ದುರ್ಗಾಪೂಜಾ ಸಮಿತಿಗಳಿಗೆ ೧೦ ಲಕ್ಷ ರೂಪಾಯಿ ನೀಡಬೇಕು ! – ಪಶ್ಚಿಮ ಬಂಗಾಳ ಸರಕಾರಕ್ಕೆ ಕೊಲಕಾತಾ ಉಚ್ಚ ನ್ಯಾಯಾಲಯದಿಂದ ಆದೇಶ !

ಸರಕಾರವು ಕೊಡುತ್ತಿರುವ ೮೫ ಸಾವಿರ ರೂಪಾಯಿಗಳು ಅತ್ಯಲ್ಪವಾಗಿದೆ ಎಂಬ ಅಭಿಪ್ರಾಯ

ಕೊಲಕಾತಾ (ಬಂಗಾಳ) – ದುರ್ಗಾ ಪೂಜಾ ಸಮಿತಿಗಳಿಗೆ ಸರಕಾರದಿಂದ ದೊರೆಯುವ ೮೫ ಸಾವಿರ ರೂಪಾಯಿ ಮೊತ್ತವು ಕೇವಲ ಹೆಸರಿಗೆ ಮಾತ್ರವಿದೆ. ಇದರಿಂದ ಆಯೋಜಕರಿಗೆ ಮಂಟಪಕ್ಕಾಗಿ ಎಷ್ಟೋ ಪಟ್ಟು ಹೆಚ್ಚಿನ ಹಣ ವ್ಯಯ ಮಾಡಬೇಕಾಗಿರುತ್ತದೆ. ಸರಕಾರವು ಪ್ರತಿಯೊಂದು ದುರ್ಗಾ ಪೂಜಾ ಸಮಿತಿಗೆ ಕನಿಷ್ಠ ೧೦ ಲಕ್ಷ ರೂಪಾಯಿ ನೀಡುವ ಯೋಚನೆ ಮಾಡಬೇಕು, ಎಂದು ಕೋಲಕಾತಾ ಉಚ್ಚ ನ್ಯಾಯಾಲಯವು ಬಂಗಾಳದಲ್ಲಿನ ತೃಣಮೂಲ ಕಾಂಗ್ರೆಸ್ ಸರಕಾರಕ್ಕೆ ಆದೇಶಿಸಿದೆ. ನ್ಯಾಯಾಲಯವು ದುರ್ಗಾ ಪೂಜೆಯ ಆಯೋಜಕರಿಗೆ ಸರಕಾರದಿಂದ ನೀಡಲಾಗುವ ಹಣದ ಮೇಲೆ ನಿರ್ಬಂಧ ಹೇರುವ ವಿಷಯದಲ್ಲಿನ ಅರ್ಜಿಯ ಆಲಿಕೆಯ ಸಮಯದಲ್ಲಿ ಮೇಲಿನ ಸೂಚನೆಯನ್ನು ನೀಡಿದೆ.

ಪೂಜಾ ಸಮಿತಿಗಳಿಗೆ ನೀಡಲಾಗುವ ಸಹಾಯದ ಲೆಕ್ಕ ಎಲ್ಲಿಯೂ ಇಲ್ಲ, ಹೀಗಾಗಿ ಅವರಿಗೆ ಆರ್ಥಿಕ ಸಹಾಯ ನೀಡುವುದನ್ನು ನಿಲ್ಲಿಸಬೇಕೆಂದು ಅರ್ಜಿದಾರರ ನ್ಯಾಯವಾದಿಗಳಾದ ನಂದಿನಿ ಮಿತ್ರಾರವರು ಮನವಿ ಮಾಡಿದ್ದರು; ಆದರೆ ಉಚ್ಚ ನ್ಯಾಯಾಲಯವು ಇಂತಹ ಯಾವುದೇ ನಿರ್ಬಂಧದ ಆದೇಶ ನೀಡಲಿಲ್ಲ.

೧. ಆಲಿಕೆಯ ಸಮಯದಲ್ಲಿ ಮುಖ್ಯ ನ್ಯಾಯಾಧೀಶರಾದ ಟಿ. ಎಸ್. ಶಿವಗ್ನನಮ್ ರವರು, ನಾನು ಕಳೆದ ೨ ವರ್ಷದಿಂದ ಅನೇಕ ದುರ್ಗಾ ಪೂಜಾ ಮಂಟಪಗಳಿಗೆ ಭೇಟಿ ನೀಡಿದ್ದೇನೆ. ನನಗೆ ಕಾರ್ಯಕ್ರಮವನ್ನು ಆಯೋಜಿಸಲು ಮಾಡಲಾಗುವ ಖರ್ಚಿನ ಸಾಲದ ತುಲನೆಯಲ್ಲಿ ೮೫ ಸಾವಿರ ರೂಪಾಯಿ ಏನೇನು ಅಲ್ಲ, ಎಂದು ಅನಿಸುತ್ತದೆ. ಆದುದರಿಂದ ಪೂಜಾ ಸಮಿತಿಗಳನ್ನು ಪ್ರೋತ್ಸಾಹಿಸಲು ರಾಜ್ಯವು ನಿಧಿಯನ್ನು ವಿತರಿಸಬೇಕು; ಏಕೆಂದರೆ ದುರ್ಗಾ ಪೂಜೆಯು ರಾಜ್ಯದ ಸಾಂಸ್ಕೃತಿಕ ಪರಂಪರೆಯ ಒಂದು ಭಾಗವಾಗಿದೆ, ಎಂದು ಹೇಳಿದರು. ಆದುದರಿಂದ ರಾಜ್ಯವು ಪ್ರತಿಯೊಂದು ದುರ್ಗಾ ಪೂಜೆಯ ಆಯೋಜಕರಿಗೆ ೧೦ ಲಕ್ಷ ರೂಪಾಯಿ ನೀಡುವ ವಿಚಾರ ಮಾಡಬೇಕು, ಎಂದು ಬಂಗಾಳ ಸರಕಾರದ ಪರ ನ್ಯಾಯವಾದಿಗಳಾದ ಜನರಲ್ ಕಿಶೋರ ದತ್ತಾರವರು ಹೇಳಿದರು.

೨. ಮುಖ್ಯ ನ್ಯಾಯಾಧೀಶರು ಮಾತು ಮುಂದುವರೆಸಿ, ಸರಕಾರದಿಂದ ದೊರೆತಿರುವ ಹಣ ಎಲ್ಲಿ ಖರ್ಚಾಗುತ್ತಿದೆ ? ಎಂಬುದನ್ನು ನೋಡಬೇಕಾಗುವುದು. ಸಮಿತಿಗಳಿಗೆ ಹಣ ದೊರೆತರೆ ಅವರು ಹಣದ ಉಪಯೋಗ ಹೇಗೆ ಮಾಡುತ್ತಾರೆ? ಎಂಬುದನ್ನೂ ನೋಡಬೇಕಾಗುವುದು.

೩. ಈ ಅರ್ಜಿಯಲ್ಲಿ ಪೂಜಾ ಮಂಡಪಕ್ಕೆ ವಿದ್ಯುತ್ ಶುಲ್ಕದಲ್ಲಿ ಸಿಗುವ ರಿಯಾಯಿತಿ ತಡೆಯಬೇಕೆಂದೂ ಆಗ್ರಹಿಸಲಾಗಿತ್ತು; ಆದರೆ ನ್ಯಾಯಾಲಯವು ಈ ಬೇಡಿಕೆಗಳನ್ನೂ ತಳ್ಳಿ ಹಾಕಿದೆ. ನ್ಯಾಯಾಲಯವು ಬೆಳಕಿನ ಯೋಜನೆಯಲ್ಲಿನ ಖರ್ಚಿನಲ್ಲಿ ರಿಯಾಯಿತಿ ಸಿಗುವುದು ಸಾರ್ವಜನಿಕ ಉದ್ದೇಶವಾಗಿರಬಹುದು; ಏಕೆಂದರೆ ಮಂಟಪದಲ್ಲಿನ ಬೆಳಕಿನ ವ್ಯವಸ್ಥೆ ಮೂಲಭೂತ ಸೌಲಭ್ಯದ ಅವಶ್ಯಕತೆಯನ್ನು ಪೂರ್ಣಗೊಳಿಸುತ್ತದೆ, ಎಂದು ಹೇಳಿದೆ.

ಸಂಪಾದಕೀಯ ನಿಲುವು

ಮೊಟ್ಟ ಮೊದಲ ಬಾರಿಗೆ ಹಿಂದೂಗಳ ಉತ್ಸವಕ್ಕಾಗಿ ಆರ್ಥಿಕ ಸಹಾಯ ಹೆಚ್ಚಿಸುವಂತೆ ಸರಕಾರಕ್ಕೆ ಸೂಚಿಸಲಾಗಿದೆ. ಇಂತಹ ವಿಷಯಗಳು ಹಿಂದೂಗಳಿಗಾಗಿ ಉತ್ತಮ ಸಂಗತಿ ಎಂದು ಹೇಳಬಹುದು.