ಪಾಕಿಸ್ತಾನದ ಸೈದಪುರದಲ್ಲಿಯ ಪ್ರಾಚೀನ ರಾಮಮಂದಿರದಲ್ಲಿ ಹಿಂದೂಗಳಿಗೆ ಪೂಜೆ ಅರ್ಚನೆ ಮಾಡಲು ನಿರ್ಬಂಧ !

  • ಇಸ್ಲಾಮಿ ದೇಶದಲ್ಲಿ ಹಿಂದೂಗಳ ದೇವಸ್ಥಾನದ ದುರ್ಗತಿ ತಿಳಿದುಕೊಳ್ಳಿ ! ಇದರ ಬಗ್ಗೆ ಒಬ್ಬಾನೊಬ್ಬ ಪ್ರಗತಿ(ಅಧೋಗತಿ)ಪರ, ಮಾನವಧಿಕಾರದವರು, ಪ್ರಸಾರ ಮಾಧ್ಯಮಗಳು ಇತ್ಯಾದಿಯವರು ಏಕೆ ಬಾಯಿ ಬಿಡುತ್ತಿಲ್ಲ ?
  • ಪಾಕಿಸ್ತಾನ ಹಾಗೂ ಬಾಂಗ್ಲಾದೇಶದಲ್ಲಿಯ ಅಲ್ಪಸಂಖ್ಯಾತ ಹಿಂದೂಗಳ ಹಾಗೂ ಶ್ರದ್ಧಾಸ್ಥಾನಗಳ ರಕ್ಷಣೆಯನ್ನು ಮಾಡದಿರುವುದು, ಇದು ಕಳೆದ ೭೨ ವರ್ಷಗಳಿಂದ ಇಲ್ಲಿಯವರೆಗಿನ ಸರಕಾರಗಳಿಗೆ ನಾಚಿಕೆಯ ವಿಷಯವಾಗಿದೆ. ಈ ಸ್ಥಿತಿಯನ್ನು ಬದಲಾಯಿಸಲು ಹಿಂದೂ ರಾಷ್ಟ್ರವೇ ಬೇಕು !

ಮಂದಿರದ ರಕ್ಷಕರೂ ಮುಸಲ್ಮಾನರೇ !

ಸದ್ಯ ಈ ದೇವಸ್ಥಾನದಲ್ಲಿ ಒಂದೂ ಮೂರ್ತಿ ಅಸ್ತಿತ್ವದಲ್ಲಿಲ್ಲ !

ಇಸ್ಲಾಮಾಬಾದ್ – ಇಲ್ಲಿಯ ಸೈದಪುರ ಈ ಗ್ರಾಮದಲ್ಲಿ ಮರ್ಗಲ್ಲಾಹ ಗುಡ್ಡದ ಅಡಿಯಲ್ಲಿರುವ ಒಂದು ಪ್ರಾಚೀನ ರಾಮನ ದೇವಸ್ಥಾನದಲ್ಲಿ ಹಿಂದೂಗಳಿಗೆ ಪೂಜೆ-ಅರ್ಚನೆ ಮಾಡಲು ನಿರ್ಬಂಧ ಹೇರಿದೆ. ಈ ದೇವಸ್ಥಾನದ ದರ್ಶನಕ್ಕಾಗಿ ಭಕ್ತಾದಿಗಳು ದೂರದಿಂದ ಬರುತ್ತಾರೆ; ಆದರೆ ಅವರಿಗೆ ಪೂಜೆ ಮಾಡಲು ಆಗದೇ ಮರಳಿ ಹೋಗಬೇಕಾಗುತ್ತಿದೆ.

೧. ೧೪ ವರ್ಷ ವನವಾಸದಲ್ಲಿದ್ದ ಭಗವಾನ ಶ್ರೀರಾಮ, ಸೀತಾಮಾತೆ ಹಾಗೂ ಶ್ರೀ ಲಕ್ಷ್ಮಣರು ಇಲ್ಲೇ ವಾಸವಾಗಿದ್ದರು. ಆದ್ದರಿಂದ ಈ ದೇವಸ್ಥಾನಕ್ಕೆ ವಿಶೇಷ ಮಹತ್ವವಿದೆ.

೨. ಈ ಪವಿತ್ರ ಸ್ಥಳದಲ್ಲಿ ರಾಜಾ ಮಾನಸಿಂಹರು ೧೫೮೦ ರ ಸರಿಸುಮಾರು ರಾಮಮಂದಿರವನ್ನು ನಿರ್ಮಿಸಿದ್ದರು.

೩. ಇಲ್ಲಿ ಒಂದು ಸುಂದರವಾದ ರಾಮಕುಂಡ ಅಸ್ತಿತ್ವದಲ್ಲಿತ್ತು. ಭಗವಾನ ಶ್ರೀರಾಮನು ಈ ಕೊಳದಲ್ಲಿನ ನೀರನ್ನು ಸೇವಿಸಿದ್ದನು. ೧೮೯೩ ರ ತನಕ ಪ್ರತಿವರ್ಷ ಇದೇ ರಾಮಕುಂಡದ ಬಳಿ ಜಾತ್ರೆ ಇರುತ್ತಿತ್ತು. ಸದ್ಯ ಈ ಪ್ರಾಚೀನ ರಾಮಕುಂಡವು ದುರ್ಗಂಧದಿಂದ ಕೂಡಿದ ಕಾಲುವೆಯಾಗಿ ರೂಪಾಂತರವಾಗಿದೆ.

೪. ವಿಭಜನೆಯ ನಂತರ ದೇವಸ್ಥಾನವನ್ನು ಪಾಕಿಸ್ತಾನವು ತನ್ನ ವಶದಲ್ಲಿ ತೆಗೆದುಕೊಂಡಿದ್ದು ಅಲ್ಲಿ ಹಿಂದೂಗಳಿಗೆ ಪೂಜೆ-ಅರ್ಚನೆ ಮಾಡಲು ಬಿಡುತ್ತಿಲ್ಲ.

೫. ೧೯೬೦ ರಲ್ಲಿ ಪಾಕಿಸ್ತಾನದಲ್ಲಿ ಹಿಂದೂದ್ವೇಷಿ ಸರಕಾರವು ಈ ದೇವಸ್ಥಾನವನ್ನು ಹೆಣ್ಣುಮಕ್ಕಳ ಶಾಲೆಯನ್ನಾಗಿ ರೂಪಾಂತರಿಸಿದರು. ಇದಕ್ಕೆ ಹಿಂದೂಗಳು ತೀವ್ರವಾಗಿ ವಿರೋಧಿಸಿದಾಗ ೨೦೦೬ ರಲ್ಲಿ ಈ ಶಾಲೆಯನ್ನು ಬೇರೆ ಕಡೆ ಸ್ಥಳಾಂತರಿಸಿ ಈ ದೇವಸ್ಥಾನವನ್ನು ಸಂಪೂರ್ಣ ಖಾಲಿ ಮಾಡಲಾಯಿತು.

೬. ಪಾಕಿಸ್ತಾನ ಸರಕಾರವು ೨೦೦೮ ರಲ್ಲಿ ಈ ರಾಮಮಂದಿರವನ್ನು ‘ಸ್ಮಾರಕ ಸ್ಥಳ’ ಎಂದು ಘೋಷಿಸಿ ಈ ದೇವಸ್ಥಾನದ ಜೀರ್ಣೋದ್ಧಾರದ ಕಾರ್ಯವನ್ನು ಆರಂಭಿಸಿತು. ವಿಶೇಷವೆಂದರೆ ಈ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡುವಾಗ ದೇವಸ್ಥಾನದಲ್ಲಿದ್ದ ಮೂರ್ತಿಗಳನ್ನು ತೆಗೆದುಹಾಕಲಾಯಿತು. ಸದ್ಯ ಈ ದೇವಸ್ಥಾನದಲ್ಲಿ ಒಂದೂ ಮೂರ್ತಿ ಅಸ್ತಿತ್ವದಲ್ಲಿ ಇಲ್ಲ. ಆ ಸಮಯದಿಂದ ಈ ಗ್ರಾಮ ಸೈದಪುರ ಹೆಸರಿನಿಂದ ಗುರುತಿಸಲಾಗುತ್ತಿದೆ.

೭. ತದನಂತರ ಇಲ್ಲಿ ಅನೇಕ ಮಾಂಸಾಹಾರ ಹೋಟೆಲ್, ಅದೇರೀತಿ ಕರಕುಶಲದ ಅಂಗಡಿಗಳನ್ನು ಆರಂಭಿಸಲಾಗಿದೆ.

೮. ಈ ದೇವಸ್ಥಾನದ ಪರಿಸರದಲ್ಲಿ ಒಂದು ಧರ್ಮಶಾಲೆಯನ್ನು ನಿರ್ಮಿಸಲಾಗಿದ್ದು, ಈಗ ಅದನ್ನು ಸಾರ್ವಜನಿಕ ಶೌಚಾಲಯವಾಗಿ ಉಪಯೋಗಿಸಲಾಗುತ್ತಿದೆ.

೩ ಸಾವಿರ ಹಿಂದೂಗಳಿಗಾಗಿ ಒಂದೂ ದೇವಸ್ಥಾನ ಇಲ್ಲ ! – ಸವಾಯಿ ಲಾಲ್, ಹಿಂದೂ ಕಾರ್ಯಕರ್ತ

ಪಾಕಿಸ್ತಾನದಲ್ಲಿಯ ಹಿಂದೂ ಕಾರ್ಯಕರ್ತ ಶ್ರೀ. ಸವಾಯಿ ಲಾಲ್ ಅವರು ಮಾತನಾಡುತ್ತ, “ಇಸ್ಲಾಮಾಬಾದನಲ್ಲಿ ೩ ಸಾವಿರ ಹಿಂದೂಗಳು ಇದ್ದಾರೆ; ಆದರೆ ಹಿಂದೂಗಳಿಗಾಗಿ ಒಂದೂ ದೇವಸ್ಥಾನ ಇಲ್ಲ. (ಹಿಂದೂ ಬಹುಸಂಖ್ಯಾತ ಭಾರತದಲ್ಲಿ ಮಾತ್ರ ಕೈಬೆರಳೆಣಿಕೆಯಷ್ಟು ಅಲ್ಪಸಂಖ್ಯಾತರಿಗಾಗಿ ದೊಡ್ಡ ದೊಡ್ಡ ಪ್ರಾರ್ಥನಾಸ್ಥಳಗಳಿದ್ದು ಅದರಿಂದ ಕರ್ಕಶವಾದ ಧ್ವನಿ ಬರುವ ಕಾನೂನುಬಾಹಿರ ಬೋಂಗಾಗಳನ್ನು ಹಾಕಿರುತ್ತಾರೆ ! – ಸಂಪಾದಕರು) ಸರಕಾರವು ಇಲ್ಲಿ ಅಸ್ತಿತ್ವದಲ್ಲಿರುವ ರಾಮಮಂದಿರದ ಪರಿಸರದಲ್ಲಿ ಹೊಟೆಲ್ ಹಾಗೂ ಅಂಗಡಿ ಮುಗ್ಗಟ್ಟುಗಳನ್ನು ತೆರೆಯಲಾಗಿದ್ದು ಈ ದೇವಸ್ಥಾನದ ಪಾವಿತ್ರತೆಯನ್ನು ಭಂಗ ಮಾಡಿದ್ದಾರೆ” ಎಂದು ಹೇಳಿದರು.

೧,೨೮೮ ಹಿಂದೂ ದೇವಸ್ಥಾನಗಳಲ್ಲಿ ಕೇವಲ ೩೧ ದೇವಸ್ಥಾನದಲ್ಲಿ ಹಿಂದೂಗಳಿಗೆ ದರ್ಶನದ ಅನುಮತಿ ! – ಪಾಕಿಸ್ತಾನ ಹಿಂದೂ ಕೌನ್ಸಿಲ್

‘ಪಾಕಿಸ್ತಾನ ಹಿಂದೂ ಕೌನ್ಸಿಲ್’ನ ರಕ್ಷಣಾ ಮುಖ್ಯಸ್ಥರಾದ ರಮೇಶ ಕುಮಾರ ವಾಂಕವಾನಿಯವರು ಮಾತನಾಡುತ್ತ, “ಸದ್ಯ ಇಲ್ಲಿ ೧,೨೮೮ ದೇವಸ್ಥಾನಗಳ ನೋಂದಣಿ ಇದೆ; ಆದರೆ ಇದರ ಪೈಕಿ ಕೇವಲ ೩೧ ದೇವಸ್ಥಾನಗಳಲ್ಲಿ ಹಿಂದೂಗಳಿಗೆ ದರ್ಶನಕ್ಕಾಗಿ ಅನುಮತಿಯನ್ನು ನೀಡಿದೆ. ಸರಕಾರವು ನಮಗೆ ಈ ಪ್ರಾಚೀನ ರಾಮಮಂದಿರದ ಜೀರ್ಣೋದ್ಧಾರಕ್ಕಾಗಿ ಅನುಮತಿಯನ್ನು ನೀಡಬೇಕು” ಎಂದು ಹೇಳಿದೆ.  ಭಜನೆಯ ನಂತರ ಪಾಕಿಸ್ತಾನವನ್ನು ಬಿಟ್ಟು ಭಾರತಕ್ಕೆ ಬಂದಿರುವ ಜನರ ಸ್ವತ್ತಿನ ರಕ್ಷಣೆಯ ಜವಾಬ್ದಾರಿಯು ‘ಪಾಕಿಸ್ತಾನ ಹಿಂದೂ ಕೌನ್ಸಿಲ್’ ಬಳಿ ಇದೆ.