ಮೂಡಾ ಭೂ ಹಗರಣದ ಪ್ರಕರಣ; ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಹಿನ್ನಡೆ

  • ಮುಖ್ಯಮಂತ್ರಿ ಸಿದ್ದರಾಮಯ್ಯ ಇವರ ವಿರುದ್ಧ ದೂರು ದಾಖಲಾಗುವುದು !

  • ರಾಜ್ಯಪಾಲರ ಆದೇಶವನ್ನು ಎತ್ತಿ ಹಿಡಿದ ಉಚ್ಚ ನ್ಯಾಯಾಲಯ

ಬೆಂಗಳೂರು – ‘ಮೈಸೂರ್ ಅರ್ಬನ್ ಡೆವಲಪ್ಮೆಂಟ್ ಅಥಾರಿಟಿ’ ಎಂದರೆ ‘ಮುಡಾ’ ಭೂ ಹಗರಣದ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇವರು ರಾಜ್ಯಪಾಲರು ನೀಡಿರುವ ಆದೇಶಕ್ಕೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಉಚ್ಚ ನ್ಯಾಯಾಲಯವು ತಳ್ಳಿ ಹಾಕುತ್ತ ಸಿದ್ಧರಾಮಯ್ಯ ಇವರ ವಿರುದ್ಧ ಮೊಕದ್ದಮೆ ನಡೆಸಲು ಅನುಮತಿ ನೀಡಿದೆ. ಇದರ ಜೊತೆಗೆ ನ್ಯಾಯಾಲಯವು ಮುಖ್ಯಮಂತ್ರಿ ವಿರುದ್ಧ ಮೊಕದ್ದಮೆ ನಡೆಸಲು ರಾಜ್ಯಪಾಲರ ಆದೇಶ ಎತ್ತಿ ಹಿಡಿದಿದೆ. ಆದ್ದರಿಂದ ಈ ಹಗರಣದ ಪ್ರಕರಣದಲ್ಲಿ ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ದೂರು ದಾಖಲಿಸಲು ಮಾರ್ಗ ಸ್ವತಂತ್ರವಾಗಿದೆ.

ಈ ಹಿಂದೆ ಸಪ್ಟೆಂಬರ್ ೧೨ ರಂದು ಈ ಪ್ರಕರಣದ ವಿಚಾರಣೆ ಪೂರ್ಣಗೊಳಿಸಿ ಉಚ್ಚ ನ್ಯಾಯಾಲಯವು ನಿರ್ಣಯವನ್ನು ಕಾದಿರಿಸಿತ್ತು. ಅದರ ನಂತರ ಸಪ್ಟೆಂಬರ್ ೨೪ ರಂದು ತೀರ್ಪು ನೀಡುವಾಗ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಇವರು ‘ಅರ್ಜಿಯಲ್ಲಿ ನಮೂದಿಸಿರುವ ಆರೋಪದ ವಿಚಾರಣೆ ನಡೆಸುವುದು ಅಗತ್ಯವಾಗಿದೆ. ರಾಜ್ಯಪಾಲರು ಕಾನೂನಿನ ಪ್ರಕಾರ ಮೊಕದ್ದಮೆ ನಡೆಸಬಹುದು. ರಾಜ್ಯಪಾಲರ ಕೃತಿಯಲ್ಲಿ ಯಾವುದೇ ದೋಷ ಕಂಡು ಬರುವುದಿಲ್ಲ’, ಎಂದು ಹೇಳಿದರು. ಮುಡಾ ಭೂ ಹಗರಣದ ಪ್ರಕರಣದಲ್ಲಿ ಟಿ.ಜೆ. ಅಬ್ರಾಹಿಂ ಇವರು ಮುಖ್ಯಮಂತ್ರಿ ಸಿದ್ದರಾಮಯ್ಯ ಇವರ ವಿರುದ್ಧ ದೂರು ನೀಡಿದ್ದಾರೆ.

ಇದು ಭಾಜಪದ ರಾಜಕೀಯ ಷಡ್ಯಂತ್ರ ! – ಕಾಂಗ್ರೆಸ್

ರಾಜ್ಯದ ಕಾಂಗ್ರೆಸ್ಸಿನ ನಾಯಕ ಹಾಗೂ ಉಪಮುಖ್ಯಮಂತ್ರಿಯ ಡಿ.ಕೆ. ಶಿವಕುಮಾರ್ ಇವರು, ಈ ಘಟನೆ ಎಂದರೆ ಭಾಜಪದ ರಾಜಕೀಯ ಷಡ್ಯಂತ್ರವಾಗಿದೆ. ಮುಖ್ಯಮಂತ್ರಿಗಳು ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ. ಅವರು ಯಾವುದೇ ತಪ್ಪು ಮಾಡಿಲ್ಲ ಮತ್ತು ಅವರು ಯಾವುದೇ ಹಗರಣದಲ್ಲಿ ಭಾಗಿಯಾಗಿಲ್ಲ. ನಾವು ಅವರ ಬೆಂಬಲಕ್ಕೆ ಇದ್ದೇವೆ. ದೇಶ, ಪಕ್ಷ ಮತ್ತು ರಾಜ್ಯಕ್ಕಾಗಿ ಅವರು ಒಳ್ಳೆಯ ಕಾರ್ಯ ಮಾಡುತ್ತಿದ್ದಾರೆ ಎಂದು ಹೇಳಿದರು.

ಮುಡಾ ಭೂ ಹಗರಣದ ಪ್ರಕರಣ ಎಂದರೆ ಏನು ?

ಮುಖ್ಯಮಂತ್ರಿ ಸಿದ್ದರಾಮಯ್ಯ ಇವರ ಪತ್ನಿ ಪಾರ್ವತಿ ೨೦೨೧ ರಲ್ಲಿ ‘ಮೈಸೂರ್ ಅರ್ಬನ್ ಡೆವಲಪ್ಮೆಂಟ್ ಅಥಾರಿಟಿ’ ಎಂದರೆ ಮುಡಾದಲ್ಲಿ ‘೫೦:೫೦ ಭೂಮಿ ವಿತರಣಾ ಯೋಜನೆ’ ಈ ಯೋಜನೆಯಲ್ಲಿ ಲಾಭ ಪಡೆದಿದ್ದರು. ಈ ಯೋಜನೆಯ ಅಡಿಯಲ್ಲಿ ‘ಮುಡಾ’ ಯಾವುದೇ ಭೂಮಿಯಲ್ಲಿ ವಾಸಿಸಲು ಯೋಗ್ಯ ಜಾಗಗಳನ್ನು ವಿಕಿಸಿತಗೊಳಿಸುವುದಕ್ಕಾಗಿ ಭೂಮಿ ಪಡೆಯಲು ಸಕ್ಷಮವಾಗಿತ್ತು . ‘ಭೂಮಿ ಪಡೆಯುವ ಬದಲು ‘ಭೂಮಿಯ ಮೂಲ ಮಾಲೀಕರಿಗೆ ವಿಕಸಿತಗೊಳಿಸಿರುವ ಸ್ಥಳದಲ್ಲಿ ಶೇಕಡ ೫೦ ರಷ್ಟು ಭೂಮಿ ನೀಡುವ’ ನಿಯಮವಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಪತ್ನಿ ಪಾರ್ವತಿ ಮತ್ತು ಅವರ ಸಂಬಂಧಿಕರು ಮುಡಾದ ಅಧಿಕಾರಿಗಳ ಜೊತೆಗೆ ಹೊಂದಾಣಿಕೆ ಮಾಡಿಕೊಂಡು ೫೦:೫೦ ಭೂಮಿ ವಿತರಣೆ ಯೋಜನೆಯ ಅಡಿಯಲ್ಲಿ ಬೆಲೆಬಾಳುವ ಜಾಗ ಪಡೆಯುವುದಕ್ಕಾಗಿ ನಕಲಿ ದಾಖಲೆಗಳು ಸೃಷ್ಠಿಸಿದ್ದರು. ಈ ಘಟನೆಯ ಮಾಹಿತಿ ಅಧಿಕಾರ ಕಾರ್ಯಕರ್ತರು ಬೆಳಕಿಗೆ ತಂದರು.