ಇದೇ ಪ್ರಥಮ ಬಾರಿಗೆ ನ್ಯೂಯಾರ್ಕ್ಸ್‌ನ ‘ಟೈಮ್ಸ್ ಸ್ಕ್ವೇರ್’ನಲ್ಲಿ ಭಾರತದ ಸ್ವಾತಂತ್ರ್ಯ ದಿನ ನಿಮಿತ್ತ ಧ್ವಜಾರೋಹಣ

ನ್ಯೂಯಾರ್ಕ್(ಅಮೇರಿಕಾ) – ಇಲ್ಲಿಯ ಪ್ರಸಿದ್ಧ ‘ಟೈಮ್ಸ್ ಸ್ಕ್ವೇರ್’ನಲ್ಲಿ ಭಾರತದ ೭೪ ನೇ ಸ್ವಾತಂತ್ರ್ಯದಿನ ಧ್ವಜಾರೋಹಣ ನೆರವೇರಲಿದೆ. ಇದೇ ಮೊದಲ ಬಾರಿ ಈ ರೀತಿಯಲ್ಲಿ ನಡೆಯಲಿದೆ. ಈ ಹಿಂದೆ ಆಗಸ್ಟ್ ೫ ರಂದು ಆಯೋಜಿಸಲಾಗಿದ್ದ ಶ್ರೀರಾಮಜನ್ಮಭೂಮಿಯ ಮೇಲಿನ ಶ್ರೀರಾಮಮಂದಿರದ ಭೂಮಿಪೂಜೆಯ ದಿನದಂದೂ ಕೂಡ ‘ಟೈಮ್ಸ್ ಸ್ಕ್ವೇರ್’ನಲ್ಲಿ ಶ್ರೀರಾಮಮಂದಿರದ ಚಿತ್ರವನ್ನು ಪ್ರದರ್ಶಿಸಲಾಗಿತ್ತು. ಅಮೇರಿಕಾದ ‘ಫೆಡರೇಶನ್ ಆಫ್ ಇಂಡಿಯನ್ ಅಸೋಸಿಯೆಶನ್’ವು (‘ಎಫ್.ಐ.ಎ.’ಯು) ಈ ಮಾಹಿತಿಯನ್ನು ನೀಡಿದೆ. ‘ಟೈಮ್ಸ್ ಸ್ಕ್ವೇರ್’ನ ಮೇಲೆ ತ್ರಿವರ್ಣ ಧ್ವಜ ಹಾರಿಸುವುದರೊಂದಿಗೆ ಪ್ರತಿವರ್ಷದಂತೆ ಈ ವರ್ಷವೂ ಎಲ್ಲಕ್ಕಿಂತ ಎತ್ತರವಾಗಿರುವ ‘ಎಂಪಾಯರ ಸ್ಟೇಟ್’ ಕಟ್ಟಡದ ಮೇಲೆ ವಿದ್ಯುತ್ ದೀಪಾಲಂಕಾರ ಮಾಡಲಿದೆ.