ಆಗಸ್ಟ್ ೧೫ ರ ಸ್ವಾತಂತ್ರ್ಯ ದಿನದ ನಿಮಿತ್ತ ಲೇಖನ

‘ದೆ ದೀ ಹಮೆ ಆಜಾದಿ, ಬಿನಾ ತಲವಾರ್, ಬಿನಾ ಢಾಲ್, ಸಾಬರಮತೀ ಕೇ ಸಂತ ತೂನೇ ಕರ್‌ದಿಯಾ ಕಮಾಲ್, ಅಹಿಂಸೆಯ ಪ್ರತೀಕವಾಗಿರುವ ಹಾಡನ್ನು ೧೨೫ ಕೋಟಿ ಭಾರತೀಯರ ನರನಾಡಿಗಳಲ್ಲಿ ಹರಡಲಾಗಿದೆ. ಆದ್ದರಿಂದಲೇ ಸ್ವಾತಂತ್ರ್ಯದ ೭೧ ವರ್ಷಗಳ ನಂತರವೂ ಸ್ವಾತಂತ್ರ್ಯವೀರ ಸಾವರಕರ್, ಲೋಕಮಾನ್ಯ ತಿಲಕ್ ಸರದಾರ ಪಟೇಲ್, ನೇತಾಜಿ ಸುಭಾಶ್ಚಂದ್ರ ಬೋಸ್, ಭಗತಸಿಂಗ್ ಮುಂತಾದ ರಾಷ್ಟ್ರಪುರುಷರು ಮತ್ತು ಕ್ರಾಂತಿಕಾರಿಗಳ ಬದಲು ಗಾಂಧಿಯವರನ್ನು ಮನೆಮನೆಗಳಲ್ಲಿ ಪೂಜಿಸಲಾಗುತ್ತದೆ, ಇದರಿಂದಾಗಿಯೇ ಇಂದು ಭಾರತೀಯರಲ್ಲಿ ರಾಷ್ಟ್ರಪ್ರೇಮದ ಅಭಾವವಿದೆ. ಬ್ರಿಟಿಷರ ಆಡಳಿತದಲ್ಲಿ ಪ್ರತಿದಿನ ಆಗುವ ನರಸಂಹಾರ, ದೇವಸ್ಥಾನಗಳ ಲೂಟಿ, ಸ್ತ್ರೀಯರ ಮೇಲಿನ ಅತ್ಯಾಚಾರ, ಗೋಹತ್ಯೆ, ಮುಚ್ಚಲ್ಪಟ್ಟಿರುವ ಗುರುಕುಲ ಪದ್ಧತಿ, ಗುಲಾಮಗಿರಿ ಇತ್ಯಾದಿ ಸಮಸ್ಯೆಗಳನ್ನು ಅಹಿಂಸಾತ್ಮಕ ಮಾರ್ಗದಿಂದ ವಿರೋಧಿಸಲು ಸಾಧ್ಯವಿದೆಯೇ ?, ಇದು ಅದರ ಉತ್ತರವಲ್ಲ. ‘ಇಂತಹ ನಿರುಪಯುಕ್ತ ಅಹಿಂಸೆಯು ದೇಶಕ್ಕೆ ಸ್ವಾತಂತ್ರ್ಯವನ್ನು ದೊರಕಿಸಿ ಕೊಡಬಹುದೇ ?, ಇದು ನಿಜವಾದ ಪ್ರಶ್ನೆಯಾಗಿದೆ.

೧. ‘ಭಾರತದ ತೇಜಸ್ವೀ ಮತ್ತು ಸತ್ಯ ಇತಿಹಾಸವನ್ನು ದೇಶದ ಮುಂದಿಡುವುದು ಮತ್ತು ಶಾಲಾ ಪಠ್ಯಪುಸ್ತಕಗಳಲ್ಲಿ ಕಲಿಸುವುದು ಆವಶ್ಯಕವಾಗಿದೆ

ಅಹಿಂಸೆಯ ಪಾಠದಿಂದ ಭಾರತೀಯ ಸಮಾಜ ದುರ್ಬಲವಾಗಿದೆ. ಆದ್ದರಿಂದ ಸ್ವಾತಂತ್ರ್ಯದ ೭೧ ವರ್ಷಗಳ ನಂತರ ‘ಇತಿಹಾಸವನ್ನು ಮತ್ತೊಮ್ಮೆ ಬರೆಯುವುದು, ಆವಶ್ಯಕವಾಗಿದೆ. ಗಾಂಧಿ ಮತ್ತು ನೆಹರು ಇವರು ಇತರರ ಹಾಗೆ ಸೆರೆಮನೆ ಮತ್ತು ಬ್ರಿಟಿಷರ ಹಿಂಸೆಯನ್ನು ಅನುಭವಿಸಿಲ್ಲ. ಆದ್ದರಿಂದ ಅವರಿಗೆ ಇತರ ಕ್ರಾಂತಿಕಾರಿಗಳ ತ್ಯಾಗ ಮತ್ತು ಅಪಾರ ದೇಶಭಕ್ತಿಯ ಮಹತ್ವ ತಿಳಿದಿರಲಿಲ್ಲ. ಕೇವಲ ಗಾಂಧಿಯವರೇ ದೇಶವನ್ನು ಪಾರತಂತ್ರದಿಂದ ಮುಕ್ತಗೊಳಿಸಿದರು ಮತ್ತು ಸ್ವಾತಂತ್ರ್ಯವೀರ ಸಾವರಕರ, ಲೋಕಮಾನ್ಯ ತಿಲಕರು, ಸರದಾರ ಪಟೇಲರು, ನೇತಾಜಿ ಸುಭಾಶ್ಚಂದ್ರ ಬೋಸ್, ಅಂಬೇಡಕರ್, ಭಗತ್‌ಸಿಂಗ್ ಮುಂತಾದ ಕ್ರಾಂತಿಕಾರಿಗಳು ಏನೂ ಮಾಡಿಲ್ಲವೇ ? ಇನ್ನಾದರೂ ‘ಭಾರತದ ತೇಜಸ್ವೀ ಮತ್ತು ಸತ್ಯ ಇತಿಹಾಸವನ್ನು ದೇಶದ ಮುಂದೆ ಮಂಡಿಸುವುದು ಮತ್ತು ಶಾಲೆಯ ಪಠ್ಯಪುಸ್ತಕಗಳ ಮೂಲಕ ಕಲಿಸುವುದು ಆವಶ್ಯಕವಾಗಿದೆ.

೨. ‘ನೇತಾಜಿ ಸುಭಾಶ್ಚಂದ್ರ ಬೋಸ್‌ರವರು ಸ್ಥಾಪಿಸಿದ ‘ಇಂಡಿಯನ್ ನ್ಯಾಶನಲ್ ಆರ್ಮಿಯ ೨೪ ಸಾವಿರ ಸೈನಿಕರು ದೇಶಕ್ಕಾಗಿ ಬಲಿದಾನ ಮಾಡಿದರು, ಈ ಇತಿಹಾಸವನ್ನು ಬೆಳಕಿಗೆ ತರುವುದು ಆವಶ್ಯಕವಾಗಿದೆ !

ನೇತಾಜಿ ಸುಭಾಶ್ಚಂದ್ರ ಬೋಸ್‌ರವರು ‘ನೀವು ನನಗೆ ರಕ್ತವನ್ನು ಕೊಡಿ, ನಾನು ನಿಮಗೆ ಸ್ವಾತಂತ್ರ್ಯ ಕೊಡುವೆನು, ಎಂದು ಘೋಷಣೆ ನೀಡಿದರು. ಅವರು ಭಾರತವನ್ನು ಸ್ವತಂತ್ರಗೊಳಿಸಲು ‘ಇಂಡಿಯನ್ ನ್ಯಾಶನಲ್ ಆರ್ಮಿಯನ್ನು ಸ್ಥಾಪಿಸಿ ಆ ಕಾಲದಲ್ಲಿ ೬೦ ಸಾವಿರ ಸೈನಿಕರನ್ನು ಒಟ್ಟು ಮಾಡಿದ್ದರು. ‘ಅದರಲ್ಲಿನ ೨೪ ಸಾವಿರ ಸೈನಿಕರು ದೇಶಕ್ಕಾಗಿ ಬಲಿದಾನ ಮಾಡಿದರು, ಈ ಇತಿಹಾಸವನ್ನು ಬೆಳಕಿಗೆ ತರುವುದು ಆವಶ್ಯಕವಾಗಿದೆ. ಇಂದಿರಾ ಗಾಂಧಿಯವರು ಹೇರಿದ ತುರ್ತುಪರಿಸ್ಥಿತಿಯ ಸಮಯದಲ್ಲಿ ಸಾವಿರಾರು ಜನರು ಸೆರೆಮನೆ ವಾಸವನ್ನು ಅನುಭವಿಸಬೇಕಾಯಿತು. ಅವರಿಗೆ ನಿವೃತ್ತಿ ವೇತನವನ್ನು ನೀಡುವ ಯೋಜನೆಯಿದೆ. ಅವರನ್ನು ಗುರುತಿಸಿ ಪಟ್ಟಿಯನ್ನು ಮಾಡಲಾಗಿದೆ; ಆದರೆ ನೇತಾಜಿಯವರ ‘ಇಂಡಿಯನ್ ನ್ಯಾಶನಲ್ ಆರ್ಮಿಯ ಸೈನಿಕರ ಪಟ್ಟಿಯನ್ನು ಮಾಡುವ ಯೋಜನೆ ಮಾತ್ರ ಇಲ್ಲ. ಅವರು ಸಹ ದೇಶಕ್ಕಾಗಿ ಅಪಾರ ಕಷ್ಟಗಳನ್ನು ಸಹಿಸಿದ್ದಾರೆ.

೩. ಬ್ರಿಟಿಷರ ಕಾಗದಪತ್ರಗಳಲ್ಲಿ ‘ಗಾಂಧಿ ಮತ್ತು ಅವರ ನಿರುಪಯುಕ್ತ ಅಹಿಂಸೆಯ ವೃತ್ತಿಯಿಂದಲ್ಲ, ಸಾವರಕರ ಮತ್ತು ನೇತಾಜಿಯವರು ಮಾಡಿದ ಸಶಸ್ತ್ರಕ್ರಾಂತಿಯಿಂದ ನಾವು ಭಾರತಕ್ಕೆ ಸ್ವಾತಂತ್ರ್ಯವನ್ನು ಕೊಡುತ್ತಿದ್ದೇವೆ, ಎಂದು ಸ್ಪಷ್ಟವಾಗಿ ಬರೆದಿದ್ದಾರೆ

ಬ್ರಿಟಿಷರು ಭಾರತಕ್ಕೆ ಸ್ವಾತಂತ್ರ್ಯವನ್ನು ನೀಡಿಲ್ಲ, ಕ್ರಾಂತಿಕಾರಿಗಳು ಮತ್ತು ನೇತಾಜಿಯವರ ಒತ್ತಡದಿಂದಾಗಿ ಅವರು ಪಲಾಯನ ಮಾಡಿದರು, ಇಲ್ಲದಿದ್ದರೆ ನೇತಾಜಿಯವರ ಸಶಸ್ತ್ರ ಸೈನಿಕರು ಬ್ರಿಟಿಷರ ಮೇಲೆ ದಂಡೆತ್ತಿ ಹೋಗಿ ಅವರನ್ನು ಸೆರೆಮನೆಗೆ ತಳ್ಳುತ್ತಿದ್ದರು. ಬ್ರಿಟಿಷರಿಗೆ ನೇತಾಜಿಯವರ ಮತ್ತು ಅವರ ಸೈನ್ಯದ ಸಾಮರ್ಥ್ಯ ಅರಿವಾಯಿತು ಮತ್ತು ಎರಡನೆಯ ಮಹಾಯುದ್ಧದಲ್ಲಿನ ಪರಿಣಾಮದಿಂದ ಅವರು ತಕ್ಷಣ ನಿರ್ಣಯವನ್ನು ತೆಗೆದುಕೊಂಡು ಭಾರತಕ್ಕೆ ಸ್ವಾತಂತ್ರ್ಯವನ್ನು ನೀಡಿದರು. ಆಗ ತಯಾರಿಸಿದ ಕಾಗದಪತ್ರಗಳಲ್ಲಿ ‘ಗಾಂಧಿ ಮತ್ತು ಅವರ ಹುರುಳಿಲ್ಲದ ಅಹಿಂಸೆಯ ವೃತ್ತಿಯಿಂದಲ್ಲ, ಸಾವರಕರ ಮತ್ತು ನೇತಾಜಿಯವರ ಸಶಸ್ತ್ರ ಕ್ರಾಂತಿಯಿಂದ ನಾವು ಭಾರತಕ್ಕೆ ಸ್ವಾತಂತ್ರ್ಯವನ್ನು ನೀಡುತ್ತಿದ್ದೇವೆ, ಎಂದು ಸ್ಪಷ್ಟವಾಗಿ ಬರೆದಿದ್ದಾರೆ. ಆ ಕಾಗದಪತ್ರಗಳು ಇಂದಿಗೂ ಇಂಗ್ಲೆಂಡ್‌ನಲ್ಲಿವೆ.

೪. ಗಾಂಧಿ ಮತ್ತು ಜವಾಹರಲಾಲ ನೆಹರುರವರ ದುರ್ಬಲ ನಿಲುವಿನಿಂದಾಗಿ ಭಾರತೀಯರು ಭೋಗಿಸಬೇಕಾದ ದುಷ್ಪರಿಣಾಮ !

೪ ಅ. ಮಹಾಯುದ್ಧದಲ್ಲಿ ಬ್ರಿಟಿಷ ಸರಕಾರಕ್ಕೆ ಸಹಾಯ ಮಾಡಿದ ೭೦ ಸಾವಿರ ಭಾರತೀಯ ಸೈನಿಕರು ಸಾವನ್ನಪ್ಪಿದರು ಮತ್ತು ಜನರಲ್ ಡಾಯರ್‌ನು ಜಲಿಯನವಾಲಾ ಬಾಗ್ ಹತ್ಯಾಕಾಂಡದಲ್ಲಿ ಸಾವಿರಾರು ಅಮಾಯಕರು ಮತ್ತು ನಿಶಸ್ತ್ರ ಭಾರತೀಯರ ಮೇಲೆ ಗುಂಡು ಹಾರಿಸಿ ಅದರ ಮರುಪಾವತಿ ಮಾಡಿದರು : ೧೯೪೨ ರಲ್ಲಿ ಎರಡನೆಯ ಮಹಾ ಯುದ್ಧ ನಡೆಯುತ್ತಿರುವಾಗ ಮೌಲಾನಾ ಆಝಾದ್, ಜವಾಹರಲಾಲ ನೆಹರು ಮತ್ತು ಗಾಂಧಿ ಇವರು “ಈಗ ನಾವು ಬ್ರಿಟಿಷ ಸರಕಾರಕ್ಕೆ ಸಹಾಯ ಮಾಡೋಣ. ಯುದ್ಧದ ನಂತರ ಅವರು ಸಂತೋಷಗೊಂಡು ನಮಗೆ ಸ್ವಾತಂತ್ರ್ಯವನ್ನು ನೀಡುವರು ಎಂದು ಹೇಳಿದರು. ಆಗ ಸುಮಾರು ೭೦ ಸಾವಿರ ಭಾರತೀಯ ಸೈನಿಕರು ಬ್ರಿಟಿಷ  ಸರಕಾರಕ್ಕಾಗಿ ಸಾವನ್ನಪ್ಪಿದರು. ಅದಕ್ಕೆ ಪ್ರತಿಫಲವೆಂದು ಜನರಲ್ ಡಾಯರ್‌ನು ಜಲಿಯನ್‌ವಾಲಾ ಬಾಗ್ ಹತ್ಯಾಕಾಂಡದಲ್ಲಿ ಸಾವಿರಾರು ಅಮಾಯಕ ಮತ್ತು ನಿಃಶಸ್ತ್ರ ಭಾರತೀಯರ ಮೇಲೆ ನಾಲ್ಕೂ ದಿಕ್ಕುಗಳಿಂದ ಮುತ್ತಿಗೆ ಹಾಕಿ ಅವರ ಮೇಲೆ ಗುಂಡುಗಳನ್ನು ಹಾರಿಸಿದರು. ಇದುವೇ ಗಾಂಧಿಯವರ ಪ್ರಯತ್ನದ ಫಲವಾಗಿದೆ ! ಆ ಸಮಯದಲ್ಲಿ ನೇತಾಜಿಯವರು ಗಾಂಧಿಯವರನ್ನು ವಿರೋಧಿಸಿದ್ದರು. ‘ಎರಡನೆಯ ಮಹಾಯುದ್ಧದಲ್ಲಿ ಬ್ರಿಟಿಷರು ತಮ್ಮ ದೇಶದ ರಕ್ಷಣೆಗಾಗಿ ಹೋರಾಡುತ್ತಿದ್ದಾರೆ, ಇದುವೇ ಕ್ರಾಂತಿಯನ್ನು ಮಾಡುವ ಸರಿಯಾದ ಸಮಯವಾಗಿದೆ ಎಂದು ನೇತಾಜಿ ಸುಭಾಶ್ಚಂದ್ರ ಬೋಸ್‌ರವರು ಹೇಳಿದರು; ಆದರೆ ಗಾಂಧಿಯವರು ಇದಕ್ಕೆ ಒಪ್ಪಲಿಲ್ಲ. ‘ಗಾಂಧಿಯವರು ಕೇವಲ ‘ಭಗವದ್ಗೀತೆಯನ್ನು ಓದುತ್ತಾ ಕುಳಿತುಕೊಂಡರು; ಅದರಲ್ಲಿನ ಉಪದೇಶವನ್ನು ಉಪಯೋಗಿಸದ ಕಾರಣ ಸಾವಿರಾರು ಜನರ ಪ್ರಾಣ ಹೋಯಿತು, ಎಂದು ಹೇಳಿದರೆ ಅಯೋಗ್ಯವಾಗಲಾರದು.

೪ ಆ. ಸ್ವಾತಂತ್ರ್ಯದ ಸಮಯದಲ್ಲಿ ಧರ್ಮದ ಆಧಾರದಲ್ಲಿ ದೇಶವನ್ನು ಇಬ್ಭಾಗ ಮಾಡಿದುದರಿಂದಾದ ಹಾನಿ ! : ಗಾಂಧಿ ಮತ್ತು ನೆಹರು ಇವರ ದುರ್ಬಲ ನಿಲುವಿನಿಂದಾಗಿ ಇಂದು ಭಾರತೀಯರಲ್ಲಿ ಪ್ರಖರ ರಾಷ್ಟ್ರಪ್ರೇಮವಿಲ್ಲ. ಭಾರತೀಯರು ದೇಶಕ್ಕಿಂತ ಸ್ವಹಿತಕ್ಕೆ ಹೆಚ್ಚು ಮಹತ್ವವನ್ನು ಕೊಡುತ್ತಿದ್ದಾರೆ. ಸ್ವಾತಂತ್ರ್ಯದ ಸಮಯದಲ್ಲಿ ಧರ್ಮದ ಆಧಾರದಲ್ಲಿ ದೇಶದ ಇಬ್ಭಾಗವಾಯಿತು. ಆಗ ಪಾಕಿಸ್ತಾನದಿಂದ ಭಾರತಕ್ಕೆ ಹಿಂತಿರುಗುತ್ತಿದ್ದ ಹಿಂದೂಗಳ ಮೇಲೆ ಅಪಾರ ದೌರ್ಜನ್ಯವಾಯಿತು, ಸ್ತ್ರೀಯರ ಬಲಾತ್ಕಾರವಾಯಿತು, ರೈಲುಗಳು ಹೆಣಗಳನ್ನು ತುಂಬಿಕೊಂಡು ಬರಲಾರಂಭಿಸಿದವು. ಆಗ ಈ ಅಹಿಂಸೆಯ ಪೂಜಾರಿಗಳು ಶಾಂತರಾಗಿದ್ದರು. ಇದನ್ನು ವಿರೋಧಿಸುವವರಿಗೂ ಸುಮ್ಮನಿರಲು ಹೇಳಿದರು.

೪ ಇ. ಸ್ವಾತಂತ್ರ್ಯದ ನಂತರ ದೇಶದ ರಕ್ಷಣೆ ಬಗ್ಗೆ ಕಾಂಗ್ರೆಸ್ಸಿನ ದುರ್ಲಕ್ಷ

೪ ಇ ೧. ರಕ್ಷಣಾ ಸಾಮಗ್ರಿಗಳನ್ನು ಖರೀದಿಸದಿರುವುದು ಮತ್ತು ಸೈನಿಕರ ಸಂಖ್ಯೆಯನ್ನು ಕಡಿಮೆಗೊಳಿಸುವುದು : ಸ್ವಾತಂತ್ರ್ಯದ ನಂತರ ಅಹಿಂಸೆಯ ಪೂಜಾರಿಗಳಾದ ಕಾಂಗ್ರೆಸ್ ದೇಶಕ್ಕಾಗಿ ಶಸ್ತ್ರಾಸ್ತ್ರಗಳನ್ನು ಖರೀದಿಸಲಿಲ್ಲ. ಬೋಫೋರ್ಸ್ ಹಗರಣದ ನಂತರ ದೇಶಕ್ಕಾಗಿ ಒಂದೇ ಒಂದು ತೋಪನ್ನು ಕೂಡ ಖರೀದಿಸಲಿಲ್ಲ. ೧೯೬೦ ರಿಂದ ಒಂದು ವಿಮಾನವನ್ನೂ ಖರೀದಿಸಲಿಲ್ಲ. ಬ್ರಿಟಿಷ ಸರಕಾರಕ್ಕಾಗಿ ೨೫ ಲಕ್ಷ ಭಾರತೀಯ ಸೈನಿಕರು ಶ್ರಮಪಡುತ್ತಿದ್ದರು. ಎರಡನೆ ಮಹಾಯುದ್ಧದಲ್ಲಿ ಅವರನ್ನು ಉಪಯೋಗಿಸಲಾಯಿತು. ಭಾರತೀಯರ ಯುದ್ಧಕ್ಷಮತೆ ಕಡಿಮೆಯಾಗ ಬೇಕೆಂದು ಬ್ರೀಟಿಷರು ಎರಡನೆ ಮಹಾಯುದ್ಧದ ನಂತರ ಸೈನಿಕರ ಸಂಖ್ಯೆಯನ್ನು ೩ ಲಕ್ಷದ ೫೦ ಸಾವಿರದಷ್ಟು ಕಡಿಮೆ ಮಾಡಿದರು. ಸ್ವಾತಂತ್ರ್ಯದ ನಂತರ ಅವರನ್ನು ಎರಡು ಭಾಗಗಳಲ್ಲಿ ವಿಭಜಿಸಲಾಯಿತು.

೪ ಇ ೨. ಸೈನ್ಯ ಪ್ರಮುಖರಿಗೆ ‘ದೇಶಕ್ಕೆ ಸೈನಿಕ ವಿಭಾಗದ ಅವಶ್ಯಕತೆಯೇ ಇಲ್ಲ, ಎಂದು ಹೇಳಿದ ಭಾರತದ ಮೊದಲ ಪ್ರಧಾನಮಂತ್ರಿ ಜವಾಹರಲಾಲ ನೆಹರು : ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ ನಂತರ ಕಾಂಗ್ರೆಸ್ಸಿನ ವರ್ಕಿಂಗ್ ಕಮಿಟಿಯವರು ದೇಶದ ನೇತೃತ್ವವನ್ನು ಸರದಾರ ವಲ್ಲಭಭಾಯಿ ಪಟೇಲರಿಗೆ ಒಪ್ಪಿಸ ಬೇಕೆಂಬ ಠರಾವ್ ಮಾಡಿದರು; ಆದರೆ ಅದನ್ನು ಗಾಂಧಿ ವಿರೋಧಿಸಿ ಜವಾಹರಲಾಲ ನೆಹರು ಇವರನ್ನು ಪ್ರಧಾನಿಯನ್ನಾಗಿ ಮಾಡಿದರು. ಒಮ್ಮೆ ಸ್ವತಂತ್ರ ಭಾರತದ ಮೊದಲ ಸೇನಾಮುಖ್ಯಸ್ಥ (ಕಮಾಂಡರ್ ಇನ್ ಚೀಫ್) ಜನರಲ್ ಸರ್ ರಾಯ್ ಕುಚಲ ಇವರು ಸೈನಿಕರ ಸೇರ್ಪಡೆ ಮತ್ತು ಸೈನ್ಯದ ಆಧುನೀಕರಣದ ವಿಷಯದಲ್ಲಿ ಒಂದು ಯೋಜನೆಯನ್ನು ನೆಹರು ಇವರ ಮುಂದಿಟ್ಟರು. ಆಗ ನೆಹರು ಇವರು, “ಈಗ ದೇಶ ಮುಕ್ತವಾಗಿದೆ. ದೇಶಕ್ಕೆ ಸೈನಿಕ ವಿಭಾಗದ ಅವಶ್ಯಕತೆಯೇ ಇಲ್ಲ. ಇನ್ನು ಕೇವಲ ಪೊಲೀಸರು ಇರುವರು ಎಂದರು.

೪ ಇ ೩. ಪ್ರಧಾನಮಂತ್ರಿ ನೆಹರು ಇವರಿಂದ ಸೈನಿಕ ವಿಭಾಗವನ್ನು ಮುಚ್ಚುವ ನಿರ್ಣಯ ಮಾಡುವುದು ಮತ್ತು ಸರದಾರ ಪಟೇಲರ ತೀವ್ರ ವಿರೋಧದಿಂದ ನಿರ್ಣಯ ಹಿಂಪಡೆದ ನೆಹರು : ಸ್ವಾತಂತ್ರ್ಯ ಪಡೆದ ನಂತರ ಭಾರತಕ್ಕೆ ದೌರ್ಭಾಗ್ಯದಿಂದ ಸಿಕ್ಕಿದ ಮೊದಲ ಪ್ರಧಾನಮಂತ್ರಿ ನೆಹರು ಸೈನಿಕ ವಿಭಾಗವನ್ನು ಮುಚ್ಚುವ ನಿರ್ಣಯವನ್ನು ತೆಗೆದುಕೊಂಡಿದ್ದರು. ಆಗ ಸರದಾರ ಪಟೇಲರು ಅದನ್ನು ತೀವ್ರವಾಗಿ ವಿರೋಧಿಸಿ ಆ ನಿರ್ಣಯ ಹಿಂಪಡೆಯುವಂತೆ ಮಾಡಿದರು. ಆಗ ದೇಶದಲ್ಲಿ ಸೈನ್ಯ ವ್ಯವಸ್ಥೆ ಇಲ್ಲದಿದ್ದರೆ, ಪಾಕಿಸ್ತಾನ ಮೊದಲ ಯುದ್ಧದಲ್ಲಿಯೇ ಭಾರತವನ್ನು ಕಬಳಿಸುತ್ತಿತ್ತು.

೪ ಈ. ನೇತಾಜಿಯವರ ಸಂಶಯಾಸ್ಪದ ಮರಣದ ವಿಷಯದಲ್ಲಿನ ಕಾಗದ ಪತ್ರಗಳನ್ನು ಕಾಂಗ್ರೆಸ್ ಭಾರತದ ಜನರಿಂದ ಅಡಗಿಸಿಡುವುದು : ಭಾರತದ ಸುಪುತ್ರರಿಂದ ರಕ್ತವನ್ನು ಕೇಳಿ ಅವರಿಗೆ ಸ್ವಾತಂತ್ರವನ್ನು ತಂದುಕೊಡುವ ನೇತಾಜಿಯವರ ಮರಣದ ವಿಷಯದಲ್ಲಿ ಇಂದಿಗೂ ಸಂಶಯವಿದೆ. ಜಗತ್ತಿನಾದ್ಯಂತ ಪ್ರವಾಸ ಮಾಡಿ ಭಾರತೀಯ ಆರ್ಮಿಯನ್ನು (ಸೈನ್ಯವನ್ನು) ಸಿದ್ದಪಡಿಸಿದ ನೇತಾಜಿಯವರ ಮರಣದ ವಿಷಯದಲ್ಲಿನ ಕಾಗದಪತ್ರಗಳನ್ನು ಕಾಂಗ್ರೆಸ್ ತನ್ನ ಆಡಳಿತಕಾಲದಲ್ಲಿ ಭಾರತೀಯರಿಂದ ಅಡಗಿಸಿಟ್ಟಿತ್ತು. ಈ ಕಾಗದಪತ್ರಗಳು ಬೆಳಕಿಗೆ ಬರುತ್ತಿದ್ದರೆ, ಜನರು ಗಾಂಧಿ ಮತ್ತು ನೆಹರು ಬದಲು ನೇತಾಜಿಯರನ್ನು ಪೂಜಿಸುತ್ತಿದ್ದರು ಮತ್ತು ಜನರ ವೃತ್ತಿ ಕುರಿಯಂತಲ್ಲ ಹುಲಿಯಂತೆ  ಪರಾಕ್ರಮಿಯಾಗುತ್ತಿತ್ತು.

೫. ಜನರಲ್ಲಿ ದೇಶಪ್ರೇಮ ಜಾಗೃತವಾದರೆ ದೇಶ ಮುಂದೆ ಹೋಗುವುದು

ಇಂದಿನ ತನಕ ಕಾಂಗ್ರೆಸ್ ಪಕ್ಷವು ಅತ್ಯಧಿಕ ಕಾಲ ಭಾರತದಲ್ಲಿ ಆಡಳಿತದಲ್ಲಿತ್ತು. ಅವರು ತಮ್ಮ ಅನುಕೂಲಕ್ಕನುಸಾರ ಇತಿಹಾಸವನ್ನು ತಮಗೆ ಬೇಕಾದಂತೆ ಬದಲಾಯಿಸಿಕೊಂಡರು. ಇಂದು ಕೂಡ ಗಾಂಧಿ ಮತ್ತು ನೆಹರೂರಿಗಿಂತ ಹೆಚ್ಚು ತ್ಯಾಗ ಮತ್ತು ಪರಾಕ್ರಮವನ್ನು ಮಾಡಿದ ಅನೇಕ ಜ್ಞಾತ-ಅಜ್ಞಾತ ಮಹಾಪುರುಷರಿದ್ದಾರೆ. ದೇಶಪ್ರೇಮದ ಅಭಾವದಿಂದ ಅನೇಕ ಅಪರಾಧಗಳಾಗುತ್ತಿವೆ. ನಾಗರಿಕರಲ್ಲಿ ದೇಶಪ್ರೇಮ ಜಾಗೃತವಾದರೆ, ಅವರಲ್ಲಿನ ಬಂಧುತ್ವಭಾವನೆ ಹೆಚ್ಚಾಗಿ ಅಪರಾಧಗಳ ಸಂಖ್ಯೆ ಕಡಿಮೆಯಾಗುವುದು. ಶತ್ರುವಿನ ಮುಂದೆ ಶರಣಾಗದೇ ಅವನಿಗೆ ಮಣ್ಣು ಮುಕ್ಕಿಸುವ ಶಕ್ತಿ ಭಾರತೀಯರಲ್ಲಿ ನಿರ್ಮಾಣವಾಗುವುದು. ದೇಶವನ್ನು ಪ್ರಗತಿಪಥದಲ್ಲಿ ಒಯ್ಯಬೇಕಾಗಿದ್ದರೆ, ನಾಗರಿಕರ ವೃತ್ತಿಯಲ್ಲಿ ಬದಲಾವಣೆಯಾಗಬೇಕು, ಅದರಲ್ಲಿ ರಾಜಕಾರಣಿಗಳು, ನೌಕರರು, ಶ್ರಮಜೀವಿಗಳು, ವ್ಯಾಪಾರಿಗಳು, ವಕೀಲರು, ವೈದ್ಯರು, ಸ್ತ್ರೀಯರು, ಪುರುಷರು ಇತ್ಯಾದಿ ಎಲ್ಲ ಜನರಿರುತ್ತಾರೆ. ನಾಗರಿಕರಲ್ಲಿ ದೇಶಪ್ರೇಮ ಜಾಗೃತವಾಗಲು ಇತಿಹಾಸದ ಪುನರ್ಲೇಖನ ಮಾಡಿ ಹಿಂದುಸ್ಥಾನದ ದೈದೀಪ್ಯಮಾನ ಸತ್ಯ ಇತಿಹಾಸವನ್ನು ದೇಶದ ಮುಂದಿಡಬೇಕು. ಈ ಇತಿಹಾಸವು ಭಾರತಕ್ಕೆ ಗತವೈಭವವನ್ನು ಪ್ರಾಪ್ತಮಾಡಿ ಕೊಡುವುದು. – ಶ್ರೀ. ನೀಲೇಶ ಬೋರಾ, ಲಾಸಲಗಾವ್, ನಾಶಿಕ್.