ಕೇಂದ್ರ ಸರಕಾರಕ್ಕೆ ಭಾರತದಲ್ಲಿ ಅಕ್ರಮವಾಗಿ ವಾಸಿಸುತ್ತಿರುವ ವಿದೇಶಿ ನಾಗರಿಕರ ಮೇಲೆ ಕ್ರಮ ಕೈಗೊಳ್ಳುವಂತೆ ಆದೇಶವನ್ನೂ ನೀಡುವಂತೆ ಬೇಡಿಕೆ ಹೀಗೇಕೆ ಆಗ್ರಹಿಸಬೇಕಾಗುತ್ತದೆ ? ಸರಕಾರ ಸ್ವತಃ ಇದನ್ನು ಮಾಡಬೇಕು!
ನವ ದೆಹಲಿ – ಇಡೀ ದೇಶದಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್.ಆರ್.ಸಿ.) ಜಾರಿಗೊಳಿಸಬೇಕು, ಎಂಬ ಬೇಡಿಕೆಯನ್ನು ಮಾಡುವ ಅರ್ಜಿಯೊಂದನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ಸಲ್ಲಿಸಲಾಗಿದೆ. ಈ ಅರ್ಜಿಯ ಮೂಲಕ ಕೇಂದ್ರ ಸರಕಾರಕ್ಕೆ ಅಕ್ರಮವಾಗಿ ಭಾರತದಲ್ಲಿ ವಾಸಿಸುವ ವಿದೇಶಿ ನಾಗರಿಕರ ಮೇಲೆ ಕ್ರಮ ಕೈಗೊಳ್ಳುವಂತೆ ಆದೇಶವನ್ನೂ ನೀಡಿ ಎಂದು ಬೇಡಿಕೆ ಮಾಡಿದೆ. ನೀರಜ ಶಂಕರ ಸಕ್ಸೆನಾ ಹಾಗೂ ಇತರ ೬ ಜನರು ಸೇರಿ ಈ ಅರ್ಜಿಯನ್ನು ನ್ಯಾಯವಾದಿ ವಿಷ್ಣು ಶಂಕರ ಜೈನ್ ಇವರ ಮಾಧ್ಯಮದಿಂದ ದಾಖಲಿಸಿದ್ದಾರೆ.
ಈ ಅರ್ಜಿಯಲ್ಲಿ ಬೇಡಿಕೆ ಸಲ್ಲಿಸುವಾಗ,
೧. ‘ಲೋಕಸಭೆ ಹಾಗೂ ರಾಜ್ಯಸಭೆ ಚುನಾವಣೆಯ ಮತದಾನದ ಪಟ್ಟಿಯ ಸಮೀಕ್ಷೆಯನ್ನು ಮಾಡಬೇಕು ಹಾಗೂ ಇದರಿಂದ ವಿದೇಶಿ ನಾಗರಿಕರ ಹೆಸರುಗಳನ್ನು ತೆಗೆಯಬೇಕು. ಸಂವಿಧಾನ ಕಲಂ ೧೪೨ ರ ಅಧಿಕಾರದ ಮೂಲಕ ಸರ್ವೋಚ್ಚ ನ್ಯಾಯಾಲಯವು ಓರ್ವ ವ್ಯಕ್ತಿಯ ಹೆಸರು ಮತದಾನದ ಪಟ್ಟಿಯಲ್ಲಿ ಸೇರಿಸುವ ಮೊದಲು ಸರಕಾರ ಆತನ ಪೌರತ್ವದ ಬಗ್ಗೆ ಖಾತ್ರಿ ಪಡಿಸಬೇಕು’, ಈ ರೀತಿಯಲ್ಲೂ ಆದೇಶವನ್ನು ನೀಡಬೇಕು.
೨. ಕಾನೂನಿಗನುಸಾರ ‘ಅಧಿನಿಯಮ ೧೯೫೫ ರ ಕಲಂ ೧೫೪ ಅ ಅನುಸಾರ ಭಾರತೀಯ ನಾಗರಿಕರ ರಾಷ್ಟ್ರೀಯ ನೊಂದಣಿ ಮಾಡುವುದು’, ಇದು ಕೇಂದ್ರ ಸರಕಾರದ ಕರ್ತವ್ಯವಾಗಿದೆ. ಈ ರೀತಿಯಲ್ಲಿ ಆಗದ ಕಾರಣ ದೇಶವು ದೊಡ್ಡ ಅಪಾಯವನ್ನು ಎದುರಿಸುತ್ತಿದೆ. ಭಾರತದಲ್ಲಿ ಕೋಟಿಗಟ್ಟಲೆ ಜನರು ಅಕ್ರಮವಾಗಿ ವಾಸಿಸುತ್ತಿದ್ದು ಅದರಿಂದ ದೇಶದ ಏಕತೆ ಹಾಗೂ ಸಾರ್ವಭೌಮತ್ವಕ್ಕೆ ಅಪಾಯವಿದೆ. ಅಷ್ಟೇ ಅಲ್ಲದೇ, ಈ ಜನರು ತೆರಿಗೆಯನ್ನು ಭರಿಸದೇ ದೇಶದ ಪ್ರತಿಯೊಂದು ಸೌಲಭ್ಯವನ್ನು ಪಡೆದುಕೊಳ್ಳುತ್ತಿದ್ದಾರೆ.
೩. ಅಕ್ರಮವಾಗಿ ವಾಸಿಸುವ ಈ ವಿದೇಶಿಯರ ಚುನಾವಣೆಯ ಆಯೋಗದ ನಿರ್ಲಕ್ಷತನದಿಂದಾಗಿ ಚುನಾವಣಾ ಪಟ್ಟಿಯಲ್ಲಿ ಹೆಸರನ್ನೂ ಸೇರಿಸಲಾಗಿದೆ. ಅವರು ಅಕ್ರಮವಾಗಿ ಪಡಿತರ ಚೀಟಿ, ಆಧಾರ ಕಾರ್ಡ್ ಹಾಗೂ ಪ್ಯಾನ್ ಕಾರ್ಡ್ ಮಾಡಿಸಿಕೊಂಡಿದ್ದಾರೆ. ಅದೇರೀತಿ ಇತರ ಕಾಗದಪತ್ರಗಳನ್ನೂ ಮಾಡಿಸಿಕೊಳ್ಳುತ್ತಿದ್ದಾರೆ. ಈ ಮೂಲಕ ಕೆಲಸ ಮತ್ತು ಇತರ ಸರಕಾರಿ ಸೌಲಭ್ಯಗಳ ಲಾಭವನ್ನೂ ಪಡೆದುಕೊಳ್ಳುತ್ತಿದ್ದಾರೆ ಎಂದು ಹೇಳಿದೆ.