-
ಈ ರೀತಿ ಬಾಯಿಪಾಠ ಮಾಡಲು ಹೇಳುವವರ ವಿರುದ್ಧ ಕ್ರಮ ಕೈಗೊಳ್ಳಬೇಕು !
-
ಶತ್ರುರಾಷ್ಟ್ರದ ವೈಭವೀಕರಣ ಮಾಡುವ ಇಂತಹ ಶಾಲೆಗಳ ಅನುಮತಿಯನ್ನು ಸರಕಾರ ಏಕೆ ರದ್ದು ಪಡಿಸುತ್ತಿಲ್ಲ ?
ಘಾಟಶಿಲಾ (ಝಾರಖಂಡ) – ಇಲ್ಲಿ ಸಂತ ನಂದಲಾಲ ಸ್ಮೃತಿ ವಿದ್ಯಾ ಮಂದಿರ ಶಾಲೆಯಲ್ಲಿ ಸಣ್ಣ ಹಾಗೂ ದೊಡ್ಡ ಶಿಶುವರ್ಗದ ಮಕ್ಕಳ ಬೇರೆ ಬೇರೆ ಗುಂಪುಗಳನ್ನು ಮಾಡಿ ಭಾರತ ಸಹಿತ ಪಾಕಿಸ್ತಾನ ಹಾಗೂ ಬಾಂಗ್ಲಾದೇಶದ ರಾಷ್ಟ್ರಗೀತೆಯನ್ನು ಬಾಯಿಪಾಠ ಮಾಡಲು ಹೇಳಲಾಗಿತ್ತು. ಇದರಿಂದ ಮಕ್ಕಳ ಪೋಷಕರು ಇದರ ಬಗ್ಗೆ ಆಕ್ಷೇಪವೆತ್ತಿ ಶಾಲೆಯ ಆಡಳಿತಮಂಡಳಿಗೆ ‘ಪಾಕಿಸ್ತಾನ ಹಾಗೂ ಬಾಂಗ್ಲಾದೇಶದ ರಾಷ್ಟ್ರಗೀತೆಯನ್ನು ಕಲಿಸಬಾರದು’, ಎಂದು ಹೇಳಿದ್ದಾರೆ. ತದನಂತರ ಈ ನಿರ್ಧಾರವನ್ನು ಹಿಂಪಡೆಯಲಾಯಿತು. ಇದರೊಂದಿಗೆ ಸಂಬಂಧಪಟ್ಟವರಿಗೆ ಶಿಕ್ಷೆಯಾಗುವಂತೆ ಪಾಲಕರು ಹಾಗೂ ಸಮಾಜದ ರಾಷ್ಟ್ರಪ್ರೇಮಿಗಳು ಆಗ್ರಹಿಸಿದ್ದಾರೆ. ಸದ್ಯ ಕೊರೋನಾದಿಂದಾಗಿ ಶಾಲೆ ಮುಚ್ಚಿದ್ದರಿಂದ ‘ಆನ್‌ಲೈನ್’ ಮೂಲಕ ಶಿಕ್ಷಣ ನೀಡಲಾಗುತ್ತಿದೆ. ಅದಕ್ಕಾಗಿ ‘ವಾಟ್ಸ್‌ಅಪ್’ ಗುಂಪನ್ನೂ ತಯಾರಿಸಲಾಗಿದೆ. ಅದರಲ್ಲಿ ಶಿಕ್ಷಕಿ ಶೈಲಾ ಪರವಿನ ಇವರು ಮಕ್ಕಳಿಗೆ ಈ ರಾಷ್ಟ್ರಗೀತೆಗಳನ್ನು ಬಾಯಿಪಾಠ ಮಾಡಲು ಹೇಳಿದ್ದರು. ಅದಕ್ಕಾಗಿ ಈ ಎರಡೂ ರಾಷ್ಟ್ರಗೀತೆಯನ್ನು ‘ವಾಟ್ಸ್‌ಅಪ್’ ಗುಂಪಿಗೆ ಹಾಕಲಾಗಿತ್ತು.
ಮಕ್ಕಳ ಸಾಮಾನ್ಯ ಜ್ಞಾನ ಹೆಚ್ಚುಸುವ ಉದ್ದೇಶವಿತ್ತು (ಅಂತೆ) ! – ಶಿಕ್ಷಕಿ ಶೈಲಾ ಪರವಿನ
ಇದರ ಬಗ್ಗೆ ಶಿಕ್ಷಕಿ ಶೈಲಾ ಪರವಿನ ಇವರು, ‘ಶಾಲೆಯ ಆಡಳಿತಮಂಡಳಿ ಹೇಳಿದ ಮೇಲೆಯೇ ನಾವು ಈ ರಾಷ್ಟ್ರಗೀತೆಯನ್ನು ಬಾಯಿಪಾಠ ಮಾಡಲು ಮಕ್ಕಳಿಗೆ ಹೇಳಿದೆವು. ಇದರ ಹಿಂದೆ ಮಕ್ಕಳಲ್ಲಿ ಸಾಮಾನ್ಯ ಜ್ಞಾನ ಹೆಚ್ಚಿಸುವ ಉದ್ದೇಶವಿತ್ತು’ ಎಂದು ಹೇಳಿದ್ದಾರೆ. (ಸಾಮಾನ್ಯ ಜ್ಞಾನವನ್ನು ಹೆಚ್ಚಿಸಲು ದೇಶದಲ್ಲಿ ಅನೇಕ ವಿಷಯಗಳು ಇರುವಾಗ ಈ ರೀತಿಯ ಬಾಯಿಪಾಠವನ್ನು ಮಾಡಲು ಹೇಳುವವರಲ್ಲಿ ಸಾಮಾನ್ಯ ಜ್ಞಾನವಾದರೂ ಇದೆಯೇ ? – ಸಂಪಾದಕರು)
‘ದೂರು ಬಂದ ಮೇಲೆ ಕ್ರಮ ಕೈಗೊಳ್ಳುತ್ತಾರೆ ! (ಅಂತೆ) – ಜಿಲ್ಲಾ ಶಿಕ್ಷಣಾಧಿಕಾರಿ
‘ದೂರು ಬಂದಾಗ ಕ್ರಮ ಕೈಗೊಳ್ಳುವೆವು’, ಹೀಗೆ ಹೇಳುವವರ ವಿರುದ್ಧವೂ ದೂರು ದಾಖಲಿಸಬೇಕು !
‘ನಮಗೆ ಇದರ ಬಗ್ಗೆ ಯಾವುದೇ ರೀತಿಯ ದೂರುಗಳು ಬಂದಿಲ್ಲ. ಒಂದು ವೇಳೆ ಶಾಲೆಯಲ್ಲಿ ಮಕ್ಕಳಿಗೆ ಈ ರೀತಿಯ ಬಾಯಿಪಾಠವನ್ನು ಮಾಡಲು ಹೇಳಿದ್ದಲ್ಲಿ, ಅದು ತಪ್ಪಿದೆ. ಭಾರತೀಯ ಮಕ್ಕಳಿಗೆ ಪಾಕಿಸ್ತಾನ ಹಾಗೂ ಬಾಂಗ್ಲಾದೇಶದ ರಾಷ್ಟ್ರಗೀತೆಯನ್ನು ಕಲಿಸಬಾರದು. ಹೀಗೆ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’, ಎಂದು ಜಿಲ್ಲಾ ಶಿಕ್ಷಣಾಧಿಕಾರಿ ಶಿವೇಂದ್ರ ಕುಮಾರ ಇವರು ಪ್ರತಿಕ್ರಿಯಿಸಿದ್ದಾರೆ.