ಜಶಪುರ (ಛತ್ತೀಸಗಡ) ಇಲ್ಲಿ ಗುಡ್ಡದ ಮೇಲಿರುವ ಶಿವನ ದೇವಸ್ಥಾನದಲ್ಲಿನ ಸ್ವಯಂಭೂ ಶಿವಲಿಂಗವು ಅಜ್ಞಾತರಿಂದ ಧ್ವಂಸ

ಸ್ವಯಂಭೂ ಶಿವಲಿಂಗವು ಅಜ್ಞಾತರಿಂದ ಧ್ವಂಸ

ಛತ್ತೀಸಗಡನ ಕಾಂಗ್ರೆಸ್‌ನ ರಾಜ್ಯದಲ್ಲಿ ಈ ರೀತಿಯ ಘಟನೆಗಾಳಾಗುವುದು ಆಶ್ಚರ್ಯವೆನ್ನಲು ಸಾಧ್ಯವಿಲ್ಲ ! ಕಾಂಗ್ರೆಸ್‌ನ ರಾಜ್ಯದಲ್ಲಿ ಹಿಂದೂ ಹಾಗೂ ಅವರ ಧಾರ್ಮಿಕ ಸ್ಥಳಗಳ ಮೇಲೆ ಹೆಚ್ಚು ದಾಳಿಗಳಾಗುತ್ತವೆ, ಎಂಬುದನ್ನು ಗಮನದಲ್ಲಿಡಿ !

ಜಶಪುರ (ಛತ್ತೀಸಗಡ) – ಇಲ್ಲಿಯ ಮಾಧೇಶ್ವರ ಗುಡ್ಡದ ಮೇಲಿರುವ ಶಿವನ ದೇವಸ್ಥಾನದ ಶಿವಲಿಂಗವನ್ನು ಅಜ್ಞಾತ ದುಷ್ಕರ್ಮಿಗಳು ಧ್ವಂಸ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಇದರ ಬಗ್ಗೆ ಪಂಚಾಯ್ತಿ ಅಧ್ಯಕ್ಷರು ಹಾಗೂ ಗ್ರಾಮಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ. ಗ್ರಾಮಸ್ಥರು ಹೇಳುವ ಪ್ರಕಾರ, ‘ಈ ಶಿವಲಿಂಗವು ಸ್ವಯಂಭೂ ಆಗಿದ್ದು ಅದು ಭೂಮಿಯಿಂದ ಹೊರಗೆ ಬಂದಿದೆ. ಆದ್ದರಿಂದ ಇಲ್ಲಿಯ ಗ್ರಾಮಸ್ಥರಿಗೆ ಈ ದೇವಸ್ಥಾನದ ಬಗ್ಗೆ ತುಂಬ ಶ್ರದ್ಧೆ ಇದೆ’ ಎಂದು ಹೇಳಿದ್ದಾರೆ.