ಬುರಹಾನಪೂರ (ಮಧ್ಯಪ್ರದೇಶ) ರೈಲ್ವೆ ಹಳಿಯ ಮೇಲೆ ಸ್ಫೋಟಕ ಪತ್ತೆ; ಸಾಬೀರ ಎಂಬ ರೇಲ್ವೆ ಸಿಬ್ಬಂದಿಯ ಬಂಧನ

ಈ ರೈಲ್ವೆ ಮಾರ್ಗದಿಂದ ಭಾರತೀಯ ಸೈನಿಕರ ವಿಶೇಷ ರೈಲು ಹೋಗುವುದಿತ್ತು.

ಬುರಹಾನಪೂರ (ಮಧ್ಯಪ್ರದೇಶ) – ಸೆಪ್ಟೆಂಬರ್ 18 ರಂದು ರೈಲ್ವೆ ಹಳಿಯ ಮೇಲೆ ಸ್ಫೋಟಕ್ಕಾಗಿ ಬಳಸಲಾಗುವ ಡಿಟೋನೇಟರ್‌ಗಳು ಪತ್ತೆಯಾಗಿದ್ದವು. ಭಾರತೀಯ ಸೈನಿಕರು ಮತ್ತು ಅಧಿಕಾರಿಗಳು ಪ್ರಯಾಣಿಸಲಿದ್ದ ರೈಲನ್ನು ಹಳಿಯಿಂದ ತಪ್ಪಿಸಿ ಅಪಘಾತ ನಡೆಸುವ ಸಲುವಾಗಿ ಈ ಡಿಟೋನೇಟರ್‌ಗಳನ್ನು ಇರಿಸಲಾಗಿತ್ತು ಎಂಬ ಅನುಮಾನ ಮೂಡಿದೆ. ಈಗ ಈ ಪ್ರಕರಣದಲ್ಲಿ ಪೊಲೀಸರು ಸಾಬೀರ ಎಂಬ ಹೆಸರಿನ ಆರೋಪಿಯನ್ನು ಬಂಧಿಸಿದ್ದಾರೆ. ಸಾಬೀರ ರೈಲ್ವೆ ಸಿಬ್ಬಂದಿಯಾಗಿದ್ದಾನೆ. ಈ ಕೃತ್ಯದ ಹಿಂದಿನ ಅವನ ಉದ್ದೇಶವನ್ನು ತನಿಖೆ ನಡೆಸಲಾಗುತ್ತಿದೆ. (ಅವನ ಉದ್ದೇಶ ಏನೇ ಇದ್ದರೂ ಈ ರೀತಿಯ ಸ್ಫೋಟಕಗಳನ್ನು ಇಡುವುದು ಕಾನೂನಿಗೆ ಅನುಗುಣವಾಗಿದೆಯೇ? – ಸಂಪಾದಕರು)

ರಾಷ್ಟ್ರೀಯ ತನಿಖಾ ಸಂಸ್ಥೆ, ಭಯೋತ್ಪಾದನಾ ನಿಗ್ರಹ ದಳ ಮತ್ತು ರೈಲ್ವೆ ಪೊಲೀಸ್ ತಂಡದಿಂದ ಸಾಬೀರನ ವಿಚಾರಣೆ ನಡೆಸಲಾಗುತ್ತಿದೆ. ಮಧ್ಯ ರೇಲ್ವೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ. ಸ್ವಪ್ನಿಲ್ ನೀಲಾ ಅವರು ಈ ಬಗ್ಗೆ ಮಾತನಾಡಿ, ವಶಪಡಿಸಿಕೊಂಡ ಡಿಟೋನೇಟರ್‌ಗಳನ್ನು ಕೇವಲ ರೈಲ್ವೆ ಇಲಾಖೆಯಲ್ಲಿ ಮಾತ್ರ ಬಳಸಲಾಗುತ್ತದೆ; ಆದರೆ ಅವು ಹಳಿಗಳ ಮೇಲೆ ಸಿಗಲು ಯಾವುದೇ ಕಾರಣವಿರಲಿಲ್ಲ ಎಂದು ಹೇಳಿದ್ದಾರೆ.

ಮಂಜು ಅಥವಾ ಮಂಜಿನಲ್ಲಿ ರೈಲನ್ನು ನಿಲ್ಲಿಸಲು ಡಿಟೋನೇಟರಗಳನ್ನು ಉಪಯೋಗಿಸಲಾಗುತ್ತದೆ. ಅದರ ಸ್ಫೋಟದ ಸದ್ದನ್ನು ಕೇಳಿದ ಬಳಿಕ ರೈಲ್ವೇ ಚಾಲಕನು ಜಾಗೃತಗೊಂಡು ರೈಲನ್ನು ನಿಲ್ಲಿಸುತ್ತಾನೆ. ಈ ಡಿಟೋನೇಟರ್‌ಗಳನ್ನು ನಿಲ್ದಾಣದ ಮುಖ್ಯಸ್ಥರು, ‘ಕೀ ಮ್ಯಾನ್’ ಮತ್ತು ‘ಲೋಕೋ ಪೈಲಟ್’ ಬಳಿ ಇರುತ್ತದೆ.

ಸಂಪಾದಕೀಯ ನಿಲುವು

ರೈಲ್ವೆ ಜಿಹಾದಿಗಳು’ ದೇಶಕ್ಕೆ ಎಷ್ಟು ಅಪಾಯಕಾರಿ ಎಂಬುದನ್ನು ಗಮನಿಸಿ