‘ಭಾರತಕನ್ಯೆ ಮೇಡಮ್ ಕಾಮಾ !
‘೨೧ ಆಗಸ್ಟ್ ೧೯೦೭ ! ಜರ್ಮನಿಯ ಸ್ಟುಟಗಾರ್ಟ್ ನಗರದಲ್ಲಿ ಅಂತರರಾಷ್ಟ್ರೀಯ ಸಮಾಜವಾದಿ ಪರಿಷತ್ತು ನಡೆಯುತ್ತಿತ್ತು. ಈ ಪರಿಷತ್ತಿಗಾಗಿ ಜಗತ್ತಿನ ೧ ಸಾವಿರ ಪ್ರತಿನಿಧಿಗಳು ಅಲ್ಲಿಗೆ ಬಂದಿದ್ದರು. ಹಿಂದುಸ್ಥಾನದ ಪ್ರತಿನಿಧಿಯ ಸಮಯ ಬಂದ ತಕ್ಷಣ ರಾಜಮನೆತನದವಳಂತೆ ಕಾಣುತ್ತಿದ್ದ ಮತ್ತು ಪ್ರಚಂಡ ಆತ್ಮವಿಶ್ವಾಸ ಇರುವ ಓರ್ವ ಪ್ರೌಢ ಸ್ತ್ರೀಯು ವೇದಿಕೆಯ ಮೇಲೇರಿ ಗೊತ್ತುವಳಿಯನ್ನು ಮಂಡಿಸಿದಳು, ‘ಹಿಂದುಸ್ಥಾನದಲ್ಲಿ ಬ್ರಿಟೀಶರ ರಾಜ್ಯವಿದೆ ಹಾಗೂ ಅದು ಮುಂದುವರಿಯುವುದು ಇದು ಹಿಂದಿ ಜನರಿಗೆ ನಿಜವಾದ ಅರ್ಥದಿಂದ ಅತ್ಯಂತ ಬಾಧಕ ಮತ್ತು ಅತ್ಯಂತ ಘಾತಕವಾಗಿದೆ. ಆದರ್ಶ ಸಾಮಾಜಿಕ ದೃಷ್ಟಿಯಿಂದ ಯಾವುದೇ ಜನರ ಮೇಲೆ ಸರ್ವಾಧಿಕಾರ ಅಥವಾ ಪೀಡಕ ಸರಕಾರವು ಇರಬಾರದು; ಆದ್ದರಿಂದ ಜಗತ್ತಿನ ಸ್ವಾತಂತ್ರ್ಯವಿರುವ ಪಕ್ಷಪಾತಿಗಳು ಇಡೀ ಮಾನವೀ ಜನಸಂಖ್ಯೆಯ ಐದನೇ ಒಂದಾಂಶದಷ್ಟಿರುವ ಆ ದೇಶದಲ್ಲಿರುವ ಜನರಿಗೆ ಪರಕೀಯ ಸ್ವಾತಂತ್ರ್ಯದಿಂದ ಮುಕ್ತಗೊಳಿಸುವ ಕಾರ್ಯದಲ್ಲಿ ಸಹಾಯ ಮಾಡಬೇಕು !’ ಈ ಪ್ರಸ್ತಾವನೆ ಮಂಡಿಸಿದ ಮೇಲೆ ಅವಳು ತನ್ನೊಂದಿಗೆ ತಂದಿರುವ ಹಿಂದುಸ್ಥಾನದ ತ್ರಿವರ್ಣ ಧ್ವಜವನ್ನು ಹೆಮ್ಮೆಯಿಂದ ಹಾರಿಸಿದಳು. ಸ್ಪಷ್ಟ ಮತ್ತು ನಿಃಸಂಕೋಚವಾಗಿ ಆಂಗ್ಲ ಭಾಷೆಯಲ್ಲಿ ಮುಂದಿನ ವಿಷಯ ತಿಳಿಸಿದಳು, “ಇದು ಹಿಂದುಸ್ಥಾನದ ಸ್ವಾತಂತ್ರ್ಯದ ಧ್ವಜವಾಗಿದೆ. ನೋಡಿ, ನೋಡಿ ! ಈಗ ಅದು ಜನಿಸಿದೆ. ಹೇ ಸಭ್ಯ ಗೃಹಸ್ಥರೇ, ನಾನು ನಿಮಗೆ ಕರೆ ನೀಡುತ್ತೇನೆ, ಏಳಿ ಮತ್ತು ಈ ಧ್ವಜಕ್ಕೆ ವಂದನೆ ಸಲ್ಲಿಸಿ !” ಈ ಘಟನೆಯಿಂದ ಆಶ್ಚರ್ಯಗೊಂಡ ಎಲ್ಲ ಪ್ರತಿನಿಧಿಗಳು ಎದ್ದು ನಿಂತರು ಮತ್ತು ಅವರು ಹಿಂದುಸ್ಥಾನದ ಮೊದಲನೇ ಸ್ವತಂತ್ರ ರಾಷ್ಟ್ರಧ್ವಜಕ್ಕೆ ವಂದಿಸಿದರು ! ಯಾರು ಈ ವೀರಾಂಗನೆ ? ಈ ವೀರಾಂಗನೆಯ ಹೆಸರು ಮೇಡಮ ಭಿಕಾಯಿಜಿ ರುಸ್ತುಮ ಕಾಮಾ !
೧. ಮದನಲಾಲ ಧಿಂಗ್ರಾ ಇವರ ಸ್ಮರಣಾರ್ಥವಾಗಿ ‘ಮದನ ತಲವಾರ’ ಈ ನಿಯತಕಾಲಿಕೆ ಪ್ರಾರಂಭಿಸುವುದು
ಮೇಡಮ್ ಕಾಮಾ ಇವರ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಯೋಗದಾನವು ನಿಬ್ಬೆರಗಾಗುವಂತಿದೆ. ಮದನಲಾಲ ಧಿಂಗ್ರಾ ಇವರು ಕರ್ಝನ ವಾಯಲಿಯನ್ನು ಕೊಂದ ನಂತರ ಮೇಡಮ್ ಕಾಮಾ ಇವರು ೧೯೦೯ ರಲ್ಲಿ ಮದನಲಾಲ ಇವರ ಸ್ಮರಣಾರ್ಥ ‘ಮದನ ತಲವಾರ’ ಹೆಸರಿನ ಒಂದು ನಿಯತಕಾಲಿಕೆ ಆರಂಭಿಸಿದರು.
೨. ಮಾರ್ಸೆಲಿಸ್‌ದಲ್ಲಿ ಸಾವರಕರರನ್ನು ಕಾನೂನುಬಾಹಿರವಾಗಿ ಬಂಧಿಸಿದ ಪ್ರಕರಣವನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಒಯ್ಯುವುದು
ಸಾವರಕರ ಇವರು ಪ್ಯಾರಿಸ್‌ನಿಂದ ಲಂಡನ್‌ಗೆ ಹೋಗುವಾಗ ಅವರನ್ನು ಜಾಕ್ಸ್‌ನ ಹತ್ಯೆ ಪ್ರಕರಣದಲ್ಲಿ ವಿಕ್ಟೋರಿಯಾ ನಿಲ್ದಾಣದಲ್ಲಿ ಬಂಧಿಸಿದರು ಮತ್ತು ನ್ಯಾಯಾಲಯದ ಆದೇಶಕ್ಕನುಸಾರ ಅವರನ್ನು ಹಿಂದುಸ್ಥಾನಕ್ಕೆ ಕಳುಹಿಸಲು ನಿಶ್ಚಯಿಸಿದರು. ಸಾವರಕರ ಇವರನ್ನು ಕರೆದೊಯ್ಯುವ ‘ಮೊರಿಯಾ’ ಹಡಗು ಮಾರ್ಸೆಲಿಸ್ ಬಂದರಿಗೆ ಬಂದು ತಲುಪಿತು. ಇದು ತಿಳಿದಾಕ್ಷಣ ಮೇಡಮ್ ಕಾಮಾ ಮೊಟಾರಿ ನಿಂದ ಪ್ಯಾರಿಸ್‌ನಿಂದ ಮಾರ್ಸೆಲಿಸ್‌ಗೆ ಬಂದರು. ಸಾವರಕರ ಇವರನ್ನು ಹಿಡಿದು ಮರಳಿ ಹಡಗಿನಲ್ಲಿ ಕರೆದೊಯ್ಯುವ ಘಟನೆಯ ನಂತರ ೧೦-೧೫ ನಿಮಿಷಗಳಲ್ಲಿ ಅವರು ಅಲ್ಲಿ ತಲುಪಿದರು. ಅಲ್ಲಿ ನಡೆಯುತ್ತಿದ್ದ ಕೋಲಾಹಲದ ಕಾರಣವು ಜನರಿಂದ ತಿಳಿಯಿತು. ಅವರಿಗೆ ತುಂಬಾ ದುಃಖವಾಯಿತು; ಆದರೆ ಅವರು ಅಷ್ಟಕ್ಕೆ ಸುಮ್ಮನಿರಲಿಲ್ಲ ಮಾರ್ಸೆಲಿಸ್‌ನ ‘ಮೇಯರ್’ ಜಾಂ ಜೊರೆ ಇವರಿಗೆ ಈ ಘಟನೆಯ ಬಗ್ಗೆ ತಿಳಿಸಿದರು. ‘ಬ್ರಿಟಿಷ ಪೊಲೀಸರು ಫ್ರಾನ್ಸಿನ ಭೂಮಿಯಲ್ಲಿ ಸಾವರಕರರನ್ನು ಬಂಧಿಸಿರುವುದು ಫ್ರಾನ್ಸಿನ ಅವಮಾನವಾಗಿದೆ, ಎಂದು ಜೊರೆ ಅವರಿಗೆ ಹೇಳಿದರು ಮತ್ತು ಈ ಸುದ್ದಿಯನ್ನು ಪ್ಯಾರಿಸ್‌ನ ‘ಲ ತಾಂ’ ಈ ದಿನಪತ್ರಿಕೆಗೆ ಕಳುಹಿಸಿದರು. ಈ ವಾರ್ತೆ ಭಿತ್ತರವಾದುದರಿಂದ ಸಾವರಕರ ಇವರ ಅಕ್ರಮ ಬಂಧನದ ವಿಷಯ ಜಗತ್ತಿನೆಲ್ಲೆಡೆ ಹಬ್ಬಿತು ಮತ್ತು ಬ್ರಿಟಿಷ ಸರಕಾರದ ಮೇಲೆ ಅವಮಾನವಾಗುವ ಪ್ರಮೇಯ ಬಂದೆರಗಿತು. ಇವೆಲ್ಲ ಕೃತಿಗಳಲ್ಲಿ ಕಾಮಾರವರ ಸಾಹಸ, ಧೈರ್ಯ ಮತ್ತು ದೇಶಭಕ್ತಿಯಲ್ಲಿ ನಿರ್ಮಲವಾಗಿರುವುದು ಕಂಡುಬರುತ್ತದೆ.
೩. ನಾರಾಯಣರಾವ್ ಸಾವರಕರ ಇವರಿಗೆ ಶಿಕ್ಷಣಕ್ಕಾಗಿ ಸಹಾಯ ಮಾಡುವುದು
೩೦ ಜನವರಿ ೧೯೧೧ ರಂದು ಸಾವರಕರ ಇವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಯಿತು. ಆಗ ಅವರ ತಮ್ಮನಾದ ನಾರಾಯಣರಾವ ಸಾವರಕರ ಇವರಿಗೆ ಮಹಾವಿದ್ಯಾಲಯದ ಶಿಕ್ಷಣಕ್ಕಾಗಿ ಕಾಮಾರವರು ಧನ ಸಹಾಯ ಮಾಡಿದರು.
೪. ವಿದೇಶದಲ್ಲಿನ ಹಿಂದುಸ್ಥಾನದ ಸೈನಿಕರಲ್ಲಿ ದೇಶಭಕ್ತಿಯನ್ನು ಮೂಡಿಸುವುದು
ಮೊದಲನೇ ಮಹಾಯುದ್ಧದ ಸಮಯದಲ್ಲಿ ಕಾಮಾರವರು ಮಾರ್ಸೆಲಿಸನೊಳಗಿನ ಸೈನ್ಯ ಶಿಬಿರಕ್ಕೆ ಭೇಟಿ ನೀಡಿ ಅಲ್ಲಿಯ ಹಿಂದುಸ್ಥಾನದ ಸೈನಿಕರಿಗೆ, ‘ನಿಮ್ಮ ಹಿಂದ್‌ಮಾತೆಯನ್ನು ಯಾರು ದಾಸಿ ಮಾಡಿದ್ದಾರೆಯೋ, ಅವರಿಗಾಗಿ ನೀವು ಹೋರಾಡುತ್ತೀರಾ ?’, ಎಂದು ಕೇಳುತ್ತಿದ್ದರು. ಆ ಯುದ್ಧದಲ್ಲಿ ಫ್ರಾನ್ಸ್ ಇದು ಇಂಗ್ಲೆಂಡಿನ ಮಿತ್ರರಾಷ್ಟ್ರವಿತ್ತು; ಆದ್ದರಿಂದ ಅದು ಕಾಮಾರವರಿಗೆ ‘ಅವರು ಪ್ಯಾರಿಸ್ ನಿಂದ ಹೊರಗಿರಬೇಕು ಮತ್ತು ವಾರದಲ್ಲೊಮ್ಮೆ ಪೊಲೀಸರ ಎದುರು ಹಾಜರಾಗಬೇಕು’, ಎಂಬ ಷರತ್ತನ್ನು ವಿಧಿಸಿದರು; ಆದರೆ ಅವರು ಅದಕ್ಕೆ ಧೃತಿಗೆಡಲಿಲ್ಲ.’
೫. ಹಿಂದುಸ್ಥಾನಕ್ಕೆ ಹಿಂದಿರುಗುವ ಸೆಳೆತ
ಯುದ್ದ ಮುಗಿದ ನಂತರ ಕಾಮಾರವರು ಪ್ಯಾರಿಸ್‌ಗೆ ಹಿಂದಿರುಗಿದರು. ಮಾತೃಭೂಮಿಗೆ ಮರಳುವ ಸೆಳೆತ ಅವರಲ್ಲಿ ಹೆಚ್ಚಾಯಿತು. ತುಂಬಾ ಪ್ರಯತ್ನದಿಂದ ಮತ್ತು ಸ್ವಾತಂತ್ರ್ಯಹೋರಾಟದಲ್ಲಿ ಪಾಲ್ಗೊಳ್ಳಬಾರದೆಂಬ ಷರತ್ತಿನ ಮೇರೆಗೆ ೧೯೩೫ ರಲ್ಲಿ, ಅಂದರೆ ೩೪ ವರ್ಷದ ಸುದೀರ್ಘ ಕಾಲದ ನಂತರ ಅವರಿಗೆ ಹಿಂದುಸ್ಥಾನಕ್ಕೆ ಬರಲು ಅನುಮತಿ ಸಿಕ್ಕಿತು. ಅವರು ಮುಂಬಯಿಗೆ ಬಂದರು; ಆದರೆ ಬಹಳ ದಿನ ಜೀವಿಸಲಿಲ್ಲ. ೧೨ ಆಗಸ್ಟ್ ೧೯೩೬ ಕ್ಕೆ ಇವರ ಜೀವನಜ್ಯೋತಿಯು ಆರಿತು. ಕಾಮಾರವರ ಸ್ಮಾರಕ ಎಲ್ಲಿಯೂ ಇಲ್ಲ; ಆದರೆ ಹಿಂದುಸ್ಥಾನ ಸ್ವತಂತ್ರವಾಗುವುದಕ್ಕೆ ಕಾಮಾರವರು ಮಾಡಿದ ಸರ್ವಸ್ವದ ತ್ಯಾಗ, ಸುದೀರ್ಘ ಕಾಲದ ವರೆಗೂ ಅವರು ವಿದೇಶದಲ್ಲಿ ಅನುಭವಿಸಿರುವ ಯಾತನೆಗಳನ್ನು ಮರೆಯಬಾರದು. ರಾಷ್ಟ್ರವು ಅವರಿಗೆ ಸೂಕ್ತ ಸನ್ಮಾನ ನೀಡಬೇಕು.’ – ಶ್ರೀ. ಸಂಜಯ ಮುಳ್ಯೆ, ರತ್ನಾಗಿರಿ (ವರ್ಷ ೨೦೦೭)