ಬಾಗಪತ (ಉತ್ತರ ಪ್ರದೇಶ) ಇಲ್ಲಿಯ ಭಾಜಪದ ಮಾಜಿ ಜಿಲ್ಲಾಧ್ಯಕ್ಷನ ಗುಂಡಿಕ್ಕಿ ಹತ್ಯೆ

ಉತ್ತರಪ್ರದೇಶದಲ್ಲಿ ಪ್ರತಿದಿನ ಈ ರೀತಿಯ ಘಟನೆಗಳು ನಡೆಯುತ್ತಿದೆ ಹಾಗೂ ಅದನ್ನು ತಡೆಯಲು ರಾಜ್ಯದ ಪೊಲೀಸರು ವಿಫಲರಾಗಿದ್ದಾರೆ! ಎಂಬುದನ್ನು ಗಮನದಲ್ಲಿಟ್ಟುಕೊಂಡು ಮುಖ್ಯಮಂತ್ರಿ ಯೋಗಿ ಆದಿತ್ಯನಾಥರವರು ಅಪರಾಧವನ್ನು ತಡೆಯಲು ಹೆಚ್ಚೆಚ್ಚು ಕಠಿಣ ಹೆಜ್ಜೆಯನ್ನಿಡಬೇಕು!

ಭಾಜಪದ ಮಾಜಿ ಜಿಲ್ಲಾಧ್ಯಕ್ಷ ಸಂಜಯ ಖೋಖರ

ಬಾಗಪತ(ಉತ್ತರಪ್ರದೇಶ) – ಇಲ್ಲಿ ಬೆಳಗ್ಗೆ ವಾಯುವಿಹಾರಕ್ಕೆ ತೆರಳಿದ್ದ ಭಾಜಪದ ಮಾಜಿ ಜಿಲ್ಲಾಧ್ಯಕ್ಷ ಸಂಜಯ ಖೋಖರ ಇವರಿಗೆ ಅಜ್ಞಾತರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಮೂವರು ಮಂದಿ ದಾಳಿ ಮಾಡಿದರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ರಾಜ್ಯದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರವರು ಖೋಖರ ಹತ್ಯೆಯ ಬಗ್ಗೆ ಖೇದವನ್ನು ವ್ಯಕ್ತಪಡಿಸುತ್ತಾ ಈ ಘಟನೆಯ ತನಿಖೆಯನ್ನು ನಡೆಸಿ ಆರೋಪಿಗಳ ಮೇಲೆ ೨೪ ಗಂಟೆಗಳಲ್ಲಿ ಕ್ರಮ ಕೈಗೊಳ್ಳುವಂತೆ ಆದೇಶವನ್ನು ನೀಡಿದ್ದಾರೆ. ಈ ಘಟನೆಗೆ ಯಾರು ಜವಾಬ್ದಾರರು?, ಎಂಬುದನ್ನೂ ಪತ್ತೆ ಹಚ್ಚಲು ಹೇಳಿದ್ದಾರೆ. ಬಾಗಪತನಲ್ಲಿ ಜೂನ್ ತಿಂಗಳಲ್ಲಿ ಭಾಜಪದ ಓರ್ವ ಮುಖಂಡನ ಮಗನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು.