ಚೀನಾದ ವಿರುದ್ಧ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಸಹಾಯ ಮಾಡುತ್ತಾರೆಂದು ಖಚಿತವಾಗಿ ಹೇಳಲಾಗದು ! – ಜಾನ್ ಬೊಲ್ಟನ್, ಅಮೇರಿಕಾದ ಮಾಜಿ ರಾಷ್ಟ್ರೀಯ ಸುರಕ್ಷೆಯ ಸಲಹೆಗಾರ

ಸರಕಾರವು ಇದನ್ನು ಗಮನದಲ್ಲಿಟ್ಟುಕೊಂಡು ಈಗಲಾದರೂ ತಮ್ಮ ಬಲದಿಂದ ಎಲ್ಲ ಶತ್ರುಗಳ ಸರ್ವನಾಶ ಮಾಡಲು ಸಿದ್ಧರಿರುವುದು ಅಪೇಕ್ಷಿತವಿದೆ !

ಜಾನ್ ಬೊಲ್ಟನ್

ವಾಶಿಂಗ್ಟನ್ – ಚೀನಾದ ವಿರುದ್ಧ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಸಹಾಯ ಮಾಡುವರು, ಎಂಬುದನ್ನು ಖಚಿತವಾಗಿ ಹೇಳಲಾಗದು, ಎಂದು ಅಮೇರಿಕಾದ ಮಾಜಿ ರಾಷ್ಟ್ರೀಯ ಸುರಕ್ಷೆಯ ಸಲಹೆಗಾರ ಜಾನ್ ಬೊಲ್ಟನ್ ಇವರು ಒಂದು ವಾರ್ತಾವಾಹಿನಿಯಲ್ಲಿ ಮಾತನಾಡುತ್ತಾ ಹೇಳಿದ್ದಾರೆ. ಬೋಲ್ಟ್ ಇವರು ಎಪ್ರಿಲ್ ೨೦೧೮ ರಿಂದ ಸೆಪ್ಟೆಂಬರ್ ೨೦೧೯ ಈ ಕಾಲಾವಧಿಯಲ್ಲಿ ಟ್ರಂಪ್ ಸರಕಾರದಲ್ಲಿ ಮುಖ್ಯ ಭದ್ರತಾ ಸಲಹೆಗಾರರಾಗಿದ್ದರು. ಅಮೇರಿಕಾದ ರಾಷ್ಟ್ರಾಧ್ಯಕ್ಷ ಟ್ರಂಪ್ ಇವರು ‘ಭಾರತ ಹಾಗೂ ಚೀನಾದ ನಡುವಿನ ಉದ್ವಿಗ್ನಸ್ಥಿತಿಯಲ್ಲಿ ಭಾರತಕ್ಕೆ ಸಹಾಯ ಮಾಡುವರು’ ಎಂದು ನೀಡಿದ ಹೇಳಿಕೆಯ ಹಿನ್ನೆಲೆಯಲ್ಲಿ ಬೋಲ್ಟ ಇವರು ಮೇಲಿನ ಹೇಳಿಕೆ ನೀಡಿದ್ದರು.

ಬೋಲ್ಟ್ ಇವರು ತಮ್ಮ ಮಾತನ್ನು ಮುಂದುವರೆಸುತ್ತ, ‘ಚೀನಾವು ತನ್ನ ಗಡಿಯಲ್ಲಿ ಬರುವ ದೇಶಗಳೊಂದಿಗೆ ಗಡಿ ವಿಷಯದಲ್ಲಿ ಆಕ್ರಮಣಕಾರಿ ನಿಲುವನ್ನು ತೆಗೆದುಕೊಳ್ಳುತ್ತಿದೆ. ಭಾರತ, ಜಪಾನ ಹಾಗೂ ಇತರ ದೇಶಗಳೊಂದಿಗೆ ಚೀನಾದ ಸಂಬಂಧವು ಹಾಳಾಗಿದೆ. ಟ್ರಂಪ್ ಇವರು ಚೀನಾದೊಂದಿಗಿನ ಸಂಬಂಧವನ್ನು ವ್ಯಾಪಾರದ ದೃಷ್ಟಿಯಿಂದ ನೋಡುತ್ತಿದ್ದಾರೆ. ಟ್ರಂಪ್ ಇವರು ನವೆಂಬರ್‌ನಲ್ಲಿ ಚುನಾವಣೆಯ ನಂತರ ಏನು ಮಾಡುವರು ?, ಎಂಬುದು ಹೇಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಒಂದುಪಕ್ಷ ಚೀನಾದೊಂದಿಗೆ ವ್ಯಾಪಾರ ವಹಿವಾಟನ ಮೇಲೆ ಹೆಚ್ಚು ಗಮನ ನೀಡುವ ಸಾಧ್ಯತೆಗಳಿವೆ. ಮುಂಬರುವ ೪ ತಿಂಗಳು ಟ್ರಂಪ್‌ಗಾಗಿ ಅತ್ಯಂತ ಮಹತ್ವದ್ದಾಗಿದೆ. ಆದ್ದರಿಂದ ಚುನಾವಣೆಯಲ್ಲಿ ತೊಂದರೆಯಾಗುವಂತಹ ನಿರ್ಧಾರವನ್ನು ತೆಗೆದುಕೊಳ್ಳುವುದಿಲ್ಲ. ಕೊರೋನಾದಿಂದಾಗಿ ಟ್ರಂಪ್ ಇವರಿಗೆ ಅಡಚಣೆ ಹೆಚ್ಚಾಗಿದೆ’ ಎಂದು ಹೇಳಿದರು.