ಜಾಗತಿಕ ಖ್ಯಾತಿಯ ಇತಿಹಾಸಕಾರನಿಗೆ ತಿಳಿದ ಭಾರತದ ಮಹತ್ವ !

ಭಾರತೀಯ ಸಂಸ್ಕೃತಿ ಇದು ಅದರ ಪ್ರಚಂಡವಾದ ವಾಙ್ಮಯ, ಅದು ಹಿಡಿದಿರುವ ವಿಜ್ಞಾನದ ಹಿಡಿತ, ಆತ್ಮಶೋಧದ ಮಾಡಿರುವ ಶ್ರೇಷ್ಠ ಪ್ರಯತ್ನ, ಜೀವಕ್ಕೆ ಸ್ಪರ್ಶಿಸುವ ಅದರ ಸಂಗೀತ ಮತ್ತು ಭಯಚಕಿತಗೊಳಿಸುವ ಅದರಲ್ಲಿಯ ಈಶ್ವರನ ರೂಪಗಳು ಇವುಗಳಿಂದ ಸಮೃದ್ಧವಾಗಿದೆ.

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

ಹಿಂದೂ ರಾಷ್ಟ್ರದ ಸ್ಥಾಪನೆ ಇದು ಸನಾತನ ಪ್ರಭಾತದ ಧ್ಯೇಯ ವಾಕ್ಯವಾಗಿದೆ ಅದು ಕೇವಲ ಶೋಭೆಗಾಗಿ ಅಲ್ಲದೇ ಅದು ಕೃತಿಗೆ ತರುವಂತಹುದು ಆಗಿದೆ. ಸನಾತನ ಪ್ರಭಾತದ ವಾಚಕರು ಈ ಹಿಂದೂ ರಾಷ್ಟ್ರದ ವೈಚಾರಿಕ ಶಕ್ತಿ ಯಾಗಿದ್ದಾರೆ ಈ ಶಕ್ತಿಯು ಈಗ ಸಕ್ರಿಯವಾಗುವುದು ಕಾಲದ ಆವಶ್ಯಕತೆಯಾಗಿದೆ.

ಘಾಟಶಿಲಾ (ಝಾರಖಂಡ) ಇಲ್ಲಿನ ಶಾಲೆಯಲ್ಲಿ ಶಿಶುವರ್ಗದ ಮಕ್ಕಳಿಗೆ ಪಾಕಿಸ್ತಾನ ಹಾಗೂ ಬಾಂಗ್ಲಾದೇಶದ ರಾಷ್ಟ್ರಗೀತೆಯ ಬಾಯಿಪಾಠ ಮಾಡಿಸುತ್ತಿರುವುದು ಪೋಷಕರ ವಿರೋಧದ ನಂತರ ರದ್ದು

ಇಲ್ಲಿ ಸಂತ ನಂದಲಾಲ ಸ್ಮೃತಿ ವಿದ್ಯಾ ಮಂದಿರ ಶಾಲೆಯಲ್ಲಿ ಸಣ್ಣ ಹಾಗೂ ದೊಡ್ಡ ಶಿಶುವರ್ಗದ ಮಕ್ಕಳ ಬೇರೆ ಬೇರೆ ಗುಂಪುಗಳನ್ನು ಮಾಡಿ ಭಾರತ ಸಹಿತ ಪಾಕಿಸ್ತಾನ ಹಾಗೂ ಬಾಂಗ್ಲಾದೇಶದ ರಾಷ್ಟ್ರಗೀತೆಯನ್ನು ಬಾಯಿಪಾಠ ಮಾಡಲು ಹೇಳಲಾಗಿತ್ತು. ಇದರಿಂದ ಮಕ್ಕಳ ಪೋಷಕರು ಇದರ ಬಗ್ಗೆ ಆಕ್ಷೇಪವೆತ್ತಿ ಶಾಲೆಯ ಆಡಳಿತಮಂಡಳಿಗೆ ‘ಪಾಕಿಸ್ತಾನ ಹಾಗೂ ಬಾಂಗ್ಲಾದೇಶದ ರಾಷ್ಟ್ರಗೀತೆಯನ್ನು ಕಲಿಸಬಾರದು’, ಎಂದು ಹೇಳಿದ್ದಾರೆ.

ಕರ್ನಾಟಕ ರಾಜ್ಯ ಭಾಜಪ ಸರಕಾರ ಶೀಘ್ರದಲ್ಲೇ ಗೋಹತ್ಯಾ ನಿಷೇಧ ಕಾನೂನನ್ನು ಜಾರಿಗೆ ತರಲಿದೆ

ಕರ್ನಾಟಕದಲ್ಲಿ ಶೀಘ್ರದಲ್ಲೇ ಗೋಹತ್ಯೆ, ಗೋಮಾಂಸ ಮಾರಾಟ, ಕಸಾಯಿಖಾನೆಗಾಗಿ ಗೋವುಗಳ ಸಾಗಾಟ ಹಾಗೂ ಮಾರಾಟದ ಮೇಲೆ ನಿರ್ಬಂಧ ಹೇರಲಿದೆ, ಎಂಬ ಮಾಹಿತಿಯನ್ನು ಪಶುಸಂಗೋಪಾಸನೆ ರಾಜ್ಯ ಸಚಿವ ಪ್ರಭು ಚೌಹಾಣ ಇವರು ನೀಡಿದರು. ಭಾಜಪ ತನ್ನ ಚುನಾವಣೆಯ ಪ್ರಣಾಳಿಕೆಯಲ್ಲಿ ಗೋ ಹತ್ಯಾ ನಿಷೇಧ ಮಾಡುವ ಆಶ್ವಾಸನೆಯನ್ನು ನೀಡಿತ್ತು.

ಚೀನಾದ ವಿರುದ್ಧ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಸಹಾಯ ಮಾಡುತ್ತಾರೆಂದು ಖಚಿತವಾಗಿ ಹೇಳಲಾಗದು ! – ಜಾನ್ ಬೊಲ್ಟನ್, ಅಮೇರಿಕಾದ ಮಾಜಿ ರಾಷ್ಟ್ರೀಯ ಸುರಕ್ಷೆಯ ಸಲಹೆಗಾರ

ಚೀನಾದ ವಿರುದ್ಧ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಸಹಾಯ ಮಾಡುವರು, ಎಂಬುದನ್ನು ಖಚಿತವಾಗಿ ಹೇಳಲಾಗದು, ಎಂದು ಅಮೇರಿಕಾದ ಮಾಜಿ ರಾಷ್ಟ್ರೀಯ ಸುರಕ್ಷೆಯ ಸಲಹೆಗಾರ ಜಾನ್ ಬೊಲ್ಟನ್ ಇವರು ಒಂದು ವಾರ್ತಾವಾಹಿನಿಯಲ್ಲಿ ಮಾತನಾಡುತ್ತಾ ಹೇಳಿದ್ದಾರೆ. ಬೋಲ್ಟ್ ಇವರು ಎಪ್ರಿಲ್ ೨೦೧೮ ರಿಂದ ಸೆಪ್ಟೆಂಬರ್ ೨೦೧೯ ಈ ಕಾಲಾವಧಿಯಲ್ಲಿ ಟ್ರಂಪ್ ಸರಕಾರದಲ್ಲಿ ಮುಖ್ಯ ಭದ್ರತಾ ಸಲಹೆಗಾರರಾಗಿದ್ದರು.

ಪಾಕಿಸ್ತಾನದ ಸೈದಪುರದಲ್ಲಿಯ ಪ್ರಾಚೀನ ರಾಮಮಂದಿರದಲ್ಲಿ ಹಿಂದೂಗಳಿಗೆ ಪೂಜೆ ಅರ್ಚನೆ ಮಾಡಲು ನಿರ್ಬಂಧ !

ಇಲ್ಲಿಯ ಸೈದಪುರ ಈ ಗ್ರಾಮದಲ್ಲಿ ಮರ್ಗಲ್ಲಾಹ ಗುಡ್ಡದ ಅಡಿಯಲ್ಲಿರುವ ಒಂದು ಪ್ರಾಚೀನ ರಾಮನ ದೇವಸ್ಥಾನದಲ್ಲಿ ಹಿಂದೂಗಳಿಗೆ ಪೂಜೆ-ಅರ್ಚನೆ ಮಾಡಲು ನಿರ್ಬಂಧ ಹೇರಿದೆ. ಈ ದೇವಸ್ಥಾನದ ದರ್ಶನಕ್ಕಾಗಿ ಭಕ್ತಾದಿಗಳು ದೂರದಿಂದ ಬರುತ್ತಾರೆ; ಆದರೆ ಅವರಿಗೆ ಪೂಜೆ ಮಾಡಲು ಆಗದೇ ಮರಳಿ ಹೋಗಬೇಕಾಗುತ್ತಿದೆ.

ಮಗನು ಕ್ರೈಸ್ತ ಧರ್ಮಕ್ಕೆ ಮತಾಂತರವಾದ ನಂತರ ಸಂಪತ್ತಿನ ಉತ್ತರಾಧಿಕಾರಿಯಿಂದ ಆತನ ಹೆಸರನ್ನು ತೆಗೆದು ಹಾಕಿದ ತಂದೆ

ಇಲ್ಲಿಯ ಕುಲಗಡಾ ಗ್ರಾಮದಲ್ಲಿ ಪರಿಶಿಷ್ಟ ಜಾತಿಯ ೨೩ ಹಿಂದೂಗಳು ಮತಾಂತರವಾಗಿ ಕ್ರೈಸ್ತ ಧರ್ಮವನ್ನು ಸ್ವೀಕರಿಸಿದರು. ಅದರಲ್ಲಿ ಓರ್ವ ಯುವಕನ ತಂದೆಯು ತಮ್ಮ ಆಸ್ತಿಗೆ ವಾರಸ್ಸುದಾರಿಕೆ ನೀಡಲು ನಿರಾಕರಿಸಿದರು. ಅದೇರೀತಿ ಪೊಲೀಸ್ ಠಾಣೆಯಲ್ಲಿ ಆರ್ಸೆಲ್ ತಿರ್ಕೀ ಎಂಬ ಕ್ರೈಸ್ತ ಮಿಷನರಿಯ ವಿರುದ್ಧ ದೂರನ್ನು ದಾಖಲಿಸಿದರು.

ಜಶಪುರ (ಛತ್ತೀಸಗಡ) ಇಲ್ಲಿ ಗುಡ್ಡದ ಮೇಲಿರುವ ಶಿವನ ದೇವಸ್ಥಾನದಲ್ಲಿನ ಸ್ವಯಂಭೂ ಶಿವಲಿಂಗವು ಅಜ್ಞಾತರಿಂದ ಧ್ವಂಸ

ಇಲ್ಲಿಯ ಮಾಧೇಶ್ವರ ಗುಡ್ಡದ ಮೇಲಿರುವ ಶಿವನ ದೇವಸ್ಥಾನದ ಶಿವಲಿಂಗವನ್ನು ಅಜ್ಞಾತ ದುಷ್ಕರ್ಮಿಗಳು ಧ್ವಂಸ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಇದರ ಬಗ್ಗೆ ಪಂಚಾಯ್ತಿ ಅಧ್ಯಕ್ಷರು ಹಾಗೂ ಗ್ರಾಮಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ.

ದ್ರಮುಕನ ಸಂಸದ ಟಿ. ಆರ್. ಬಾಲೂ ಇವರಿಂದ ಪ್ರಧಾನಿ ಮೋದಿಯವರಲ್ಲಿ ಆಗ್ರಹ

ತಮಿಳುನಾಡಿನ ದ್ರಮುಕ ಪಕ್ಷದ ಲೋಕಸಭೆಯ ಸಂಸದ ಟಿ. ಆರ್. ಬಾಲುರವರು ‘ಸೇತುಸಮುದ್ರಮ್ ಯೋಜನೆ’ಯನ್ನು ಪುನಃ ಪ್ರಾರಂಭಿಸಲಿ, ಎಂದು ಪತ್ರ ಬರೆಯುವ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿಯವರಲ್ಲಿ ಆಗ್ರಹಿಸಿದ್ದಾರೆ. ಬಾಲೂರವರು ಪತ್ರದಲ್ಲಿ, ‘ರಾಜ್ಯದ ಜನತೆಯಲ್ಲಿ ಸೇತುಸಮುದ್ರಮ್ ಯೋಜನೆ ವಿಷಯದಲ್ಲಿ ಚಿಂತೆಯಿದೆ.

ಬಾಂಗ್ಲಾದೇಶದ ೨೦೦ ವರ್ಷಗಳಷ್ಟು ಪ್ರಾಚೀನ ಶಿವನ ದೇವಸ್ಥಾನದ ಭೂಮಿಯನ್ನು ಕಬಳಿಸಲು ಬೇಲಿಯನ್ನು ಧ್ವಂಸ ಮಾಡಿದ ಮತಾಂಧರು

ಮತಾಂಧರು ಇಲ್ಲಿಯ ದಿಘಿರಜನ ಗ್ರಾಮದಲ್ಲಿ ೨೦೦ ವರ್ಷಗಳ ಪ್ರಾಚೀನ ಶಿವನ ದೇವಸ್ಥಾನದ ಹತ್ತಿರದ ಬಿದಿರಿನ ಬೇಲಿಯನ್ನು ಮುರಿದಿದ್ದಾರೆ. ಇದನ್ನು ವೈಯಕ್ತಿಕ ಭೂಮಿಯಲ್ಲಿ ಕಟ್ಟಲಾಗಿದೆ. ಒಂದು ವಿಡಿಯೋ ಸಾಮಾಜಿಕ ಪ್ರಸಾರ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದು ಅದರಲ್ಲಿ ಮತಾಂಧರು ಬೇಲಿಯನ್ನು ಮುರಿಯುತ್ತಿರುವುದು ಕಂಡುಬರುತ್ತಿದೆ.