ಬೆಂಗಳೂರಿನಲ್ಲಿ ಮತಾಂಧರ ಹಿಂಸಾಚಾರ; ೬೦ ಪೊಲೀಸರಿಗೆಗಾಯ; ಪೊಲೀಸರ ಗುಂಡಿಗೆ ಮೂವರು ಗಲಭೆಕೋರರ ಸಾವು

ಮಹಮ್ಮದ ಪೈಗಂಬರರ ಬಗ್ಗೆ ಆಕ್ಷೇಪಾರ್ಹ ಪೋಸ್ಟ್ ಮಾಡಿದ ಪ್ರಕರಣ

  • ‘ಸೋಶಿಯಲ್ ಡೆಮೊಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾದ ನಾಯಕ ಸಹಿತ ೧೫೦ ಜನರ ಬಂಧನ
  • ಹಿಂಸಾಚಾರದ ಹಿಂದೆ ‘ಪಿಎಫ್‌ಐ ಕೈವಾಡದ ಶಂಕೆ
ಗಲಭೆಯಲ್ಲಿ ಹಾನಿಗೊಳಗಾದ ಪೋಲಿಸ್ ವಾಹನ

ರಾಜಧಾನಿಯಲ್ಲೇ ಹೀಗೆ ಸ್ಥಿತಿ ಇದ್ದರೆ ಇತರ ಗ್ರಾಮಗಳ ಬಗ್ಗೆ ವಿಚಾರ ಮಾಡದಿರುವುದೇ ಒಳಿತು

  • ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆಯಾದಾಗ ಹಿಂದೂಗಳು ಕಾನೂನು ಮಾರ್ಗದಲ್ಲಿ ಪೊಲೀಸ್ ಠಾಣೆಯಲ್ಲಿ ದೂರನ್ನು ನೀಡಿದರೆ ಅದನ್ನು ದುರ್ಲಕ್ಷಿಸುತ್ತಾರೆ ಹಾಗೂ ಅಪರಾಧಿಗಳು ಬಹಿರಂಗವಾಗಿ ಓಡಾಡುತ್ತಾರೆ, ಇನ್ನೊಂದೆಡೆ ಮತಾಂಧರ ಧಾರ್ಮಿಕ ಭಾವನೆಗೆ ಧಕ್ಕೆಯಾದಾಗ ನೇರವಾಗಿ ಕಾನೂನನ್ನು ಕೈಗೆತ್ತಿಕೊಂಡು ಪೊಲೀಸರ ಮೇಲೆ ಹಲ್ಲೆ ಮಾಡುತ್ತಾರೆ ಹಾಗೂ ಅದರಿಂದ ಧಾರ್ಮಿಕ ಭಾವನೆಯನ್ನು ನೋಯಿಸಿದವರ ಮೇಲೆ ಪ್ರತೀಕಾರ ತೀರಿಸಿಗೊಳ್ಳುತ್ತಾರೆ ! ಭಾಜಪದ ರಾಜ್ಯದಲ್ಲಿ ಮತಾಂಧರಿಂದ ಇಷ್ಟು ದೊಡ್ಡ ಪ್ರಮಾಣದಲ್ಲಿ ಹಿಂಸಾಚಾರ ಆಗುತ್ತಿದ್ದರೆ, ಪೊಲೀಸರ ಮೇಲೆಯೇ ಹಲ್ಲೆಯಾಗುತ್ತಿದ್ದರೆ ಹಿಂದೂಗಳನ್ನು ಯಾರು ರಕ್ಷಿಸುವರು ? ಎಂದು ಹಿಂದೂಗಳ ಮನಸ್ಸಿನಲ್ಲಿ ಪ್ರಶ್ನೆ ಬರುತ್ತಿದ್ದರೆ ಅದರಲ್ಲಿ ಆಶ್ಚರ್ಯ ಪಡುವುದೇನಿದೆ?
  • ಹಿಂದೂಗಳೇ, ತಮ್ಮ ರಕ್ಷಣೆಯನ್ನು ಮಾಡಿಕೊಳ್ಳಲಾಗದಿರುವ ಪೊಲೀಸರಿಗೆ ನಿಮ್ಮ ರಕ್ಷಣೆಯನ್ನು ಮಾಡಲಾರರು, ಎಂಬುದನ್ನು ಗಮನದಲ್ಲಿಟ್ಟುಕೊಂಡು ತಮ್ಮ ಹಾಗೂ ಕುಟುಂಬದ ರಕ್ಷಣೆಗಾಗಿ ಈಗಿಂದಲೇ ಸ್ವರಕ್ಷಣಾ ತರಬೇತಿಯನ್ನು ಪಡೆಯಿರಿ !
  • ಗಲಭೆಕೋರ ಸೋಶಿಯಲ್ ಡೆಮೊಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾವನ್ನು ನಿಷೇಧಿಸಿ !
  • ಹಿಂದೂಗಳ ಧಾರ್ಮಿಕ ಶ್ರದ್ಧಾಸ್ಥಾನಗಳಿಗೆ ಅವಮಾನವಾದಾಗ ಆಭಿವ್ಯಕ್ತಿ ಸ್ವಾತಂತ್ರ್ಯದ ಡಂಗುರ ಸಾರುವ ತಥಾಕಥಿತ ಜಾತ್ಯತೀತವಾದಿಗಳು, ಪ್ರಗತಿ(ಅಧೋಗತಿ)ಪರರು, ಸಾಮ್ಯವಾದಿಗಳು ಮತಾಂಧರ ಹಿಂಸಾಚಾರದ ಬಗ್ಗೆ ಏಕೆ ಬಾಯಿಮುಚ್ಚಿಕೊಳ್ಳುತ್ತಿದ್ದಾರೆ ?

ಗಲಭೆಗಳ ಕುರಿತು ಜಿಲ್ಲಾ ಮ್ಯಾಜಿಸ್ಟ್ರೇಟ್‌ರಿಂದ ಸಮಗ್ರ ತನಿಖೆ ! – ಮುಖ್ಯಮಂತ್ರಿ ಯಡಿಯೂರಪ್ಪ

‘ಆಗಸ್ಟ್ ೧೧ ರ ರಾತ್ರಿ ನಡೆದ ಗಲಭೆಯಲ್ಲಿ ಪತ್ರಕರ್ತರು, ಪೋಲೀಸರು, ಸಾರ್ವಜನಿಕರ ಮೇಲೆ ಹಲ್ಲೆ ಮಾಡಿರುವುದು ಅಕ್ಷಮ್ಯ. ಇಂತಹ ಪ್ರಚೋದನೆ, ಪುಂಡಾಟಗಳನ್ನು ಸರಕಾರ ಕಿಂಚಿತ್ತೂ ಸಹಿಸುವುದಿಲ್ಲ. ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ನಿಶ್ಚಿತ. ಗಲಭೆಗಳ ಕುರಿತು ಜಿಲ್ಲಾ ಮ್ಯಾಜಿಸ್ಟ್ರೇಟ್‌ರಿಂದ ಸಮಗ್ರ ತನಿಖೆ ನಡೆಸಲು ಆದೇಶಿಸಲಾಗಿದೆ, ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಟ್ವೀಟ್ ಮಾಡಿದ್ದಾರೆ.

ಬೆಂಗಳೂರು – ‘ಫೇಸ್‌ಬುಕ್ನಲ್ಲಿ ಮಹಮ್ಮದ ಪೈಗಂಬರ ಬಗ್ಗೆ ಅಕ್ಷೇಪಾರ್ಹ ಪೋಸ್ಟ್ ಮಾಡ ಲಾಗಿದೆ ಎಂದು ಆರೋಪಿಸಿ ಮತಾಂಧರು ಆಗಸ್ಟ್ ೧೧ ರ ರಾತ್ರಿ ಹಿಂಸಾಚಾರ ಮಾಡಿದರು. ಕಾಂಗ್ರೆಸ್ ಶಾಸಕ ಶ್ರೀನಿವಾಸ ಮೂರ್ತಿಯವರ ಮನೆಯ ಮೇಲೆ ಹಲ್ಲೆ ಮಾಡಿ ಬೆಂಕಿ ಹಚ್ಚಿದರು. ಅದೇರೀತಿ ೨೦೦ ಕ್ಕೂ ಹೆಚ್ಚು ವಾಹನಗಳನ್ನು ಸುಟ್ಟರು. ಹಿಂಸಾಚಾರವನ್ನು ತಡೆಯಲು ಪ್ರಯತ್ನಿಸಿದ ಪೊಲೀಸರ ಮೇಲೆಯೇ ಮತಾಂಧರು ಹಲ್ಲೆ ನಡೆಸಿದರು. ಅದರೊಂದಿಗೆ ಎರಡು ಪೊಲೀಸ್ ಠಾಣೆಗಳನ್ನು ಧ್ವಂಸ ಮಾಡಿದರು ಹಾಗೂ ಇದರಲ್ಲಿ ೬೦ ಕ್ಕೂ ಹೆಚ್ಚು ಪೊಲೀಸರು ಗಾಯಗೊಂಡರು. ಕೊನೆಯಲ್ಲಿ ಪೊಲೀಸರು ಈ ಹಿಂಸಾಚಾರವನ್ನು ತಡೆಗಟ್ಟಲು ಗುಂಡು ಹಾರಿಸಿದ್ದರಿಂದ ಮೂವರು ಗಲಭೆಕೋರರು ಮೃತಪಟ್ಟರು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಸೋಶಿಯಲ್ ಡೆಮೋಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾದ ನಾಯಕ ಮುಜಮ್ಮಿಲ ಪಾಶಾ ಸಹಿತ ೧೫೦ ಜನರನ್ನು ಬಂಧಿಸಿದ್ದಾರೆ. ಅದೇರೀತಿ ಈ ಆಕ್ಷೇಪಾರ್ಹ ಪೋಸ್ಟನ್ನು ಮಾಡಿದ್ದ ಶಾಸಕ ಶ್ರೀನಿವಾಸ ಮೂರ್ತಿಯವರ ಸಂಬಂಧಿ ನವೀನನನ್ನು ಬಂಧಿಸಲಾಯಿತು. ಹಿಂಸಾಚಾರದ ಹಿಂದೆ ‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಕೈವಾಡ ಇರಬಹುದು ಎಂದು ಸಂದೇಹ ವ್ಯಕ್ತವಾಗುತ್ತಿದೆ. ಈ ಹಿಂಸಾಚಾರದ ನಂತರ ನಗರದಲ್ಲಿ ಕರ್ಫ್ಯೂ ಜಾರಿಗೊಳಿಸಲಾಗಿದೆ. ಎರಡು ಪೊಲೀಸ್ ಠಾಣೆಗಳ ಸರಹದ್ದಿನಲ್ಲಿ ಸಂಚಾರ ನಿಷೇಧವನ್ನು ಜಾರಿಗೊಳಿಸಿದೆ. ಗೃಹ ಸಚಿವ ಬಸವರಾಜ ಬೊಮ್ಮಾಯಿಯವರು ಈ ಘಟನೆಯ ಬಗ್ಗೆ ತನಿಖೆ ನಡೆಸಲು ಆದೇಶವನ್ನು ನೀಡಿದ್ದಾರೆ. ನಂತರ ಈ ಪರಿಸರದಲ್ಲಿ ಅರೆಸೇನಾ ಪಡೆಯನ್ನು ನೇಮಿಸಲಾಗಿದೆ.