ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಮುಖ್ಯಸ್ಥ ಮಹಂತ ನೃತ್ಯಗೋಪಾಲ ದಾಸ ಇವರಿಗೆ ಕೊರೋನಾದ ಸೋಂಕು

ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಮುಖ್ಯಸ್ಥ ಮಹಂತ ನೃತ್ಯಗೋಪಾಲ ದಾಸ

ಮಥುರಾ (ಉತ್ತರಪ್ರದೇಶ) – ಅಯೋಧ್ಯೆಯಲ್ಲಿಯ ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಮುಖ್ಯಸ್ಥ ಮಹಂತ ನೃತ್ಯಗೋಪಾಲ ದಾಸ ಇವರಿಗೆ ಕೊರೋನಾದ ಸೋಂಕು ತಗಲಿದೆ. ಆಗಸ್ಟ್ ೫ ರಂದು ನೆರವೇರಿದ್ದ ಶ್ರೀರಾಮಮಂದಿರದ ಭೂಮಿ ಪೂಜೆಯ ಕಾರ್ಯಕ್ರಮದಲ್ಲಿ ಮಹಂತ ನೃತ್ಯಗೋಪಾಲ ದಾಸ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಸಮಯದಲ್ಲಿ ಅನೇಕ ಸಲ ಪ್ರಧಾನಿ ಮೋದಿಯವರ ಸಂಪರ್ಕವಾಗಿತ್ತು. ಅದೇರೀತಿ ವೇದಿಕೆಯ ಮೇಲೆ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಸರಸಂಘಚಾಲಕ ಮೋಹನ ಭಾಗವತ ಹಾಗೂ ರಾಜ್ಯಪಾಲ ಆನಂದಿಬೇನ್ ಪಟೇಲ್ ಉಪಸ್ಥಿತರಿದ್ದರು. ಯೋಗಿ ಆದಿತ್ಯನಾಥರು ಮಹಂತ ನೃತ್ಯಗೋಪಾಲ ದಾಸ ಇವರ ಆರೋಗ್ಯದ ಬಗ್ಗೆ ಮಾಹಿತಿಯನ್ನು ಪಡೆದುಕೊಂಡಿದ್ದಾರೆ. ಮಹಂತ ನೃತ್ಯಗೋಪಾಲ ದಾಸ ಇವರನ್ನು ಮೇದಾಂತಾ ಆಸ್ಪತ್ರೆಯಲ್ಲಿ ಸೇರಿಸಲಾಗಿದೆ.