ಕರ್ನಾಟಕ ರಾಜ್ಯ ಭಾಜಪ ಸರಕಾರ ಶೀಘ್ರದಲ್ಲೇ ಗೋಹತ್ಯಾ ನಿಷೇಧ ಕಾನೂನನ್ನು ಜಾರಿಗೆ ತರಲಿದೆ

ವಾಸ್ತವದಲ್ಲಿ ಕೇಂದ್ರದಲ್ಲಿರುವ ಭಾಜಪ ಸರಕಾರವೇ ಸಂಪೂರ್ಣ ದೇಶದಲ್ಲಿ ಈ ಕಾನೂನನ್ನು ತರುವುದು ಹಾಗೂ ಅದನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವುದು ಅಪೇಕ್ಷಿತವಿದೆ

ಇಂದು ದೇಶದ ಅನೇಕ ರಾಜ್ಯಗಳಲ್ಲಿ ಗೋಹತ್ಯೆ ನಿಷೇಧ ಕಾನೂನು ಅಸ್ತಿತ್ವದಲ್ಲಿದೆ; ಆದರೆ ಅದರ ಕಟ್ಟುನಿಟ್ಟಾಗಿ ಪಾಲನೆ ಆಗುತ್ತಿಲ್ಲದ್ದರಿಂದ ಗೋಹತ್ಯೆ ಹಾಗೂ ಗೋಮಾಂಸದ ಮಾರಾಟ ಸರಾಗವಾಗಿ ಆಗುತ್ತಿದೆ. ಈ ರೀತಿಯ ಕಾನೂನು ಇರುವ ರಾಜ್ಯಗಳಲ್ಲಿ ಇಂದಿಗೂ ಗೋರಕ್ಷಕರು ಗೋರಕ್ಷಣೆಗಾಗಿ ರಸ್ತೆಗೆ ಇಳಿಯಬೇಕಾಗುತ್ತದೆ. ಗೋರಕ್ಷಕರು ನೀಡಿದ ಮಾಹಿತಿಗನುಸಾರ ಪೊಲೀಸರು ಕ್ರಮ ಕೈಗೊಳ್ಳುತ್ತಿದ್ದಾರೆ; ಆದರೆ ಪೊಲೀಸರು ಸ್ವತಃ ಕ್ರಮ ಕೈಗೊಂಡಿರುವ ಬಗ್ಗೆ ಎಲ್ಲಿಯೂ ಕೇಳಿ ಬಂದಿಲ್ಲ. ಕರ್ನಾಟಕದಲ್ಲಿಯೂ ಕಾನೂನು ಬಂದ ಮೇಲೆ ಈ ರೀತಿಯಲ್ಲಿ ಆಗಬಾರದು, ಅದಕ್ಕಾಗಿ ಸರಕಾರವು ಪ್ರಯತ್ನ ಮಾಡಬೇಕಿದೆ !

ಬೆಂಗಳೂರು – ಕರ್ನಾಟಕದಲ್ಲಿ ಶೀಘ್ರದಲ್ಲೇ ಗೋಹತ್ಯೆ, ಗೋಮಾಂಸ ಮಾರಾಟ, ಕಸಾಯಿಖಾನೆಗಾಗಿ ಗೋವುಗಳ ಸಾಗಾಟ ಹಾಗೂ ಮಾರಾಟದ ಮೇಲೆ ನಿರ್ಬಂಧ ಹೇರಲಿದೆ, ಎಂಬ ಮಾಹಿತಿಯನ್ನು ಪಶುಸಂಗೋಪಾಸನೆ ರಾಜ್ಯ ಸಚಿವ ಪ್ರಭು ಚೌಹಾಣ ಇವರು ನೀಡಿದರು. ಭಾಜಪ ತನ್ನ ಚುನಾವಣೆಯ ಪ್ರಣಾಳಿಕೆಯಲ್ಲಿ ಗೋ ಹತ್ಯಾ ನಿಷೇಧ ಮಾಡುವ ಆಶ್ವಾಸನೆಯನ್ನು ನೀಡಿತ್ತು. ೨೦೧೦ ರಲ್ಲಿ ಭಾಜಪ ಸರಕಾರ ಇರುವಾಗ ಗೋಹತ್ಯಾನಿಷೇಧದ ಮಸೂದೆಯನ್ನು ಜಾರಿಗೆ ತಂದಿತ್ತು. ಆದರೆ ೨೦೧೩ ರಲ್ಲಿ ಕಾಂಗ್ರೆಸ್ ಸರಕಾರ ಬಂದನಂತರ ಅದನ್ನು ಹಿಂಪಡೆದಿತ್ತು. (ಇದುವೇ ಕಾಂಗ್ರೆಸ್ಸಿನ ನೈಜರೂಪ ! – ಸಂಪಾದಕರು)
ಚೌಹಾಣ ತಮ್ಮ ಮಾತನ್ನು ಮುಂದುವರೆಸುತ್ತ, ‘ಕೊರೋನಾದ ವಿಪತ್ತು ದೂರವಾದ ನಂತರ ಕೂಡಲೇ ಗೋಹತ್ಯೆಯ ಮೇಲೆ ನಿಷೇಧ ಹೇರಲು ತಜ್ಞರ ಸಮಿತಿಯನ್ನು ಸ್ಥಾಪಿಸಲಾಗುವುದು. (ಅದಕ್ಕಾಗಿ ಕೊರೋನಾದ ವಿಪತ್ತು ದೂರವಾಗುವ ತನಕ ಏಕೆ ಕಾಯಬೇಕು ? ಈಗಲೂ ಈ ರೀತಿಯ ಸಮಿತಿಯನ್ನು ಸ್ಥಾಪಿಸಬಹುದು ! – ಸಂಪಾದಕರು) ಇದರ ಬಗ್ಗೆ ಮುಖ್ಯಮಂತ್ರಿಯವರಲ್ಲಿ ಚರ್ಚೆ ಮಾಡಲಾಗುವುದು’ ಎಂದು ಹೇಳಿದ್ದಾರೆ.