ದ್ರಮುಕನ ಸಂಸದ ಟಿ. ಆರ್. ಬಾಲೂ ಇವರಿಂದ ಪ್ರಧಾನಿ ಮೋದಿಯವರಲ್ಲಿ ಆಗ್ರಹ

‘ಸೇತುಸಮುದ್ರಮ್ ಪ್ರಕಲ್ಪವನ್ನು ಪುನಃ ಪ್ರಾರಂಭಿಸ ಬೇಕು’ (ಅಂತೆ)!

ರಾಮಸೇತುವನ್ನು ಧ್ವಂಸ ಮಾಡಿ ಸೇತುಸಮುದ್ರಮ್ ಪ್ರಕಲ್ಪವನ್ನು ಕಟ್ಟುವ ಬೇಡಿಕೆಯನ್ನು ಪ್ರಧಾನ ಮಂತ್ರಿಗಳು ಖಂಡಿತವಾಗಿಯೂ ತಳ್ಳಿ ಹಾಕುತ್ತಾರೆ, ಎಂಬುದರ ಬಗ್ಗೆ ಯಾವುದೇ ಸಂದೇಹವಿಲ್ಲ !

ದ್ರಮುಕನ ಸಂಸದ ಟಿ. ಆರ್. ಬಾಲೂ

ಚೆನ್ನೈ (ತಮಿಳುನಾಡು)- ತಮಿಳುನಾಡಿನ ದ್ರಮುಕ ಪಕ್ಷದ ಲೋಕಸಭೆಯ ಸಂಸದ ಟಿ. ಆರ್. ಬಾಲುರವರು ‘ಸೇತುಸಮುದ್ರಮ್ ಯೋಜನೆ’ಯನ್ನು ಪುನಃ ಪ್ರಾರಂಭಿಸಲಿ, ಎಂದು ಪತ್ರ ಬರೆಯುವ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿಯವರಲ್ಲಿ ಆಗ್ರಹಿಸಿದ್ದಾರೆ.

ಬಾಲೂರವರು ಪತ್ರದಲ್ಲಿ, ‘ರಾಜ್ಯದ ಜನತೆಯಲ್ಲಿ ಸೇತುಸಮುದ್ರಮ್ ಯೋಜನೆ ವಿಷಯದಲ್ಲಿ ಚಿಂತೆಯಿದೆ. ದ್ರಮುಕ ಪಕ್ಷದ ವತಿಯಿಂದ ಜನರ ಮನಸ್ಸಿನಲ್ಲಿರುವ ಈ ಚಿಂತೆಯನ್ನು ನಿಮ್ಮ ತನಕ ನಾನು ತಲುಪಿಸಲು ಇಚ್ಛಿಸುತ್ತೇನೆ. ನಾನು ನಿಮ್ಮಲ್ಲಿ ವಿನಂತಿಸುವುದೇನೆಂದರೆ, ಈ ಯೋಜನೆಯನ್ನು ಧೈರ್ಯವಾಗಿ ಅರ್ಥ ಮಾಡಿಕೊಂಡು ಅದನ್ನು ಮಾಡುವ ವಿಚಾರ ಮಾಡಿರಿ’ ಎಂದು ಹೇಳಿದ್ದಾರೆ.

ಏನಿದು ಸೇತುಸಮುದ್ರಮ್ ಯೋಜನೆ ?

ತಮಿಳುನಾಡಿನ ರಾಮೇಶ್ವರಮ್‌ನಿಂದ ಶ್ರೀಲಂಕಾದ ಮನ್ನಾರ್‌ನ ದ್ವೀಪದವರೆಗೂ ‘ರಾಮಸೇತುವೆ’ ಎಂದು ಕರೆಯುತ್ತೇವೆ, ಇತರ ದೇಶದವರು ಅದನ್ನು ‘ಆಡಮ್ಸ್ ಬ್ರಿಡ್ಜ್ ಎಂದು ಹೇಳುತ್ತಾರೆ. ಇಲ್ಲಿನ ಸಮುದ್ರದಲ್ಲಿ ಆಳ ಕಡಿಮೆಯಾಗಿದೆ. ಆದ್ದರಿಂದ ದೊಡ್ಡ ನೌಕೆಗಳ ಸಾರಿಗೆಗೆ ಅಡಚಣೆಯಾಗುತ್ತಿದೆ. ೨೦೦೫ ರಲ್ಲಿ ಆಗಿನ ಕಾಂಗ್ರೆಸ್ ಸರಕಾರವು ಈ ಮಾರ್ಗದಲ್ಲಿ ನೌಕೆಗಳು ಸಹಜವಾಗಿ ಹೋಗಲು ಆಗಲಿ ಎಂಬುದಕ್ಕಾಗಿ ‘ಸೇತುಸಮುದ್ರಮ್ ಯೋಜನೆ’ಯನ್ನು ಘೋಷಿಸಿತ್ತು. ಅದಕ್ಕಾಗಿ ರಾಮಸೇತುವೆಯ ಕೆಲವು ಭಾಗಗಳನ್ನು ಧ್ವಂಸ ಮಾಡಬೇಕಾಗಿತ್ತು. ಇದರ ಬಗ್ಗೆ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದಾಗ ಈ ಯೋಜನೆಗೆ ತಡೆ ನೀಡಲಾಯಿತು.