹಾಗೂ ಶಾಂತಿ ಸಿಗಲು ಸಾಧ್ಯವಾಯಿತು, ಎಂದು ಅಮೇರಿಕಾದ ಮೊದಲ ಹಿಂದೂ ಸಂಸದೆ ತುಲಸಿ ಗಬಾರ್ಡ್‌ರವರು ಭಾರತೀಯ ವಿದ್ಯಾರ್ಥಿಗಳ ೨೦೨೦ರ ವರ್ಷದ ಅಧಿವೇಶನದ ಆನ್‌ಲೈನ್ ಉದ್ಘಾಟನೆಯ ಸಂದರ್ಭದಲ್ಲಿ ಹೇಳಿದರು.