ಬಾಂಗ್ಲಾದೇಶದ ೨೦೦ ವರ್ಷಗಳಷ್ಟು ಪ್ರಾಚೀನ ಶಿವನ ದೇವಸ್ಥಾನದ ಭೂಮಿಯನ್ನು ಕಬಳಿಸಲು ಬೇಲಿಯನ್ನು ಧ್ವಂಸ ಮಾಡಿದ ಮತಾಂಧರು

ಬಾಂಗ್ಲಾದೇಶದಲ್ಲಿ ಅಸುರಕ್ಷಿತ ಹಿಂದೂಗಳ ದೇವಸ್ಥಾನ !

ಪಿರೊಜಪುರ (ಬಾಂಗ್ಲಾದೇಶ) – ಮತಾಂಧರು ಇಲ್ಲಿಯ ದಿಘಿರಜನ ಗ್ರಾಮದಲ್ಲಿ ೨೦೦ ವರ್ಷಗಳ ಪ್ರಾಚೀನ ಶಿವನ ದೇವಸ್ಥಾನದ ಹತ್ತಿರದ ಬಿದಿರಿನ ಬೇಲಿಯನ್ನು ಮುರಿದಿದ್ದಾರೆ. ಇದನ್ನು ವೈಯಕ್ತಿಕ ಭೂಮಿಯಲ್ಲಿ ಕಟ್ಟಲಾಗಿದೆ. ಒಂದು ವಿಡಿಯೋ ಸಾಮಾಜಿಕ ಪ್ರಸಾರ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದು ಅದರಲ್ಲಿ ಮತಾಂಧರು ಬೇಲಿಯನ್ನು ಮುರಿಯುತ್ತಿರುವುದು ಕಂಡುಬರುತ್ತಿದೆ. ಈ ಭೂಮಿಯನ್ನು ಕಬಳಿಸಲು ಬಿದರಿನ ಬೇಲಿಯನ್ನು ಮುರಿಯಲಾಯಿತು. ಈ ಭೂಮಿ ಪ್ರೊ. ದ್ರಿಪನ ಮಝುಮದಾರ ಇವರದ್ದಾಗಿದ್ದು ಅವರು ಅಲ್ಲಿಯ ಒಂದು ಮಹಾವಿದ್ಯಾಲಯದಲ್ಲಿ ಪ್ರಾಚಾರ್ಯರಾಗಿದ್ದಾರೆ. ಅದೇರೀತಿ ‘ಹಿಂದೂ-ಬುದ್ಧ-ಈಸಾಯಿ ಏಕತಾ ಕೌನ್ಸಿಲ್’ನ ಉಪಾಧ್ಯಕ್ಷರಾಗಿದ್ದಾರೆ.