ಪುಲವಾಮಾದಲ್ಲಿ ಓರ್ವ ಉಗ್ರನ ಸಾವು, ಒಬ್ಬ ಸೈನಿಕ ಹುತಾತ್ಮ

ಪುಲವಾಮಾ(ಜಮ್ಮು-ಕಾಶ್ಮೀರ) – ಇಲ್ಲಿಯ ಕಾಮರಾಜಿಪೊರಾದಲ್ಲಿ ಬೆಳಗಿನ ಜಾವ ನಡೆದ ಚಕಮಕಿಯಲ್ಲಿ ರಕ್ಷಣಾ ಪಡೆಗಳು ಓರ್ವ ಭಯೋತ್ಪಾದಕನನ್ನು ಹೊಡೆದುರುಳಿಸಿದ್ದಾರೆ ಹಾಗೂ ಇದರಲ್ಲಿ ಓರ್ವ ಸೈನಿಕ ಹುತಾತ್ಮನಾಗಿದ್ದಾನೆ. ಇಲ್ಲಿ ಇಬ್ಬರು ಉಗ್ರರು ಇರುವ ಮಾಹಿತಿ ಸಿಕ್ಕಿದಾಕ್ಷಣ ಈ ಪ್ರದೇಶವನ್ನು ಸುತ್ತುವರಿದು ಶೋಧ ಕಾರ್ಯಾಚರಣೆಯನ್ನು ಕೈಗೊಳ್ಳಲಾಯಿತು. ಈ ಸಮಯದಲ್ಲಿ ಗುಂಡಿನ ಚಕಮಕಿ ಆರಂಭವಾಯಿತು. ಚಕಮಕಿಯ ನಂತರ ರಕ್ಷಣಾಪಡೆಗೆ ಭಾರಿ ಪ್ರಮಾಣದಲ್ಲಿ ಮದ್ದುಗುಂಡುಗಳು ಪತ್ತೆಯಾಗಿವೆ.

1 terrorist killed in a brief shootout in Pulwama. #WATCH

#Breaking | 1 terrorist has been killed & 1 jawan was martyred in a brief shootout in J&K's Pulwama. Combing operations are underway.Details by TIMES NOW's Mir.

Posted by TIMES NOW on Tuesday, 11 August 2020