ಗಲವಾನ್ ಕಣಿವೆಯಲ್ಲಿ ಚೀನಾದ ೧೦೦ ಸೈನಿಕರ ಮರಣ ಹೊಂದಿದ್ದರು ! ಚೀನಾದ ಮಾಜಿ ಸೈನ್ಯಾಧಿಕಾರಿಗಳ ಹೇಳಿಕೆ

ಬೀಜಿಂಗ್ (ಚೈನಾ) – ಗಲವಾನ್ ಕಣಿವೆಯಲ್ಲಿ ಭಾರತ ಹಾಗೂ ಚೀನಾದ ಸೈನ್ಯದ ನಡುವೆ ನಡೆದ ಘರ್ಷಣೆಯಲ್ಲಿ ಚೀನಾದ ೧೦೦ ಸೈನಿಕರು ಮರಣ ಹೊಂದಿದ್ದಾರೆ; ಆದರೆ ಚೀನಾ ಸರಕಾರವು ಈ ಸಂಖ್ಯಾವಾರನ್ನು ಮುಚ್ಚಿಡುತ್ತಿದೆ. ಸತ್ಯ ಎದುರಿಗೆ ಬಂದರೆ ಚೀನಾದ ರಾಷ್ಟ್ರಾಧ್ಯಕ್ಷರಾದ ಶೀ ಜಿನಪಿಂಗ್‌ರವರ ವೈಫಲ್ಯ ತಿಳಿದುಬರುವುದು, ಎಂದು ಚೀನಾದ ಕಮ್ಯೂನಿಸ್ಟ್ ಪಕ್ಷದ ಮುಖಂಡರ ಮಗ ಹಾಗೂ ಚೀನಾ ಸೈನ್ಯದ ಮಾಜಿ ಅಧಿಕಾರಿ ಜಿನಾಲೀ ಯಾಂಗ್‌ರವರು ಹೇಳಿದ್ದಾರೆ. ಇದರ ಬಗ್ಗೆ ಚೀನಾ ಅಥವಾ ಭಾರತದಿಂದ ಯಾವುದೇ ರೀತಿಯ ಪ್ರತಿಕ್ರಿಯೆ ವ್ಯಕ್ತಪಡಿಸಲಿಲ್ಲ; ಆದರೆ ಸಾಮಾಜಿಕ ಮಾಧ್ಯಮಗಳಿಂದ ಎಂಬ ವಿಷಯವು ದೊಡ್ಡ ಪ್ರಮಾಣದಲ್ಲಿ ಚರ್ಚೆಯಾಗುತ್ತಿದೆ. ಯಾಂಗ್‌ರವರು ಇತ್ತೀಚೆಗಷ್ಟೇ ಈ ಘರ್ಷಣೆಯ ಬಗ್ಗೆ ಹೇಳಿಕೆ ನೀಡುವಾಗ ‘ಚೀನಾ ಸರಕಾರವು ಉದ್ದೇಶಪೂರ್ವಕವಾಗಿ ಮರಣ ಹೊಂದಿದ ಸೈನಿಕರ ಅಂಕಿಅಂಶಗಳನ್ನು ಮುಚ್ಚಿಡುತ್ತಿದೆ. ಈ ಸಂಖ್ಯೆಯನ್ನೇನಾದರೂ ಘೋಷಿಸಿದರೆ ಚೀನಾಗೆ ನಾಚಿಕೆಯಾಗಬಹುದು ಹಾಗೂ ಚೀನಾದ ಮಾಜಿ ಸೈನಿಕರು ವಿದ್ರೋಹ ನಡೆಸುವರು ಎಂದು ಹೇಳಿದ್ದರು.