ಮತಾಂಧರ ಹಲ್ಲೆಯಿಂದ ಹನುಮಂತನ ದೇವಸ್ಥಾನವನ್ನು ರಕ್ಷಿಸಿದ ಮುಸಲ್ಮಾನರು !

  • ಮಾಧ್ಯಮಗಳಿಂದ ಪ್ರಶಂಸೆ

  • ಯಾರಾದರೂ ಹಿಂದೂಗಳ ದೇವಸ್ಥಾನವನ್ನು ರಕ್ಷಿಸಿದರೆ ಅದಕ್ಕೆ ಹಿಂದೂಗಳು ಆಭಾರಿಯಾಗಿರುತ್ತಾರೆ; ಆದರೆ ಇಷ್ಟರವರೆಗೆ ಧ್ವಂಸ ಮಾಡಿದ ಹಿಂದೂಗಳ ಸಾವಿರಾರು ದೇವಸ್ಥಾನಗಳ ಬಗ್ಗೆ ಇಂತಹವರು ಧ್ವನಿ ಎತ್ತಬೇಕೆಂಬುದು ಹಿಂದೂಗಳ ಅಪೇಕ್ಷೆಯಾಗಿದೆ.

ಮತಾಂಧರು ದೇವಸ್ಥಾನಗಳ ಧ್ವಂಸ ಮಾಡುವಾಗ ಮಾಧ್ಯಮದವರು ಎಂದೂ ಮೌನವಾಗಿರುತ್ತಾರೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿರಿ !

ಬೆಂಗಳೂರು – ಮತಾಂಧರು ನಡೆಸಿದ ಹಿಂಸಾಚಾರದ ಸಮಯದಲ್ಲಿ ಹನುಮಂತನ ದೇವಸ್ಥಾನವನ್ನು ಗುರಿ ಮಾಡಲು ಪ್ರಯತ್ನಿಸುತ್ತಿದ್ದಾಗ ಕೆಲವು ಮುಸಲ್ಮಾನ ಯುವಕರು ಮಾನವ ಸರಪಳಿ ಮಾಡಿ ಮತಾಂಧರನ್ನು ತಡೆದ ವಾರ್ತೆಯು ಪ್ರಸಾರವಾಯಿತು. ಕಾಂಗ್ರೆಸ್‌ನ ಶಾಸಕರಾದ ಶ್ರೀನಿವಾಸ ಮೂರ್ತಿ ಇವರ ಮನೆಯ ಎದುರು ಹನುಮಂತನ ದೇವಸ್ಥಾನ ಇದೆ. ಈ ಘಟನೆಯಿಂದ ಮಾಧ್ಯಮಗಳು ಅವರನ್ನು ಪ್ರಶಂಸಿಸಿದರು.