ಕೊರೋನಾ ರೋಗಿಗಳ ಸಂಖ್ಯೆಯಲ್ಲಿ ಭಾರತ ಜಗತ್ತಿನ ೩ ನೇ ಸ್ಥಾನದಲ್ಲಿ !

ನವ ದೆಹಲಿ – ದೇಶದಲ್ಲಿ ಸಂಚಾರ ನಿಷೇಧವನ್ನು ಸಡಿಲಗೊಳಿಸಿದಾಗ ರೋಗಿಗಳ ಸಂಖ್ಯೆಯಲ್ಲಿ ದೊಡ್ಡಪ್ರಮಾಣದಲ್ಲಿ ಹೆಚ್ಚಳವಾಗುತ್ತಿದೆ. ಇಂದು ಭಾರತವು ಕೊರೋನಾ ರೋಗಿಗಳ ಸಂಖ್ಯೆಯಲ್ಲಿ ರಶಿಯಾಗೆ ಹಿಂದಿಕ್ಕಿ ಜಗತ್ತಿನ ೩ ನೇ ಸ್ಥಾನಕ್ಕೆ ತಲುಪಿದೆ. ಜುಲೈ ೫ ರಂದು ಭಾರತದಲ್ಲಿ ರೋಗಿಗಳ ಸಂಖ್ಯೆ ೬ ಲಕ್ಷ ೯೦ ಸಾವಿರದ ೩೯೬ ರಷ್ಟಾಗಿದ್ದರೆ, ಇದೇ ಸಮಯದಲ್ಲಿ ರಶಿಯಾದ ರೋಗಿಗಳ ಸಂಖ್ಯೆ ೬ ಲಕ್ಷ ೮೦ ಸಾವಿರದ ೨೮೨ ರಷ್ಟಿತ್ತು. ಸದ್ಯ ಅಮೇರಿಕಾ ೨ ಕೋಟಿ ೮೪ ಲಕ್ಷದ ೪೧ ಸಾವಿರದ ೧೨೪ ರೋಗಿಗಳಿದ್ದು ಜಗತ್ತಿನ ಮೊದಲನೇ ಸ್ಥಾನದಲ್ಲಿದ್ದು ಬ್ರಾಝಿಲ್ ೧ ಕೋಟಿ ೫೭ ಲಕ್ಷದ ೭ ಸಾವಿರದೊಂದಿಗೆ ಎರಡನೇ ಸ್ಥಾನದಲ್ಲಿದೆ.
ದೇಶದಲ್ಲಿ ಒಟ್ಟು ರೋಗಿಗಳ ಪೈಕಿ ೨ ಲಕ್ಷದ ೬ ಸಾವಿರದ ೬೧೯ ರಷ್ಟು ಕೇವಲ ಮಹಾರಾಷ್ಟ್ರ ರಾಜ್ಯದಲ್ಲಿದೆ. ಅದರಲ್ಲಿ ಒಟ್ಟು ೧ ಲಕ್ಷದ ೧೧ ಸಾವಿರದ ೭೪೦ ರೋಗಿಗಳು ಇಲ್ಲಿಯವರೆಗೆ ಗುಣಮುಖರಾಗಿದ್ದರಿಂದ ಅವರನ್ನು ಮನೆಗೆ ಕಳುಹಿಸಲಾಗಿದೆ. ಸದ್ಯ ರಾಜ್ಯದಲ್ಲಿ ೮೬ ಸಾವಿರದ ೪೦ ರೋಗಿಗಳ ಮೇಲೆ ಚಿಕಿತ್ಸೆ ನಡೆಯುತ್ತಿದೆ.