ಉತ್ತರಾಖಂಡದ ಪ್ರವಾಸೋದ್ಯಮ ಸಚಿವರಾದ ಸತಪಾಲ್ ಮಹಾರಾಜರು ಚೀನಾದ ರಾಷ್ಟ್ರಪತಿ ಶೀ ಜಿನಪಿಂಗ್‌ರವರಿಗೆ ಉಡುಗೊರೆಯಾಗಿ ರಾಮಾಯಣ ನೀಡಿದರು !

ಉತ್ತರಾಖಂಡದ ಪ್ರವಾಸೋದ್ಯಮ ಸಚಿವರಾದ ಸತಪಾಲ್ ಮಾಹಾರಜರವರು ಚೀನಾದ ರಾಷ್ಟ್ರಪತಿ ಶೀ ಜಿನಪಿಂಗ್‌ರವರಿಗೆ ರಾಮಾಯಣ ಗ್ರಂಥದ ಆಂಗ್ಲ ಭಾಷೆಯ ಪ್ರತಿಯನ್ನು ಕಳುಹಿಸಿದ್ದಾರೆ. ಸತಪಾಲ್ ಮಹಾರಾಜರು, ‘ಗಲ್ವಾನ್ ಕಣಿವೆಯಲ್ಲಿ ವಿಸ್ತಾರವಾದಿ ಚೀನಾದ ಸೈನಿಕರು ನಿಶಸ್ತ್ರ ಭಾರತೀಯ ಸೈನಿಕರ ಮೇಲೆ ದಾಳಿ ನಡೆಸಿದ್ದು ಖಂಡನೀಯವಾಗಿದೆ.

ಅಸ್ಸಾಮ್‌ನಲ್ಲಿ ‘ಬೇಗಮ್ ಜಾನ್ ಈ ಧಾರಾವಾಹಿಯಲ್ಲಿ ‘ಲವ್ ಜಿಹಾದ್ ಗೆ ಪ್ರೋತ್ಸಾಹ ಸಿಗುತ್ತಿರುವುದರಿಂದ ಅದನ್ನು ನಿಲ್ಲಿಸುವಂತೆ ಹಿಂದುತ್ವನಿಷ್ಠ ಸಂಘಟನೆಯ ಆಗ್ರಹ

ಇಲ್ಲಿನ ಆಸಾಮೀ ಭಾಷೆಯಲ್ಲಿ ಖಾಸಗಿ ದೂರದರ್ಶನವಾಹಿನಿಗಳಲ್ಲಿ ‘ರೆಂಗೋನಿಯ ಮೇಲೆ ಪ್ರಸಾರಗೊಳ್ಳುತ್ತಿರುವ ‘ಬೇಗಮ್ ಜಾನ್ ಎಂಬ ಹೆಸರಿನ ಧಾರಾವಾಹಿಯಲ್ಲಿ ‘ಲವ್ ಜಿಹಾದ್ಗೆ ಪ್ರೋತ್ಸಾಹ ನೀಡುತ್ತಿರುವುದರಿಂದ ಅದಕ್ಕೆ ಹಿಂದೂಗಳು ವಿರೋಧಿಸುತ್ತಿದ್ದಾರೆ. ಕೆಲವೆಡೆಗಳಲ್ಲಿ ಈ ಧಾರಾವಾಹಿಯ ನಿರ್ಮಾಪಕರು ಹಾಗೂ ನಟ ಇವರ ವಿರುದ್ಧ ದೂರನ್ನು ದಾಖಲಿಸಲಾಗುತ್ತಿದೆ.

ಕಾಶ್ಮೀರದ ಗಡಿಯಲ್ಲಿ ಪಾಕಿಸ್ತಾನದ ಗುಂಡಿನ ದಾಳಿಯಲ್ಲಿ ಓರ್ವ ಸೈನಿಕ ಹುತಾತ್ಮ

ರಾಜೌರಿ ಪ್ರದೇಶದಲ್ಲಿ ನೌಶಾರಾ ಸೆಕ್ಟರ್‌ನಲ್ಲಿ ಪಾಕಿಸ್ತಾನದ ಸೈನಿಕರು ಕದನವಿರಾಮವನ್ನು ಉಲ್ಲಂಘಿಸಿ ಮಾಡಿದ ಗುಂಡಿನ ದಾಳಿಯಲ್ಲಿ ಭಾರತದ ಓರ್ವ ಸೈನಿಕ ಹುತಾತ್ಮರಾಗಿದ್ದಾರೆ. ಪಾಕಿಸ್ತಾನದ ಈ ಗುಂಡಿನ ದಾಳಿಗೆ ಭಾರತವೂ ತಕ್ಕ ಪ್ರತ್ಯುತ್ತರ ನೀಡಿದೆ.

ದ್ವಾರಕೆಯಲ್ಲಿನ ಭಗವಾನ ಶ್ರೀಕೃಷ್ಣನ ದ್ವಾರಕಾಧೀಶ ದೇವಸ್ಥಾನದ ಕಳಸದ ಮೇಲಿರುವ  ಧ್ವಜದ ದಂಡ ತುಂಡಾಗಿದ್ದರಿಂದ ವಿಪತ್ತು ಬರಬಹುದೆಂದು ಸ್ಥಳೀಯರಲ್ಲಿ ಆತಂಕ

ಗುಜರಾತನಲ್ಲಿ ಕೆಲವು ದಿನಗಳ ಹಿಂದೆ ದ್ವಾರಕೆಯ ಭಗವಾನ ಶ್ರೀಕೃಷ್ಣನ ದ್ವಾರಕಾಧೀಶ ದೇವಸ್ಥಾನದ ಕಳಸದ ಮೇಲಿನ ಧ್ವಜದ ದಂಡ ತುಂಡಾಗಿರುವ ಘಟನೆ ನಡೆದಿತ್ತು. ಅಲ್ಲಿ ಸತತ ೩ ದಿನಗಳಿಂದ ಮಳೆ ಬರುತ್ತಿದ್ದರಿಂದ ಅದರ ದಂಡ ಮುರಿದಿದೆ ಎಂದು ಹೇಳಲಾಗುತ್ತಿದೆ. ಇದು ಅಶುಭವಾಗಿದೆ ಎಂಬ ನಂಬಿಕೆ ಇದ್ದು ‘ಏನಾದರು ಅನಾಹುತ ನಡೆಯಬಹುದು’, ಎಂದು ಸ್ಥಳೀಯರಲ್ಲಿ ಆತಂಕ ಮೂಡಿದೆ.

ಕುಖ್ಯಾತ ಗೂಂಡಾ ವಿಕಾಸ ದುಬೆ ಪೊಲೀಸ್ ಚಕಮಕಿಯಲ್ಲಿ ಸಾವು

ಚೌಬೆಪುರದಲ್ಲಿ ೮ ಪೊಲೀಸರ ಹತ್ಯೆಯ ಪ್ರಕರಣದಲ್ಲಿ ಬಂಧಿಸಲಾಗಿದ್ದ ಕುಖ್ಯಾತ ಗೂಂಡಾ ವಿಕಾಸ ದುಬೆನನ್ನು ಪೊಲೀಸರು ಕಾನಪುರದ ಹತ್ತಿರ ಚಕಮಕಿಯಲ್ಲಿ ಹತ್ಯೆಮಾಡಿದ್ದಾರೆ. ವಿಕಾಸ ದುಬೆಯನ್ನು ಮಧ್ಯಪ್ರದೇಶದ ಪೊಲೀಸರು ಜುಲೈ ೯ ರಂದು ಬೆಳಗ್ಗೆ ಉಜ್ಜೈನ್‌ನ ಶ್ರೀ ಮಹಾಕಾಲ ದೇವಸ್ಥಾನದ ಪರಿಸರದಲ್ಲಿ ಬಂಧಿಸಿದ್ದರು.

ಭಾರತವು ಚೀನಾದ ಆಕ್ರಮಣಕಾರಿವೃತ್ತಿಗೆ ತಕ್ಕ ಉತ್ತರ ನೀಡಿದೆ ! ಅಮೇರಿಕಾದಿಂದ ಪ್ರಶಂಸೆ

ಚೀನಾಗೆ ಗಡಿವಿವಾದವನ್ನು ಕೆರಳಿಸಲು ತುಂಬಾ ಒಲವಿದೆ. ಜಗತ್ತು ಇದಕ್ಕೆ ಅವಕಾಶ ಮಾಡಿಕೊಡಬಾರದು. ಚೀನಾದ ಅಕ್ರಮಣಕಾರಿವೃತ್ತಿ ಬಗ್ಗೆ ನಾನು ಭಾರತದ ವಿದೇಶಾಂಗ ಸಚಿವ ಎಸ್. ಜಯಶಂಕರರವರನ್ನು ಹಲವಾರು ಬಾರಿ ಸಂಪರ್ಕಿಸಿದ್ದೇನೆ. ಚೀನಾವು ಅನೇಕ ಬಾರಿ ಅಕ್ರಮಣಕಾರಿ ಚಟುವಟಿಕೆ ನಡೆಸುತ್ತದೆ

ನಟ ಸುಶಾಂತಸಿಂಹ ರಾಜಪುತ್‌ನ ಆತ್ಮಹತ್ಯೆ ಅಲ್ಲ, ಹತ್ಯೆಯಾಗಿದೆ ‘ಪಾರಾನಾರ್ಮಲ್’ ತಜ್ಞರ ಹೇಳಿಕೆ

ನಟ ಸುಶಾಂತಸಿಂಹ ರಾಜಪುತನು ಜೂನ್ ೧೪ ರಂದು ಮುಂಬಯಿಯ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು; ಆದರೆ ಅವರು ಆತ್ಮಹತ್ಯೆ ಮಾಡಿಕೊಳ್ಳುವಂತೆ ಪರಿಸ್ಥಿತಿಯನ್ನು ನಿರ್ಮಿಸಲಾಗಿತ್ತು, ಎಂದು ಆರೋಪಿಸಿದ ನಂತರ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕರಿಂದ ಭಾಜಪದ ನಾಯಕ ಸಹಿತ ಅವರ ತಂದೆ ಹಾಗೂ ಸಹೋದರನ ಹತ್ಯೆ

ಜಿಹಾದಿ ಭಯೋತ್ಪಾದಕರು ಇಲ್ಲಿನ ಭಾಜಪದ ಮುಖಂಡ ಶೇಖ್ ವಸೀಮ್ ಬಾರೀ, ಅವರ ತಂದೆ ಬಶೀರ್ ಅಹಮದ್ ಹಾಗೂ ಅವರ ಸಹೋದರ ಉಮರ್ ಬಶೀರ್‌ರವರನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆಯು ಜುಲೈ ೮ರಂದು ರಾತ್ರಿ ನಡೆದಿದೆ. ಗುಂಡುಹಾರಾಟದಲ್ಲಿ ಈ ಮೂವರು ಗಾಯಗೊಂಡಿದ್ದರು. ಅವರನ್ನು ನಂತರ ಆಸ್ಪತ್ರೆಗೆ ಕೊಂಡೊಯ್ಯುವಾಗ ಸಾವಿಗೀಡಾಗಿರುವುದಾಗಿ ಪೊಲೀಸರು ಮಾಹಿತಿ ನೀಡಿದರು.

ಪಠ್ಯಪುಸ್ತಕದಲ್ಲಿ ಮಹಾರಾಣಾ ಪ್ರತಾಪರವರ ಅಪಮಾನಕಾರಕ ಉಲ್ಲೇಖವನ್ನು ತೆಗೆಯಲಾಗುವುದು

ರಾಜಸ್ಥಾನ ರಾಜ್ಯದ ಮಾಧ್ಯಮಿಕ ಶಿಕ್ಷಣ ಮಂಡಳಿಯ ಹತ್ತನೇಯ ತರಗತಿಯ ಸಮಾಜ ವಿಜ್ಞಾನದ ಪುಸ್ತಕದಲ್ಲಿ ಮಹಾನ ಸೇನಾನಿ ಮಹಾರಾಣಾ ಪ್ರತಾಪ್‌ರವರನ್ನು ‘ಕಡಿಮೆ ಧೈರ್ಯದ ಸೇನಾನಾಯಕ ಎಂದು ಅವಮಾನವಾಗುವಂತೆ ಉಲ್ಲೇಖ ಮಾಡಲಾಗಿತ್ತು. ಅದೇ ರೀತಿ ಮಹಾರಾಣಾ ಪ್ರತಾಪರು ನಡೆಸಿದ ಸಂಘರ್ಷದ ಇತಿಹಾಸವನ್ನು ಅಡಗಿಸಿಡಲಾಗಿತ್ತು.

ಫೇಸ್‌ಬುಕ್, ಇನ್ಸ್‌ಟಾಗ್ರಾಮ್, ಡೆಲಿ ಹಂಟ, ಟ್ರೂ ಕಾಲರ್ ಇತ್ಯಾದಿ  ೮೯ ‘ಆಪ್ಸ್’ ತೆಗೆದು ಹಾಕಿ ! – ಭಾರತದ ಸೇನೆಯಿಂದ ಸೈನಿಕರಿಗೆ ಆದೇಶ

ಭಾರತವು ಇತ್ತೀಚೆಗೆ ಚೀನಾದ ೬೯ ‘ಆಪ್ಸ್’ಗಳನ್ನು ನಿಷೇಧಿಸಿರುವಾಗಲೇ ಈಗ ಭಾರತದ ಸೇನೆಯು ಸೈನಿಕರಿಗೆ ಫೇಸ್‌ಬುಕ್, ಟಿಕ್-ಟಾಕ್, ಟ್ರೂ ಕಾಲರ್, ಇನ್ಸ್‌ಟಾಗ್ರಾಮ್‌ಗಳ ಸಹಿತ ೮೯ ‘ಆಪ್ಸ್’ಗಳನ್ನು ತೆಗೆಯುವಂತೆ ಆದೇಶ ನೀಡಿದೆ.