ರಾಷ್ಟ್ರಧ್ವಜದ ‘ಮಾಸ್ಕ್’ ಮಾರಾಟ ಮಾಡುವ ಅಮೇಝಾನ, ಫ್ಲಿಪ್‌ಕಾರ್ಟ್ ಇತ್ಯಾದಿ ಕಂಪನಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಿ ! – ಸುರಾಜ್ಯ ಅಭಿಯಾನ

ರಾಷ್ಟ್ರಧ್ವಜ ಇದು ಶೃಂಗಾರದ ಮಾಧ್ಯಮವಲ್ಲ. ಈ ರೀತಿಯ ಮಾಸ್ಕ್ ಉಪಯೋಗಿಸಿದರೆ ಸೀನುವುದು, ಅದಕ್ಕೆ ಉಗುಳು ತಾಗುವುದು, ಅದು ಅಸ್ವಚ್ಛವಾಗುವುದು, ಅದೇರೀತಿ ಉಪಯೋಗಿಸಿದ ನಂತರ ಕಸದಲ್ಲಿ ಬಿಸಾಡುವುದು ಇತ್ಯಾದಿಗಳಿಂದಾಗಿ ರಾಷ್ಟ್ರಧ್ವಜದ ಅವಮಾನವಾಗುತ್ತದೆ ಹಾಗೂ ಹೀಗೆ ಮಾಡುವುದೆಂದರೆ ಇದು ‘ರಾಷ್ಟ್ರೀಯ ಚಿಹ್ನೆಯ ದುರುಪಯೋಗ ತಡೆ ಕಾನೂನು ೧೯೫೦’, ಕಲಮ್ ೨ ಹಾಗೂ ೫ ಕ್ಕನುಸಾರ; ಅದೇರೀತಿ ‘ರಾಷ್ಟ್ರದ ಘನತೆಯ ಅವಮಾನ ಪ್ರತಿಬಂಧಕ ಅಧಿನಿಯಮ ೧೯೭೧’ರ ಕಲಂ ೨ ಕ್ಕನುಸಾರ ಹಾಗೂ ‘ಬೋಧಚಿಹ್ನೆ ಹಾಗೂ ಹೆಸರು (ದುರುಪಯೋಗ ನಿರ್ಬಂಧ) ಅಧಿನಿಯಮ ೧೯೫೦’ ಈ ಮೂರೂ ಕಾನೂನುಗಳಿಗನುಸಾರ ದಂಡನೀಯ ಅಪರಾಧವಾಗಿದೆ.

ಕಾಂಗ್ರೇಸ್ ಶಾಸಕನ ಸೋದರಳಿಯನ ತಲೆ ಕಡಿಯುವವರಿಗೆ ೫೧ ಲಕ್ಷ ರೂಪಾಯಿಯ ಬಹುಮಾನ ನೀಡುತ್ತೇನೆಂದ ಮತಾಂಧ

ಹಮ್ಮದ ಪೈಗಂಬರರ ವಿರುದ್ಧ ಫೇಸ್‌ಬುಕ್‌ನಲ್ಲಿ ಆಕ್ಷೇಪಾರ್ಹ ಪೋಸ್ಟ್ ಮಾಡಿದ ಆರೋಪದ ಪ್ರಕರಣದಲ್ಲಿ ಬೆಂಗಳೂರಿನ ಕಾಂಗ್ರೆಸ್‌ನ ಶಾಸಕ ಅಖಂಡ ಶ್ರೀನಿವಾಸ ಮೂರ್ತಿಯ ಸೋದರಳಿಯನ ತಲೆ ಕಡಿದವನಿಗೆ ೫೧ ಲಕ್ಷ ರೂಪಾಯಿ ನೀಡುತ್ತೇನೆ ಎಂದು ಘೋಷಿಸಿದ ಮೀರತ್‌ದಲ್ಲಿಯ ಶಾಹಜೇಬ ರಿಝ್ವಿ ವಿರುದ್ಧ ಪ್ರಕರಣವನ್ನು ದಾಖಲಿಸಲಾಗಿದೆ.

ಆಗಸ್ಟ್ ೧೫ ರ ಸ್ವಾತಂತ್ರ್ಯ ದಿನದ ನಿಮಿತ್ತ ಲೇಖನ

ಅಹಿಂಸೆಯ ಪಾಠದಿಂದ ಭಾರತೀಯ ಸಮಾಜ ದುರ್ಬಲವಾಗಿದೆ. ಆದ್ದರಿಂದ ಸ್ವಾತಂತ್ರ್ಯದ ೭೧ ವರ್ಷಗಳ ನಂತರ ‘ಇತಿಹಾಸವನ್ನು ಮತ್ತೊಮ್ಮೆ ಬರೆಯುವುದು, ಆವಶ್ಯಕವಾಗಿದೆ. ಗಾಂಧಿ ಮತ್ತು ನೆಹರು ಇವರು ಇತರರ ಹಾಗೆ ಸೆರೆಮನೆ ಮತ್ತು ಬ್ರಿಟಿಷರ ಹಿಂಸೆಯನ್ನು ಅನುಭವಿಸಿಲ್ಲ. ಆದ್ದರಿಂದ ಅವರಿಗೆ ಇತರ ಕ್ರಾಂತಿಕಾರಿಗಳ ತ್ಯಾಗ ಮತ್ತು ಅಪಾರ ದೇಶಭಕ್ತಿಯ ಮಹತ್ವ ತಿಳಿದಿರಲಿಲ್ಲ.

ಆಗಸ್ಟ್ ೧೫ ರ ಸ್ವಾತಂತ್ರ್ಯದಿನದ ನಿಮಿತ್ತ ಲೇಖನ

ಸ್ವಾಮೀ ರಾಮತೀರ್ಥರ ಹೇಳಿಕೆಗನುಸಾರ ಮತ್ತು ರಶಿಯಾದಲ್ಲಿನ ಅನೇಕ ವಿದ್ವಾಂಸರ ಲೇಖನಗಳಿಗನುಸಾರ ಯೇಸು ಕ್ರಿಸ್ತನು ೧೭ ವರ್ಷಗಳ ವರೆಗೆ ಭಾರತದಲ್ಲಿದ್ದನು. ಅವನು ಕಾಶ್ಮೀರದಲ್ಲಿನ ಯೋಗಿಗಳಿಂದ ಯೋಗವನ್ನು ಕಲಿತನು. ನಂತರ ಅಲ್ಲಿಗೆ ಹೋಗಿ ಹೆಸರುವಾಸಿಯಾದನು. ಇಂತಹ ದಿವ್ಯ ಭಾರತಭೂಮಿಯ ಬಗ್ಗೆ ಈ ಯುವಕರು, ‘ಇಂಡಿಯಾ ಈಜ್ ನಥ್ಥಿಂಗ್; ಇಂಡಿಯಾ ಇಸ್ ವೇರಿ ಪುವರ್’ ಎಂದು ಹೇಳತೊಡಗುತ್ತಾರೆ.

ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಮುಖ್ಯಸ್ಥ ಮಹಂತ ನೃತ್ಯಗೋಪಾಲ ದಾಸ ಇವರಿಗೆ ಕೊರೋನಾದ ಸೋಂಕು

ಅಯೋಧ್ಯೆಯಲ್ಲಿಯ ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಮುಖ್ಯಸ್ಥ ಮಹಂತ ನೃತ್ಯಗೋಪಾಲ ದಾಸ ಇವರಿಗೆ ಕೊರೋನಾದ ಸೋಂಕು ತಗಲಿದೆ. ಆಗಸ್ಟ್ ೫ ರಂದು ನೆರವೇರಿದ್ದ ಶ್ರೀರಾಮಮಂದಿರದ ಭೂಮಿ ಪೂಜೆಯ ಕಾರ್ಯಕ್ರಮದಲ್ಲಿ ಮಹಂತ ನೃತ್ಯಗೋಪಾಲ ದಾಸ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

೧೩೦ ಕೋಟಿಗಳ ಪೈಕಿ ಕೇವಲ ಒಂದುವರೆ ಕೋಟಿ ಭಾರತೀಯರು ತೆರಿಗೆಯನ್ನು ಕಟ್ಟುತ್ತಾರೆ !

ಭಾರತದಲ್ಲಿ ಸದ್ಯ ೧೩೦ ಕೋಟಿ ಜನಸಂಖ್ಯೆಯಲ್ಲಿ ಕೇವಲ ಒಂದೂವರೆ ಕೋಟಿ ಜನರು ತೆರಿಗೆಯನ್ನು ಕಟ್ಟುತ್ತಾರೆ. ಕಳೆದ ೬-೭ ವರ್ಷಗಳಲ್ಲಿ ‘ಟ್ಯಾಕ್ಸ್ ರಿಟರ್ನ್’ ತುಂಬಿಸುವ ಸಂಖ್ಯೆ ಎರಡುವರೆ ಕೋಟಿಗೆ ಹೆಚ್ಚಾಗಿದೆ; ಆದರೆ ೧೩೦ ಕೋಟಿ ಜನಸಂಖ್ಯೆಯ ತುಲನೆಯಲ್ಲಿ ಈ ಏರಿಕೆ ತುಂಬಾನೇ ಕಡಿಮೆ ಇದೆ. ಇದರ ಬಗ್ಗೆ ಎಲ್ಲರೂ ಚಿಂತನೆ ಮಾಡುವುದು ಆವಶ್ಯಕವಾಗಿದೆ.

ಪ್ರಯಾಗರಾಜ(ಉತ್ತರಪ್ರದೇಶ) ಇಲ್ಲಿ ಮತಾಂಧ ಯುವಕನಿಂದ ಶ್ರೀ ಹನುಮಂತನ ಮೂರ್ತಿಯ ಧ್ವಂಸ

ಇಲ್ಲಿಯ ಸೊರಾವ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿರುವ ಶ್ರೀ ಹನುಮಂತನ ದೇವಸ್ಥಾನದಲ್ಲಿನ ಮೂರ್ತಿಯನ್ನು ಮತಾಂಧನು ಆಗಸ್ಟ್ ೧೨ ರಂದು ಧ್ವಂಸ ಮಾಡಿರುವ ಘಟನೆ ನಡೆದಿದೆ. ಈ ಪ್ರಕರಣದಲ್ಲಿ ಪೊಲೀಸರು ಮಹಮ್ಮದ ಗುಲಫಾಮನನ್ನು ಬಂಧಿಸಿದ್ದಾರೆ ಹಾಗೂ ಆತ ಮೂರ್ತಿಯನ್ನು ಧ್ವಂಸ ಮಾಡಿದನೆಂದು ಒಪ್ಪಿಕೊಂಡಿದ್ದಾನೆ.

ಬೆಂಗಳೂರಿನಲ್ಲಿ ಮತಾಂಧರ ಹಿಂಸಾಚಾರ; ೬೦ ಪೊಲೀಸರಿಗೆಗಾಯ; ಪೊಲೀಸರ ಗುಂಡಿಗೆ ಮೂವರು ಗಲಭೆಕೋರರ ಸಾವು

‘ಫೇಸ್‌ಬುಕ್ನಲ್ಲಿ ಮಹಮ್ಮದ ಪೈಗಂಬರ ಬಗ್ಗೆ ಅಕ್ಷೇಪಾರ್ಹ ಪೋಸ್ಟ್ ಮಾಡ ಲಾಗಿದೆ ಎಂದು ಆರೋಪಿಸಿ ಮತಾಂಧರು ಆಗಸ್ಟ್ ೧೧ ರ ರಾತ್ರಿ ಹಿಂಸಾಚಾರ ಮಾಡಿದರು. ಕಾಂಗ್ರೆಸ್ ಶಾಸಕ ಶ್ರೀನಿವಾಸ ಮೂರ್ತಿಯವರ ಮನೆಯ ಮೇಲೆ ಹಲ್ಲೆ ಮಾಡಿ ಬೆಂಕಿ ಹಚ್ಚಿದರು. ಅದೇರೀತಿ ೨೦೦ ಕ್ಕೂ ಹೆಚ್ಚು ವಾಹನಗಳನ್ನು ಸುಟ್ಟರು. ಹಿಂಸಾಚಾರವನ್ನು ತಡೆಯಲು ಪ್ರಯತ್ನಿಸಿದ ಪೊಲೀಸರ ಮೇಲೆಯೇ ಮತಾಂಧರು ಹಲ್ಲೆ ನಡೆಸಿದರು.

ಆಗಸ್ಟ್ ೧೩ ರಂದು ಇರುವ ಮೇಡಮ್ ಭಿಕಾಯಿಜಿ ರುಸ್ತುಮ ಕಾಮಾ ಇವರ ಪುಣ್ಯಸ್ಮರಣೆ ನಿಮಿತ್ತ… ಶ್ರಾವಣ ಶುಕ್ಲ ಪಕ್ಷ ನವಮಿ (೧೩.೮.೨೦೨೦)

ಮೇಡಮ್ ಕಾಮಾ ಇವರ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಯೋಗದಾನವು ನಿಬ್ಬೆರಗಾಗುವಂತಿದೆ. ಮದನಲಾಲ ಧಿಂಗ್ರಾ ಇವರು ಕರ್ಝನ ವಾಯಲಿಯನ್ನು ಕೊಂದ ನಂತರ ಮೇಡಮ್ ಕಾಮಾ ಇವರು ೧೯೦೯ ರಲ್ಲಿ ಮದನಲಾಲ ಇವರ ಸ್ಮರಣಾರ್ಥ ‘ಮದನ ತಲವಾರ’ ಹೆಸರಿನ ಒಂದು ನಿಯತಕಾಲಿಕೆ ಆರಂಭಿಸಿದರು.

ಪುಲವಾಮಾದಲ್ಲಿ ಓರ್ವ ಉಗ್ರನ ಸಾವು, ಒಬ್ಬ ಸೈನಿಕ ಹುತಾತ್ಮ

ಇಲ್ಲಿಯ ಕಾಮರಾಜಿಪೊರಾದಲ್ಲಿ ಬೆಳಗಿನ ಜಾವ ನಡೆದ ಚಕಮಕಿಯಲ್ಲಿ ರಕ್ಷಣಾ ಪಡೆಗಳು ಓರ್ವ ಭಯೋತ್ಪಾದಕನನ್ನು ಹೊಡೆದುರುಳಿಸಿದ್ದಾರೆ ಹಾಗೂ ಇದರಲ್ಲಿ ಓರ್ವ ಸೈನಿಕ ಹುತಾತ್ಮನಾಗಿದ್ದಾನೆ. ಇಲ್ಲಿ ಇಬ್ಬರು ಉಗ್ರರು ಇರುವ ಮಾಹಿತಿ ಸಿಕ್ಕಿದಾಕ್ಷಣ ಈ ಪ್ರದೇಶವನ್ನು ಸುತ್ತುವರಿದು ಶೋಧ ಕಾರ್ಯಾಚರಣೆಯನ್ನು ಕೈಗೊಳ್ಳಲಾಯಿತು.