೧೩೦ ಕೋಟಿಗಳ ಪೈಕಿ ಕೇವಲ ಒಂದುವರೆ ಕೋಟಿ ಭಾರತೀಯರು ತೆರಿಗೆಯನ್ನು ಕಟ್ಟುತ್ತಾರೆ !

ಇತರ ಭಾರತೀಯರು ತೆರಿಗೆಯನ್ನು ಏಕೆ ಕಟ್ಟುತ್ತಿಲ್ಲ ?, ಎಂಬುದನ್ನು ಪತ್ತೆ ಹಚ್ಚಿ ಅವರಿಂದ ತೆರಿಗೆ ತುಂಬಿಸಿಕೊಳ್ಳಬೇಕು, ಅದೇರೀತಿ ನೀಡಿದ ತೆರಿಗೆಯ ಯೋಗ್ಯರೀತಿಯಲ್ಲಿ ಉಪಯೋಗವಾಗುತ್ತಿದೆಯೇ?, ಎಂಬುದು ಜನರಿಗೂ ತಿಳಿಯಬೇಕು!

ಭಾರತದಲ್ಲಿ ಸದ್ಯ ೧೩೦ ಕೋಟಿ ಜನಸಂಖ್ಯೆಯಲ್ಲಿ ಕೇವಲ ಒಂದೂವರೆ ಕೋಟಿ ಜನರು ತೆರಿಗೆಯನ್ನು ಕಟ್ಟುತ್ತಾರೆ. ಕಳೆದ ೬-೭ ವರ್ಷಗಳಲ್ಲಿ ‘ಟ್ಯಾಕ್ಸ್ ರಿಟರ್ನ್’ ತುಂಬಿಸುವ ಸಂಖ್ಯೆ ಎರಡುವರೆ ಕೋಟಿಗೆ ಹೆಚ್ಚಾಗಿದೆ; ಆದರೆ ೧೩೦ ಕೋಟಿ ಜನಸಂಖ್ಯೆಯ ತುಲನೆಯಲ್ಲಿ ಈ ಏರಿಕೆ ತುಂಬಾನೇ ಕಡಿಮೆ ಇದೆ. ಇದರ ಬಗ್ಗೆ ಎಲ್ಲರೂ ಚಿಂತನೆ ಮಾಡುವುದು ಆವಶ್ಯಕವಾಗಿದೆ. ಯಾರು ತೆರಿಗೆಯ ರಚನೆಯಲ್ಲಿಲ್ಲ; ಆದರೆ ತೆರಿಗೆ ಕಟ್ಟಬಹುದು ಅಂತಹವರು ಮುಂದೆ ಬಂದು ತೆರಿಗೆ ಕಟ್ಟಬೇಕು. ಸ್ವಾತಂತ್ರ್ಯದಿನದಂದು ಇದರ ಬಗ್ಗೆ ವಿಚಾರ ಮಾಡಿರಿ ಎಂದು ಪ್ರಧಾನಿ ಮೋದಿಯವರು ಕರೆ ನೀಡಿದ್ದಾರೆ.