‘ತಿಬೇಟ್ ಚೀನಾದ ಆಂತರಿಕ ಪ್ರಶ್ನೆಯಾಗಿರುವುದರಿಂದ ಭಾರತವು ಅದರತ್ತ ಗಮನ ಹರಿಸುವುದು ಬೇಡ(ವಂತೆ) ! – ಭಾರತಕ್ಕೆ ಚೀನಾದ ಬೆದರಿಕೆ

  • ಪಾಕ್‌ಆಕ್ರಮಿತ ಕಾಶ್ಮೀರದಲ್ಲಿ ರಸ್ತೆ ಹಾಗೂ ಅಣೆಕಟ್ಟು ಕಟ್ಟುವ ಕಪಟ ಚೀನಾಗೂ ಭಾರತವು ಅದೇ ಭಾಷೆಯಲ್ಲಿ ಅರ್ಥ ಮಾಡಿಸಬೇಕು !

  • ಚೀನಾವು ತಿಬೇಟ್ ಅನ್ನು ಅತಿಕ್ರಮಿಸಿದ್ದು ತಿಬೇಟಿನ ಜನರ ಮೇಲೆ ದೌರ್ಜನ್ಯ ಮಾಡುತ್ತಿದೆ, ಎಂಬುದು ನೈಜ್ಯಸ್ಥಿತಿಯಾಗಿದೆ. ಒಂದು ವೇಳೆ ಭಾರತವು ಜಾಗತಿಕ ಮಟ್ಟದಲ್ಲಿ ಹೇಳಿ ಅದರ ವಿರುದ್ಧ ದೇಶಗಳನ್ನು ಸಂಘಟಿಸುತ್ತಿದ್ದರೆ, ಅದು ಅದರ ಅಧಿಕಾರವೇ ಆಗಿದೆ. ಆದ್ದರಿಂದ ಚೀನಾದ ಇಂತಹ ಬೆದರಿಕೆಗೆ ಗಮನ ನೀಡುವುದು ಬೇಡ !

ಬೀಜಿಂಗ್ (ಚೀನಾ) – ಭಾರತದಲ್ಲಿ ಕೆಲವರು, ಅದೇ ರೀತಿ ಪ್ರಸಾರ ಮಾಧ್ಯಮಗಳು, ಭಾರತವು ಚೀನಾದೊಂದಿಗೆ ಉದ್ವಿಗ್ನತೆಯ ಸಮಯದಲ್ಲಿ ತಿಬೇಟಿನ ವಿಷಯವನ್ನು ಕೈಗೆತ್ತಿಕೊಳ್ಳಬೇಕು ಇದರಿಂದ ಲಾಭವಾಗುವುದು, ಎಂದು ಕೆಲವರು ವಿಚಾರ ಮಾಡುತ್ತಿದ್ದಾರೆ ಆದರೆ ಈ ವಿಚಾರ ಒಂದು ಭ್ರಮೆಯಾಗಿದೆ. ತಿಬೇಟ್ ಇದು ಚೀನಾದ ಒಂದು ಆಂತರಿಕ ಪ್ರಶ್ನೆಯಾಗಿದೆ ಹಾಗೂ ಅದರಲ್ಲಿ ಭಾರತವು ಗಮನ ಹರಿಸುವುದು ಬೇಡ, ಎಂದು ಚೀನಾವು ತನ್ನ ಸರಕಾರಿ ದಿನಪತ್ರಿಕೆಯಾದ ‘ಗ್ಲೋಬಲ್ ಟೈಮ್ಸ್ನ ಸಂಪಾದಕೀಯ ಲೇಖನದಲ್ಲಿ ಎಚ್ಚರಿಕೆಯನ್ನು ನೀಡಿದೆ. ‘ತಿಬೇಟಿನ ಅಂಶವನ್ನು ಕೈತೆಗೆದುಕೊಳ್ಳುವ ವಿಚಾರವು ಭಾರತದ ಕಲ್ಪನಾಶಕ್ತಿಯನ್ನು ತೋರಿಸುತ್ತದೆ. ವಾಸ್ತವಿಕತೆಯಲ್ಲಿ ಅದಕ್ಕೆ ಯಾವುದೇ ರೀತಿಯ ಮಹತ್ವವಿಲ್ಲ, ಎಂದು ಕೂಡ ಅದರಲ್ಲಿ ಹೇಳಲಾಗಿದೆ.
ಈ ಲೇಖನದಲ್ಲಿ ಮುಂದೆ ಹೇಳುತ್ತಾ, ‘ಕೆಲವು ಚೀನಾವಿರೋಧಿ ಶಕ್ತಿಗಳು ತಿಬೇಟಿಯನ ಅಂಶವನ್ನು ಬಳಸಿಕೊಂಡು ಚೀನಾವನ್ನು ‘ವನ್ ಚಾಯನಾ ಪಾಲಿಸಿಯ ವಿರುದ್ಧ ಉದ್ರೇಕಿಸುವ ಕೆಲಸ ಮಾಡುತ್ತಿದೆ; ಆದರೆ ವಾಸ್ತವ ಇದಕ್ಕಿಂತ ಬೇರೆಯಾಗಿದೆ. ಕಳೆದ ಕೆಲವು ವರ್ಷಗಳಲ್ಲಿ ತಿಬೇಟ್ ವಶದಲ್ಲಿದ್ದ ಕ್ಷೇತ್ರವನ್ನು ತುಲನಾತ್ಮಕ ನಿಟ್ಟಿನಿಂದ ಶೀಘ್ರಗತಿಯಲ್ಲಿ ಅಭಿವೃದ್ಧಿಯಾಗಿದೆ. ಇಲ್ಲಿನ ಸ್ಥಿರವಾದ ಸಾಮಾಜಿಕ ವಾತಾವರಣವನ್ನು ನಿರ್ಮಿಸಲು ವಿಕಾಸ ಇದು ಒಂದು ಒಳ್ಳೆಯ ಪ್ರಯತ್ನವಾಗಿದೆ. ಆದ್ದರಿಂದ ಚೀನಾ ಹಾಗೂ ಭಾರತದ ನಡುವಿನ ವ್ಯಾಪಾರ ಸಂಬಂಧ ಇನ್ನೂ ಚೆನ್ನಾಗಿ ಆಗುವುದು. ಭಾರತವು ತಿಬೇಟಿಗೆ ಸಮೀಪವಾಗಿರುವ ತನ್ನ ರಾಜ್ಯಗಳ ಸ್ಥಿತಿಯನ್ನು ಚೆನ್ನಾಗಿ ಮಾಡಲು ಪ್ರಯತ್ನಿಸುವುದು ಎಂದು ಆಶಿಸುತ್ತೇವೆ, ಎಂದು ಹೇಳಿದೆ. (ತನ್ನ ಆಸುರೀ ವಿಸ್ತಾರವಾದಿ ವೃತ್ತಿಯಿಂದ ಜಗತ್ತಿನಾದ್ಯಂತದ ವಾತಾವರಣವನ್ನು ಕೆಡಿಸುವ ಚೀನಾದ ಪುಕ್ಕಟೆ ಮಾತು ! – ಸಂಪಾದಕರು)